ಗೃಹಜ್ಯೋತಿ ಫ್ರೀ ಕರೆಂಟ್ ಕೊಟ್ಟ ಕೆಲವೇ ದಿನಗಳಲ್ಲಿ ಬೇಸರದ ಸುದ್ದಿ! ಧಿಡೀರ್ ಇನ್ನೊಂದು ಘೋಷಣೆ
ರಾಜ್ಯದಲ್ಲಿ ಉಚಿತ ವಿದ್ಯುತ್ (free electricity) ನೀಡುವ ಯೋಜನೆ ಒಂದು ಜಾರಿಗೆ ಬಂದು ರಾಜ್ಯದ ಲಕ್ಷಾಂತರ ಕುಟುಂಬಗಳು ಇಂದು ಉಚಿತವಾಗಿ ವಿದ್ಯುತ್ ಬಳಸುವಂತೆ ಆಗಿದೆ.
ರಾಜ್ಯ ಸರ್ಕಾರ ತನ್ನ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಗೃಹಜ್ಯೋತಿ ಯೋಜನೆಯ (Gruha Jyothi Yojana) ಅಡಿಯಲ್ಲಿ ಉಚಿತ ವಿದ್ಯುತ್ ನೀಡುತ್ತಿದೆ.
ಇದು ರಾಜ್ಯ ಸರ್ಕಾರದ ಬಹಳ ದೊಡ್ಡ ಉಪಕ್ರಮ ಆಗಿದ್ದರು ಕೂಡ ಇತ್ತೀಚಿನ ದಿನಗಳಲ್ಲಿ ಹಲವರು ವಿದ್ಯುತ್ ವಿಚಾರಕ್ಕೆ ಸಂಬಂಧಪಟ್ಟಂತೆ ಸಂಕಷ್ಟ ಎದುರಿಸುವಂತಹಾಗಿದೆ.
ಬಿಪಿಎಲ್ ಕಾರ್ಡ್ ಇರುವವರಿಗೆ ಹೊಸ ರೂಲ್ಸ್! ರೇಷನ್ ಪಡೆಯಲು ಹೊಸ ನಿಯಮ ಜಾರಿಗೆ
ಸಣ್ಣ ವ್ಯಾಪಾರಿಗಳಿಗೆ ತೊಂದರೆ
ಅಂಗಡಿ, ಸಣ್ಣ ವ್ಯಾಪಾರ (small scale industry) ನಡೆಸಿಕೊಂಡು ಜೀವನ ಮಾಡುವವರಿಗೆ ಸರ್ಕಾರದಲ್ಲಿ ಹೊಸ ನಿಯಮ ನಿಜಕ್ಕೂ ಜೇಬಿಗೆ ಕತ್ತರಿ ಹಾಕಲಿದೆ ಎನ್ನಬಹುದು. ವಿದ್ಯುತ್ ಬೇಡಿಕೆ ದಿನದಿಂದ ದಿನಕ್ಕೆ ಜಾಸ್ತಿ ಆಗುತ್ತಿದೆ, ಹೊರತು ಆ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆ ಆಗುತ್ತಿಲ್ಲ.
ಇದರಿಂದಾಗಿ ರಾಜ್ಯಾದ್ಯಂತ ವಿದ್ಯುತ್ ಕ್ಷಾಮ ತಲೆದೋರುವ ಎಲ್ಲಾ ಸಾಧ್ಯತೆಗಳು ಇವೆ. ಈ ಹಿನ್ನೆಲೆಯಲ್ಲಿ ವಿದ್ಯುತ್ ಬೆಲೆಯೂ (electricity unit charge increased) ಕೂಡ ಜಾಸ್ತಿಯಾಗಿದೆ.
ವಿದ್ಯುತ್ ಇನ್ನು ಮುಂದೆ ಮತ್ತಷ್ಟು ದುಬಾರಿ;
ಹಲವರಿಗೆ ಉಚಿತವಾಗಿ ವಿದ್ಯುತ್ ಸಿಗುತ್ತಿದೆ ನಿಜ, ಆದರೆ ವಿದ್ಯುತ್ ಬಿಲ್ (Electricity Bill) ಪಾವತಿ ಮಾಡುವವರಿಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ. ಇಂಧನ ಹಾಗೂ ವಿದ್ಯುತ್ ಪೂರೈಕೆ ಶುಲ್ಕ ಎನ್ನುವ ಹೆಸರಿನಲ್ಲಿ ವಿದ್ಯುತ್ ಬೆಲೆಯನ್ನು ಜಾಸ್ತಿ ಮಾಡಲಾಗಿದೆ, ಪ್ರತಿ ಯೂನಿಟ್ಗೆ 1.01 ರೂಪಾಯಿಗಳಷ್ಟು ಹೆಚ್ಚಳವಾಗಿದೆ.
