ನಿಮ್ಮ ಈ ತಪ್ಪುಗಳನ್ನ ಸರಿ ಮಾಡಿಕೊಂಡ್ರೆ ಗೃಹಲಕ್ಷ್ಮಿ ಯೋಜನೆ ಹಣ ನಾಳೆಯೇ ನಿಮ್ಮ ಕೈ ಸೇರುತ್ತೆ
ಗೃಹಲಕ್ಷ್ಮಿ ಯೋಜನೆಗೆ (Gruha Lakshmi scheme) ಅರ್ಜಿ ಸಲ್ಲಿಸಿದ 1.14 ಕೋಟಿ ಫಲಾನುಭವಿಗಳ ಪೈಕಿ ಸುಮಾರು 92 ಲಕ್ಷ ಜನರ ಖಾತೆಗೆ (Bank Account) ಹಣ ವರ್ಗಾವಣೆ (DBT) ಆಗಿದೆ.
ಗೃಹಲಕ್ಷ್ಮಿ ಯೋಜನೆಗೆ (Gruha Lakshmi scheme) ಚಾಲನೆ ಸಿಕ್ಕಿ ಎರಡು ತಿಂಗಳು ಕಳೆದಿದೆ, ಈಗಾಗಲೇ ಅರ್ಜಿ ಸಲ್ಲಿಸಿದ 1.14 ಕೋಟಿ ಫಲಾನುಭವಿಗಳ ಪೈಕಿ ಸುಮಾರು 92 ಲಕ್ಷ ಜನರ ಖಾತೆಗೆ (Bank Account) ಹಣ ವರ್ಗಾವಣೆ (DBT) ಆಗಿದೆ.
ಇಷ್ಟು ಜನರ ಖಾತೆಗೆ ಹಣ ಏನೋ ವರ್ಗಾವಣೆ (Money Transfer) ಆಗಿದೆ ಆದರೆ ಇನ್ನಷ್ಟು ಮಹಿಳೆಯರು ಅರ್ಜಿ ಸಲ್ಲಿಸಿಯು ತಮ್ಮ ಖಾತೆಗೆ ಹಣ ಬಂದಿಲ್ಲ (Money Deposit) ಎಂದು ಆತಂಕಗೊಂಡಿದ್ದಾರೆ, ಇದಕ್ಕಾಗಿ ಸರ್ಕಾರ ಮತ್ತೊಂದು ಆದೇಶ ಹೊರಡಿಸಿದೆ.
ಪಟಾಕಿ ಹೊಡೆಯೋದಕ್ಕೂ ಬಂತು ಹೊಸ ರೂಲ್ಸ್! ಇನ್ಮುಂದೆ ಈ ಜಾಗದಲ್ಲಿ ಪಟಾಕಿ ಸಿಡಿಸುವಂತಿಲ್ಲ
ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ ಮಾಹಿತಿ!
ಗೃಹಲಕ್ಷ್ಮಿ ಯೋಜನೆಯ ಸಂಬಂಧಪಟ್ಟಹಾಗೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi hebbalkar ) ಅವರು ಬಿಗ್ ಅಪ್ಡೇಟ್ ಒಂದನ್ನು ನೀಡಿದ್ದಾರೆ, ಎಷ್ಟು ಜನರಿಗೆ ಹಣ ವರ್ಗಾವಣೆ ಆಗಿಲ್ಲ? ಯಾಕೆ ಆಗಿಲ್ಲ ಮತ್ತು ಯಾವಾಗ ಆಗುತ್ತದೆ ಎಂಬುದರ ಬಗ್ಗೆ ಸ್ಪಷ್ಟವಾದ ಮಾಹಿತಿಯನ್ನು ಅಂಕಿ ಅಂಶಗಳ ಸಮೇತ ತಿಳಿಸಿದ್ದಾರೆ.
ಇಂಥವರಿಗೆ ಮಾತ್ರ ಹಣ ಬಂದಿಲ್ಲ
1,59,356 ಅರ್ಜಿದಾರರ ಡೆಮೋ ದೃಡೀಕರಣ ವಿಫಲವಾಗಿದೆ, 3082 ಅರ್ಜಿದಾರರು ಮರಣ ಹೊಂದಿದ್ದು ಅಂತವರ ಅರ್ಜಿಯನ್ನು ರಿಜೆಕ್ಟ್ ಮಾಡಲಾಗಿದೆ ಇನ್ನು ಇದರ ಜೊತೆಗೆ ಸಾಕಷ್ಟು ಮಹಿಳೆಯರು ಎನ್ಪಿಸಿಐ ಮಾಡಿಸಿಕೊಂಡಿಲ್ಲ ಹಾಗೂ ರೇಷನ್ ಕಾರ್ಡ್ ತಿದ್ದುಪಡಿ (ration card correction) ಕೂಡ ಆಗಿಲ್ಲ.
ಒಂದು ವೇಳೆ ಈ ಎಲ್ಲ ಬದಲಾವಣೆ ಆಗಿದ್ದರು ಸರ್ಕಾರದ ಡೇಟಾಬೇಸ್‌ನಲ್ಲಿ ಅಪ್ಡೇಟ್ ಆಗಿಲ್ಲ. ಈ ಕಾರಣಗಳಿಗೆ ಲಕ್ಷಾಂತರ ಫಲಾನುಭವಿಗಳ ಖಾತೆಗೆ ಮೊದಲ ಕಂತಿನ 2000 ಜಮೆ ಆಗಿಲ್ಲ.
