Maha Shivratri 2026: ಮಹಾ ಶಿವರಾತ್ರಿ ದಿನ ರಾತ್ರಿ ಈ ವಿಶೇಷ ಪರಿಹಾರ ಮಾಡಿ, ಹಣದ ಕೊರತೆ ಇರುವುದಿಲ್ಲ

Maha Shivratri 2026: ಮಹಾ ಶಿವರಾತ್ರಿ 2026 ರ ಪವಿತ್ರ ರಾತ್ರಿ ಜಾಗರಣೆ, ಮಂತ್ರಜಪ, ಬಿಲ್ವಪತ್ರ ಅರ್ಪಣೆ ಮತ್ತು ವಿಶೇಷ ಪೂಜೆಗಳು ಭಕ್ತರಿಗೆ ಆಧ್ಯಾತ್ಮಿಕ ಶಕ್ತಿ ನೀಡುತ್ತವೆ ಎನ್ನುವ ನಂಬಿಕೆ ಇದೆ. ಮಧ್ಯರಾತ್ರಿ ನಿಶಿತ ಕಾಲದಲ್ಲಿ ಧ್ಯಾನ ವಿಶೇಷ ಫಲದಾಯಕವೆಂದು ಶಾಸ್ತ್ರಗಳಲ್ಲಿ ಉಲ್ಲೇಖ.

  • ಮಹಾ ಶಿವರಾತ್ರಿ 2026 ರಾತ್ರಿ ವಿಶೇಷ ಪರಿಹಾರ
  • ಜಾಗರಣೆ ಮತ್ತು ನಿಶಿತ ಕಾಲ ಧ್ಯಾನ ಮಹತ್ವ
  • ಬಿಲ್ವಪತ್ರ ಅರ್ಪಣೆ: ಶಿವನ ಕೃಪೆಗೆ ವಿಶೇಷ ಮಾರ್ಗ
  • ಓಂ ನಮಃ ಶಿವಾಯ ಜಪ ಫಲಪ್ರದ

Maha Shivratri 2026: ಫಾಲ್ಗುಣ ಮಾಸದ ಕೃಷ್ಣಪಕ್ಷ ಚತುರ್ಧಶಿಯಂದು ಆಚರಿಸಲ್ಪಡುವ ಮಹಾ ಶಿವರಾತ್ರಿ ಈ ವರ್ಷ 2026ರಲ್ಲಿ ಭಕ್ತಿಭಾವದಿಂದ ನಡೆಯಲಿದೆ. ಶಿವಾಲಯಗಳಲ್ಲಿ ವಿಶೇಷ ಪೂಜೆ, ಅಭಿಷೇಕ, ಜಪ-ತಪಗಳು ಜೋರಾಗಿರುತ್ತವೆ. ಆದರೆ ಈ ಹಬ್ಬದ ನಿಜವಾದ ತಾತ್ಪರ್ಯ ಮಹಾ ಶಿವರಾತ್ರಿ ರಾತ್ರಿಯಲ್ಲಿದೆ ಎಂದು ಧಾರ್ಮಿಕ ನಂಬಿಕೆಗಳು ಹೇಳುತ್ತವೆ.

ಪುರಾಣಗಳ ಪ್ರಕಾರ ಇದೇ ರಾತ್ರಿ ಶಿವನು ಲಿಂಗಸ್ವರೂಪದಲ್ಲಿ ಪ್ರತ್ಯಕ್ಷನಾದನು. ಆ ಅಗ್ನಿಸ್ತಂಭಕ್ಕೆ ಆದಿಯೂ ಇಲ್ಲ ಅಂತ್ಯವೂ ಇರಲಿಲ್ಲ ಎಂಬ ವಿವರಣೆ ಇದೆ. ಇದೇ ಕಾರಣಕ್ಕೆ ಈ ರಾತ್ರಿಯನ್ನು ಅತಿ ಶಕ್ತಿಶಾಲಿ ಮತ್ತು ಪವಿತ್ರವೆಂದು ಭಕ್ತರು ಪರಿಗಣಿಸುತ್ತಾರೆ.

ಜಾಗರಣೆ ಎಂದರೆ ಕೇವಲ ನಿದ್ರೆ ತಪ್ಪಿಸುವುದಲ್ಲ

ಮಹಾ ಶಿವರಾತ್ರಿ ರಾತ್ರಿಯಲ್ಲಿ ಜಾಗರಣೆ ಮಾಡುವುದು ಶ್ರೇಷ್ಠವೆಂದು ಹೇಳಲಾಗುತ್ತದೆ. ಆದರೆ ಜಾಗರಣೆ ಅಂದರೆ ಕೇವಲ ಕಣ್ಣು ತೆರೆದಿಟ್ಟು ಇರುವುದಲ್ಲ; ಮನಸ್ಸನ್ನು ಜಾಗೃತಗೊಳಿಸುವುದು. ಸಂಪೂರ್ಣ ರಾತ್ರಿ ಜಾಗರಿಸದಿದ್ದರೂ, ಮಧ್ಯರಾತ್ರಿ “ನಿಶಿತ ಕಾಲ”ದಲ್ಲಿ ಕನಿಷ್ಠ 15-20 ನಿಮಿಷ ಮೌನವಾಗಿ ಶಿವ ಧ್ಯಾನ ಮಾಡುವುದರಿಂದ ಅಪಾರ ಫಲ ಸಿಗುತ್ತದೆ ಎನ್ನಲಾಗುತ್ತದೆ.

