ನಿಮ್ಮ ಕೈಗೆ ಈ ತಾಮ್ರದ ಬಳೆ ಹಾಕೊಂಡ್ರೆ ಎಷ್ಟು ಒಳ್ಳೆಯದು ಗೊತ್ತ
ತಾಮ್ರ ಕಡಗಗಳು ಧರಿಸಿ ಮಾನವ ದೇಹದಲ್ಲಿ ಚಿಕಿತ್ಸಕ ಪರಿಣಾಮಗಳನ್ನುಕಾಣಬಹುದು ಎಂದು ಪರಿಗಣಿಸಲಾಗಿದೆ. ಈಜಿಪ್ಟ್ ನಾಗರೀಕತೆಯಿಂದಲೇ ಈ ವಿಷಯವನ್ನು ಶಾಸನಗಳು ಮತ್ತು ತಾಮ್ರದ ಬಳಕೆಯ ಅನೇಕ ದಾಖಲಿತ ಆವೃತ್ತಿಗಳು ಇವೆ. ಉರಿಯೂತ ಮತ್ತು ನೋವನ್ನು ಸರಾಗಗೊಳಿಸುವ ಗುಣಗಳನ್ನು ಹೊಂದಿರುವ ಶುದ್ಧ ತಾಮ್ರದ ಕಂಕಣವನ್ನು ಬಳಸುವುದರಿಂದ ಅನೇಕ ಆರೋಗ್ಯ ಲಾಭವಿದೆ.
ಹೌದು, ಇಂದಿನ ಫ್ಯಾಷನ್ ಲೋಕದಲ್ಲಿ ಏನೇ ಮಾಡಿದರೂ ತಪ್ಪಿಲ್ಲ ಆದರೂ ಆರೋಗ್ಯಕ್ಕೆ ಮಾರಕವಾಗುವ ಕೆಲವು ವಸ್ತುಗಳನ್ನು ನಾವು ಕೈಗೆ ಹಾಕಿಕೊಳ್ಳುತ್ತೇವೆ. ಆರೋಗ್ಯಕ್ಕೆ ಉಪಯುಕ್ತ ವಾಗುವ ತಾಮ್ರದ ಬಳೆಗಳನ್ನು ಕೈಗೆ ಹಾಕಿಕೊಳ್ಳಲು ಒಂದು ರೀತಿಯ ಅಸಯ್ಯ ಪಟ್ಟುಕೊಂಡು ಅದನ್ನು ಹಾಕಿ ಕೊಳ್ಳಲು ಹಿಂದೆ ಮುಂದೆ ನೋಡುತ್ತವೆ.
ತಾಮ್ರದ ಬಳೆ ಅಥವಾ ವಸ್ತುಗಳನ್ನು ಬಳಸಿದ್ರೆ ಆರೋಗ್ಯಕ್ಕೆ ಒಳ್ಳೆಯದು ಅನ್ನೋದು ಸಾಬೀತಾಗಿದೆ.
ತಾಮ್ರದ ಕುಡಿಯುವ ನೀರಿನ ಲೋಟ ತಂಬಿಗೆ ಫಿಲ್ಟರ್ ಹೀಗೆ ಹಲವಾರು ತಾಮ್ರದ ವಸ್ತುಗಳನ್ನು ನಮ್ಮ ದಿನ ನಿತ್ಯದ ಜೀವನದಲ್ಲಿ ಬಳಸುವುದರಿಂದ ಆರೋಗ್ಯ ಮತ್ತು ಆಯುಷ್ಯ ವೃದ್ಧಿಸುತ್ತದೆ ಎನ್ನುತ್ತಾರೆ. ಅಂದ ಮೇಲೆ ಕೈಗೆ ನಾವು ತಾಮ್ರದ ಬಳೆ ತೊಡುವುದರಿಂದ ಇನ್ನೆಷ್ಟು ಉಪಯೋಗವಿದೆ ಎಂಬುದನ್ನು ಇಲ್ಲಿ ತಿಳಿಯಿರಿ.
ತಾಮ್ರದ ಕಡಗ (ಬಳೆ) ಧರಿಸುವುದರ ಆರೋಗ್ಯ ಪ್ರಯೋಜನಗಳು
Health Benefits Of Wearing Copper Bracelets
ನಮ್ಮ ದೇಹದಲ್ಲಿ ಇರುವ ಸೂಕ್ಶ್ಮ ಖನಿಜಗಳು ನಮ್ಮ ಬೆವರಿನ ಮೂಲಕ ರಕ್ತನಾಳಗಳನ್ನು ಪ್ರವೇಶಿಸುತ್ತವೆ. ಆದ್ದರಿಂದ ಈ ಬಳೆ ತುಂಬಾ ಪರಿಣಾಮ ಬೀರುತ್ತದೆ . ಹಾಗೂ ತಾಮ್ರವು ವಯಸ್ಸಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ
ತಾಮ್ರದ ಉಂಗುರವು ಜ್ಯೋತಿಷ್ಯ ಶಾಸ್ತ್ರದಲ್ಲಿ ಋಣಾತ್ಮಕ ಶಕ್ತಿಯನ್ನು ನಿವಾರಿಸುವ ಮತ್ತು ಧನಾತ್ಮಕ ಬದಲಾವಣೆಯನ್ನು ತರಲು ಒಂದು ಸಾಧನವಾಗಿ ವ್ಯಾಪಕವಾಗಿ ಪರಿಗಣಿಸಲ್ಪಡುತ್ತದೆ.
