ಈ 5 ರಾಶಿಗಳ ಹೆಣ್ಣಿಗೆ ಎಂತಹ ಗಂಡಸರನ್ನೂ ಆಕರ್ಷಿಸುವ ಶಕ್ತಿಯಿದೆ
These 5 Zodiac Signs attract Any Men
ಈ 5 ರಾಶಿಗಳ ಹೆಣ್ಣಿಗೆ ಎಂತಹ ಗಂಡಸರನ್ನೂ ಆಕರ್ಷಿಸುವ ಶಕ್ತಿಯಿದೆ
ಕನ್ನಡ ಕಾರ್ನರ್ : ಕೆಲವು ತಜ್ಞರ ಪ್ರಕಾರ ರಾಶಿಚಕ್ರವು ಪ್ರತಿಯೊಬ್ಬರ ಜೀವನದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ, ಜೋತಿಷ್ಯ ಶಾಸ್ತ್ರವು ಈ ಬಗ್ಗೆ ಕೆಲವೊಮ್ಮೆ ಸಾಭೀತುಪಡಿಸಿವೆ. ನಮ್ಮ ಹುಟ್ಟಿನ ದಿನಾಂಕ ಗಳಿಗೆಯನ್ನು ಅಧಾರಗೊಳಿಸಿ ನಮ್ಮ ಆಗುಹೋಗುಗಳನ್ನು ಈ ಶಾಸ್ತ್ರವು ವಿವರಿಸಬಲ್ಲವು.
ಈಗ ಹೇಳಹೊರಟಿರುವು ಅಂತಹುದ್ದೇ ವಿಚಾರದ ಅಧಾರ, ಎಂತಹ ಪುರುಷರನ್ನು ಆಕರ್ಷಿಸುವ 5 ರಾಶಿಗಳ ಬಗೆಗೆ. ಜೋತಿಷ್ಯ ಶಾಸ್ತ್ರದ ಪ್ರಕಾರ ಈ ರಾಶಿಗಳು ಸ್ವಲ್ಪ ಮಟ್ಟಿಗೆ ವಿಭಿನ್ನ ಮತ್ತು ವಿಶೇಷತೆಯನ್ನು ಹೊದಿವೆ.
ನಾವಿಲ್ಲಿ ಹೇಳಹೊರಟಿರುವುದು ಜೋತಿಷ್ಯ ಶಾಸ್ತ್ರದ ಆಧಾರದ ಮೇಲೆ ಮಾತ್ರ ಬಿಂಬಿತವಾಗಿದೆ. ಅದಲ್ಲದೇ , ಈ ಪಟ್ಟಿಯಲ್ಲಿ ಇರದ ಇನ್ನುಳಿದ ರಾಶಿಗಳ ಹೆಣ್ಣಿಗೆ ಆ ಶಕ್ತಿ ಇಲ್ಲ ಎಂದಲ್ಲ ? ಪ್ರತಿಯೊಬ್ಬ ಹೆಣ್ಣು ಅವಳದೇ ಆದ ವೈಶಿಷ್ಟತೆಯನ್ನು ಹೊದಿರುತ್ತಾಳೆ . ಆದರೆ ಈ ರಾಶಿಗಳು ಸ್ವಲ್ಪ ಹೆಚ್ಚಿನ ಶಕ್ತಿ ಹೊಂದಿರುತ್ತಾರೆ ,
ಬನ್ನಿ, ಪುರುಷರನ್ನು ಆಕರ್ಷಿಸುವ ರಾಶಿಚಕ್ರದ ಚಿಹ್ನೆಗಳ ವಿಶೇಷ ಹಾಗೂ ಆ ರಾಶಿಗಳು ಯಾವುವು ಎಂದು ನೋಡೋಣ.
ಪುರುಷರನ್ನು ಆಕರ್ಷಿಸುವ ರಾಶಿಚಕ್ರಗಳು ಮತ್ತು ಅವುಗಳ ವಿವರ ಇಲ್ಲಿದೆ ನೋಡಿ.