ಇದನ್ನೂ ಓದಿ: ಮಹಾ ಶಿವರಾತ್ರಿ 2026: ಮೊದಲ ಬಾರಿ ಉಪವಾಸ ವ್ರತ ಮಾಡ್ತಿದ್ದೀರಾ? ಈ ನಿಯಮಗಳು ನೆನಪಿರಲಿ

ಬಿಲ್ವಪತ್ರದ ವಿಶೇಷ ಪರಿಹಾರ

ಶಿವನಿಗೆ ಬಿಲ್ವಪತ್ರ ಅತ್ಯಂತ ಪ್ರಿಯ. ಮಹಾ ಶಿವರಾತ್ರಿ ರಾತ್ರಿ 1000 ಬಿಲ್ವಪತ್ರಗಳ ಮೇಲೆ “ಓಂ ನಮಃ ಶಿವಾಯ” ಎಂದು ಬರೆದು ಅರ್ಪಿಸುವ ಪರಿಹಾರ ಭಕ್ತರಲ್ಲಿ ಪ್ರಸಿದ್ಧ. ಈ ಕ್ರಮದಿಂದ ಅಕಾಲ ಮರಣ ಭಯ ದೂರವಾಗುತ್ತದೆ ಮತ್ತು ಜೀವನದಲ್ಲಿ ಶಾಂತಿ ನೆಲೆಸುತ್ತದೆ ಎನ್ನುವ ನಂಬಿಕೆ ಇದೆ.

Maha Shivratri 2026
Maha Shivratri 2026

ಮಂತ್ರಜಪದಿಂದ ಮನೋಬಲ

ಮಹಾಮೃತ್ಯುಂಜಯ ಮಂತ್ರ ಜಪ ಈ ರಾತ್ರಿ ಅತ್ಯಂತ ಫಲಪ್ರದ. ರುದ್ರಾಕ್ಷ ಧರಿಸಿ, ಭಸ್ಮದಿಂದ ತ್ರಿಪುಂಡ ಧರಿಸಿ ಜಪ ಮಾಡಿದರೆ ದೈಹಿಕ-ಮಾನಸಿಕ ಅಡೆತಡೆಗಳು ನಿವಾರಣೆಯಾಗುತ್ತವೆ ಎಂದು ಭಕ್ತರು ನಂಬುತ್ತಾರೆ. ಹಾಗೆಯೇ ಪಂಚಾಕ್ಷರಿ “ನಮಃ ಶಿವಾಯ” ಮತ್ತು ಷಡಾಕ್ಷರಿ “ಓಂ ನಮಃ ಶಿವಾಯ” ಮಂತ್ರಗಳ ಜಪ ಮನೋವಾಂಛೆಗಳನ್ನು ನೆರವೇರಿಸುವ ಶಕ್ತಿಯಾಗಿದೆ ಎನ್ನಲಾಗಿದೆ.

ಅಭಿಷೇಕ ಮತ್ತು ದೀಪಾರಾಧನೆ

ರಾತ್ರಿಯಲ್ಲಿ ಶಿವಲಿಂಗಕ್ಕೆ ಹಾಲು, ಗಂಗಾಜಲ, ತುಪ್ಪ ಹಾಗೂ ಜೇನುಗಳಿಂದ ಅಭಿಷೇಕ ಮಾಡುವುದು ವಿಶೇಷ. ಜೊತೆಗೆ ಮಧ್ಯರಾತ್ರಿ ಬಿಲ್ವವೃಕ್ಷದ ಕೆಳಗೆ 11 ತುಪ್ಪದ ದೀಪಗಳನ್ನು ಹಚ್ಚುವುದು ಗ್ರಹದೋಷ ನಿವಾರಣೆಗೆ ಸಹಾಯಕವೆಂದು ಪರಿಗಣಿಸಲಾಗಿದೆ. ಅಡಕಾದ ಕೆಲಸಗಳು ನೆರವೇರಲು ಮತ್ತು ಆರ್ಥಿಕ ಸಂಕಷ್ಟಗಳು ಕಡಿಮೆಯಾಗಲು ಇದು ಸಹಾಯಕ ಎಂದು ಭಕ್ತರಲ್ಲಿ ನಂಬಿಕೆ ಇದೆ.

ಭಕ್ತಿಯೇ ಸರ್ವಸ್ವ

ನಿಯಮಗಳು ಮುಖ್ಯವಾದರೂ, ಶ್ರದ್ಧೆ ಮತ್ತು ನಂಬಿಕೆ ಅದಕ್ಕಿಂತ ಮೇಲು. ಸರಳ ಮನಸ್ಸಿನಿಂದ ಮಾಡಿದ ಪ್ರಾರ್ಥನೆಗೂ ಶಿವನ ಕೃಪೆ ಲಭಿಸುತ್ತದೆ ಎನ್ನುವುದು ಧಾರ್ಮಿಕ ಸಂದೇಶ.

Disclaimer: ಮೇಲಿನ ಮಾಹಿತಿ ಧಾರ್ಮಿಕ ನಂಬಿಕೆ ಹಾಗೂ ಪುರಾಣಗಳ ಆಧಾರಿತವಾಗಿದೆ. ಹೆಚ್ಚಿನ ವಿವರಗಳಿಗೆ ಸಂಬಂಧಿತ ಕ್ಷೇತ್ರದ ಪರಿಣಿತರ ಸಲಹೆ ಪಡೆಯುವುದು ಸೂಕ್ತ.

Savitha

ಪತ್ರಿಕೋದ್ಯಮದಲ್ಲಿ 8 ವರ್ಷಗಳ ಬರವಣಿಗೆ ಅನುಭವ ಹೊಂದಿರುವ ಸವಿತಾ ರವರು, ಟ್ರೆಂಡಿಂಗ್ ವಿಷಯಗಳು, ಸೋಶಿಯಲ್ ಮೀಡಿಯಾ, ವೈರಲ್ ಕಂಟೆಂಟ್, ಧಾರ್ಮಿಕ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ… More »

Related Stories