ಅತ್ತೆ ಒಂದು, ಸೊಸೆ ಒಂದು ರೇಷನ್ ಕಾರ್ಡ್ ಮಾಡಿಸುವಂತಿಲ್ಲ! ಬೇರೆ ಬೇರೆ ಕಾರ್ಡ್ ಇದ್ದವರಿಗೆ ಹೊಸ ಆದೇಶ

ಅನರ್ಹರು ಕೂಡ ಪಡಿತರ ಚೀಟಿ (Ration Card) ಪಡೆದುಕೊಂಡಿರುವುದರ ಬಗ್ಗೆ ಸರ್ಕಾರ ಈಗ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ, ಸರ್ಕಾರದ ಮಾನದಂಡಗಳ ಒಳಗೆ ಬಾರದೆ ಇರುವವರ ಬಿಪಿಎಲ್ ಕಾರ್ಡ್ ರದ್ದಾಗುತ್ತಿದೆ.

ರೇಷನ್ ಕಾರ್ಡ್ ಗೆ (Ration card) ಮೊದಲಿನಿಂದಲೂ ಮಹತ್ವ ಇದೆ, ಅದರಲ್ಲೂ ಬಿಪಿಎಲ್ ರೇಷನ್ (BPL card) ಕಾರ್ಡ್ ಹೊಂದಿರುವವರಿಗೆ ಸರ್ಕಾರದ ಹಲವು ಯೋಜನೆಗಳ ಪ್ರಯೋಜನ ಸಿಗುತ್ತದೆ

ಆದರೆ ಅದೆಷ್ಟೋ ಜನ ಬಿಪಿಎಲ್ ಕಾರ್ಡ್ ಹೊಂದಿದ್ದರು ಕೂಡ ಅದರ ಬಗ್ಗೆ ಹೆಚ್ಚು ಲಕ್ಷ್ಯ ವಹಿಸದೆ ಅದರ ಸರಿಯಾದ ಪ್ರಯೋಜನ ಕೂಡ ಪಡೆದುಕೊಂಡಿಲ್ಲ.

ಯಾವಾಗ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು (Guarantee schemes) ಘೋಷಣೆ ಮಾಡಿತೋ ಆಗ ಮನೆಯ ಮೂಲೆಯಲ್ಲಿ ಬಿದ್ದಿದ್ದ ರೇಷನ್ ಕಾರ್ಡ್ ಗೂ ಕೂಡ ಮೌಲ್ಯ ಸಿಕ್ಕಿದೆ.

ಅತ್ತೆ ಒಂದು, ಸೊಸೆ ಒಂದು ರೇಷನ್ ಕಾರ್ಡ್ ಮಾಡಿಸುವಂತಿಲ್ಲ! ಬೇರೆ ಬೇರೆ ಕಾರ್ಡ್ ಇದ್ದವರಿಗೆ ಹೊಸ ಆದೇಶ - Kannada News

ಈ ತಿಂಗಳ ಅನ್ನಭಾಗ್ಯ ಯೋಜನೆ ಹಣ ಸುಮಾರು ಜನಕ್ಕೆ ಸಿಕ್ಕಿಲ್ಲ! ನಿಮ್ಮ ಖಾತೆಗೆ ಜಮಾ ಆಗಿದ್ಯಾ? ಚೆಕ್ ಮಾಡಿ

ರೇಷನ್ ಕಾರ್ಡ್ ಮಹತ್ವ ಅರಿತ ಜನ

ಹೌದು ಇತ್ತೀಚಿಗೆ ರೇಷನ್ ಕಾರ್ಡ್ ಎನ್ನುವುದು ಸರ್ಕಾರಿ ಯೋಜನೆಯ ಪ್ರಯೋಜನಗಳನ್ನು ಪಡೆದುಕೊಳ್ಳಲು ಎಷ್ಟು ಮುಖ್ಯ ಎಂಬುದು ಎಲ್ಲರಿಗೂ ತಿಳಿದಿದೆ. ಬಡತನ ರೇಖೆಗಿಂತ ಕೆಳಗಿನವರಿಗೆ ಬಿಪಿಎಲ್ ಕಾರ್ಡ್ ನೀಡಲಾಗುತ್ತಾದರೂ ಹಲವು ಅನುಕೂಲಸ್ಥರು ಕೂಡ ಬಿಪಿಎಲ್ ಕಾರ್ಡ್ ಅನ್ನು ತಮ್ಮ ಹೆಸರಿಗೆ ಮಾಡಿಕೊಂಡು ಅದನ್ನು ಮೂಲೆಗೆ ಎಸೆದು ಬಿಟ್ಟಿದ್ದಾರೆ ಹೊರತು ಅದರ ಪ್ರಯೋಜನ ಪಡೆದುಕೊಳ್ಳುತ್ತಿಲ್ಲ.

