ಹೆಲ್ಮೆಟ್‌ನೊಳಗೆ ಮಲಗಿತ್ತು ನಾಗರ ಹಾವು! ಆಮೇಲೆ ಏನಾಯ್ತು; ಇಲ್ಲಿದೆ ವೈರಲ್ ವಿಡಿಯೋ

Viral Video : ಹೆಲ್ಮೆಟ್ ಧರಿಸುವ ಮೊದಲು ಅದರಲ್ಲಿ ನಾಗರ ಹಾವು ಅಡಗಿದೆಯೇ ಎಂದು ಕೂಲಂಕಷವಾಗಿ ಪರಿಶೀಲಿಸಿ! ವಿಡಿಯೋ ವೈರಲ್

Viral Video : ದ್ವಿಚಕ್ರ ವಾಹನ (Two Wheeler) ಚಲಾಯಿಸುವಾಗ ಹೆಲ್ಮೆಟ್ (Helmet) ಧರಿಸುವುದು ಸುರಕ್ಷತೆ ದೃಷ್ಟಿಯಿಂದ ತುಂಬಾ ಒಳ್ಳೆಯದು. ಬೈಕ್ ಸವಾರರು (Bike Riders) ಮತ್ತು ಅದರಲ್ಲಿ ಕುಳಿತವರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿರಬೇಕು ಎಂಬುದರಲ್ಲಿ ಎರಡು ಮಾತಿಲ್ಲ.

ಇತ್ತೀಚಿನ ದಿನಗಳಲ್ಲಿ, ವಿವಿಧ ವಿನ್ಯಾಸದ ಬಲವಾದ ಮತ್ತು ಸುಂದರವಾದ ಹೆಲ್ಮೆಟ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಹೆಲ್ಮೆಟ್ ಧರಿಸಿದಂತೆ ಅದನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಕೂಡ ಒಳ್ಳೆಯ ಅಭ್ಯಾಸ.

ಆದರೆ, ನಿಮ್ಮ ಹೆಲ್ಮೆಟ್ ನಲ್ಲಿ ಇದ್ದಕ್ಕಿದ್ದಹಾಗೆ ಹಾವು ಪ್ರತ್ಯಕ್ಷವಾದರೆ? ಏನು ಗತಿ… ಹೆಲ್ಮೆಟ್‌ನಲ್ಲಿ ಹಾವು ಹೇಗೆ ಬರುತ್ತದೆ ಎಂದು ನಿಮ್ಮ ಪ್ರಶ್ನೆಯಾದ್ರೆ! ಅಂತಹದ್ದೇ ಒಂದು ಘಟನೆ ನಡೆದಿದೆ.

ಹೆಲ್ಮೆಟ್‌ನೊಳಗೆ ಮಲಗಿತ್ತು ನಾಗರ ಹಾವು! ಆಮೇಲೆ ಏನಾಯ್ತು; ಇಲ್ಲಿದೆ ವೈರಲ್ ವಿಡಿಯೋ - Kannada News

ಈ ಸುದ್ದಿಯು ಮೊದಲಿಗಿಂತ ಹೆಚ್ಚು ಜಾಗರೂಕರಾಗಿರಿ ಎಂಬುದನ್ನು ಹೇಳುತ್ತದೆ. ಹೌದು, ಕೇರಳದ (Kerala) ತ್ರಿಶೂರ್ ನಲ್ಲಿ ಇಂತಹದ್ದೇ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಈ ವ್ಯಕ್ತಿಯ ಹೆಲ್ಮೆಟ್‌ನೊಳಗೆ ಸಣ್ಣ ನಾಗರ ಹಾವು (Cobra Found in Helmet) ಕುಳಿತಿರುವುದು ಕಂಡು ಬಂದಾಗ ವಿಷಕಾರಿ ಹಾವಿನ ಕಡಿತದಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಸೋಜನ್ ಎಂಬ ವ್ಯಕ್ತಿ ತನ್ನ ಕೆಲಸದ ಸ್ಥಳದ ಪಾರ್ಕಿಂಗ್ ಸ್ಥಳದಲ್ಲಿ ಸ್ಕೂಟರ್ (Scooter) ಬಳಿ ಹೆಲ್ಮೆಟ್ ಇಟ್ಟುಹೋಗಿದ್ದ, ಸಂಜೆ ಮನೆಗೆ ಹೊರಡಲು ಹೊರಟಾಗ ಹೆಲ್ಮೆಟ್‌ (Bike Helmet) ಒಳಗೆ ಏನೋ ಇರುವುದು ಗಮನಕ್ಕೆ ಬಂದಿದೆ.

