ಮಹಿಳೆಯರಿಗೆ ಸಿಗಲಿದೆ 3 ವರ್ಷ ಉಚಿತ ಇಂಟರ್ನೆಟ್ ಜೊತೆಗೆ ಸ್ಮಾರ್ಟ್ ಫೋನ್! ಮಹತ್ತರ ಘೋಷಣೆ
ಮೂರು ವರ್ಷಗಳ ಇಂಟರ್ನೆಟ್ ಕನೆಕ್ಷನ್ ಉಚಿತವಾಗಿ ನೀಡುವುದರ ಜೊತೆಗೆ ಇಂಟರ್ನೆಟ್ ಇರುವಂತಹ ಸ್ಮಾರ್ಟ್ ಫೋನ್ (smartphone with free internet) ಕೂಡ ಉಚಿತವಾಗಿ ನೀಡಲು ನಿರ್ಧರಿಸಿದೆ.
ಮಹಿಳೆಯರ ಸಬಲೀಕರಣಕ್ಕಾಗಿ (women empowerment) ಕೇಂದ್ರ ಸರ್ಕಾರದಿಂದಲೂ ಸಾಕಷ್ಟು ಯೋಜನೆಗಳು ಪ್ರಕಟಣೆಗೊಂಡಿವೆ. ಅದೇ ರೀತಿ ಪ್ರತಿ ರಾಜ್ಯವು ಕೂಡ ಮಹಿಳೆಯರಿಗೆ ಅನುಕೂಲವಾಗುವಂತಹ ಸಾಕಷ್ಟು ಯೋಜನೆಗಳನ್ನು ತಮ್ಮದೇ ಆದ ರೀತಿಯಲ್ಲಿ ನೀಡುತ್ತಾ ಬಂದಿದೆ.
ಅದರಲ್ಲೂ ಇನ್ನೇನು ಚುನಾವಣೆ (election) ಕೂಡ ನಡೆಯಲಿದೆ ಹಾಗಾಗಿ ಈ ಸಂದರ್ಭದಲ್ಲಿ ಮಹಿಳೆಯರಿಗೆ ಯಾವೆಲ್ಲ ಉತ್ತಮ ಯೋಜನೆಗಳನ್ನು ಜಾರಿಗೆ ತರಬಹುದು ಎಂಬುದನ್ನು ಅಧಿಕಾರದಲ್ಲಿ ಇರುವ ಪಕ್ಷಗಳು ಹಾಗೂ ಇನ್ನೂ ಅಧಿಕಾರಕ್ಕೆ ಬರಲು ಬಯಸುವ ಪಕ್ಷಗಳು ಲೆಕ್ಕಾಚಾರ ಹಾಕುತ್ತಿವೆ. ಈ ಮೂಲಕ ಗೆಲ್ಲುವ ನಿರೀಕ್ಷೆಯನ್ನು ಹೊಂದಿವೆ.
ರಾಜಸ್ಥಾನದಲ್ಲಿ (Rajasthan) ಮಹಿಳೆಯರಿಗೆ ಮೊದಲ ಆದ್ಯತೆ ನೀಡಲು ಹೊರಟಿರುವ ಕಾಂಗ್ರೆಸ್!
ಈಗಾಗಲೇ ರಾಜಸ್ಥಾನದಲ್ಲಿ ಅಧಿಕಾರದಲ್ಲಿ ಇರುವ ಅಶೋಕ್ ಗೆಹ್ಲೋಟ್ (Ashok Gehlot) ಅವರು ರಾಜ್ಯದಲ್ಲಿ ಸಾಕಷ್ಟು ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ. ವಿದ್ಯಾರ್ಥಿಗಳಿಗೆ ಉಚಿತ laptop, ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ, 1.05 ಕುಟುಂಬದ ಮಹಿಳೆಯರಿಗೆ 500 ರೂಪಾಯಿಗಳಿಗೆ ಗ್ಯಾಸ್ ಸಿಲಿಂಡರ್, ಹೆಣ್ಣು ಮಕ್ಕಳಿಗೆ ಇಂಗ್ಲೀಷ್ ಮಾಧ್ಯಮದ ಕಲಿಕೆ, ಆಯ್ದ ಮಹಿಳೆಯರಿಗೆ ವರ್ಷಕ್ಕೆ 10,000 ಗೌರವ ಧನ, 15 ಲಕ್ಷ ರೂಪಾಯಿಗಳ ವಿಮೆ (insurance) ಹೀಗೆ ಮೊದಲಾದ ಯೋಜನೆಗಳನ್ನು ಜಾರಿಗೆ ತರುವುದಾಗಿ ರಾಜಸ್ಥಾನ ಸರ್ಕಾರ ಘೋಷಣೆ ಮಾಡಿದೆ ಇದರ ಜೊತೆಗೆ ಮನೆಯಲ್ಲಿ ಇರುವ ಗೃಹಿಣಿಯರಿಗೆ ಇನ್ನೊಂದು ಅತ್ಯಂತ ಪ್ರಯೋಜನಕಾರಿಯಾದ ಯೋಜನೆಯನ್ನು ಜಾರಿಗೆ ತರಲು ಕಾಂಗ್ರೆಸ್ ಸರ್ಕಾರ ಬಯಸುತ್ತದೆ.
