ಸಮುದ್ರದ ಅಲೆಗಳಲ್ಲಿ ಕೊಚ್ಚಿ ಹೋದ ಮಹಿಳೆ ವೀಡಿಯೊ ವೈರಲ್! ಕುಟುಂಬ ಸಮೇತ ವಿಹಾರಕ್ಕೆಂದು ತೆರಳಿದ್ದ ವೇಳೆ ಘಟನೆ

Mumbai Bandra Beach : ಮುಂಬೈನ ಬಾಂದ್ರಾ ಬೀಚ್ ನಲ್ಲಿ ಭೀಕರ ಅವಘಡ ನಡೆದಿದೆ. ಕುಟುಂಬ ಸಮೇತ ವಿಹಾರಕ್ಕೆಂದು ತೆರಳಿದ್ದ ಮಹಿಳೆಯೊಬ್ಬರು ಏಕಾಏಕಿ ಭಾರಿ ಅಲೆಗೆ ಕೊಚ್ಚಿ ಹೋಗಿದ್ದಾರೆ.

Mumbai Bandra Beach : ಅನೇಕ ಬಾರಿ ಅಪಾಯಕಾರಿ ಸ್ಥಳಗಳಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇಂತಹದೊಂದು ನೋವಿನ ಅಪಘಾತ ಮುಂಬೈನಲ್ಲಿ ನಡೆದಿದೆ. ಕುಟುಂಬದೊಂದಿಗೆ ಪಿಕ್ನಿಕ್ (Picnic Spot) ಮಾಡುವಾಗ ತಮ್ಮ ಗಂಡನ ತೋಳುಗಳನ್ನು ಹಿಡಿದು ಕುಳಿತಿದ್ದ ಹೆಂಡತಿ  ಸಮುದ್ರದ ಅಲೆಗಳಲ್ಲಿ ಕೊಚ್ಚಿ ಹೋಗಿದ್ದಾರೆ.

ದೊಡ್ಡ ಅಲೆಗಳನ್ನು ಕಂಡು 12 ವರ್ಷದ ಮಗಳು ಕಿರುಚಾಡುತ್ತಿದ್ದರೂ ಫೋಟೋ (Photo) ತೆಗೆಯುವುದರಲ್ಲಿ ನಿರತರಾಗಿದ್ದ ದಂಪತಿ ಇತ್ತ ಗಮನ ಹರಿಸದ ಕಾರಣ ಮಹಿಳೆ ಪ್ರಾಣ ಕಳೆದುಕೊಳ್ಳಬೇಕಾಯಿತು. ಹೌದು ಇಂತಹದೊಂದು ಘಟನೆ ಮುಂಬೈನ ಬಾಂದ್ರಾ ಬೀಚ್ ನಲ್ಲಿ ನಡೆದಿದೆ. ಕುಟುಂಬ ಸಮೇತ ವಿಹಾರಕ್ಕೆಂದು ತೆರಳಿದ್ದ ಮಹಿಳೆಯೊಬ್ಬರು ಏಕಾಏಕಿ ಭಾರಿ ಅಲೆಗೆ ಕೊಚ್ಚಿ ಹೋಗಿದ್ದಾರೆ.

ಪತಿ ಪತ್ನಿ ಸಮುದ್ರದ ಮಧ್ಯೆ ಕಲ್ಲಿನ ಮೇಲೆ ಕುಳಿತು ಎಂಜಾಯ್ ಮಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಇದರೊಂದಿಗೆ ಕುಟುಂಬದ ಇತರ ಸದಸ್ಯರೂ ಇದ್ದಾರೆ. ಹುಡುಗಿಯೊಬ್ಬಳು ವಿಡಿಯೋ ಮಾಡುತ್ತಿದ್ದಾಳೆ.

ಸಮುದ್ರದ ಅಲೆಗಳಲ್ಲಿ ಕೊಚ್ಚಿ ಹೋದ ಮಹಿಳೆ ವೀಡಿಯೊ ವೈರಲ್! ಕುಟುಂಬ ಸಮೇತ ವಿಹಾರಕ್ಕೆಂದು ತೆರಳಿದ್ದ ವೇಳೆ ಘಟನೆ - Kannada News

ವಿಡಿಯೋದಲ್ಲಿ ಮಗುವಿನ ಧ್ವನಿಯೂ ಕೇಳಿಸುತ್ತಿದೆ. ಇದ್ದಕ್ಕಿದ್ದಂತೆ ದೊಡ್ಡ ಅಲೆಯೊಂದು ಬಂದು ಮಹಿಳೆಯನ್ನು ಎಳೆದೊಯ್ಯುತ್ತದೆ. ಮಗು ಮತ್ತು ತಂದೆ ನೋಡುತ್ತಲೇ ಇರುತ್ತಾರೆ. ಇದಾದ ಬಳಿಕ ಕೂಗಾಟ ಕಿರುಚಾಟ ಕೇಳಿಬರುತ್ತದೆ. ಮೃತ ಮಹಿಳೆಯ ಹೆಸರು ಜ್ಯೋತಿ ಸೋನಾರ್ ಎಂದು ಹೇಳಲಾಗುತ್ತಿದೆ.

ಮಹಿಳೆಯ ಪತಿ ಮುಖೇಶ್ ಅವರು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ತಿಳಿದುಬಂದಿದೆ. ಹಿಂದಿನಿಂದ ಅಲೆ ಜೋರಾಗಿ ಬಡಿದಿದ್ದರಿಂದ ಇಬ್ಬರೂ ಬಂಡೆಯಿಂದ ಜಾರಿ ಬಿದ್ದರು. ಇದಾದ ಬಳಿಕ ಪತ್ನಿಯನ್ನು ರಕ್ಷಿಸಲು ಸೀರೆ ಹಿಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಸಂಜೆ 5 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.

ಘಟನೆಯ ನಂತರ ಪೊಲೀಸರು ಮತ್ತು ಇತರ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಶೋಧ ಕಾರ್ಯಾಚರಣೆ ಆರಂಭಿಸಿದಾಗ ಮಹಿಳೆಯ ಮೃತದೇಹ ಪತ್ತೆಯಾಗಿದೆ.

ಪತ್ನಿ, 12 ವರ್ಷದ ಮಗಳು ಮತ್ತು ಆರು ವರ್ಷದ ಮಗನೊಂದಿಗೆ ಆಗಾಗ್ಗೆ ಪಿಕ್ನಿಕ್‌ಗೆ ಹೋಗುತ್ತಿದ್ದೆ ಎಂದು ಮುಖೇಶ್ ಹೇಳಿದ್ದಾರೆ. ಆ ದಿನವೂ ಎಲ್ಲರೂ ಪಿಕ್ನಿಕ್‌ಗಾಗಿ ಬಾಂದ್ರಾ ಬೀಚ್‌ಗೆ ಹೋಗಿದ್ದರು. ಫೋಟೋ ತೆಗೆಯುವಾಗ ಈ ಭೀಕರ ಅಪಘಾತ ಸಂಭವಿಸಿದೆ.

woman washed away in sea waves Taking photo in Mumbai Bandra Beach Video Goes Viral

Follow us On

FaceBook Google News

woman washed away in sea waves Taking photo in Mumbai Bandra Beach Video Goes Viral