ಇದರಿಂದಾಗಿ ನಿಜವಾಗಿ ಯಾರಿಗೆ ಪಡಿತರ ಅಗತ್ಯ ಇದೆಯೋ ಅಂತವರು ಪಡಿತರ ಪಡೆದುಕೊಳ್ಳುವಲ್ಲಿ ವಂಚಿತರಾಗಿದ್ದಾರೆ.

ಗೃಹಲಕ್ಷ್ಮಿ ಹಣ 4 ಸಾವಿರ ನಿಜಕ್ಕೂ ಒಟ್ಟಿಗೆ ಸಿಗುತ್ತಾ? ಯೋಜನೆ ಬಗ್ಗೆ ಸರ್ಕಾರ ಕೊಟ್ಟ ಹೊಸ ಅಪ್ಡೇಟ್

ರೇಷನ್ ಕಾರ್ಡ್ ರದ್ದು

ಹೀಗೆ ಅನರ್ಹರು ಕೂಡ ಪಡಿತರ ಚೀಟಿ (Ration Card) ಪಡೆದುಕೊಂಡಿರುವುದರ ಬಗ್ಗೆ ಸರ್ಕಾರ ಈಗ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ, ಸರ್ಕಾರದ ಮಾನದಂಡಗಳ ಒಳಗೆ ಬಾರದೆ ಇರುವವರ ಬಿಪಿಎಲ್ ಕಾರ್ಡ್ ರದ್ದಾಗುತ್ತಿದೆ.

ಬಿಪಿಎಲ್ ಕಾರ್ಡ್ (BPL Card) ತಿದ್ದುಪಡಿಗೆ ಮೂರು ಲಕ್ಷಕ್ಕೂ ಅಧಿಕ ಅರ್ಜಿ ಈ ಹಿಂದೆಯೇ ಸಲ್ಲಿಕೆ ಆಗಿತ್ತು ಇವುಗಳಲ್ಲಿ ಸುಮಾರು 93,000 ಅರ್ಜಿಗಳನ್ನು ತಿರಸ್ಕರಿಸಿದ್ದು ಮಾತ್ರವಲ್ಲದೆ ಅಂತಹ ರೇಷನ್ ಕಾರ್ಡ್ ರದ್ದುಪಡಿಸಲಾಗಿದೆ (Ration card cancellation).

ಅತ್ತೆ ಸೊಸೆಗೆ ರೇಷನ್ ಕಾರ್ಡ್ ಆತಂಕ

BPL Ration Cardಇನ್ನು ಗೃಹಲಕ್ಷ್ಮಿ ಯೋಜನೆ (Gruha Lakshmi Scheme) ಅಡಿಯಲ್ಲಿ ಎರಡು ಸಾವಿರ ರೂಪಾಯಿಗಳನ್ನು ಪಡೆದುಕೊಳ್ಳಲು ರೇಷನ್ ಕಾರ್ಡ್ ನಲ್ಲಿ ಸಾಕಷ್ಟು ಗಿಮಿಕ್ ಗಳನ್ನು ಮಾಡಲಾಗುತ್ತಿದೆ. ಒಂದೇ ಮನೆಯಲ್ಲಿ ವಾಸಿಸುವ ಅತ್ತೆ ಸೊಸೆ ತಮಗೆ ಇಬ್ಬರಿಗೂ ಎರಡು ಸಾವಿರ ರೂಪಾಯಿಗಳು ಸಿಕ್ಕರೆ ಸಿಗಲಿ ಎನ್ನುವ ಕಾರಣಕ್ಕೆ ಪ್ರತ್ಯೇಕ ರೇಶನ್ ಕಾರ್ಡ್ ಮಾಡಿಸಿಕೊಳ್ಳಲು ಮುಂದಾಗಿದ್ದಾರೆ.

