Story of a Dog: 64 ಕಿಲೋಮೀಟರ್.. 27 ದಿನ ನಡೆದು ತನ್ನ ಯಜಮಾನನ ಮನೆ ಸೇರಿದ ನಾಯಿ! ಇದು ಹಾರ್ಟ್ ಟಚಿಂಗ್ ಸ್ಟೋರಿ
Story of a Dog: ಸಾಕು ನಾಯಿಯೊಂದು ತನ್ನ ಮಾಲೀಕರನ್ನು ತಲುಪಲು 27 ದಿನಗಳ ಕಾಲ 64 ಕಿಲೋಮೀಟರ್ ನಡೆದು ಕೊನೆಗೆ ಮಾಲೀಕನ ಮನೆ ಸೇರಿದೆ, ಅಷ್ಟಕ್ಕೂ ಆಗಿದ್ದಾದರೂ ಏನು? ಆ ನಾಯಿ ಎಲ್ಲಿತ್ತು? ಎಂಬ ಎಲ್ಲಾ ಉತ್ತರಕ್ಕೆ ಈ ಪುಟವನ್ನು ಸಂಪೂರ್ಣವಾಗಿ ಓದಿ.
Story of a Dog: ಮನುಷ್ಯರಿಗೆ ಮಾತ್ರ ಪ್ರಾಣಿಗಳೆಂದರೆ ಒಲವು ಎಂದುಕೊಂಡರೆ ತಪ್ಪು, ತಮ್ಮ ಮಾಲೀಕರ ಬಗ್ಗೆಯೂ ಸಾಕು ಪ್ರಾಣಿಗಳು ಅಪಾರ ಪ್ರೀತಿ ಒಲವು ಇಟ್ಟುಕೊಂಡಿರುತ್ತವೆ. ಅವರ ಮಾಲೀಕರನ್ನು ಒಂದು ಕ್ಷಣವೂ ಬಿಡಲು ಸಹ ಅವು ಬಯಸುವುದಿಲ್ಲ.
ಇದಕ್ಕೆ ಸಾಕ್ಷಿ ಎಂಬಂತೆ ಸಾಕು ನಾಯಿಯೊಂದು ತನ್ನ ಮಾಲೀಕರನ್ನು ತಲುಪಲು 27 ದಿನಗಳ ಕಾಲ 64 ಕಿಲೋಮೀಟರ್ ನಡೆದು ಕೊನೆಗೆ ಮಾಲೀಕನ ಮನೆ ಸೇರಿದೆ, ಅಷ್ಟಕ್ಕೂ ಆಗಿದ್ದಾದರೂ ಏನು? ಆ ನಾಯಿ ಎಲ್ಲಿತ್ತು? ಎಂಬ ಎಲ್ಲಾ ಉತ್ತರಕ್ಕೆ ಈ ಪುಟವನ್ನು ಸಂಪೂರ್ಣವಾಗಿ ಓದಿ.
ಸ್ನೇಹಿತರೆ ನಾಯಿಗಳು ಬಹಳ ನಿಷ್ಠಾವಂತ ಪ್ರಾಣಿಗಳು. ಕೂಪರ್ ಎಂಬ ನಾಯಿಯೂ ಇದೇ ವಿಷಯವನ್ನು ಮತ್ತೊಮ್ಮೆ ಸಾಕ್ಷಿ ಸಮೇತ ಸಾಭೀತುಪಡಿಸಿದೆ. ಅದರ ಮಾಲೀಕರು ಅದನ್ನು ಮತ್ತೊಂದು ಕುಟುಂಬಕ್ಕೆ ದತ್ತು ನೀಡಿದರು. ಆದರೆ ಹೊಸ ಮನೆ, ಹೊಸ ಮಾಲೀಕರ ಬಳಿ ಆ ನಾಯಿಗೆ ಇರಲು ಮನಸ್ಸಾಗಲಿಲ್ಲ, ಸ್ವಲ್ಪವೂ ತಡಮಾಡದೆ ತನ್ನ ಮಾಲೀಕನನ್ನು ಸೇರಲು ನಾಯಿ ನಿರ್ಧಾರ ಮಾಡುತ್ತದೆ.
150 ವರ್ಷ ಹಳೆಯ ಚಿತ್ರದಲ್ಲಿ ಕಾಣುವ ಯುವತಿ ಕೈಯಲ್ಲಿ ಸ್ಮಾರ್ಟ್‌ಫೋನ್? ವೈರಲ್ ಪೇಂಟಿಂಗ್ ಸತ್ಯವೇನು?
