ಈ ಕಾರಣಕ್ಕೆ 9 ಲಕ್ಷ ಗೃಹಿಣಿಯರಿಗೆ ಬಂದಿಲ್ಲ ಗೃಹಲಕ್ಷ್ಮಿ ಯೋಜನೆ ಹಣ! ನಿಮ್ಮದೂ ಇದೆ ಸಮಸ್ಯೆ ಇರಬಹುದು

ಗೃಹಲಕ್ಷ್ಮಿ ಯೋಜನೆ (Gruha lakshmi scheme) ದಿನದಿಂದ ದಿನಕ್ಕೆ ಕಗ್ಗಂಟಾಗುತ್ತಾ ಹೋಗುತ್ತಿದೆ.. ಇದಕ್ಕೆ ಮುಖ್ಯವಾದ ಕಾರಣ, ಅರ್ಜಿ ಸಲ್ಲಿಸಿದ (Application) ಎಲ್ಲಾ ಮಹಿಳೆಯರಿಗೂ ಮೊದಲ ಕಂತಿನ ಹಣ ಜಮಾ ಆಗದೆ ಇರುವುದು
ಎರಡು ಸಾವಿರ ರೂಪಾಯಿಗಳನ್ನು ಲಕ್ಷಾಂತರ ಜನರ ಖಾತೆಗೆ (Bank Account) ಸರ್ಕಾರ ನೇರವಾಗಿ ವರ್ಗಾವಣೆ (DBT) ಮಾಡಿದೆ. ಆದರೆ ಇದರಲ್ಲಿ ಇನ್ನೂ 9 ಲಕ್ಷಕ್ಕೂ ಅಧಿಕ ಮಹಿಳೆಯರಿಗೆ ಹಣ ಸಂದಾಯವಾಗಬೇಕು.
ಆದರೆ ಈ ಕೆಲಸದಲ್ಲಿ ಸರ್ಕಾರ ಹಿಂದೆ ಬಿದ್ದಿದೆ. ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi hebbalkar) ಹೇಳಿದ್ದೇನು ಗೊತ್ತಾ?
ನವರಾತ್ರಿ ಹಬ್ಬಕ್ಕೆ ಗೃಹಲಕ್ಷ್ಮಿ 2ನೇ ಕಂತು ಬಿಡುಗಡೆ! ಇನ್ನೂ ಹಣ ಬರದವರಿಗೆ ಸಿಗುತ್ತೆ ಎರಡೂ ಕಂತು
ಯಾರಿಗೆ ಯಾವ ಕಾರಣಕ್ಕೆ ಹಣ ವರ್ಗಾವಣೆ ಆಗಿಲ್ಲ ಗೊತ್ತಾ?
ಬಿಪಿಎಲ್ (BPL card) ಎಪಿಎಲ್ (APL) ಹಾಗೂ ಅಂತ್ಯೋದಯ ಕಾರ್ಡ್ ಇರುವ ಮಹಿಳೆಯರಿಗೆ 2000ರೂ. ಗಳನ್ನು ಪ್ರತಿ ತಿಂಗಳು ಸರ್ಕಾರ ಜಮಾ ಮಾಡುವುದಾಗಿ ಭರವಸೆ ನೀಡಿದೆ
ಈಗಾಗಲೇ ಮೊದಲ ಕಂತಿನ ಹಣ ಬಿಡುಗಡೆ ಆಗಿದೆ, ಆದರೂ 9,44,155 ಅರ್ಜಿದಾರರಿಗೆ ಹಣ ಸಂದಾಯವಾಗಿಲ್ಲ. ಹಾಗಾದ್ರೆ ಎಲ್ಲಾ ಫಲಾನುಭವಿಗಳಿಗೂ ಯಾಕೆ ಇನ್ನೂ ಹಣ ಸಂದಾಯವಾಗಿಲ್ಲ ಎಂಬುದರ ಬಗ್ಗೆ ಲಕ್ಷ್ಮಿ ಹೆಬ್ಬಾಳ್ಕರ್ ಅಂಕಿ ಅಂಶಗಳ (statistics) ಮೂಲಕ ಮಾಹಿತಿಯನ್ನು ತಿಳಿಸಿದ್ದಾರೆ.
