Valentines Day Trend: ಪ್ರೇಮಿಗಳ ದಿನ ಉಡುಗೊರೆ ನೀಡುವುದು ಹಳೆಯ ಪದ್ಧತಿ! ಈಗ ಏನಿದ್ರೂ ಇದೇ ಟ್ರೆಂಡ್

Valentines Day Trend: ವ್ಯಾಲೆಂಟೈನ್ಸ್ ಡೇ ಸಂದರ್ಭದಲ್ಲೀಗ ದುಬಾರಿ ಗಿಫ್ಟ್‌ಗಳಿಗಿಂತ ಜೊತೆಯಾಗಿ ಪ್ರವಾಸಕ್ಕೆ ಹೋಗುವುದೇ ಯುವಜನರ ಹೊಸ ಆಯ್ಕೆ. ಸಮೀಕ್ಷೆಯ ಪ್ರಕಾರ ಹೆಚ್ಚು ಮಂದಿ ಜೋಡಿಗಳು ಟ್ರಿಪ್‌ಗಳನ್ನು ಪ್ರೇಮದ ಅತ್ಯುತ್ತಮ ಅಭಿವ್ಯಕ್ತಿ ಎಂದು ಭಾವಿಸುತ್ತಿದ್ದಾರೆ.

Valentines Day Trend: ಒಂದು ಕಾಲದಲ್ಲಿ ಪ್ರೇಮಿಗಳ ದಿನ ಎಂದರೆ ಗುಲಾಬಿ ಹೂವು, ಚಾಕ್ಲೆಟ್ ಮತ್ತು ಡಿನ್ನರ್ ಡೇಟ್. ಆದರೆ ಈಗ ಯುವಕರು ಬೇರೆ ರೀತಿಯಲ್ಲಿ ಪ್ರೀತಿಯನ್ನು ವ್ಯಕ್ತಪಡಿಸುತ್ತಿದ್ದಾರೆ.

ಇತ್ತೀಚಿನ ಸಮೀಕ್ಷೆಯ ಪ್ರಕಾರ, ಸುಮಾರು 86 ಶೇಕಡಾ ಭಾರತೀಯರು ವ್ಯಾಲೆಂಟೈನ್ಸ್ ಡೇ ವೇಳೆ ತಮ್ಮ ಸಂಗಾತಿಯೊಂದಿಗೆ ಪ್ರವಾಸಕ್ಕೆ ಹೋಗುವುದನ್ನೇ ಅತ್ಯಂತ ರೊಮ್ಯಾಂಟಿಕ್ ಎಂದು ಪರಿಗಣಿಸಿದ್ದಾರೆ.

ಬ್ಯುಸಿ ಜೀವನ ಶೈಲಿಯಲ್ಲಿ ಸಿಗದ ಸಮಯವನ್ನು ಟ್ರಿಪ್ ಮೂಲಕ ಪಡೆದುಕೊಳ್ಳಬಹುದು ಎಂಬುದು ಅವರ ಅಭಿಪ್ರಾಯ. ಒಟ್ಟಿಗೆ ಹೊಸ ಸ್ಥಳಗಳನ್ನು ಅನ್ವೇಷಿಸುವುದು, ಹೊಸ ಅನುಭವಗಳನ್ನು ಹಂಚಿಕೊಳ್ಳುವುದು ಇವು ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುತ್ತವೆ ಎಂದು ಜೋಡಿಗಳು ಹೇಳಿಕೊಂಡಿದ್ದಾರೆ.

ಪ್ರವಾಸವೇ ಹೊಸ ಪ್ರೇಮ ಭಾಷೆ

ಪ್ರವಾಸದ ಸಮಯದಲ್ಲಿ ಸಂಭಾಷಣೆ ಹೆಚ್ಚಾಗುತ್ತದೆ. ದಿನನಿತ್ಯದ ಒತ್ತಡದಿಂದ ದೂರವಾಗಿ, ಇಬ್ಬರೂ ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಈ ಕಾರಣಕ್ಕೆ ಭೌತಿಕ ಗಿಫ್ಟ್‌ಗಿಂತ ನೆನಪಿನ ಕ್ಷಣಗಳನ್ನು ನೀಡುವ ಟ್ರಾವೆಲ್ ಅನುಭವಕ್ಕೆ ಹೆಚ್ಚು ಪ್ರಾಮುಖ್ಯತೆ ಸಿಕ್ಕಿದೆ.

ದೇಶೀಯವಾಗಿ ಗೋವಾ, ಉದಯಪುರ, ಕೇರಳ ಬ್ಯಾಕ್‌ವಾಟರ್ಸ್ ಕಡೆ ಜೋಡಿಗಳ ಹೆಜ್ಜೆ ಹೆಚ್ಚಾಗಿದೆ. ಅಂತಾರಾಷ್ಟ್ರೀಯವಾಗಿ ಮಾಲ್ಡೀವ್ಸ್ ಮತ್ತು ಥೈಲ್ಯಾಂಡ್ ಮೊದಲಾದ ಸ್ಥಳಗಳಿಗೂ ಬೇಡಿಕೆ ಹೆಚ್ಚುತ್ತಿದೆ. ಈ ವ್ಯಾಲೆಂಟೈನ್ಸ್ ಡೇ ನೀವು ಸಹ ಸಂಗಾತಿಗೆ ಅಚ್ಚರಿ ಕೊಡಬೇಕೆಂದಿದ್ದರೆ, ಸಣ್ಣ ಟ್ರಿಪ್ ಪ್ಲಾನ್ ಮಾಡುವುದು ಉತ್ತಮ ಆಯ್ಕೆ ಎಂದು ಪರಿಣಿತರ ಅಭಿಪ್ರಾಯ.

Savitha

ಪತ್ರಿಕೋದ್ಯಮದಲ್ಲಿ 8 ವರ್ಷಗಳ ಬರವಣಿಗೆ ಅನುಭವ ಹೊಂದಿರುವ ಸವಿತಾ ರವರು, ಟ್ರೆಂಡಿಂಗ್ ವಿಷಯಗಳು, ಸೋಶಿಯಲ್ ಮೀಡಿಯಾ, ವೈರಲ್ ಕಂಟೆಂಟ್, ಧಾರ್ಮಿಕ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ… More »

Related Stories