ಅದು ತನಗೆ ಹಾವಿನಂತೆ ಕಂಡಿದ್ದು, ತನಗೆ ತುಂಬಾ ಭಯವಾಯಿತು ಎಂದು ಸೋಜನ್ ಹೇಳಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಇದಾದ ನಂತರ ಲಿಜೋ ಎಂಬ ಉರಗ ತಜ್ಞ ಸ್ಥಳಕ್ಕೆ ತಲುಪಿದ್ದಾರೆ.

ಹೆಲ್ಮೆಟ್‌ನಲ್ಲಿ ನಾಗರ ಹಾವು ಅಡಗಿತ್ತು

Cobra Found in Bike Helmetನಂತರ ಉರಗ ತಜ್ಞ ಹೆಲ್ಮೆಟ್ ಕೆಳಗಿಳಿಸಿ ಸೂಕ್ಷ್ಮವಾಗಿ ನೋಡಿದ್ದಾರೆ. ಅದರೊಳಗೆ ವಿಷಪೂರಿತ ಸಣ್ಣ ನಾಗರಹಾವು ಇರುವುದು ತಿಳಿದು ಬಂದಿದೆ. ಹಾವನ್ನು ಹಿಡಿಯುವ ಯತ್ನ ನಡೆಸಿದಾಗ ಅದು ಕೂಡ ತಪ್ಪಿಸಿಕೊಳ್ಳಲು ಯತ್ನಿಸಿರುವುದು ವಿಡಿಯೋ ದೃಶ್ಯಾವಳಿಗಳಲ್ಲಿ ಕಂಡು ಬಂದಿದೆ.

ಲಿಜೋ ಹೆಲ್ಮೆಟ್ ಅನ್ನು ನೆಲದ ಮೇಲೆ ಇಟ್ಟುಕೊಂಡು ಅದನ್ನು ಬಹಳ ಎಚ್ಚರಿಕೆಯಿಂದ ಹುಡುಕಿದ್ದಾರೆ. ಹಾವು ಹೆಲ್ಮೆಟ್‌ನೊಳಗೆ ಹೊರಗೆ ಕಾಣದ ರೀತಿಯಲ್ಲಿ ಅಡಗಿಕೊಂಡಿತ್ತು. ಆದರೆ, ಹೆಲ್ಮೆಟ್‌ನ ಒಳಪದರವನ್ನು ಮೇಲೆತ್ತಿದಾಗ ನಾಗರ ಹಾವೊಂದು ಕುಳಿತಿರುವುದು ಕಂಡುಬಂದಿದೆ.

ಈ ಹಾವು ಸುಮಾರು 2 ತಿಂಗಳಿನ ವಯಸ್ಸಿನದ್ದಾಗಿದೆ ಎಂದು ಲಿಜೋ ತಿಳಿಸಿದ್ದಾರೆ. ದೊಡ್ಡ ನಾಗರಹಾವು ಕಚ್ಚುವುದಕ್ಕಿಂತ ಚಿಕ್ಕ ನಾಗರಹಾವು ಕಚ್ಚುವುದು ಅಪಾಯಕಾರಿ ಎಂದು ಸಹ ಅವರು ಹೇಳಿದರು.

Snake Found inside Bike Helmet in Kerala Thrissur, Video Goes Viral on Social Media

Follow us On

FaceBook Google News

Snake Found inside Bike Helmet in Kerala Thrissur, Video Goes Viral on Social Media