Karnataka NewsBangalore News

ಗೃಹಲಕ್ಷ್ಮಿ ಯೋಜನೆಯ ಎರಡೂ ಕಂತಿನ ಹಣ ನಾಳೆಯೇ ಬಿಡುಗಡೆ! ಇಂತಹ ಗೃಹಿಣಿಯರಿಗೆ ಮಾತ್ರ

ಗೃಹಲಕ್ಷ್ಮಿ ಯೋಜನೆಯ (Gruha Lakshmi Scheme) ಮೊದಲ ಕಂತಿನ ಎರಡು (first installment) ಸಾವಿರ ರೂಪಾಯಿಗಳನ್ನು ಪಡೆದುಕೊಂಡ ಹಲವು ಗೃಹಿಣಿಯರು ತಮಗೆ 2ನೇ ಕಂತಿನ ಹಣ ಯಾವಾಗ ಬಿಡುಗಡೆ ಆಗುತ್ತದೆ ಎನ್ನುವ ಗೊಂದಲದಲ್ಲಿ ಇದ್ದಾರೆ.

ಆದರೆ ಇನ್ನೂ ಸಾಕಷ್ಟು ಫಲಾನುಭವಿ ಮಹಿಳೆಯರು ತಮ್ಮ ಖಾತೆಗೆ ಮೊದಲ ಕಂತಿನ ಹಣವೇ ಜಮಾ ಆಗಿಲ್ಲ (Money Deposit) ಎನ್ನುವ ಬೇಸರದಲ್ಲಿ ಇದ್ದಾರೆ, ಆದರೆ ಇವರಿಗೆಲ್ಲಾ ಸರ್ಕಾರ ಭರವಸೆ ನೀಡಿದ್ದು ಹಣ ಬಿಡುಗಡೆಯಾದ ತಕ್ಷಣ ಎರಡೂ ಕಂತಿನ ಹಣವನ್ನು ಸೇರಿಸಿ ಫಲಾನುಭವಿಗಳ ಖಾತೆಗೆ (Bank Account) ಜಮಾ ಮಾಡುವುದಾಗಿ ತಿಳಿಸಿದೆ.

Gruha Lakshmi Yojana

ಗೃಹಲಕ್ಷ್ಮಿ ಯೋಜನೆಯ ಎಲ್ಲಾ ಫಲಾನುಭವಿಗಳಿಗೆ ಸಿಗಲಿದೆ ₹4000 ರೂಪಾಯಿ ಹಬ್ಬದ ಗಿಫ್ಟ್!

ಈ ಸಣ್ಣ ಪುಟ್ಟ ತಪ್ಪುಗಳನ್ನು ಸರಿಪಡಿಸಿಕೊಳ್ಳಿ

ಗೃಹಲಕ್ಷ್ಮಿ ಯೋಜನೆಯ (Gruha lakshmi scheme) 2000 ನಿಮ್ಮ ಖಾತೆಗೆ ಜಮಾ ಆಗಬೇಕು ಅಂದ್ರೆ ಬ್ಯಾಂಕ್ ಖಾತೆಯ (bank account) ಜೊತೆಗೆ ಆಧಾರ್ ಸೀಡಿಂಗ್ ಈಕೆ ವೈ ಸಿ (EKYC) ಅಥವಾ ಎನ್ ಪಿ ಸಿ ಐ (npci) ಆಗಬೇಕಾಗಿರುವುದು ಕಡ್ಡಾಯ.

ಆದ್ರೆ ಸಾಕಷ್ಟು ಮಹಿಳೆಯರ ಖಾತೆ ಇನ್ನು ಆಧಾರ್ ನೊಂದಿಗೆ ಲಿಂಕ್ (Aadhaar link) ಆಗಿಲ್ಲ ಹಾಗಾಗಿ ಅಂಥವರ ಖಾತೆಗೆ ಮೊದಲ ಕಂತಿನ ಹಣ ಜಮಾ ಆಗಿಲ್ಲ. ಇನ್ನು ರೇಷನ್ ಕಾರ್ಡ್ ನಲ್ಲಿ (Ration Card) ಗೃಹಿಣಿಯ ಹೆಸರನ್ನು ಮೊದಲ ಸದಸ್ಯೆಯಾಗಿ ಬದಲಾಯಿಸಿಕೊಳ್ಳಬೇಕಿತ್ತು, ಇದಕ್ಕೆ ಸರ್ಕಾರ ತಿದ್ದುಪಡಿ ಅವಕಾಶ ಮಾಡಿಕೊಟ್ಟಿದ್ದು ಹಾಗೆ ನೀವು ಕೂಡ ಬದಲಾವಣೆ ಮಾಡಿಕೊಂಡಿದ್ದರೆ ಅದು ಸರ್ಕಾರದ ಡೇಟಾಬೇಸ್ ನಲ್ಲಿ ಅಪ್ ಡೇಟ್ ಆಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಿಕೊಳ್ಳಿ.

