ಹೊಸ ರೇಷನ್ ಕಾರ್ಡ್ ಅಪ್ಲೈ ಮಾಡಿದ್ರೆ ಕೇವಲ 2 ನಿಮಿಷದಲ್ಲಿ ಸ್ಟೇಟಸ್ ಮೊಬೈಲ್ ನಲ್ಲೇ ಚೆಕ್ ಮಾಡಿ

ನೀವು ಹೊಸ ರೇಷನ್ ಕಾರ್ಡ್ (Ration card) ಗೆ ಅಪ್ಲೈ ಮಾಡಿದ್ದೀರಾ? ನಿಮ್ಮ ರೇಷನ್ ಕಾರ್ಡ್ ಸ್ಥಿತಿ (Ration card status) ಹೇಗಿದೆ ಎಂಬುದನ್ನು ತಿಳಿದುಕೊಳ್ಳಬೇಕಾ?

Bengaluru, Karnataka, India
Edited By: Satish Raj Goravigere

ನೀವು ಹೊಸ ರೇಷನ್ ಕಾರ್ಡ್ (Ration card) ಗೆ ಅಪ್ಲೈ ಮಾಡಿದ್ದೀರಾ? ನಿಮ್ಮ ರೇಷನ್ ಕಾರ್ಡ್ ಸ್ಥಿತಿ (Ration card status) ಹೇಗಿದೆ ಎಂಬುದನ್ನು ತಿಳಿದುಕೊಳ್ಳಬೇಕಾ? ಇದಕ್ಕಾಗಿ ನೀವು ಯಾವುದೇ ಸೇವಾಕೇಂದ್ರಕ್ಕೆ ಅಥವಾ ನ್ಯಾಯಬೆಲೆ ಅಂಗಡಿಗೆ ಅಲೆದಾಡಬೇಕಿಲ್ಲ.

ನಿಮ್ಮ ಮೊಬೈಲ್ (mobile) ನಲ್ಲಿ ಕೇವಲ ಒಂದು ನಿಮಿಷಗಳಲ್ಲಿ ಸ್ಟೇಟಸ್ ಚೆಕ್ ಮಾಡಿಕೊಳ್ಳಿ. ರೇಷನ್ ಕಾರ್ಡ್ ನ ತಿದ್ದುಪಡಿಗೆ ಅರ್ಜಿ ಹಾಕಿದ್ದರೆ ಹಾಗೂ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಿದ್ದರೆ ಎಲ್ಲ ತರಹ ಸ್ಟೇಟಸ್ ನೀವು ತಿಳಿದುಕೊಳ್ಳಬಹುದು

New Ration card

ಇದರ ಜೊತೆಗೆ ನಿಮ್ಮ ಮನೆಯ ಎಲ್ಲಾ ಸದಸ್ಯರು ಈ ಕೆ ವೈ ಸಿ ಆಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಬಹುದು.

ಅತ್ತೆ ಒಂದು, ಸೊಸೆ ಒಂದು ರೇಷನ್ ಕಾರ್ಡ್ ಮಾಡಿಸುವಂತಿಲ್ಲ! ಬೇರೆ ಬೇರೆ ಕಾರ್ಡ್ ಇದ್ದವರಿಗೆ ಹೊಸ ಆದೇಶ

ಅನ್ನಭಾಗ್ಯ ಯೋಜನೆಯು (AnnaBhagya scheme) ಮೂರನೇ ಕಂತಿನ ಹಣವು ಕೂಡ ಬಿಡುಗಡೆಯಾಗಿದೆ. ಅನ್ನಭಾಗ್ಯ ಯೋಜನೆಯ ಹಣ ಪಡೆದುಕೊಳ್ಳಬೇಕು ಅಂದ್ರೆ ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವುದು ಕಡ್ಡಾಯ.

ಆದರೆ ಇಲ್ಲಿಯವರೆಗೆ ಸಾಕಷ್ಟು ಬಿಪಿಎಲ್ ಕಾರ್ಡ್ ಕುಟುಂಬದವರು ಬ್ಯಾಂಕ್ ನೊಂದಿಗೆ (Bank) ಈ ಕೆ ವೈ ಸಿ ಮಾಡಿಸಿಕೊಳ್ಳದೆ ಇರುವ ಪರಿಣಾಮ ಹಲವಾರು ಖಾತೆಗೆ (Bank Account) ಹಣ ಜಮಾ ಆಗಿಲ್ಲ, ಹಾಗಾಗಿ ನೀವು ನಿಮ್ಮ ರೇಷನ್ ಕಾರ್ಡ್ ಸ್ಥಿತಿಯನ್ನು ತಿಳಿದುಕೊಂಡು ಇಕೆವೈಸಿ ಆಗಿದ್ಯಾ ಇಲ್ಲವಾ ಎಂಬುದನ್ನು ಚೆಕ್ ಮಾಡಿ.

