Shocking Video; ಹಾಸ್ಟೆಲ್ ಕಟ್ಟಡದ 6ನೇ ಮಹಡಿಯಿಂದ ಬಿದ್ದು ಪಶ್ಚಿಮ ಬಂಗಾಳದ ನೀಟ್ ವಿದ್ಯಾರ್ಥಿ ಸಾವು
Student Dies Falling From 6th Floor: ಶಾಕಿಂಗ್ ವಿಡಿಯೋ.. ಸ್ನೇಹಿತರ ಕಣ್ಣೆದುರೇ ಸಾವು, ಕ್ಷಣಾರ್ಧದಲ್ಲಿ ಅನಿರೀಕ್ಷಿತ ದುರಂತ, ಹಾಸ್ಟೆಲ್ ಕಟ್ಟಡದ 6ನೇ ಮಹಡಿಯಿಂದ ಬಿದ್ದು ಪಶ್ಚಿಮ ಬಂಗಾಳದ ನೀಟ್ ವಿದ್ಯಾರ್ಥಿ ಸಾವು
Student Dies Falling From 6th Floor: ಕೆಲವೊಮ್ಮೆ ಅನಿರೀಕ್ಷಿತ ಅಪಘಾತಗಳು ಸಂಭವಿಸುತ್ತವೆ. ಏನಾಯಿತು ಎಂಬುದನ್ನು ಅರಿತುಕೊಳ್ಳುವ ಮೊದಲೇ ಪ್ರಾಣ ಪಕ್ಷಿ ಹಾರಿಹೋಗಿರುತ್ತದೆ. ಇಂತಹದೊಂದು ಆಘಾತಕಾರಿ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಸ್ನೇಹಿತರು ನೋಡ ನೋಡುತ್ತಲೇ ಯುವಕನೊಬ್ಬ ಸಾವನ್ನಪ್ಪಿದ್ದಾನೆ. ನೋಡು ನೋಡುತ್ತಲೇ ಹಾಸ್ಟೆಲ್ ಕಟ್ಟಡದ 6ನೇ ಮಹಡಿಯಿಂದ ಬಿದ್ದು ಪ್ರಾಣ ಕಳೆದುಕೊಂಡಿದ್ದಾನೆ
ರಾಜಸ್ಥಾನದ ಕೋಟಾದಲ್ಲಿ ಈ ಆಘಾತಕಾರಿ ಘಟನೆಯೊಂದು ನಡೆದಿದೆ. ವಿದ್ಯಾರ್ಥಿಯೊಬ್ಬ ಆಕಸ್ಮಿಕವಾಗಿ 6ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಾನೆ. ಇದರಿಂದ ಆತನ ಸ್ನೇಹಿತರು ಬೆಚ್ಚಿಬಿದ್ದರು. ಪಶ್ಚಿಮ ಬಂಗಾಳದ ಇಶಾಂಶು ಭಟ್ಟಾಚಾರ್ಯ (20) ಎಂಬ ವಿದ್ಯಾರ್ಥಿ ನೀಟ್ ಕೋಚಿಂಗ್‌ಗಾಗಿ ಕೋಟಾದ ಕೋಚಿಂಗ್ ಇನ್‌ಸ್ಟಿಟ್ಯೂಟ್‌ಗೆ ಬಂದಿದ್ದ. ಹಾಸ್ಟೆಲ್‌ನಲ್ಲಿ ತಂಗಿದ್ದ. ಇದೇ ವೇಳೆ ಅದೇ ಹಾಸ್ಟೆಲ್ ಕಟ್ಟಡದ ಆರನೇ ಮಹಡಿಯಿಂದ ಆಕಸ್ಮಿಕವಾಗಿ ಬಿದ್ದಿದ್ದಾನೆ. ಅಷ್ಟೊಂದು ಎತ್ತರದಿಂದ ಬಿದ್ದಿದ್ದರಿಂದ ತೀವ್ರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ.
News Updates; ಪ್ರಮುಖ ಕನ್ನಡ ಮುಖ್ಯಾಂಶಗಳು, ಬ್ರೇಕಿಂಗ್ ನ್ಯೂಸ್ ಲೈವ್ ಸುದ್ದಿಗಳು 04 02 2023
ಭಟ್ಟಾಚಾರ್ಯ ಕಣ್ಣೆದುರೇ ಬಿದ್ದು ಸಾವನ್ನಪ್ಪಿದ್ದು ಸ್ನೇಹಿತರನ್ನು ಬೆಚ್ಚಿ ಬೀಳಿಸಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮೃತ ಭಟ್ಟಾಚಾರ್ಯ ಆಗಸ್ಟ್ ನಲ್ಲಿ ರಾಜಸ್ಥಾನಕ್ಕೆ ಬಂದಿದ್ದರು. ಅವರು ವೈದ್ಯಕೀಯ ಪ್ರವೇಶ ಪರೀಕ್ಷೆ NEET ಗೆ ತಯಾರಿ ನಡೆಸುತ್ತಿದ್ದರು.
ಭಟ್ಟಾಚಾರ್ಯ ಕಾಲಿಗೆ ಚಪ್ಪಲಿ ಹಾಕಿಕೊಂಡು ಹೊರಡಲು ಯತ್ನಿಸುತ್ತಿದ್ದಾರೆ. ಈ ಕ್ರಮದಲ್ಲಿ, ತಮ್ಮ ಹಿಂದೆ ಕಬ್ಬಿಣದ ಸಾರಲು ಇದೆ ಎಂಬ ಬಾವಿಸಿ ಒರಗಿಕೊಳ್ಳಲು ಮುಂದಾದಾಗ ಆ ವೇಳೆ 6ನೇ ಮಹಡಿಯಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ. ಇದೆಲ್ಲ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ. ಇದೀಗ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗೆಳೆಯರು ಕಣ್ಣೆದುರೇ ಸಾವನ್ನಪ್ಪಿದ್ದನ್ನು ಕಂಡು ಬೆಚ್ಚಿಬಿದ್ದಿದ್ದಾರೆ.
West Bengal Neet Student Dies After Falling From 6th Floor Of Hostel Building In Kota
OMG so unfortunate. Sharing so that other people take note.
Coaching student dies after falling from sixth floor of hostel in Rajasthan's Kota.
Was about to wear slippers, leaned on to the metal fencing, either it was broken or weak, boy fell through it
pic.twitter.com/D55XiuePBq— The Shepherd (@2VenT3) February 3, 2023
Follow us On
Google News |