ಜೊತೆಗೆ ನಿಮ್ಮ ಆಧಾರ್ ಕಾರ್ಡ್ ನ ಹೆಸರು ವಿಳಾಸ ಬ್ಯಾಂಕ್ ಖಾತೆಗೆ ಹಾಗೂ ರೇಷನ್ ಕಾರ್ಡ್ ಗೆ ಸರಿಯಾಗಿ ಹೊಂದಾಣಿಕೆ ಆಗುತ್ತದೆಯೋ ಇಲ್ಲವೋ ಎಂಬುದನ್ನು ಗಮನಿಸಿ.

ಬಿಪಿಎಲ್ ರೇಷನ್ ಕಾರ್ಡ್ ಇದ್ದವರಿಗೆ ಮತ್ತೊಂದು ಸಿಹಿ ಸುದ್ದಿ; ಸಿಗಲಿದೆ ಇನ್ನಷ್ಟು ಬೆನಿಫಿಟ್!

ಸಮಸ್ಯೆಗೆ ಪರಿಹಾರ ಹೇಗೆ?

Gruha Lakshmi Yojaneಆಗಸ್ಟ್ 30 ರಂದು ಗೃಹಲಕ್ಷ್ಮಿ ಯೋಜನೆಗೆ ಸರ್ಕಾರ ಚಾಲನೆ ನೀಡಿದ್ದು ಹಣ ಬಿಡುಗಡೆಯಾಗಿ ಒಂದು ತಿಂಗಳು ಕಳೆದಿವೆ. ಆದರೂ ಗೃಹಲಕ್ಷ್ಮಿಯ ಹಣ ಮಾತ್ರ ಎಲ್ಲಾ ಫಲಾನುಭವಿಗಳ ಖಾತೆಗೆ ಜಮಾ ಆಗಿಲ್ಲ, ಸರ್ಕಾರ ನೀಡಿರುವ ಮಾಹಿತಿಯ ಪ್ರಕಾರ 9 ಲಕ್ಷಕ್ಕೂ ಹೆಚ್ಚಿನ ಮಹಿಳೆಯರು ಇನ್ನು ಮೊದಲು ಕಂತಿನ ಹಣ ಪಡೆಯಬೇಕಿದೆ.

ಈ ನಡುವೆ ಸರ್ಕಾರ ಗುಡ್ ನ್ಯೂಸ್ ನೀಡಿದ್ದು ಎರಡನೇ ಕಂತಿನ ಹಣವನ್ನು ಅಕ್ಟೋಬರ್ 15ರಿಂದ ಬಿಡುಗಡೆ ಮಾಡುವುದಾಗಿ ತಿಳಿಸಿದೆ. ನಾವು ಬ್ಯಾಂಕಿಗೆ ಹಣವನ್ನು ಡಿ ಬಿ ಟಿ (DBT) ಮಾಡಿದ್ದೇವೆ ಅಲ್ಲಿಂದ ನಿಮ್ಮ ಖಾತೆಗೆ ಬರಬೇಕು ಅಷ್ಟೇ ಎಂದು ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.

ನಿಮ್ಮ ಈ ತಪ್ಪುಗಳನ್ನ ಸರಿ ಮಾಡಿಕೊಂಡ್ರೆ ಗೃಹಲಕ್ಷ್ಮಿ ಯೋಜನೆ ಹಣ ನಾಳೆಯೇ ನಿಮ್ಮ ಕೈ ಸೇರುತ್ತೆ

ಇನ್ನು ಯಾರ ಖಾತೆಗೆ ಹಣ ಬಂದಿಲ್ಲವೋ ಅಂತವರ ಖಾತೆಗೆ ಎರಡು ಕಂತಿನ ಹಣವನ್ನು (second installment) ಒಟ್ಟಿಗೆ ಜಮಾ ಮಾಡುವುದಾಗಿ ತಿಳಿಸಲಾಗಿದೆ

ಅಂದರೆ 4000 ರೂಪಾಯಿಗಳು ಫಲಾನುಭವಿಗಳ ಖಾತೆಗೆ ಅಕ್ಟೋಬರ್ ತಿಂಗಳಿನಲ್ಲಿ ಬರಲಿದೆ. ಇನ್ನು ನಿಮಗೆ ಈ ಬಗ್ಗೆ ಯಾವುದೇ ಗೊಂದಲಗಳು ಇದ್ದಲ್ಲಿ ಹತ್ತಿರದ ಸೇವಾ ಸಿಂಧೂ ಕೇಂದ್ರ (seva Sindhu Kendra) ಗಳಲ್ಲಿ ಮಾಹಿತಿ ಪಡೆದುಕೊಳ್ಳಬಹುದು ಅಥವಾ 8147500500 ಹಾಗೂ 1902 ಈ ನಂಬರ್ಗಳಿಗೆ ಕರೆ ಮಾಡಿ ಅಥವಾ ನಿಮ್ಮ ರೇಷನ್ ಕಾರ್ಡ್ ನಂಬರ್ ಅನ್ನು ಹಾಕಿ ನಿಮ್ಮ ಗೃಹಲಕ್ಷ್ಮಿ ಅಪ್ಲಿಕೇಶನ್ ಬಗ್ಗೆ ತಿಳಿದುಕೊಳ್ಳಬಹುದು.

Both installments of the Gruha Lakshmi Yojana are added together and released to the beneficiary’s account

Our Whatsapp Channel is Live Now 👇

Whatsapp Channel

Related Stories