ಇಂತಹವರ ಬಿಪಿಎಲ್ ಕಾರ್ಡ್ ರದ್ದಾಗಲಿದೆ! ರೇಷನ್ ಕಾರ್ಡ್ ಬಗ್ಗೆ ಸರ್ಕಾರದ ಮಹತ್ವದ ಆದೇಶ
ತಕ್ಷಣ ಈ ಕೆಲಸ ಮಾಡಿಕೊಳ್ಳಿ;
ರಾಜ್ಯ ಸರ್ಕಾರ ಈಗಾಗಲೇ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವವರು ರೇಷನ್ ಕಾರ್ಡ್ ಹೊಂದಿರಬೇಕು ಹಾಗೂ ರೇಷನ್ ಕಾರ್ಡ್ ಮಹಿಳೆಯ ಹೆಸರಿನಲ್ಲಿಯೇ ಇರಬೇಕು ಎಂದು ತಿಳಿಸಿದೆ
ಇದಕ್ಕೆ ಅನುಕೂಲವಾಗುವ ಕಾರಣಕ್ಕೆ ಈಗಾಗಲೇ ಎರಡು ಬಾರಿ ರೇಷನ್ ಕಾರ್ಡ್ ತಿದ್ದುಪಡಿ ಕೂಡ ಅವಕಾಶ ಮಾಡಿಕೊಡಲಾಗಿತ್ತು. ಹಾಗಾಗಿ ಇನ್ನು ಯಾರ ರೇಷನ್ ಕಾರ್ಡ್ ತಿದ್ದುಪಡಿ ಆಗಿಲ್ಲವೋ ಅವರು ಖಂಡಿತ ಕೂಡಲೇ ಮಾಡಿಕೊಳ್ಳಿ
ಇದರ ಜೊತೆಗೆ ನಿಮ್ಮ ಬ್ಯಾಂಕ್ ನಲ್ಲಿ ಮಾಡಲಾಗಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಿ. ಅನ್ನಭಾಗ್ಯ ಯೋಜನೆಯ (Annabhagya Yojana) ಹಣ ಬಂದಿರುವವರಿಗೆ ಗೃಹಲಕ್ಷ್ಮಿ ಯೋಜನೆಯ (Gruha Lakshmi Scheme) ಹಣವು ಕೂಡ ಬಹುತೇಕ ಸಂದಾಯವಾಗುತ್ತದೆ ಎಂದು ಹೇಳಬಹುದು
ಹಾಗಾಗಿ ಮಹಿಳೆಯರು ಆತಂಕ ಪಟ್ಟುಕೊಳ್ಳದೆ ನಿಮ್ಮ ಎಲ್ಲಾ ದಾಖಲೆಗಳು ಸರಿಯಾಗಿ ಇದ್ದರೆ ನಿಮ್ಮ ಖಾತೆಗೆ ಹಣ ಗ್ಯಾರಂಟಿ ಬಂದು ತಲುಪುತ್ತದೆ ಎಂಬುದನ್ನು ನೆನಪಿಡಿ.
ಗೃಹಲಕ್ಷ್ಮಿ ಹಣ ಯಾಕಿನ್ನೂ ಹಲವರ ಖಾತೆಗೆ ಜಮೆ ಆಗಿಲ್ಲ; ಪಕ್ಕಾ ಕಾರಣ ತಿಳಿಸಿದ ಲಕ್ಷ್ಮಿ ಹೆಬ್ಬಾಳ್ಕರ್
ಈ ತಪ್ಪು ಸರಿಪಡಿಸಿಕೊಂಡರೆ ಎರಡನೇ ಕಂತಿನ ಹಣ ಗ್ಯಾರಂಟಿ
ಸಾಕಷ್ಟು ಮಹಿಳೆಯರ ಹೆಸರು ಆಧಾರ್ ಕಾರ್ಡ್ ರೇಷನ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆಯಲ್ಲಿ ಮ್ಯಾಚ್ ಆಗುತ್ತಿಲ್ಲ, ಆದ್ದರಿಂದ ಇದನ್ನು ಮೊದಲು ಸರಿಪಡಿಸಿಕೊಳ್ಳಿ ಎಂದು ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ಕೂಡ ತಿಳಿಸಿದ್ದಾರೆ.
ಇನ್ನು ಎರಡನೇ ಕಂತಿನ ಹಣವನ್ನು ಅಕ್ಟೋಬರ್ 16 ರಿಂದ 26ರ ಒಳಗೆ ಪ್ರತಿಯೊಬ್ಬರ ಖಾತೆಗೆ ಬರುವಂತೆ ಮಾಡಲಾಗುವುದು, ಈಗಾಗಲೇ ಬ್ಯಾಂಕ್‌ಗಳಲ್ಲಿ ಡಿ ಬಿ ಟಿ ಮಾಡಲಾಗಿದೆ. ಅಲ್ಲಿಂದ ನಿಮ್ಮ ಖಾತೆಗೆ ಹಣ ಬಂದು ತಲುಪಬೇಕು ಅಷ್ಟೇ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಭರವಸೆ ನೀಡಿದ್ದಾರೆ.
If you correct these mistakes, Gruha Lakshmi Yojana money will reach Your Bank Account