ರಾಜ್ಯದ ಮಹಿಳೆಯರಿಗೆ ಮೂರು ವರ್ಷಗಳವರೆಗೆ ಉಚಿತ ಇಂಟರ್ನೆಟ್!
ಬಹುತೇಕ ಈಗ ಸ್ಮಾರ್ಟ್ ಫೋನ್ ಹಾಗೂ ಇಂಟರ್ನೆಟ್ ಇಲ್ಲದೆ ಇದ್ರೆ ಯಾವ ಕೆಲಸವು ಆಗುವುದೇ ಇಲ್ಲ ಎನ್ನುವಂತಾಗಿದೆ. ಈ ಕಾರಣಕ್ಕಾಗಿ ರಾಜಸ್ತಾನ ಸರ್ಕಾರ ಮುಂಬರುವ ದಿನಗಳಲ್ಲಿ ಚುನಾವಣೆಯಲ್ಲಿ ಗೆದ್ದರೆ ಮಹಿಳೆಯರಿಗೆ ಮೂರು ವರ್ಷಗಳ ಇಂಟರ್ನೆಟ್ ಕನೆಕ್ಷನ್ ಉಚಿತವಾಗಿ ನೀಡುವುದರ ಜೊತೆಗೆ ಇಂಟರ್ನೆಟ್ ಇರುವಂತಹ ಸ್ಮಾರ್ಟ್ ಫೋನ್ (smartphone with free internet) ಕೂಡ ಉಚಿತವಾಗಿ ನೀಡಲು ನಿರ್ಧರಿಸಿದೆ.
ಇದಕ್ಕೆ ಅದರದೇ ಆದ ನೀತಿ ನಿಯಮಗಳು, ವಯೋಮಿತಿ ಮೊದಲದ ಶರತ್ತು ಬದ್ಧ ನಿಯಮಗಳು ಇರುತ್ತವೆ. ಆದರೆ ಫಲಾನುಭವಿ ಮಹಿಳೆಯರಿಗೆ ಮಾತ್ರ ಮೂರು ವರ್ಷಗಳವರೆಗೆ ರಿಚಾರ್ಜ್ ಮಾಡಿಕೊಳ್ಳದೆ ಸ್ಮಾರ್ಟ್ಫೋನ್ ಗೆ ಇಂಟರ್ನೆಟ್ ಹಾಕಿಕೊಂಡು ಬಳಸಿಕೊಳ್ಳಬಹುದು.
ಕೋಟ್ಯಾಂತರ ಮಹಿಳೆಯರಿಗೆ ಸಿಗಲಿದೆ ಈ ಲಾಭ!
ಮೂರು ವರ್ಷಗಳವರೆಗೆ ಉಚಿತ ಇಂಟರ್ನೆಟ್ ಹಾಗೂ ಸ್ಮಾರ್ಟ್ ಫೋನ್ ಅನ್ನು ಸುಮಾರು 1.35 ಕೋಟಿ ಮಹಿಳೆಯರು ಪ್ರಯೋಜನ ಪಡೆದುಕೊಳ್ಳಲಿದ್ದಾರೆ. ಕಾಂಗ್ರೆಸ್ ಸರ್ಕಾರ ರಾಜಸ್ಥಾನ ರಾಜ್ಯದಲ್ಲಿ ಈಗಾಗಲೇ ಘೋಷಣೆ ಮಾಡಿದ ಯೋಜನೆಗಳು ಅಷ್ಟಾಗಿ ಜಾರಿಗೆ ಬಂದಿಲ್ಲ ಕಾರಣಾಂತರಗಳಿಂದ ಈ ಯೋಜನೆಗಳ ಬಿಡುಗಡೆಗೆ ಸಾಕಷ್ಟು ವಿಳಂಬ ಆಗಿದೆ ಆದರೆ ಮುಂಬರುವ ಚುನಾವಣೆಯಲ್ಲಿ ತಾವು ಗೆದ್ದರೆ ಈ ಎಲ್ಲಾ ಯೋಜನೆಗಳನ್ನು ಜಾರಿಗೆ ತರುವುದಾಗಿ ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ ತಿಳಿಸಿದ್ದಾರೆ.
ಉಚಿತ ಯೋಜನೆಗಳನ್ನು ನೀಡುವುದಾಗಿ ಘೋಷಿಸಿದ ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರ ಇದೆ ಕಾರಣಕ್ಕೆ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಹಾಗಾಗಿ ಇದೇ ಮಂತ್ರವನ್ನು ಉಳಿದ ಎಲ್ಲಾ ರಾಜ್ಯಗಳಲ್ಲಿಯೂ ಕೂಡ ಪ್ರಯೋಗ ಮಾಡಲು ಮುಂದಾಗಿದೆ.
Women will get 3 years free internet with smartphone