Karnataka NewsBangalore News

ಒಂದೇ ಮನೆಯಲ್ಲಿದ್ದು ಎರಡು ಮೂರು ರೇಷನ್ ಕಾರ್ಡ್ ಹೊಂದಿರುವವರಿಗೆ ಕಟ್ಟುನಿಟ್ಟಿನ ಆದೇಶ

ನಮ್ಮ ದೇಶದಲ್ಲಿ ಆಧಾರ್ ಕಾರ್ಡ್ (Aadhaar Card) ಪ್ಯಾನ್ ಕಾರ್ಡ್ (pan card) ಮೊದಲಾದವುಗಳನ್ನು ಹೇಗೆ ಪ್ರಮುಖ ದಾಖಲೆಗಳಾಗಿ ಬಳಸಿಕೊಳ್ಳುತ್ತೇವೆಯೋ ಹಾಗೆಯೇ ರೇಷನ್ ಕಾರ್ಡ್ (Ration Card) ಎನ್ನುವುದು ಕೂಡ ಒಂದು ಕುಟುಂಬಕ್ಕೆ ಬಹಳ ಮುಖ್ಯವಾಗಿರುವ ದಾಖಲೆ ಆಗಿರುತ್ತದೆ.

ಇಂತಹ ರೇಷನ್ ಕಾರ್ಡ್ ಇದ್ರೆ ಆ ಕುಟುಂಬ ಸರ್ಕಾರದಿಂದ ಸಿಗುವ ಹಲವು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಅಲ್ಲದೆ ಈಗ ರಾಜ್ಯದಲ್ಲಿ ರೇಷನ್ ಕಾರ್ಡ್ ತಿದ್ದುಪಡಿಗೆ (ration card update) ಸಂಬಂಧಪಟ್ಟ ಹಾಗೆ ಸರ್ಕಾರ ಹೊಸ ನಿಯಮವನ್ನು ಜಾರಿಗೆ ತಂದಿದೆ.

Detection of Fake ration cards and soon distribution of 1.73 lakh new BPL cards

ಯಾರ ಕುಟುಂಬ ರೇಷನ್ ಕಾರ್ಡ್ ಹೊಂದಿದೆಯೋ ಅದು ಎಪಿಎಲ್ (APL Card) ಆಗಿರಲಿ ಅಥವಾ ಬಿಪಿಎಲ್ (BPL card) ಆಗಿರಲಿ ಸರಕಾರದ ನಿಯಮ ಉಲ್ಲಂಘನೆ ಮಾಡಿದ್ರೆ ಅಂತಹ ಕಾರ್ಡ್ ರದ್ದಾಗುತ್ತದೆ.

ಇಂತವರ ಖಾತೆಗೆ ಬರಲಿದೆ ಉಚಿತ 3000 ರೂಪಾಯಿ! ಸರ್ಕಾರದಿಂದ ಹೊಸ ಯೋಜನೆ ಘೋಷಣೆ

ರೇಷನ್ ಕಾರ್ಡ್ ಬಗ್ಗೆ ಸರ್ಕಾರದ ಹೊಸ ನಿಯಮ: (government new rules)

ರೇಷನ್ ಕಾರ್ಡ್ ಇದ್ರೆ ಅಂತಹ ಕುಟುಂಬದವರು ಸರ್ಕಾರದ ಪ್ರಮುಖ ಸವಲತ್ತುಗಳನ್ನು ಪಡೆದುಕೊಳ್ಳುತ್ತಾರೆ. ಬಿಪಿಎಲ್ ರೇಷನ್ ಕಾರ್ಡ್ ಹೊಂದಿದ್ರೆ ಉಚಿತ ಪಡಿತರ ಪಡೆದುಕೊಳ್ಳಬಹುದು.

ಆದರೆ ಇತ್ತೀಚಿನ ದಿನಗಳಲ್ಲಿ ರೇಷನ್ ಕಾರ್ಡ್ ಮೂಲಕ ಸರ್ಕಾರದ ಹಲವು ಯೋಜನೆಗಳ ಪ್ರಯೋಜನ ಪಡೆದುಕೊಳ್ಳುವ ಸಲುವಾಗಿ ಸಾಕಷ್ಟು ಜನ ವಂಚನೆ ಮಾಡುತ್ತಿದ್ದಾರೆ. ಇಂತಹ ವಂಚನೆ ಪ್ರಕರಣಗಳು ಬೆಳಕಿಗೆ ಬಂದಿದ್ದು ಸರ್ಕಾರ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.

