ಮಹಿಳಾ ಸೈಕ್ಲಿಸ್ಟ್ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಕೋಚ್

ನವದೆಹಲಿ: ರಾಷ್ಟ್ರೀಯ ಸ್ಪ್ರಿಂಟ್ ತಂಡದ ಮುಖ್ಯ ಕೋಚ್ ವಿರುದ್ಧ ಪ್ರಮುಖ ಮಹಿಳಾ ಸೈಕ್ಲಿಸ್ಟ್ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ಸ್ಲೊವೇನಿಯಾದಲ್ಲಿ ನಡೆದ ಶಿಬಿರದಲ್ಲಿ ಕೋಚ್ ಆರ್ಕೆ ಶರ್ಮಾ ಆಕ್ಷೇಪಾರ್ಹ ರೀತಿಯಲ್ಲಿ ವರ್ತಿಸಿದ್ದಾರೆ ಎಂದು ಮಹಿಳಾ ಸೈಕ್ಲಿಸ್ಟ್ ಆರೋಪಿಸಿದ್ದಾರೆ. ಜೂನ್ 18 ರಿಂದ 22 ರವರೆಗೆ ದೆಹಲಿಯಲ್ಲಿ ನಡೆಯಲಿರುವ ಏಷ್ಯನ್ ಟ್ರ್ಯಾಕ್ ಸೈಕ್ಲಿಂಗ್ ಚಾಂಪಿಯನ್ಶಿಪ್ನ ಪೂರ್ವಸಿದ್ಧತಾ ಶಿಬಿರದಲ್ಲಿ ಸೈಕ್ಲಿಸ್ಟ್ ಭಾಗವಹಿಸಿದ್ದರು.
ಮಹಿಳಾ ಸೈಕ್ಲಿಸ್ಟ್ ಭಾರತೀಯ ಕ್ರೀಡಾ ಪ್ರಾಧಿಕಾರಕ್ಕೆ (SAI) ಇಮೇಲ್ ಮೂಲಕ ದೂರು ನೀಡಿದ್ದಾರೆ. ಲೈಂಗಿಕ ಕಿರುಕುಳದ ಆರೋಪದ ಹಿನ್ನೆಲೆಯಲ್ಲಿ ಮಹಿಳಾ ಸೈಕ್ಲಿಸ್ಟ್ ಅನ್ನು ಭಾರತಕ್ಕೆ ಕಳುಹಿಸಲಾಗಿದೆ. SAI ಮತ್ತು ಸೈಕ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ ಪ್ರಕರಣದ ಸತ್ಯಗಳ ಮೇಲೆ ಬೆಳಕು ಚೆಲ್ಲಲು ಪ್ರತ್ಯೇಕ ತನಿಖಾ ಆಯೋಗಗಳನ್ನು ಸ್ಥಾಪಿಸಿವೆ.
ಸ್ಲೊವೇನಿಯಾದಲ್ಲಿ ಶಿಬಿರದ ವೇಳೆ ತರಬೇತುದಾರ ಲೈಂಗಿಕ ಕಿರುಕುಳದ ಬಗ್ಗೆ ಸೈಕ್ಲಿಸ್ಟ್ ದೂರಿದ್ದಾರೆ. ಈ ಬಗ್ಗೆ ಕೂಲಂಕಷ ತನಿಖೆ ನಡೆಸಿ ಸಮಸ್ಯೆ ಬಗೆಹರಿಸುವುದಾಗಿ ಹೇಳಿದೆ.
Woman Cyclist Accuses India Coach Of Inappropriate Behavior
ನಾಳೆಯ ದಿನ ಭವಿಷ್ಯ: 12-11-2026, ಗುರುವಾರ
Read the story
ಹಾಸನಾಂಬೆ ಜಾತ್ರೆಗೆ ತೆರೆ; ಮತ್ತೆ ದೇವಿ ದರ್ಶನಕ್ಕೆ ಒಂದು ವರ್ಷ ಕಾಯಬೇಕು
Read the story
ನಮಗೂ 3,600 ದರ ನೀಡಿ; ಹಾವೇರಿ ಕಬ್ಬು ಬೆಳೆಗಾರರ ಪಟ್ಟು
Read the story
ತಾತನ ಆಸ್ತಿಯಲ್ಲಿ ಮೊಮ್ಮಗನಿಗೆ ಹಕ್ಕಿಲ್ಲ! ಹೈಕೋರ್ಟ್ ಮಹತ್ವದ ತೀರ್ಪು
Read the story
ಗುಡ್ ನ್ಯೂಸ್; ರೇಷನ್ ಕಾರ್ಡ್ ಇ-ಕೆವೈಸಿ ಗಡುವು ಮತ್ತೆ ವಿಸ್ತರಣೆ
Read the story