ಒಂದು ಕ್ಷಣವೂ ಆ ಮನೆಯಲ್ಲಿ ನಿಲ್ಲದೆ, ಅಲ್ಲಿಂದ ತಪ್ಪಿಸಿಕೊಂಡು ತನ್ನ ಮೊದಲ ಮಾಲೀಕನ ಮನೆ ಕಡೆ ನಡೆಯಲು ಆರಂಭಿಸುತ್ತದೆ, ಆ ನಾಯಿಗೆ ಆ ಜಾಗ ಹೊಸದು, ಆ ದಾರಿ ಸಹ ಹೊಸದು ಆದರೂ ತನ್ನನ್ನು ಕರೆತಂದಿದ್ದ ದಾರಿ ಮಾರ್ಗವಾಗಿ ನಿರಂತರ ನಡೆಯಲು ಪ್ರಾರಂಭಿಸುತ್ತದೆ, ನಡೆಯುತ್ತಾ ನಡೆಯುತ್ತಾ ಅದರ ಗುರಿ ಹಾಗೂ ಆಲೋಚನೆ ಎಲ್ಲಾ ತನ್ನ ಮಾಲೀಕನದ್ದೇ…
ತನ್ನ ಮೂಲ ಮಾಲೀಕರ ಬಳಿಗೆ ಹೋಗಲು ದಿನಗಳಗಟ್ಟಲೆ ರಸ್ತೆಯಲ್ಲಿ ನಡೆದು ಸಾಗಿತ್ತು. 40 ಮೈಲುಗಳು ಅಥವಾ ಸುಮಾರು 64 ಕಿಲೋಮೀಟರ್ ನಡೆಯುವುದು ಅಂದರೆ ಸಾಮಾನ್ಯವೇ? ಆ ಸಮಯದಲ್ಲಿ ಅದಕ್ಕೆ ಆಹಾರ ಕೊಡುವವರು ಯಾರೂ ಇರಲಿಲ್ಲ. ಒಂದೆಡೆ ದತ್ತು ಪಡೆದ ಕುಟುಂಬ.. ಇನ್ನೊಂದೆಡೆ ಮೂಲ ಮಾಲೀಕರು ಹುಡುಕಾಟ ಆರಂಭಿಸಿದರು.
6 ಹೆಂಡತಿಯರ ಜೊತೆ ಮಲಗಲು 81 ಲಕ್ಷ ಖರ್ಚು ಮಾಡಿ 20 ಅಡಿ ಹಾಸಿಗೆ ಮಾಡಿಸಿದ ಭೂಪ! ವೈರಲ್ ಸುದ್ದಿ
ನಾಯಿಯನ್ನು ಹುಡುಕಲು ಲಾಸ್ಟ್ ಪಾವ್ಸ್ ಎನ್ಐ ಎಂಬ ಚಾರಿಟಿಯನ್ನು ಸಹ ಸಂಪರ್ಕಿಸಲಾಯಿತು. ಆ ಚಾರಿಟಿ ಸಹ ಕೂಪರ್ ಹುಡುಕಲುಪ್ರಾರಂಭಿಸಿದರು. ಆದರೆ ಕೂಪರ್ ರಸ್ತೆ, ಕಾಡು, ಹೊಲಗಳನ್ನು ದಾಟಿ ಅಂತಿಮವಾಗಿ ಮನೆಗೆ ಬಂದಿತ್ತು.
ಕಳೆದುಹೋದ ಪ್ರಾಣಿಗಳನ್ನು ಮತ್ತೆ ಹುಡುಕಿ ಮನೆ ಸೇರಿಸುವ ಕೆಲಸವನ್ನು ಲಾಸ್ಟ್ ಪಾವ್ಸ್ ಎನ್ಐ ಮಾಡುತ್ತದೆ. ಈ ಕಥೆಯನ್ನು ಕಂಪನಿಯೇ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದು, ಅನೇಕ ನೆಟಿಜನ್‌ಗಳು ಈ ಕಥೆ ಓದಿ…. ಒಂದು ಕ್ಷಣ ನಾಯಿಯ ಪ್ರೀತಿಗೆ ಮನಸೋತಿದ್ದಾರೆ.
ಕೆಲವರು ‘ಕೂಪರ್ ಸುರಕ್ಷಿತವಾಗಿ ಮನೆಗೆ ಬಂದಿದ್ದಕ್ಕೆ ಸಂತೋಷವಾಗಿದೆ’ ಇಂದೂ ಇನ್ನು ಕೆಲವರು ‘ಕೂಪರ್ ಅದ್ಭುತ ನಾಯಿ’ ಎಂದೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಸಿಂಹವನ್ನು ಹೋಲುವ ಕರುವಿಗೆ ಜನ್ಮ ನೀಡಿದ ಹಸು, ನೋಡಲು ನೆರೆದ ಜನಸಾಗರ, ವೈರಲ್ ವೀಡಿಯೋ
ಹೇಗೋ ನಾಯಿ ಸುರಕ್ಷಿತವಾಗಿ ತನ್ನ ಮಾಲೀಕನ ಮನೆ ಸೇರಿದೆ, ನಾಯಿಯನ್ನು ಕಂಡ ಅದರ ಮಾಲೀಕನ ಕಣ್ಣುಗಳಲ್ಲಿ ನೀರು ತುಂಬಿತ್ತು, ಅದನ್ನು ಬೇರೆಡೆ ಬಿಟ್ಟಿದ್ದಕ್ಕೆ ಮರುಕ ಉಂಟಾಗಿತ್ತು…..
Dog Walked For 27 Days To Reach Its Owner, Story of a Dog Goes Viral
Follow us On
Google News |