ಗೃಹಜ್ಯೋತಿ ಫ್ರೀ ಕರೆಂಟ್ ಬೆನ್ನಲ್ಲೇ, ರೈತರಿಗಾಗಿ ಹೊಸ ನಿರ್ಧಾರ ಕೈಗೊಂಡ ಸಿಎಂ ಸಿದ್ದರಾಮಯ್ಯ

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ವಿದ್ಯುತ್ ಬಳಕೆ (Electricity Usage) ಕೂಡ ಜಾಸ್ತಿಯಾಗಿದೆ, ಆದರೆ ಜನರ ಬೇಡಿಕೆಗೆ ಬಳಕೆಗೆ ತಕ್ಕಷ್ಟು ವಿದ್ಯುತ್ ಅನ್ನು ರಾಜ್ಯ ಸರ್ಕಾರದಿಂದ ಉತ್ಪಾದನೆ ಮಾಡಲು ಸಾಧ್ಯವಾಗುತ್ತಿಲ್ಲ

ಈ ಬಾರಿ ವಾರ್ಷಿಕವಾಗಿ ಬೀಳಬೇಕಿದ್ದ ಮಳೆ (Rain) ರಾಜ್ಯಾದ್ಯಂತ ಸರಿಯಾಗಿ ಬಿದ್ದಿಲ್ಲ, ಮಳೆಯ ಅಭಾವದಿಂದಾಗಿ ರೈತರು ಬೆಳೆ ನಷ್ಟ ಅನುಭವಿಸುವಂತಾಗಿದೆ. ಈ ಬಾರಿ ಆದಷ್ಟು ರೈತರ ಜಮೀನಿನಲ್ಲಿ ಅರ್ಧಕರ್ಧದಷ್ಟು ಬೆಳೆ ಬರುವುದು ಕೂಡ ಡೌಟ್.

ಇನ್ನು ಮಳೆಯ ಅಭಾವದಿಂದ ಒಂದು ಕಡೆ ರೈತರು ನಷ್ಟ ಅನುಭವಿಸುವಂತಾಗಿದ್ದರೆ, ಇನ್ನೊಂದು ಕಡೆ ಜನರಿಗೆ ಬೇಕಾಗುವಷ್ಟು ವಿದ್ಯುತ್ (electricity) ಕೂಡ ತಯಾರು ಮಾಡಲು ಸಾಧ್ಯವಾಗುತ್ತಿಲ್ಲ.

ಈ ನಡುವೆ ರಾಜ್ಯ ಸರ್ಕಾರ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.

ಗೃಹಜ್ಯೋತಿ ಫ್ರೀ ಕರೆಂಟ್ ಬೆನ್ನಲ್ಲೇ, ರೈತರಿಗಾಗಿ ಹೊಸ ನಿರ್ಧಾರ ಕೈಗೊಂಡ ಸಿಎಂ ಸಿದ್ದರಾಮಯ್ಯ - Kannada News

ಕಳೆದ ತಿಂಗಳ ಅನ್ನಭಾಗ್ಯ ಯೋಜನೆ ಹಣ ನಿಮ್ಮ ಖಾತೆಗೆ ಜಮಾ ಆಗಿದ್ಯಾ? ಒಂದೇ ಕ್ಲಿಕ್ ನಲ್ಲಿ ತಿಳಿದುಕೊಳ್ಳಿ

ಹೆಚ್ಚಿದೆ ವಿದ್ಯುತ್ ಅಭಾವ

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ವಿದ್ಯುತ್ ಬಳಕೆ (Electricity Usage) ಕೂಡ ಜಾಸ್ತಿಯಾಗಿದೆ, ಆದರೆ ಜನರ ಬೇಡಿಕೆಗೆ ಬಳಕೆಗೆ ತಕ್ಕಷ್ಟು ವಿದ್ಯುತ್ ಅನ್ನು ರಾಜ್ಯ ಸರ್ಕಾರದಿಂದ ಉತ್ಪಾದನೆ ಮಾಡಲು ಸಾಧ್ಯವಾಗುತ್ತಿಲ್ಲ. ಕಾರಣ ನಿರೀಕ್ಷೆಯ ಮಟ್ಟಕ್ಕೆ ಈ ಬಾರಿ ಮಳೆ ಆಗಲಿಲ್ಲ. ಇದರಿಂದಾಗಿ ವಿದ್ಯುತ್ ಅಭಾವ (electricity problem) ತಲೆದೂರಿದೆ.

ಲೋಡ್ ಶೆಡ್ಡಿಂಗ್ ಅನಿವಾರ್ಯ! (load shedding)

ವಿದ್ಯುತ್ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತದೆ, ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ವಿದ್ಯುತ್ ಬಳಕೆ 20% ಹೆಚ್ಚಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ. ಇದರಿಂದಾಗಿ ಗ್ರಾಮೀಣ ಭಾಗದಲ್ಲಿ (village) ಲೋಡ್ ಶೆಡ್ಡಿಂಗ್ ಅನಿವಾರ್ಯ ಎಂದು ಸರ್ಕಾರ (government) ತಿಳಿಸಿದೆ.

