2024ರ ಮತದಾರರ ಪಟ್ಟಿ ಬಿಡುಗಡೆ, ನಿಮ್ಮ ಹೆಸರು ಇದೆಯೋ ಇಲ್ವೋ ಚೆಕ್ ಮಾಡಿಕೊಳ್ಳಿ

ನಮ್ಮ ದೇಶದಲ್ಲಿ 18 ವರ್ಷ ತುಂಬಿದ ಪ್ರತಿಯೊಬ್ಬ ಯುವಕ ಯುವತಿಯರು ಮತದಾನ ಮಾಡುವ ಹಕ್ಕನ್ನು (voting rights) ಪಡೆದುಕೊಳ್ಳುತ್ತಾರೆ ಮತದಾನ ಎನ್ನುವುದು ಕೇವಲ ಹಕ್ಕು ಮಾತ್ರವಲ್ಲ ಇದು ಪ್ರತಿಯೊಬ್ಬ ಭಾರತೀಯನ ಪ್ರಮುಖ ಜವಾಬ್ದಾರಿಯು (responsibility) ಹೌದು
ಮತದಾನ ಮಾಡಲು ಮತಪಟ್ಟಿಯಲ್ಲಿ (Voter List) ನಮ್ಮ ಹೆಸರು ಇರಬೇಕು, ಜೊತೆಗೆ ಮತದಾರರ ಚೀಟಿ ಹೊಂದಿರಬೇಕು. ಹಾಗಿದ್ದರೆ ಮಾತ್ರ ಯಾವುದೇ ಸಂದರ್ಭದಲ್ಲಿ ಚುನಾವಣೆ ಘೋಷಣೆಯಾದಾಗ ಮತಗಟ್ಟೆಗೆ ಹೋಗಿ ನಮ್ಮ ಹಕ್ಕನ್ನು ಚಲಾಯಿಸಲು ಸಾಧ್ಯ.
2019ಕ್ಕೂ ಮೊದಲು ಖರೀದಿಸಿರುವ ಕಾರು, ಬೈಕ್ ಸೇರಿದಂತೆ ಈ ವಾಹನಗಳು ರಸ್ತೆಗೆ ಇಳಿಯುವ ಹಾಗಿಲ್ಲ!
2024ರ ಮತದಾರರ ಪಟ್ಟಿ ಬಿಡುಗಡೆ! (New voter list release)
ಕರ್ನಾಟಕ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ (assembly election) ಮುಗಿದು ಆರು ತಿಂಗಳು ಕಳೆದಿವೆ, 2024ರಲ್ಲಿ ಲೋಕಸಭಾ ಚುನಾವಣೆ (Loksabha election) ಬರಲಿದ್ದು ಅದರ ತಯಾರಿ ಕೂಡ ನಡೆದಿದೆ
ಈ ಹಿನ್ನೆಲೆಯಲ್ಲಿ 2024ರ ಮತದಾರರ ಪಟ್ಟಿ ಬಿಡುಗಡೆ ಮಾಡಲಾಗಿದೆ, ಇದರಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಎಂಬುದನ್ನು ತಕ್ಷಣ ಚೆಕ್ ಮಾಡಿಕೊಳ್ಳಿ ಒಂದು ವೇಳೆ ಹೆಸರು ಇಲ್ಲದಿದ್ದರೆ ಹೊಸ ಹೆಸರು ಸೇರ್ಪಡೆ ಅಥವಾ ತಿದ್ದುಪಡಿ ಮಾಡಿಕೊಳ್ಳಲು ಇನ್ನೂ ಅವಕಾಶವಿದೆ.
ಮೊಬೈಲಲ್ಲಿ ಚೆಕ್ ಮಾಡಿಕೊಳ್ಳಿ (Check in Smartphone)

ಮೊದಲನೇದಾಗಿ https://voters.eci.gov.in/ ಈ ವೆಬ್ ಸೈಟ್ ಮೇಲೆ ಕ್ಲಿಕ್ ಮಾಡಿ ನಂತರ ನಿಮಗೆ ಕಾಣಿಸುವ ಆಯ್ಕೆಗಳಲ್ಲಿ ನಿಮ್ಮ ಜಿಲ್ಲೆಯನ್ನು ಸೆಲೆಕ್ಟ್ ಮಾಡಬೇಕು.
ನಂತರ ನಿಮ್ಮ ವಿಧಾನಸಭಾ ಕ್ಷೇತ್ರವನ್ನು (assembly constituency) ಆಯ್ಕೆ ಮಾಡಬೇಕು, ಬಳಿಕ ಭಾಷೆ ಆಯ್ಕೆ ಮಾಡಿ ಕೊಟ್ಟಿರುವ ಕ್ಯಾಪ್ಚ ನಂಬರ್ ಅನ್ನು ನಮೂದಿಸಿ.
ಬಳಿಕ ನಿಮಗೆ ನಿಮ್ಮ ಗ್ರಾಮದ ಹೆಸರನ್ನು ನಮೂದಿಸಲು ಒಂದು ಬಾಕ್ಸ್ ತೆಗೆದುಕೊಳ್ಳುತ್ತದೆ. ಗ್ರಾಮವನ್ನು ಆಯ್ಕೆ ಮಾಡಿಕೊಂಡು ನೀವು ನಿಮ್ಮ ವಾರ್ಡ್ ಯಾವುದು ಎಂಬುದನ್ನು ಕ್ಲಿಕ್ ಮಾಡಿ. ತಕ್ಷಣವೇ ನಿಮ್ಮ ಎದುರಿಗೆ ಮತದಾರರ ಪಟ್ಟಿ ಕಾಣಿಸುತ್ತದೆ. ಇದರಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಿಕೊಳ್ಳಿ.
ಜಮೀನಿನ ಹಳೆಯ ದಾಖಲೆಗಳನ್ನು ಮೊಬೈಲ್‌ನಲ್ಲೇ ನೋಡುವ ಸುಲಭ ವಿಧಾನ ಇಲ್ಲಿದೆ
ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ ಏನು ಮಾಡಬೇಕು?

2024ರ ಹೊಸದಾಗಿ ಬಿಡುಗಡೆ ಆಗಿರುವ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲದೆ ಇದ್ದರೆ ತಕ್ಷಣವೇ ಅದನ್ನ ಸೇರ್ಪಡೆಗೊಳಿಸಿಕೊಳ್ಳಬೇಕು. (Add your name) ಹಾಗೂ ಹೊಸದಾಗಿ ಮತದಾನ ಮಾಡುವವರು ತಮ್ಮ ಹೆಸರನ್ನು ಮತದಾರರ ಲಿಸ್ಟ್ ನಲ್ಲಿ ಸೇರಿಸಬೇಕು.
ಸದ್ಯದಲ್ಲೇ ಪ್ರತಿ ವಾರ್ಡ್ ನ ಮತಗಟ್ಟೆಯಲ್ಲಿ ಹೊಸ ಹೆಸರು ಸೇರ್ಪಡೆಗೆ ಹಾಗೂ ಮತದಾರ ಚೀಟಿಯಲ್ಲಿ ಅಗತ್ಯ ಇರುವ ಬದಲಾವಣೆಗೆ ಸರ್ಕಾರ ಅವಕಾಶ ಮಾಡಿಕೊಡಲಿದೆ.
Voter list for 2024 was released, check your name in the List