ಶುದ್ಧ ತಾಮ್ರದ ಕಂಕಣ ಅಥವಾ ಬಳೆ ಕಬ್ಬಿಣ ಮತ್ತು ಸತುವುಗಳಂತಹ ಸೂಕ್ಷ್ಮ ಖನಿಜಗಳನ್ನು ಹೊಂದಿರುತ್ತದೆ. ಅದು ಚರ್ಮದ ಮೇಲೆ ಬೆವರು ಒಗ್ಗೂಡಿದಾಗ, ಅವುಗಳನ್ನು ಸರಿಯಾದ ಪ್ರಮಾಣದಲ್ಲಿ ರಕ್ತದ ಸ್ಟ್ರೀಮ್ಗೆ ಹೀರಿಕೊಳ್ಳಲಾಗುತ್ತದೆ. ಇದು ಖನಿಜ ಪೂರೈಕೆಗೆ ಕಾರಣವಾಗುತ್ತದೆ, ಸೈಂಟಿಯಾ ಪ್ರೆಸ್ ಸಂಶೋಧಕರು ಇದನ್ನು ದೃಢಪಡಿಸಿದ್ದಾರೆ. ರಕ್ತಹೀನತೆ ಅಥವಾ ಕಬ್ಬಿಣದ ಮತ್ತು ಸತುವು ಕೊರತೆಯ ಸಮಸ್ಯೆಗಳಿರುವವರು ಈ ಸರಳ ಮತ್ತು ಪರಿಣಾಮಕಾರಿ ಪರ್ಯಾಯ ಚಿಕಿತ್ಸೆ ವಿಧಾನವನ್ನು ಪರಿಗಣಿಸಬಹುದು.
ವಯಸ್ಸಾದವರಿಗೆ ಹೆಚ್ಚು ಕಾಡುವುದು ಸಂಧಿವಾತ ಮತ್ತು ಕೈ, ಕಾಲುಗಳು ಜುಮ್ ಜುಮ್ ಅನ್ನುತ್ತವೆ ಅನ್ನುವವರು ಈ ತಾಮ್ರದ ಖಡಗ ಹಾಕಿಕೊಂಡರೆ ಇವೆಲ್ಲ ಸಮಸ್ಯೆ ದೂರವಾಗುತ್ತವೆ. ತಾಮ್ರದ ಬಳೆ ಧರಿಸುವುದು ದೇಹದಲ್ಲಿ ಅಗತ್ಯವಾದ ಗುಣಪಡಿಸುವ ಶಕ್ತಿಯನ್ನು ಹೊರಹೊಮ್ಮಿಸುತ್ತದೆ
ತಾಮ್ರ ಮತ್ತು ಅದರ ಗುಣಲಕ್ಷಣಗಳು ಹೃದಯರಕ್ತನಾಳದ ಆರೋಗ್ಯವನ್ನು ಹೆಚ್ಚಿಸುತ್ತದೆ. ಇದನ್ನು ಧರಿಸುವುದರಿಂದ ಕೊಬ್ಬಿನಿಂದ ಆಗುವ ಹೃದಯದ ಮೇಲೆ ಆಗುವ ಪರಿಣಾಮ ದೂರವಾಗುತ್ತದೆ. ಇದನ್ನು ಹಾಕಿಕೊಳ್ಳುವುದರಿಂದ ಹೃದಯಕ್ಕೆ ಯಾವುದೇ ತೊಂದರೆ ಆಗುವುದಿಲ್ಲ.
ತಾಮ್ರ, ಮಣಿಕಟ್ಟು ಅಥವಾ ಬೆರಳಿನ ಮೇಲೆ ಧರಿಸಿದಾಗ, ದೇಹದಲ್ಲಿ ದೈಹಿಕ ಸಮತೋಲನವನ್ನು ಸೃಷ್ಟಿಸುತ್ತದೆ. ತಾಮ್ರವು ದೇಹದ ಇತರ ಹೆಚ್ಚಿನ ವಿಷಯುಕ್ತ ಲೋಹಗಳ ವಿಷಕಾರಿ ಪರಿಣಾಮಗಳನ್ನು ತಡೆಗಟ್ಟುತ್ತದೆ. ಇವುಗಳು ಹೊರತುಪಡಿಸಿ, ತಾಮ್ರವು ಹಿಮೋಗ್ಲೋಬಿನ್ ಸೃಷ್ಟಿಸಲು ಸಹಾಯ ಮಾಡುವ ಕಿಣ್ವಗಳಿಂದ ಪ್ರತಿಕ್ರಿಯೆಯನ್ನು ಪ್ರಚೋದಿಸುತ್ತದೆ.////
Web Title : You know how good if you have copper bracelets in your hand
Read Latest News & Updates in Kannada News Today
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019