ಪಟ್ಟಣ ಭಾಗದಲ್ಲಿ ಲೋಡ್ ಶೂಟಿಂಗ್ ಮಾಡುವುದು ಅಷ್ಟು ಸುಲಭ ಅಲ್ಲ ಆದರೆ ಗ್ರಾಮೀಣ ಭಾಗದಲ್ಲಿ ಲೋಡ್ ಶೆಡ್ಡಿಂಗ್ ಅನಿವಾರ್ಯ ಎನ್ನುತ್ತಿದೆ ಸರ್ಕಾರ.

ಗೃಹಲಕ್ಷ್ಮಿ ಯೋಜನೆಯ ಎರಡೂ ಕಂತಿನ ಹಣ ನಾಳೆಯೇ ಬಿಡುಗಡೆ! ಇಂತಹ ಗೃಹಿಣಿಯರಿಗೆ ಮಾತ್ರ

ರೈತರಿಗಾಗಿ ವಿಶೇಷ ನಿರ್ಧಾರ

ಮೊದಲೇ ಮುಂಗಾರು ಸರಿಯಾಗಿ ಆಗದೆ ಇರುವ ಕಾರಣ ರೈತರು (farmers) ಬೆಳೆ ನಷ್ಟ ಅನುಭವಿಸುವಂತಾಗಿದೆ, ಈಗ ಇರುವ ಚುರೋ ಪಾರು ಬೆಳೆಯನ್ನ ಉಳಿಸಿಕೊಳ್ಳಬೇಕು ಅಂದ್ರೆ ತೋಟಕ್ಕೆ ಸರಿಯಾಗಿ ನೀರು ಹಾಕಲೇಬೇಕು.

ಆದರೆ ಹಳ್ಳಿಯಲ್ಲಿಯೂ ಲೋಡ್ ಶೆಡ್ಡಿಂಗ್ ಭೀತಿ ರೈತರಿಗೆ ತಲೆ ನೋವಾಗಿದೆ. ಇದಕ್ಕಾಗಿ ಸಿಎಂ ಸಿದ್ದರಾಮಯ್ಯ (CM siddaramaiah) ಅವರು ತಮ್ಮ ತಂಡದೊಂದಿಗೆ ಚರ್ಚೆ ನಡೆಸಿ ರೈತರಿಗೆ ಅನುಕೂಲವಾಗುವಂತೆ ವಿದ್ಯುತ್ ನೀಡಲು ಚಿಂತಿಸಿದ್ದಾರೆ ಎನ್ನಲಾಗಿದೆ.

ರೈತರಿಗೆ 5 ಘಂಟೆಗಳ ವಿದ್ಯುತ್:

electricity for Farmers

ಶಕ್ತಿ ಯೋಜನೆ ಅಪ್ಡೇಟ್! ಇನ್ಮುಂದೆ ರಾಜ್ಯದ ಈ ಬಸ್ಸುಗಳಲ್ಲಿ ಗೃಹಿಣಿಯರಿಗೆ ಉಚಿತ ಪ್ರಯಾಣ ಇಲ್ಲ

ರೈತರಿಗೆ ವಿದ್ಯುತ್ ಪೂರೈಕೆಯ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ರೈತರಿಗೆ ಅನುಕೂಲವಾಗುವಂತೆ ವಿದ್ಯುತ್ ಪೂರೈಕೆ ಮಾಡಬೇಕು ಎಂದು ತೀರ್ಮಾನಿಸಿದ್ದಾರೆ.

ಲೋಡ್ ಶೆಡ್ಡಿಂಗ್ ಅನಿವಾರ್ಯವಾಗಿದ್ದರೂ ಕೂಡ ಬಹಳ ಎಚ್ಚರಿಕೆಯಿಂದ ಇದನ್ನ ಮಾಡಬೇಕು, ಮಳೆಯ ಕೊರತೆಯಿಂದಾಗಿ ಕೃಷಿ ವಲಯದಲ್ಲಿ ಈಗಾಗಲೇ ವಿದ್ಯುತ್ ಬೇಡಿಕೆಯು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ಪ್ರತಿದಿನ ಕನಿಷ್ಠ ಐದು ಗಂಟೆಗಳ ಕಾಲ ವಿದ್ಯುತ್ ಸಿಗುವಂತೆ ಆಗಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.

ಲೋಡ್ ಶೆಡ್ಡಿಂಗ್ ಅನಿವಾರ್ಯವಾಗಿದೆ, ಆದರೆ ರೈತರಿಗೆ ಇದರಿಂದ ಹೆಚ್ಚಿನ ತೊಂದರೆ ಆಗಬಾರದು ಅವರಿಗೆ ದಿನದಲ್ಲಿ ಕನಿಷ್ಠ ಐದು ಗಂಟೆ ವಿದ್ಯುತ್ ಸಿಗಲೇಬೇಕು ಎಂದು ಸಿಎಂ ಸಿದ್ದರಾಮಯ್ಯ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದ್ದಾರೆ.

After Gruha Jyothi Free Electricity, CM Siddaramaiah took a new decision for farmers

Follow us On

FaceBook Google News

After Gruha Jyothi Free Electricity, CM Siddaramaiah took a new decision for farmers