ಪುರುಷರನ್ನು ಆಕರ್ಷಿಸುವ ರಾಶಿಗಳು : ಮೀನರಾಶಿ , ಕುಂಭ ರಾಶಿ , ಧನು ರಾಶಿ , ಮಕರ ರಾಶಿ , ಸಿಂಹ ರಾಶಿ.
ಮೀನ ರಾಶಿ
ಈ ರಾಶಿಯವರು ಸ್ವಲ್ಪ ವಿಭಿನ್ನ . ತನ್ನನ್ನು ಯಾರು ಪ್ರಿತಿಸುತ್ತರೋ ಇಲ್ಲವೋ , ತಾವಂತೂ ಎಲ್ಲರನ್ನು ಪ್ರೀತಿಸುವವರು . ಇವರಿಗೆ ಪ್ರತಿಯೊಬ್ಬರನ್ನು ಆಕರ್ಷಿಸುವ ಶಕ್ತಿ ಇದೆ. ಅಲ್ಲದೆ ಇವರು ಸಾಮಾನ್ಯರು ಅಲ್ಲದೇ ಅಸಮಾನ್ಯರು ಅಲ್ಲದೇ ಎಲ್ಲರೊಟ್ಟಿಗೆ ಪ್ರೀತಿಪಾತ್ರರಾಗಿರುತ್ತಾರೆ. ಇವರು ಮಾಡಬೇಕೆಂದಿರುವ ಯಾವುದೇ ಕಾರ್ಯವನ್ನು ಮಾಡಿಯೇ ತೀರುತ್ತಾರೆ. ಮೀನ ರಾಶಿಯರು ಪ್ರತಿಯೊಬ್ಬರನ್ನೂ ಆಕರ್ಷಿಸುವಂತಹ ವ್ಯಕ್ತಿತ್ವವಿದೆ. ಇವುಗಳು ಪುರುಷರನ್ನು ಆಕರ್ಷಿಸುತ್ತದೆ.
ಕುಂಭ ರಾಶಿ
ಇತರರಿಗೆ ಸಹಾಯಮಾಡುವ ಮಾನೋಭಾವ ಹೊದಿರುವವರಾಗಿದ್ದು , ಪಕ್ಕದಲ್ಲಿನವರಿಗೆ ಸಹಾಯಮಾಡುವ ದೃಷ್ಟಿಯಿಂದ ತಮ್ಮ ವ್ಯಯದ ಬಗ್ಗೆ ಯೋಚಿಸುವುದಿಲ್ಲ. ಸ್ವಾತಂತ್ರ್ಯ ಮತ್ತು ಸಮಾನತೆ ಈ ರಾಶಿಯವರ ಬಲವಾಗಿದೆ ಕುಂಭ ರಾಶಿಯವರು ಸರಳ,ನವೀನ, ವಿಭಿನ್ನ ಮತ್ತು ಸ್ವತಂತ್ರರಾಗಿರುತ್ತಾರೆ. ಈ ಗುಣಗಳು ಪುರುಷರನ್ನು ಬಹಳಷ್ಟು ಆಕರ್ಷಿಸುತ್ತವೆ.
ಧನು ರಾಶಿ
ಧನು ರಾಶಿ ಮಹಿಳೆಯರು ಸಾಹಸ ಮತ್ತು ಸಾಮಾನ್ಯವಾಗಿ ಭವಿಷ್ಯದ ಬಗ್ಗೆ ಚಿಂತಿಸದ ಮನೋಬಾವದವರು, ಅವರು ಧೈರ್ಯಕ್ಕೆ ಆದ್ಯತೆ ನೀಡುತ್ತಾರೆ. ಅನಿರೀಕ್ಷಿತ ಎದುರಿಸಬೇಕಾದ ಸಸ್ಯೆಗಳನ್ನು ಧೈರ್ಯದಿಂದ ಎದುರಿಸುತ್ತಾರೆ. ಈ ಗುಣವು ಪುರುಷರನ್ನು ಆಕರ್ಷಿಸುತ್ತದೆ, ಪುರುಷರು ಅಂತಹ ಮಹಿಳೆಯರ ಬಗ್ಗೆ ಕುತೂಹಲ ಹೆಚ್ಚಿಸಿಕೊಳ್ಳುತ್ತಾರೆ. ತಾವಾಗಿಯೇ ಸ್ನೇಹ ಬಯಸುತ್ತಾರೆ .