ಗೃಹಲಕ್ಷ್ಮಿಗೆ ಅರ್ಜಿ ಸಲ್ಲಿಸಿದವರ ಸಂಖ್ಯೆ ಆಗಸ್ಟ್ ನಲ್ಲಿ 1.8 ಕೋಟಿ ಇದ್ದರೆ ಸೆಪ್ಟೆಂಬರ್ ನಲ್ಲಿ 1.14 ಕೋಟಿ ಅರ್ಜಿಗಳು ಸಂದಾಯವಾಗಿವೆ. ಈಗಾಗಲೇ ಸುಮಾರು 93 ಲಕ್ಷಕ್ಕೂ ಅಧಿಕ ಮಹಿಳೆಯರಿಗೆ ಮೊದಲ ಕಂತಿನ ಹಣ ಸಿಕ್ಕಿದೆ.
ಅರ್ಜಿ ಸಲ್ಲಿಸಿದವರ ಪೈಕಿ 3082 ಅರ್ಜಿದಾರರು ಸಾವನ್ನಪ್ಪಿದ್ದು ಅಂಥವರ ಅರ್ಜಿ ಅನರ್ಹಗೊಂಡಿದೆ. ಎರಡನೆಯದಾಗಿ 1,59,356 ಅರ್ಜಿದಾರರ ಡೆಮೋ ಪರಿಶೀಲನೆ ವಿಫಲವಾಗಿದ್ದು ಆಧಾರ್ ಮತ್ತು ಬ್ಯಾಂಕ್ ಖಾತೆಯ ಹೆಸರು ಹೊಂದಾಣಿಕೆ ಆಗುತ್ತಿಲ್ಲ, ಇಂಥವರ ಅರ್ಜಿಗಳು ಕೂಡ ತಿರಸ್ಕೃತಗೊಂಡಿದೆ.
ಮೂರನೆಯದಾಗಿ 5,96,268 ಗೃಹಿಣಿಯರ ಖಾತೆ ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಆಗಿಲ್ಲ ಗೃಹಲಕ್ಷ್ಮಿ ಹಣ ಸಂದಾಯ ಆಗದೆ ಇರುವುದಕ್ಕೆ ಇದು ಮತ್ತೊಂದು ಕಾರಣವಾಗಿದೆ.
ಈ ವಿಷಯಕ್ಕೆ ಸಂಬಂಧಪಟ್ಟ ಹಾಗೆ ಸಿಡಿಪಿಓ (CDPO) ಗೆ ಮಾಹಿತಿ ನೀಡಿ ಆಧಾರ್ ಕಾರ್ಡ್ ಸಮಸ್ಯೆ ಸರಿಪಡಿಸುವ ಪ್ರಕ್ರಿಯೆ ನಡೆಯುತ್ತಿದೆ. ಇನ್ನು 1,75,683 ಫಲಾನುಭವಿಗಳ ಹೆಸರು ಮತ್ತು ವಿಳಾಸ ಕೂಡ ಹೊಂದಾಣಿಕೆಯಾಗುತ್ತಿಲ್ಲ ಜೊತೆಗೆ ಬ್ಯಾಂಕ್ (Bank) ಈಕೆ ವೈ ಸಿ (EKYC) ಕೂಡ ಅಪ್ಡೇಟ್ ಆಗಿಲ್ಲ. ಇನ್ನು 9,766 ನಮೂದಿತ ಅರ್ಜಿಗಳನ್ನು ಸೇವಾ ಸಿಂಧು ನಲ್ಲಿ ಮರು ಪರಿಶೀಲನೆ ನಡೆಸಲಾಗುತ್ತಿದೆ.
