ವಿಜಯದಶಮಿ (Vijayadashami) ದಿನ ಈ ರೀತಿ ಮಾಡಿ ತಪ್ಪಿನ ಪ್ರಾಯಶ್ಚಿತ್ತ ಪಡೆಯಿರಿ

ವಿಜಯದಶಮಿ ದಿನ (Vijayadashami) : ನೀವು ತಿಳಿದೋ ತಿಳಿಯದೆಯೋ ಯಾವುದೇ ತಪ್ಪು ಮಾಡಿದ್ದರೆ, ಈ ಕ್ರಮಗಳನ್ನು ದಸರಾ ದಿನದಂದು ಮಾಡಿ.

ವಿಜಯದಶಮಿ (Vijayadashami) ದಿನ: ನೀವು ತಿಳಿದೋ ತಿಳಿಯದೆಯೋ ಯಾವುದಾದರೂ ತಪ್ಪು ಮಾಡಿದ್ದರೆ, ಅದರಿಂದಾಗಿ ನೀವು ತಪ್ಪಿತಸ್ಥ ಭಾವನೆ ಅನುಭವಿಸುತ್ತಿದ್ದರೆ, ಅದಕ್ಕೆ ಹೇಗೆ ಪ್ರಾಯಶ್ಚಿತ್ತ ಮಾಡಿಕೋಳ್ಳಬೇಕೆಂದು ನೀವು ಯೋಚಿಸುತ್ತಿದ್ದರೆ, ಇಲ್ಲಿದೆ ಪರಿಹಾರ.

ಹೌದು, ಪರಿಹಾರ ಪಡೆಯಲು ಜ್ಯೋತಿಷ್ಯದಲ್ಲಿ ಬಹಳ ಸುಲಭವಾದ ಪರಿಹಾರಗಳನ್ನು ನೀಡಲಾಗಿದೆ. ನೀವು ಕೂಡ ಇಂತಹ ಪರಿಸ್ಥಿತಿಯಲ್ಲಿದ್ದರೆ, ದಸರಾ ದಿನದಂದು ಇಲ್ಲಿ ಉಲ್ಲೇಖಿಸಿರುವ ಪರಿಹಾರಗಳನ್ನು ನೀವು ಪ್ರಯತ್ನಿಸಬಹುದು.

ವಿಜಯದಶಮಿ ದಿನ ನಿಮ್ಮಲ್ಲಿ ಯಾವುದೇ ತಪ್ಪು ಅಥವಾ ಅಪರಾಧವಿದ್ದರೆ ಪರಿಹಾರ ಪಡೆಯಲು 11 ಎಳ್ಳೆಣ್ಣೆ ದೀಪಗಳನ್ನು ಬೆಳಗಿಸಿ. ಇದರ ನಂತರ, ನಿಮ್ಮ ತಪ್ಪಿಗೆ ಕ್ಷಮೆಗಾಗಿ ಮಹಾ ಕಾಳಿಯನ್ನು ಪ್ರಾರ್ಥಿಸಿ. ಇದನ್ನು ಮಾಡುವುದರಿಂದ ಕಾಳಿ ದೇವಿಯು ಸಂತಸಗೊಂಳ್ಳುತ್ತಾಳೆ ಎಂದು ನಂಬಲಾಗಿದೆ.

ಜೀವನದಲ್ಲಿ ನಿಮ್ಮ ಒತ್ತಡಗಳು ಹೆಚ್ಚಾಗಿದ್ದರೆ, ದಸರಾ ದಿನ ಸಂಜೆ ಎರಡು ಹೊತ್ತು ಬನ್ನಿ ಮರದ ಕೆಳಗೆ ದೀಪವನ್ನು ಬೆಳಗಿಸಿ. ಈ ಪರಿಹಾರವನ್ನು ಮಾಡುವಾಗ, ದೀಪ ಹಚ್ಚಿದ ಮೇಲೆ ಮಾತ್ರ ಆಹಾರ ಸೇವಿಸಬೇಕು ಎಂಬುದನ್ನು ನೆನಪಿನಲ್ಲಿಡಿ.

ಇದನ್ನು ಮಾಡುವುದರಿಂದ, ದೇವರ ಅನುಗ್ರಹದಿಂದ, ನಿಮ್ಮ ತಪ್ಪುಗಳನ್ನು ಕ್ಷಮಿಸುತ್ತಾರೆ ಮತ್ತು ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತಾರೆ ಎಂದು ನಂಬಲಾಗಿದೆ.

Stay updated with us for all News in Kannada at Facebook | Twitter
Scroll Down To More News Today