ಗೃಹಲಕ್ಷ್ಮಿ ಹಣ ಯಾಕಿನ್ನೂ ಹಲವರ ಖಾತೆಗೆ ಜಮೆ ಆಗಿಲ್ಲ; ಪಕ್ಕಾ ಕಾರಣ ತಿಳಿಸಿದ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷ್ಮಿ ಯೋಜನೆ (Gruha lakshmi scheme) ಎರಡು ಸಾವಿರ ರೂಪಾಯಿಗಳ ಮೊದಲ ಕಂತಿನ ಹಣಕ್ಕಾಗಿ ಕಾದು ಕುಳಿತವರಿಗೆ ಇದು ಶಾಕಿಂಗ್ ನ್ಯೂಸ್ ಎಂದೇ ಹೇಳಬಹುದು.
ಇಂಥವರಿಗೆ ಅರ್ಜಿ ಸಲ್ಲಿಸಿದರು ಕೂಡ 2000 ಜಮಾ (Money Deposit) ಆಗುವುದಿಲ್ಲ. ಇದಕ್ಕೆ ಕಾರಣವನ್ನು ಕೂಡ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi hebbalkar) ತಿಳಿಸಿದ್ದಾರೆ.
ನೀವು ಕೂಡ ಫಲಾನುಭವಿಗಳ ಲಿಸ್ಟ್ ನಲ್ಲಿ ಇದ್ದು ನಿಮ್ಮ ಖಾತೆಗೆ (Bank Account) ಹಣ ಬಾರದೆ ಇದ್ದರೆ ಈ ಸುದ್ದಿ ನಿಮಗಾಗಿ.
ಗೃಹಜ್ಯೋತಿ ಫ್ರೀ ಕರೆಂಟ್ ಕೊಟ್ಟ ಕೆಲದಿನಗಳಲ್ಲೇ ರಾಜ್ಯ ಸರ್ಕಾರದ ಮತ್ತೊಂದು ಪ್ರಮುಖ ಘೋಷಣೆ
ಅರ್ಜಿ ಸಲ್ಲಿಸಿದರು ಹಣ ಬಂದಿಲ್ಲ
ಇದು ಹಲವು ಮಹಿಳೆಯರ ಸಮಸ್ಯೆ. ನಾವು ಅರ್ಜಿ ಸಲ್ಲಿಸಿದರು (application) ಕೂಡ ನಮ್ಮ ಖಾತೆಗೆ ಮಾತ್ರ ಮೊದಲ ಕಂತಿನ ಹಣ (first installment) ಸಂದಾಯವಾಗಿಲ್ಲ ಯಾಕೆ? ಎಂದು ಹಲವು ಮಹಿಳೆಯರು ಸರ್ಕಾರವನ್ನ ಪ್ರಶ್ನಿಸುತ್ತಿದ್ದಾರೆ.
ಈಗಾಗಲೇ ಸರ್ಕಾರದಿಂದ ಸುಮಾರು 70% ನಷ್ಟು ಮಹಿಳೆಯರ ಖಾತೆಗೆ 2000 ರೂಪಾಯಿಗಳ ನೇರ ವರ್ಗಾವಣೆ (DBT) ಆಗಿದೆ. ಆದರೆ ಇನ್ನೂ ಉಳಿದ 30% ನಷ್ಟು ಮಹಿಳೆಯರು ತಮ್ಮ ಖಾತೆಗೆ ಹಣ (Bank Account) ಯಾವಾಗ ಬರುತ್ತೆ ಅಂತ ಕಾದು ಕುಳಿತಿದ್ದಾರೆ.
ಈ ಕಾರಣಕ್ಕೆ 9 ಲಕ್ಷ ಗೃಹಿಣಿಯರಿಗೆ ಬಂದಿಲ್ಲ ಗೃಹಲಕ್ಷ್ಮಿ ಯೋಜನೆ ಹಣ! ನಿಮ್ಮದೂ ಇದೆ ಸಮಸ್ಯೆ ಇರಬಹುದು
ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದೇನು?

ಇದಕ್ಕೆ ಸಂಬಂಧಪಟ್ಟ ಹಾಗೆ ಈಗಾಗಲೇ ತಿದ್ದುಪಡಿ ಮಾಡಿಕೊಂಡಿದ್ದರು ಕೂಡ ಅದು ಅಪ್ಡೇಟ್ (update) ಆಗದೇ ಇರುವ ಹಿನ್ನೆಲೆಯಲ್ಲಿ ಅಂಥವರ ಖಾತೆಗೆ ಹಣ ಬಂದಿಲ್ಲ.
ಇನ್ನು ಸುಮಾರು 9.44 ಲಕ್ಷ ಮಹಿಳೆಯರ ಖಾತೆಗೆ ಹಣ ಸಂದಾಯವಾಗಬೇಕಿದೆ. ಆದರೆ ಇದರಲ್ಲಿ ಸುಮಾರು 1,59,356 ಅರ್ಜಿದಾರರ ಡೆಮೋ ಕಾರಣ ವಿಫಲವಾಗಿದೆ, ಅಂದರೆ ಆಧಾರ್ (Aadhaar card) ನ ಹೆಸರು ವಿಳಾಸ ಮ್ಯಾಚ್ ಆಗುತ್ತಿಲ್ಲ.