ಗೃಹಲಕ್ಷ್ಮಿ 2ನೇ ಕಂತಿನ ಹಣ ಮೊದಲು ಈ ಜಿಲ್ಲೆಗಳಿಗೆ ಮಾತ್ರ ಬಿಡುಗಡೆ! ಇಲ್ಲಿದೆ ಜಿಲ್ಲಾವಾರು ಪಟ್ಟಿ
ಕೋಟ್ಯಂತರ ಹಣ ಮೀಸಲಿಟ್ಟ ರಾಜ್ಯ ಸರ್ಕಾರ;
ಇನ್ನು ಅಕ್ಟೋಬರ್ ತಿಂಗಳಿನಲ್ಲಿ 2169 ಕೋಟಿ ರೂಪಾಯಿಗಳನ್ನು ಗೃಹಲಕ್ಷ್ಮಿ ಯೋಜನೆಗೆ ಸರ್ಕಾರ ಖರ್ಚು ಮಾಡಿತ್ತು. ನಂತರ ಸಪ್ಟೆಂಬರ್ ತಿಂಗಳಿನಲ್ಲಿ ಫಲಾನುಭವಿಗಳ ಅರ್ಜಿ ಸಲ್ಲಿಕೆಯು ಕೂಡ ಹೆಚ್ಚಾಗಿದ್ದು 2280 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ.
ಇದರ ಜೊತೆಗೆ 5.5 ಲಕ್ಷ ಫಲಾನುಭವಿಗಳ ಮಾಹಿತಿಯನ್ನು ಸರಿಪಡಿಸಿಕೊಂಡು ಡಿಬಿಟಿ ಮೂಲಕ ಹಣ ಪಾವತಿಸುವ ಪ್ರಕ್ರಿಯೆ ನಡೆದಿದೆ ಹಾಗಾಗಿ ಸದ್ಯದಲ್ಲಿಯೇ ಇಂಥವರಿಗೂ ಮೊದಲ ಕಂತಿನ ಹಣ ಜಮಾ (Money Deposit) ಆಗುತ್ತದೆ ಎಂದು ಎಂದು ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಹಸು ಕುರಿ ಮೇಕೆ ಸಾಕಣಿಕೆಗೆ ಸಿಗುತ್ತೆ 3 ಲಕ್ಷ ಸಾಲ! ಅತಿ ಕಡಿಮೆ ಬಡ್ಡಿಯಲ್ಲಿ ಸರ್ಕಾರದಿಂದ ಸಬ್ಸಿಡಿ
ಎರಡನೇ ಕಂತಿನ ಹಣ ಸದ್ಯದಲ್ಲಿಯೇ ಬಿಡುಗಡೆ:

ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಆಗಿದ್ರೆ ಮಾತ್ರ ಗೃಹಲಕ್ಷ್ಮಿ ಹಣ ಖಾತೆಗೆ ಬರುತ್ತೆ! ಸ್ಟೇಟಸ್ ಚೆಕ್ ಮಾಡಿ
ಮೊದಲ ಕಂತಿನ ಹಣ ಬಂದ ಎಲ್ಲಾ ಫಲಾನುಭವಿಗಳಿಗೂ ಎರಡನೇ ಕಂತಿನ ಹಣ ಬರುತ್ತದೆ. ಅಕ್ಟೋಬರ್ ತಿಂಗಳು ಮುಗಿಯುವುದರ ಒಳಗೆ ಪ್ರತಿಯೊಬ್ಬ ಫಲಾನುಭವಿಗಳ ಖಾತೆಗೂ (Bank Account) ಹಣ ಜಮಾ ಮಾಡುವುದು ಸರ್ಕಾರದ ಉದ್ದೇಶವಾಗಿದೆ.
ಇನ್ನು ಯಾವೆಲ್ಲ ಮಹಿಳೆಯರ ಖಾತೆಯಲ್ಲಿ ಸಮಸ್ಯೆ ಇದೆಯೋ ಅದನ್ನ ಶೀಘ್ರದಲ್ಲಿಯೇ ಪರಿಹರಿಸಿಕೊಂಡರೆ ಎರಡು ಕಂತಿನ ಹಣ ಅಂದರೆ 4,000ಗಳನ್ನು ನೀಡುವುದಾಗಿ ಸರ್ಕಾರ ಭರವಸೆ ನೀಡಿದೆ.
For this reason, 9 lakh People have not received the Gruha Lakshmi Yojana money