ಈ ತಿಂಗಳ ಅನ್ನಭಾಗ್ಯ ಯೋಜನೆ ಹಣ ಸುಮಾರು ಜನಕ್ಕೆ ಸಿಕ್ಕಿಲ್ಲ! ನಿಮ್ಮ ಖಾತೆಗೆ ಜಮಾ ಆಗಿದ್ಯಾ? ಚೆಕ್ ಮಾಡಿ

ರೇಷನ್ ಕಾರ್ಡ್ ಸ್ಥಿತಿ ಚೆಕ್ ಮಾಡುವುದು ಹೇಗೆ?

BPL Ration Cardರೇಷನ್ ಕಾರ್ಡ್ ಸ್ಥಿತಿ ಚೆಕ್ ಮಾಡಲು ಮೊದಲು ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ https://ahara.kar.nic.in/Home/EServices ಅನ್ನು ತೆರೆಯಿರಿ.

*ಈಗ ನಿಮಗೆ ಮೇಲ್ಭಾಗದಲ್ಲಿ ಈ ಸರ್ವಿಸ್ ಎನ್ನುವ ಆಯ್ಕೆ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.

* ಮೂರನೆಯ ಹಂತ, ಎಡಭಾಗದಲ್ಲಿ ಈ ಸ್ಥಿತಿ ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಬಳಿಕ ಅಲ್ಲಿ ಕಾಣಿಸುವ ಹೊಸ/ಹಾಲಿ ಪಡಿತರ ಚೀಟಿ ಸ್ಥಿತಿ ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.

*ಈಗ ಮತ್ತೊಂದು ಪುಟ ತೆರೆದುಕೊಳ್ಳುತ್ತದೆ. ಇದರಲ್ಲಿ ವಿಭಾಗವಾರು ಬೇರೆ ಬೇರೆ ಜಿಲ್ಲೆಗಳಿಗೆ ಬೇರೆ ಬೇರೆ ಲಿಂಕ್ ನೀಡಲಾಗಿದೆ ನಿಮ್ಮ ಜಿಲ್ಲೆ ಯಾವುದು ಎಂಬುದನ್ನು ಆಯ್ಕೆ ಮಾಡಿ ಅದರ ಮೇಲ್ಭಾಗದಲ್ಲಿ ಕಾಣಿಸುವ ಲಿಂಕ್ ಮೇಲೆ ಕ್ಲಿಕ್ ಮಾಡಿ.

ಗೃಹಲಕ್ಷ್ಮಿ ಹಣ 4 ಸಾವಿರ ನಿಜಕ್ಕೂ ಒಟ್ಟಿಗೆ ಸಿಗುತ್ತಾ? ಯೋಜನೆ ಬಗ್ಗೆ ಸರ್ಕಾರ ಕೊಟ್ಟ ಹೊಸ ಅಪ್ಡೇಟ್

*ಈಗ ಹೊಸ ಪುಟದಲ್ಲಿ ಸ್ಟೇಟಸ್ ಆಫ್ ರೇಶನ್ ಕಾರ್ಡ್ ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿ. ಈಗ ಮತ್ತೆ ತೆರೆದುಕೊಳ್ಳುವ ಹೊಸ ಪುಟದಲ್ಲಿ ನೀವು ವಿತ್ ಓಟಿಪಿ ವಿಥೌಟ್ ಓಟಿಪಿ ಎನ್ನುವ ಆಯ್ಕೆಯನ್ನು ಕಾಣುತ್ತೀರಿ.

*ವಿಥೌಟ್ ಓಟಿಪಿ ಎನ್ನುವ ಆಯ್ಕೆಯನ್ನು ಕ್ಲಿಕ್ ಮಾಡಿ ನಿಮ್ಮ ರೇಷನ್ ಕಾರ್ಡ್ ನಂಬರ್ ಅನ್ನು ನಮೂದಿಸಿ. ಈಗ ಗೋ (Go)ಎನ್ನುವ ಬಟನ್ ಒತ್ತಿ.
*ಮತ್ತೆ ಹೊಸ ತಂದು ಪುಟ್ಟ ತೆರೆದುಕೊಳ್ಳುತ್ತದೆ ಅದರಲ್ಲಿ ನಿಮ್ಮ ರೇಷನ್ ಕಾರ್ಡ್ ನಲ್ಲಿ ಇರುವ ಸದಸ್ಯರ ಸಂಖ್ಯೆ ಅವರ ಈಕೆ ವೈ ಸಿ ಆಗಿದೆಯೋ ಇಲ್ಲವೋ ಎಂಬುದರ ಬಗ್ಗೆ ವಿವರಣೆಗಳು ಇರುತ್ತವೆ.

ಈಕೆವೈಸಿ ಪೆಂಡಿಂಗ್ (ekyc pending) ಎಂದು ಇದ್ದರೆ ತಕ್ಷಣವೇ ಬ್ಯಾಂಕ್ ಗೆ ಹೋಗಿ ಲಿಂಕ್ ಮಾಡಿಕೊಳ್ಳಿ. ಈ ರೀತಿ ನೀವು ಸುಲಭವಾಗಿ ನಿಮ್ಮ ರೇಷನ್ ಕಾರ್ಡ್ ನ ಸ್ಥಿತಿ ತಿಳಿದುಕೊಳ್ಳಬಹುದು.

check the Ration Card status on your mobile in just 2 minutes