ಅಕ್ಟೋಬರ್ ಡಿಸೆಂಬರ್ ತಿಂಗಳಿಗೆ ಹೊಂದಾಣಿಕೆ ಆಗುವಂತೆ ಕಳೆದ ಜುಲೈ ತಿಂಗಳಿನಲ್ಲಿಯೇ, ಇಂಧನ ಮತ್ತು ವಿದ್ಯುತ್ ಖರೀದಿ ವೆಚ್ಚ ಹೊಂದಾಣಿಕೆ ಶುಲ್ಕ ಎಂದು 50 ಪೈಸೆ ಹೆಚ್ಚಳ ಮಾಡಲಾಗಿತ್ತು. ಈಗ ಅಕ್ಟೋಬರ್ ತಿಂಗಳಲ್ಲಿ ಮತ್ತೆ 51 ಪೈಸೆ ಹೆಚ್ಚಿಸಲಾಗಿದೆ. ಅಂದರೆ ಇಂದು ಪ್ರತಿ ಯೂನಿಟ್ (unit) ವಿದ್ಯುತ್ ಗೆ 1.01 ರೂಪಾಯಿ ಹೆಚ್ಚಳವಾಗಿದೆ.
ಗೃಹಜ್ಯೋತಿ ಫ್ರೀ ಕರೆಂಟ್ ಬೆನ್ನಲ್ಲೇ, ರೈತರಿಗಾಗಿ ಹೊಸ ನಿರ್ಧಾರ ಕೈಗೊಂಡ ಸಿಎಂ ಸಿದ್ದರಾಮಯ್ಯ
ವಾಣಿಜ್ಯ ಬಳಕೆದಾರರ ಜೇಬಿಗೆ ಬಿದ್ದು ಕತ್ತರಿ!
ಒಂದು ಕಡೆ ಉಚಿತವಾಗಿ ವಿದ್ಯುತ್ ಅನ್ನು ಕೆಲವರು ಪಡೆದುಕೊಳ್ಳುತ್ತಿದ್ದ,ರೆ ಯಾರು ವಿದ್ಯುತ್ ಬಿಲ್ ಪಾವತಿ ಮಾಡುತ್ತಿದ್ದಾರೋ ಅವರಿಗೆ ವಿದ್ಯುತ್ ಅವರೇ ಇನ್ನಷ್ಟು ಜಾಸ್ತಿ ಆಗುತ್ತಿದೆ. ವಾಣಿಜ್ಯ ವಿದ್ಯುತ್ ಬಳಕೆದಾರರಿಗೆ ವಿದ್ಯುತ್ ಯೂನಿಟ್ ಬೆಲೆ ಹೆಚ್ಚಳವಾಗಿರುವುದು ನಿಜಕ್ಕೂ ಸಮಸ್ಯೆ ಉಂಟುಮಾಡಿದೆ.
ಮೊದಲೇ ಪ್ರತಿ ತಿಂಗಳು ಸಾವಿರಾರು ರೂಪಾಯಿಗಳಷ್ಟು ವಿದ್ಯುತ್ ಬೆಲೆ ಜಾಸ್ತಿ ಬರುತ್ತಿದೆ ಅದರ ಜೊತೆಗೆ ಈಗ ಮತ್ತೆ ಶುಲ್ಕ ಹೆಚ್ಚಳ ಮಾಡಿರುವುದರಿಂದ ಸಣ್ಣ ಪುಟ್ಟ ವ್ಯಾಪಾರ ಮಾಡುವವರು ಬಂದಿರುವ ಲಾಭವನ್ನೆಲ್ಲ ವಿದ್ಯುತ್ ಬಿಲ್ ಪಾವತಿಸುವುದಕ್ಕೆ ಸುರಿಯುವಂತಾಗಿದೆ.
ಸರ್ಕಾರದ ಈ ನೀತಿಯಿಂದ ಸಾಕಷ್ಟು ವ್ಯಾಪಾರಸ್ಥರು ಬೇಸರಗೊಂಡಿದ್ದಾರೆ. ಬಡವರು ಹಾಗೂ 200ಯೂನಿಟ್ ಗಿಂತ ಕಡಿಮೆ ವಿದ್ಯುತ್ ಬಳಸುವವರು ಗೃಹ ಜ್ಯೋತಿ ಯೋಜನೆಯ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ
ಆದರೆ ವಿದ್ಯುತ್ ಪಾವತಿ ಮಾಡುತ್ತಿರುವ ನಾವು ಈಗ ಹೆಚ್ಚಳವಾಗಿರುವ ವಿದ್ಯುತ್ ಶುಲ್ಕವನ್ನು ಕೂಡ ಪಾವತಿ ಮಾಡಬೇಕಾಗಿ ಬಂದಿರುವುದರಿಂದ ನಮಗೆ ಆರ್ಥಿಕವಾಗಿ ಸಮಸ್ಯೆ (financial problems) ಉಂಟಾಗುತ್ತಿದೆ ಎಂದು ಸರ್ಕಾರಕ್ಕೆ ದೂರು ನೀಡುತ್ತಿದ್ದಾರೆ. ಒಟ್ಟಿನಲ್ಲಿ ಒಂದು ಕಡೆ ಗ್ಯಾರಂಟಿ ಯೋಜನೆಗಳ ಲಾಭ ಸಿಕ್ಕರೆ ಇನ್ನೊಂದು ಕಡೆ ಬೆಲೆ ಏರಿಕೆ ಹಲವರಿಗೆ ಆರ್ಥಿಕ ನಷ್ಟ ಉಂಟು ಮಾಡುತ್ತಿದೆ.
Big Update on Govt Scheme Gruha Jyothi Scheme Free Electricity