ಅದೇ ರೀತಿ 3000ಕ್ಕೂ ಹೆಚ್ಚಿನ ಅರ್ಜಿದಾರರು ಮರಣ ಹೊಂದಿರುವುದರಿಂದ ಅಂಥವರ ಖಾತೆಗೂ ಹಣ ಹೋಗುವುದಿಲ್ಲ. ಇನ್ನು ಸಾಕಷ್ಟು ಮಹಿಳೆಯರು ಈಕೆವೈಸಿ (EKYC) ಮಾಡಿಸಿಕೊಳ್ಳುವಲ್ಲಿಯೂ ವಿಫಲರಾಗಿರುವ ಹಿನ್ನೆಲೆಯಲ್ಲಿ ಅಂತವರ ಖಾತೆಗೂ ಹಣ ಜಮಾ ಆಗುವ ಸಾಧ್ಯತೆ ಕಡಿಮೆ.
ಅಗಸ್ಟ್ ತಿಂಗಳಿನಲ್ಲಿ 1.8 ಕೋಟಿ ಮಹಿಳೆಯರು ಅರ್ಜಿ ಸಲ್ಲಿಸಿದ್ದರೆ, ಸೆಪ್ಟೆಂಬರ್ ನಲ್ಲಿ ಈ ಸಂಖ್ಯೆ 1.14 ಕೋಟಿಗೆ ಹೆಚ್ಚಳವಾಗಿದೆ. ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನಿಗದಿ ಆಗದೆ ಇರುವ ಹಿನ್ನೆಲೆಯಲ್ಲಿ ಈಗಲೂ ಕೂಡ ಸಾಕಷ್ಟು ಅರ್ಜಿಗಳು ಸಂದಾಯವಾಗುತ್ತಿವೆ.
ನವರಾತ್ರಿ ಹಬ್ಬಕ್ಕೆ ಗೃಹಲಕ್ಷ್ಮಿ 2ನೇ ಕಂತು ಬಿಡುಗಡೆ! ಇನ್ನೂ ಹಣ ಬರದವರಿಗೆ ಸಿಗುತ್ತೆ ಎರಡೂ ಕಂತು
ಅರ್ಹರಿಗೆ ಹಣ ಜಮಾ ಮಾಡುತ್ತೇವೆ
ಸುಮಾರು 5.5 ಲಕ್ಷ ಮಹಿಳೆಯರ ಡಿಬಿಟಿ ಪ್ರಕ್ರಿಯೆ ನಡೆಯುತ್ತಿದ್ದು ಸದ್ಯದಲ್ಲಿಯೇ ಇಂಥವರ ಖಾತೆಗೆ ಮೊದಲ ಕಂತಿನ ಹಣ ಜಮಾ ಆಗುವುದು. ಇನ್ನು ಅಕ್ಟೋಬರ್ 13 ರಿಂದ ಎರಡನೇ ಕಂತಿನ ಹಣವನ್ನು ವರ್ಗಾವಣೆ ಮಾಡಲು ಸರ್ಕಾರ ತೀರ್ಮಾನಿಸಿದೆ.
ಈ ಸಮಯಕ್ಕೆ ಫಲಾನುಭವಿ ಮಹಿಳೆಯರ ಖಾತೆಯ ಸಮಸ್ಯೆಗಳು ಸರಿ ಹೋಗಿ ಯಾವುದೇ ತೊಂದರೆ ಇಲ್ಲದೆ ಇದ್ದರೆ ಅಂತವರ ಖಾತೆಗೆ ಎರಡು ಕಂತಿನ ಹಣವು ಜಮಾ ಆಗುವುದು.
ಮೊದಲ ಕಂತಿನ ಹಣ ಯಾರಿಗೆ ಬಂದಿಲ್ಲವೋ ಅಂತವರಿಗೆ ನಾಲ್ಕು ಸಾವಿರ ರೂಪಾಯಿಗಳನ್ನು ಒಟ್ಟಿಗೆ ಸರ್ಕಾರ ಜಮಾ ಮಾಡುವ ಸಾಧ್ಯತೆ ಇದೆ. ಸರ್ಕಾರದ ಹೇಳಿಕೆಯ ಪ್ರಕಾರ ಅಕ್ಟೋಬರ್ ಕೊನೆಯ ದಿನಾಂಕದ ಒಳಗೆ ಪ್ರತಿಯೊಬ್ಬ ಫಲಾನುಭವಿ ಮಹಿಳೆಯರ ಖಾತೆಗೆ ಎರಡೂ ಕಂತಿನ ಹಣ ಜಮಾ ಆಗಲಿದೆ.
Gruha Lakshmi money has not been credited to many accounts, Here is the Reason