ಮುಂದೆ ರೇಷನ್ ಕಾರ್ಡ್ ನಲ್ಲಿ ಅತ್ತೆ ಸೊಸೆ ಹೆಸರು ಇದ್ದು, ಪ್ರತ್ಯೇಕ ರೇಷನ್ ಕಾರ್ಡ್ ಮಾಡಿಸಿಕೊಳ್ಳಲು ಒಬ್ಬರ ಹೆಸರನ್ನು ತೆಗೆದುಹಾಕಲು ತಿದ್ದುಪಡಿ ಮಾಡಿಕೊಳ್ಳಲು ಹೋದಾಗ ಈ ವಂಚನೆಯ ವಿಚಾರ ಹೊರಗಡೆ ಬಂದಿದೆ

ಹಾಗಾಗಿ ಒಂದೇ ಅಡ್ರೆಸ್ ನಲ್ಲಿ ವಾಸವಾಗಿರುವ ಅತ್ತೆ ಸೊಸೆ ಬೇರೆ ಬೇರೆ ಕಾರ್ಡ್ ಮಾಡಿಸಿಕೊಳ್ಳಲು ಸರ್ಕಾರ ಅನುಮತಿ ನೀಡಿಲ್ಲ, ಜೊತೆಗೆ ಇಂತಹ ಅರ್ಜಿಗಳನ್ನು ತಿರಸ್ಕರಿಸಿರುವುದು ಮಾತ್ರವಲ್ಲದೆ ಇರುವ ಒಂದು ರೇಷನ್ ಕಾರ್ಡ್ ಅನ್ನು ಕೂಡ ರದ್ದುಪಡಿಸಲಾಗುತ್ತಿದೆ.

ಹೊಸ ರೇಷನ್ ಕಾರ್ಡ್ ಅಪ್ಲೈ ಮಾಡಿದ್ರೆ ಒಂದು ತಿಂಗಳಲ್ಲಿ ನಿಮ್ಮ ಕೈ ಸೇರಲಿದೆ ಬಿಪಿಎಲ್ ಕಾರ್ಡ್

ಗೃಹಲಕ್ಷ್ಮಿ ನಿಯಮ ತಿಳಿದುಕೊಳ್ಳಿ

ಒಂದು ಕುಟುಂಬದಲ್ಲಿ ಅತ್ತೆಯ ಜೊತೆಗೆ ಎಷ್ಟೇ ಸೊಸೆಯಂದಿರು ಇದ್ದರು ಗೃಹಲಕ್ಷ್ಮಿ ಸಿಗುವುದು ಮಾತ್ರ ಆ ಮನೆಯ ಮೊದಲ ಮಹಿಳೆ ಅಥವಾ ಕುಟುಂಬದ ಯಜಮಾನ ಅತ್ತೆಗೆ ಮಾತ್ರ

ಒಂದು ವೇಳೆ ಅತ್ತೆ ತನಗೆ ಬೇಡ ಎಂದು ಹೇಳಿದರು ಕೂಡ ಆಕೆಯ ಹೆಸರಿನ ಬದಲಾಗಿ ಸೊಸೆಯ ಹೆಸರನ್ನು ಕಾರ್ಡ್ ನಲ್ಲಿ ಸೇರಿಸುವಂತಿಲ್ಲ. ಹಾಗೇನಾದರೂ ಮನೆಯ ಹಿರಿಯ ಮಹಿಳೆ ಬದುಕಿದ್ದು ಅವರಿಗಿಂತ ಕಿರಿಯವರು ಅರ್ಜಿ ಸಲ್ಲಿಸಿದರೆ ಅಂತಹ ಗೃಹಲಕ್ಷ್ಮಿ ಅರ್ಜಿ ತಿರಸ್ಕರಿಸಲ್ಪಡುತ್ತದೆ.

A new Rules for all those who are in the same house and have received different ration cards

Follow us On

FaceBook Google News

A new Rules for all those who are in the same house and have received different ration cards