ರೈತರಿಗೆ ಬಂಪರ್ ಗಿಫ್ಟ್! ಗೃಹಜ್ಯೋತಿ ಫ್ರೀ ಕರೆಂಟ್ ನಂತರ ಸರ್ಕಾರದ ಮಹತ್ವದ ನಿರ್ಧಾರ

ಒಂದೇ ಮನೆಯಲ್ಲಿ ಎರಡು ಮೂರು ರೇಷನ್ ಕಾರ್ಡ್ ಇದ್ದವರಿಗೆ ಸರ್ಕಾರದ ಆದೇಶ;

ಸರ್ಕಾರ ಘೋಷಣೆ ಮಾಡಿರುವ ಅನ್ನಭಾಗ್ಯ ಯೋಜನೆ (Annabhagya scheme) ಅಥವಾ ಗೃಹಲಕ್ಷ್ಮಿ ಯೋಜನೆಯ (Gruha lakshmi scheme) ಪ್ರಯೋಜನ ಪಡೆದುಕೊಳ್ಳಲು ಇತ್ತೀಚಿಗೆ ಜನರು ಒಂದೇ ಕುಟುಂಬದಲ್ಲಿ ವಾಸಿಸುತ್ತಿದ್ದರು ಎರಡು ಮೂರು ರೇಷನ್ ಕಾರ್ಡ್ ಮಾಡಿಕೊಂಡಿದ್ದಾರೆ

ಹಾಗಾಗಿ ಒಂದೇ ಮನೆಗೆ ಈ ಯೋಜನೆಯ ಲಾಭಗಳು ಸಿಗುತ್ತಿವೆ, ಇದರಿಂದ ನಿಜವಾಗಿ ಯಾರಿಗೆ ಯೋಜನೆಯ ಪ್ರಯೋಜನ ಸಿಗಬೇಕು ಅವರಿಗೆ ಸಿಗುತ್ತಿಲ್ಲ ಎನ್ನುವ ಕಾರಣಕ್ಕೆ ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಲು ಮುಂದಾಗಿದೆ.

ಹೌದು ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಹಣ ತೆಗೆದುಕೊಳ್ಳಲು ಅತ್ತೆ ಹಾಗೂ ಸೊಸೆ ಹೆಸರಿನಲ್ಲಿ ಪ್ರತ್ಯೇಕ ರೇಷನ್ ಕಾರ್ಡ್ ಹೊಂದಲು ಜನ ಬಯಸುತ್ತಿದ್ದಾರೆ.

ಅಷ್ಟೇ ಅಲ್ಲದೆ ದೊಡ್ಡ ಕುಟುಂಬದಲ್ಲಿ ವಾಸಿಸುವವರು ಒಂದೇ ಮನೆಯಲ್ಲಿ ಒಂದೇ ವಿಳಾಸದಲ್ಲಿ ಇದ್ದರು ಎರಡು ಮೂರು ರೇಷನ್ ಕಾರ್ಡ್ ಇಟ್ಟುಕೊಂಡಿದ್ದಾರೆ. ತಿದ್ದುಪಡಿ ಮಾಡುವ ಸಂದರ್ಭದಲ್ಲಿ ಇಂತಹ ಪ್ರಕರಣಗಳು ಬೆಳಕಿಗೆ ಬಂದರೆ ಆ ರೀತಿಯ ರೇಷನ್ ಕಾರ್ಡ್ ರದ್ದು (ration card cancellation) ಪಡಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.

ಗೃಹಜ್ಯೋತಿ ಫ್ರೀ ಕರೆಂಟ್ ಕೊಟ್ಟ ಕೆಲವೇ ದಿನಗಳಲ್ಲಿ ಬೇಸರದ ಸುದ್ದಿ! ಧಿಡೀರ್ ಇನ್ನೊಂದು ಘೋಷಣೆ

ಹೊಸ ರೇಷನ್ ಕಾರ್ಡ್ ಬಳಕೆ ಅರ್ಜಿ;

ಅತ್ತೆ ಸೊಸೆ ಇಬ್ಬರು ಒಂದೇ ರೇಷನ್ ಕಾರ್ಡ್ ನಲ್ಲಿ ಇರುವ ತಮ್ಮ ಹೆಸರನ್ನು ಪ್ರತ್ಯೇಕವಾಗಿಸುವ (separate ration card) ಪ್ರಯತ್ನವನ್ನು ಮಾಡುತ್ತಿದ್ದಾರೆ ಹೀಗಾಗಿ ಹೊಸ ರೇಷನ್ ಕಾರ್ಡ್ ಗೆ ಅಪ್ಲೈ ಕೂಡ ಮಾಡಲಾಗುತ್ತಿದೆ.

ಸರ್ಕಾರದ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಈ ರೀತಿಯಾಗಿ ಸರ್ಕಾರಕ್ಕೆ ವಂಚನೆ ಮಾಡುತ್ತಿರುವ ಬಗ್ಗೆ ಆಹಾರ ಇಲಾಖೆ ಗಮನ ವಹಿಸಿದ್ದು ಯಾವುದೇ ರೀತಿ ಅನುಮಾನಾಸ್ಪದವಾಗಿ ಕಂಡು ಬಂದ ರೇಷನ್ ಕಾರ್ಡ್ ಅನ್ನು ಕೂಡಲೇ ರದ್ದುಪಡಿಸುವುದಾಗಿ ತಿಳಿಸಿದೆ. ಹಾಗಾಗಿ ಒಂದೇ ಮನೆಯಲ್ಲಿ ಇರುವ ಸದಸ್ಯರು 3-4 ರೇಷನ್ ಕಾರ್ಡ್ ಅನ್ನು ಇನ್ನು ಮುಂದೆ ಹೊಂದಿರುವಂತಿಲ್ಲ.

A strict order has been implemented for those who have two or three ration cards in the same Family

Our Whatsapp Channel is Live Now 👇

Whatsapp Channel

Related Stories