ಮಕರ ರಾಶಿ
ಮಕರ ರಾಶಿಯ ಮಹಿಳೆಯರು ಉದಾರಿಗಳಾಗಿರುತ್ತಾರೆ, ಬೇರೊಬ್ಬರ ನೋವಿಗೆ ಸ್ಪಂಧಿಸುವ ಮನೋಭಾವದವರಾಗಿರುತ್ತಾರೆ. ಬುದ್ಧಿವಂತ ಮತ್ತು ಸಹಾಯ ಶೀಲರಾಗಿರುತ್ತಾರೆ . ಅವರು ದೃಡ ಮನಸ್ಸಿನಿಂದ ಯಾವುದೇ ಪರಿಸ್ಥಿತಿಯನ್ನು ನಿಭಾಯಿಸಬಹುದು. ಅವರ ನೇರ ನಡವಳಿಕೆಗಳು ಪುರುಷನಿಗೆ ಅತೀ ಬೇಗ ಸೆಳೆಯುತ್ತದೆ. ಇವರ ಗುಣಲಕ್ಷಣಗಳು ಪುರುಷರಿಗೆ ಇಷ್ಟವಾಗುತ್ತದೆ.
ಸಿಂಹ ರಾಶಿ
ಈ ರಾಶಿಚಕ್ರದ ಚಿಹ್ನೆ ಹೊಂದಿರುವ ಮಹಿಳೆಯರು ಎಂಥಹುದ್ದೆ ತಿಕ್ಷ್ಣ ಸಮಸ್ಯೆಗಳನ್ನು ಎದುರಿಸುವ ಛಲವಿರುತ್ತದೆ .ಯಾವ ಸಮಯದಲ್ಲಿ ಯಾವ ಪರಿಸ್ಥಿತಿಯನ್ನು ಹೇಗೆ ತೆಗೆದುಕೊಳ್ಳುವುದು ಎಂದು ತಿಳಿದವರಾಗಿರುತ್ತಾರೆ. ಈ ಮಹಿಳೆಯರು ಬಲವಾದ ಆತ್ಮವಿಶ್ವಾಸ ಹೊಂದಿರುತ್ತಾರೆ. ಸಾಮಾನ್ಯವಾಗಿ ಈ ಗುಣಗಳು ಎಲ್ಲರನ್ನು ಸೆಳೆಯುತ್ತವೆ. ಆದ್ದರಿಂದ ಪುರುಷರು ಆಕರ್ಷಿತರಾಗುತ್ತಾರೆ.
ಮೊದಲೇ ಹೇಳಿದಂತೆ ರಾಶಿಚಕ್ರವು ಪ್ರತಿಯೊಬ್ಬರ ಜೀವನದಲ್ಲೂ ಪ್ರಮುಖ ಪಾತ್ರವಹಿಸುತ್ತವೆ. ಕೆಲವರು ಈ ಬಗ್ಗೆ ನಂಬುತ್ತಾರೆ ಇನ್ನು ಕೆಲವರು ಈ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ,
ಆದರೆ ಒಂದಂತೂ ಸತ್ಯ – ಜೋತಿಷ್ಯ ಶಾಸ್ತ್ರಕ್ಕೆ ತನ್ನದೇ ಆದ ವೈಶಿಷ್ಟತೆ ಇದೆ.////
WebTitle : ಈ 5 ರಾಶಿಗಳ ಹೆಣ್ಣಿಗೆ ಎಂತಹ ಗಂಡಸರನ್ನೂ ಆಕರ್ಷಿಸುವ ಶಕ್ತಿಯಿದೆ-These 5 Zodiac Signs attract Any Men
>>> ಕ್ಲಿಕ್ಕಿಸಿ ಕನ್ನಡ ನ್ಯೂಸ್ : Kannada Corner । Latest Kannada News
Follow us On
Google News |