ಬ್ಯಾಂಕ್ ನಲ್ಲಿ ಯಾವುದೇ ಹಣಕಾಸು ವ್ಯವಹಾರ ನಡೆಸುತ್ತಿದ್ದರು ಬ್ಯಾಂಕ್ ಖಾತೆಯ (Bank account) ಜೊತೆಗೆ ಆಧಾರ್ ಲಿಂಕ್ (Aadhaar link) ಆಗಿರಬೇಕು ಎಂದು ಈ ಹಿಂದೆಯೇ ಸರ್ಕಾರ ತಿಳಿಸಿತ್ತು.
ಆದರೆ ಸಾಕಷ್ಟು ಜನ ಬ್ಯಾಂಕ್ ನಲ್ಲಿ ಖಾತೆ (Bank Account) ಹೊಂದಿದ್ದರು ಕೂಡ ಆಧಾರ ಸೀಡಿಂಗ್ (Aadhar seeding) ಮಾಡಿಕೊಂಡಿಲ್ಲ. ಇದರ ಪರಿಣಾಮ ಇಂದು ಲಕ್ಷಾಂತರ ಜನ ಗೃಹಲಕ್ಷ್ಮಿ (Gruha lakshmi scheme) 2000 ರೂ. ಹಾಗೂ ಅನ್ನಭಾಗ್ಯದ (Annabhagya) ಹಣ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ.
ಸೆಪ್ಟೆಂಬರ್ ತಿಂಗಳ ಅನ್ನಭಾಗ್ಯ ಯೋಜನೆ ಹಣ ನಿಮ್ಮ ಖಾತೆಗೆ ಬಂದಿದ್ಯಾ? ಕೂಡಲೇ ಚೆಕ್ ಮಾಡಿ
ವಿಳಂಬವಾಗುತ್ತಿದೆ ಎರಡನೇ ಕಂತಿನ ಹಣ!
ಎಲ್ಲರಿಗೂ ಗೊತ್ತಿರುವ ಹಾಗೆ ಗೃಹಲಕ್ಷ್ಮಿ ಯೋಜನೆಯ ಮೊದಲ ಕಂತಿನ ಹಣ ಬಿಡುಗಡೆ ಆಗಿದೆ. ಆದರೆ ಹಲವು ಮಹಿಳೆಯರು ಆಧಾರ್ ಕಾರ್ಡ್ ಅನ್ನು ಬ್ಯಾಂಕ್ ಗೆ ಲಿಂಕ್ ಮಾಡಿಕೊಳ್ಳದೆ ಇರುವ ಹಿನ್ನೆಲೆಯಲ್ಲಿ ಮೊದಲ ಕಂತಿರ ಹಣ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ.
ಹಾಗಾಗಿ ನಿಮ್ಮ ಬ್ಯಾಂಕ್ ಖಾತೆ ಆಧಾರ್ ಕಾರ್ಡ್ ಲಿಂಕ್ ಆಗಿದೆಯೋ ಇಲ್ಲವೋ ಎಂಬುದನ್ನು ಕೂಡಲೇ ಆನ್ಲೈನ್ (online) ಮೂಲಕ ಮಾಡಿಕೊಳ್ಳಿ ಒಂದು ವೇಳೆ ಲಿಂಕ್ ಆಗದೆ ಇದ್ದಲ್ಲಿ ಬ್ಯಾಂಕ್ ಗೆ ಹೋಗಿ ಮೊದಲು ಆಧಾರ್ ಲಿಂಕ್ ಕೆಲಸವನ್ನು ಮಾಡಿಸಿಕೊಳ್ಳಿ.
ಹೊಸ ರೇಷನ್ ಕಾರ್ಡ್ ಅಪ್ಲೈ ಮಾಡಿದ್ರೆ ಕೇವಲ 2 ನಿಮಿಷದಲ್ಲಿ ಸ್ಟೇಟಸ್ ಮೊಬೈಲ್ ನಲ್ಲೇ ಚೆಕ್ ಮಾಡಿ
ಬ್ಯಾಂಕ್ ಖಾತೆ ಆಧಾರ್ ಲಿಂಕ್ ಚೆಕ್ ಮಾಡುವುದು ಹೇಗೆ?
*ಮೊದಲನೆಯದಾಗಿ ನಮಗೆ ಆಧಾರ್ ಕಾರ್ಡ್ ನೋಡುವ UDIAI ನ ಅಧಿಕೃತ ವೆಬ್ಸೈಟ್ ಆಗಿರುವ uidai.gov.in ನ್ನು ತೆರೆಯಿರಿ.
* ಈಗ Check Aadhar bank seeding status ಎನ್ನುವ ಆಕೆ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.
*Aadhaar Seeding status Fetched from NPCI service ಎಂಬುದನ್ನು ಕಾಣಬಹುದು
*ಈಗ ನಿಮ್ಮ 12 ಡಿಜಿಟ್ ಇರುವ ಆಧಾರ ಸಂಖ್ಯೆಯನ್ನು ನಮೂದಿಸಬೇಕು.
*ಆಧಾರ್ ಕಾರ್ಡಿನ ಸಂಖ್ಯೆ ಹಾಕಿದ ನಂತರ ಸೆಕ್ಯೂರಿಟಿ ಕೋಡ್ (security code) ಅನ್ನು ಹಾಕಲು ಸೂಚಿಸುತ್ತದೆ ಅದನ್ನು ಭರ್ತಿ ಮಾಡಿ.
ಅತ್ತೆ ಒಂದು, ಸೊಸೆ ಒಂದು ರೇಷನ್ ಕಾರ್ಡ್ ಮಾಡಿಸುವಂತಿಲ್ಲ! ಬೇರೆ ಬೇರೆ ಕಾರ್ಡ್ ಇದ್ದವರಿಗೆ ಹೊಸ ಆದೇಶ
*ಆಧಾರ್ ಸಂಖ್ಯೆಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಗೆ ಆರು ಅಂಕೆಗಳಿರುವ ಓಟಿಪಿ (OTP) ಬರುತ್ತದೆ.
*ಓ ಟಿ ಪಿ ಸ್ವೀಕರಿಸಿದ ನಂತರ ಅದನ್ನು ನಮೂದಿಸಿ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ.
*ಈಗ ನಿಮ್ಮ ಆಧಾರ ಸಂಖ್ಯೆ ಬ್ಯಾಂಕ್ ನೊಂದಿಗೆ ಲಿಂಕ್ ಆಗಿದ್ದರೆ ಆಕ್ಟಿವ್ ಎನ್ನುವ ಮಾಹಿತಿ ಸಿಗುತ್ತದೆ, ಜೊತೆಗೆ ಗ್ರೀನ್ ಬಣ್ಣದಲ್ಲಿ ನಿಮ್ಮ ಖಾತೆ ಲಿಂಕ್ ಆಗಿದೆ ಎಂಬುದನ್ನು ತೋರಿಸುತ್ತಿದೆ ಜೊತೆಗೆ ಯಾವ ಬ್ಯಾಂಕ್ ಎಂಬ ಮಾಹಿತಿ ಕೂಡ ಲಭ್ಯವಾಗುತ್ತದೆ.
Gruha lakshmi money will come to the bank account only if Aadhaar seeding with bank account
Ramya M from Bengaluru, She is a writer with more than five years of professional experience. Graduate from Karnataka University and has contributed her expertise to various Kannada news networks. She Loves to Write engaging articles covering a wide range of topics, including technology, business news, and lifestyle.
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.