30 ಸೆಕೆಂಡ್ ಗಳಲ್ಲಿ ಈ ಆಪ್ಟಿಕಲ್ ಇಲ್ಯೂಷನ್ ಫೋಟೋದಲ್ಲಿರುವ ಹಾವನ್ನು ಗುರುತಿಸಿ ನೋಡೋಣ!

Optical illusion Photo : ಸೋಶಿಯಲ್ ಮೀಡಿಯಾ ಮನರಂಜನೆಗೆ, ನಮ್ಮ ಪ್ರೀತಿ ಪಾತ್ರರ ಜೊತೆಗೆ ಸಂಪರ್ಕ ಬೆಳೆಸುವುದಕ್ಕೆ ಮಾತ್ರವಲ್ಲದೇ, ಇನ್ನು ಅನೇಕ ವಿಚಾರಗಳನ್ನು ತಿಳಿಸಿಕೊಡುತ್ತದೆ. ನಮ್ಮ ಬುದ್ಧಿಶಕ್ತಿಗೆ ಕೆಲಸ ಕೊಡುವಂಥ ವಿಚಾರಗಳು ಕೂಡ ಸೋಶಿಯಲ್ ಮೀಡಿಯಾ (Social Media) ಇಂದ ಗೊತ್ತಾಗುತ್ತದೆ.

ಅಂಥದ್ದೊಂದು ವಿಷಯದ ಬಗ್ಗೆ ಇಂದು ನಿಮಗೆ ತಿಳಿಸಲಿದ್ದೇವೆ, ಹಾಗೆಯೇ ನಿಮ್ಮ ಬ್ರೇನ್ ಗು ಒಂದು ಆಸಕ್ತಿಕರವಾದ ಕೆಲಸವನ್ನು ಕೊಡಲಿದ್ದೇವೆ..

ಸೋಶಿಯಲ್ ಮೀಡಿಯಾಗಳಲ್ಲಿ ಆಕ್ಟಿವ್ ಆಗಿರುವವರು ಆಪ್ಟಿಕಲ್ ಇಲ್ಯೂಷನ್ ಫೋಟೋಗಳನ್ನು ನೋಡಿರುತ್ತೀರಿ. ಇತ್ತೀಚಿನ ದಿನಗಳಲ್ಲಿ ಅಂಥ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತದೆ. ಅವುಗಳನ್ನು ದೃಷ್ಟಿಸಿ ನೋಡುತ್ತಾ, ಅಡಗಿರುವುದೇನು ಎನ್ನುವುದನ್ನು ಕಂಡು ಹಿಡಿಯುವುದು ತಲೆಗೆ, ಕಣ್ಣಿಗೆ ಕೊಡುವಂಥ ಕೆಲಸ. ಇಂದು ನಿಮಗೆ ಅಂಥದ್ದೇ ಒಂದು ಆಪ್ಟಿಕಲ್ ಇಲ್ಯೂಷನ್ ಫೋಟೋ ತೋರಿಸಲಿದ್ದೇವೆ..

ಇಲ್ಲಿ ಕಾಣುತ್ತಿರುವ ಫೋಟೋ ತುಂಬಾ ಕಸ ಕಡ್ಡಿ ಇವುಗಳೇ ತುಂಬಿದೆ. ಆದರೆ ಇದರ ಮಧ್ಯದಲ್ಲಿ ಒಂದು ಹಾವು (Snake) ಕೂಡ ಇದೆ. ಇದು ಆಪ್ಟಿಕಲ್ ಇಲ್ಯೂಷನ್ ಫೋಟೋ ಆಗಿರುವ ಕಾರಣ, ಕಸ ಕಡ್ಡಿ ಬಣ್ಣ ಮತ್ತು ಹಾವಿನ ಬಣ್ಣ ಎರಡು ಕೂಡ ಒಂದೇ ಆಗಿದ್ದು, ಕಂಡು ಹಿಡಿಯುವುದಕ್ಕೆ ಕಷ್ಟವೂ ಹೌದು.

ನಿಮ್ಮ ಬುದ್ಧಿಶಕ್ತಿಗೆ ಇದು ಒಂದು ರೀತಿಯ ಟೆಸ್ಟ್ ಆಗಿದ್ದು, ಫೋಟೋವನ್ನು ಚೆನ್ನಾಗಿ ಗಮನಿಸಿ, ಮತ್ತು ಅದರಲ್ಲಿ ಹಾವು ಎಲ್ಲಿದೆ ಎಂದು ಕಂಡು ಹಿಡಿಯಿರಿ..

ಒಂದೇ ಸಾರಿ ನೋಡಿದರೆ, ಏನು ತಿಳಿಯುವುದಿಲ್ಲ. ಈ ಫೋಟೋವನ್ನು ಕೆಲ ನಿಮಿಷಗಳ ಕಾಲ ದೃಷ್ಟಿಸಿ ನೋಡಬೇಕು, ಅದರ ಮೇಲೆ ಫೋಕಸ್ ಮಾಡಬೇಕು ಆಗ ಮಾತ್ರ ಹಾವು ಎಲ್ಲಿದೆ ಎನ್ನುವುದು ಗೊತ್ತಾಗುತ್ತದೆ.

ಹೆಚ್ಚು ಜನಗಳಿಂದ ಈ ಆಪ್ಟಿಕಲ್ ಇಲ್ಯೂಷನ್ ಫೋಟೋದಲ್ಲಿ ಹಾವು ಎಲ್ಲಿದೆ ಎನ್ನುವುದನ್ನು ಕಂಡುಹಿಡಿಯಲು ಸಾಧ್ಯವಾಗಿಲ್ಲ. ನೀವು ಇದನ್ನು ಕಂಡುಹಿಡಿದರೆ ನಿಮ್ಮ ಬುದ್ಧಿಶಕ್ತಿ ಶಾರ್ಪ್ ಆಗಿದೆ ಎಂದುಕೊಳ್ಳಬಹುದು.

ಇನ್ನು ನಿಮಗೆ ಗೊತ್ತಾಗಲಿಲ್ಲ ಎಂದರೆ, ಈ ಕೆಳಗೆ ನೀಡಿರುವ ಮತ್ತೊಂದು ಫೋಟೋ ನೋಡಿ. ಇಲ್ಲಿ ರೌಂಡ್ ಮಾರ್ಕ್ ಮಾಡಿರುವ ಜಾಗದಲ್ಲಿ ಹಾವು ಇದೆ. ಅದನ್ನು ನಾವು ಕಾಣಬಹುದು. ಹೀಗೆ ರೌಂಡ್ ಅಪ್ ಮಾಡಿರುವುದನ್ನು ನೋಡಿದಾಗ, ಅಲ್ಲಿ ಹಾವು ಇತ್ತ ಎಂದು ನಿಮಗೆ ಶಾಕ್ ಆಗಬಹುದು. ಈ ಆಪ್ಟಿಕಲ್ ಇಲ್ಯೂಷನ್ ಫೋಟೋ ನೋಡಿ, ಈ ಟಾಸ್ಕ್ ಮಾಡಿ ನಿಮಗೆ ಏನನ್ನಿಸಿತು? ಕಮೆಂಟ್ಸ್ ಮೂಲಕ ತಿಳಿಸಿ..

Find the Snake in Photo
Image : TV9 Kannada

Find the Snake in This Optical illusion Photo which Goes Viral

TRENDING ARTICLES1 / 7

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories