ಹೊಸ ರೇಷನ್ ಕಾರ್ಡ್ ಅಪ್ಲೈ ಮಾಡಿದ್ರೆ ಒಂದು ತಿಂಗಳಲ್ಲಿ ನಿಮ್ಮ ಕೈ ಸೇರಲಿದೆ ಬಿಪಿಎಲ್ ಕಾರ್ಡ್
ಇಂದು ಸರ್ಕಾರದ ಯೋಜನೆಗಳ (Government schemes) ಪ್ರಯೋಜನ ಪಡೆದುಕೊಳ್ಳುವುದಕ್ಕಾಗಿ ರೇಷನ್ ಕಾರ್ಡ್ (Ration Card) ಬಗ್ಗೆ ಜನ ಹೆಚ್ಚು ಉತ್ಸುಕರಾಗಿದ್ದರು ಕೂಡ ರೇಷನ್ ಕಾರ್ಡ್ ನ ಮಹತ್ವ ಹಾಗೂ ಅಗತ್ಯ ಇಂದು ನಿನ್ನೆಯದಲ್ಲ.
ಬಡತನ ರೇಖೆಗಿಂತ ಕೆಳಗಿನವರು (Below poverty line) ಉಚಿತ ಪಡಿತರ ಪಡೆದುಕೊಳ್ಳಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ವಿಧಾನಸಭೆ ಚುನಾವಣೆಗೂ (Vidhana sabha election) ಮೊದಲು ಆಹಾರ ಇಲಾಖೆಗೆ ಸಲ್ಲಿಕೆಯಾಗಿದ್ದ ಒಟ್ಟು 2.92 ಲಕ್ಷ ಹೊಸ ಪಡಿತರ ಅರ್ಜಿ ಪರಿಶೀಲನೆ ನಡೆಯುತ್ತಿದೆ.
ಹೊಸ ರೇಷನ್ ಕಾರ್ಡ್ ಮತ್ತು ತಿದ್ದುಪಡಿಗೆ ಮುಗಿಬಿದ್ದ ಜನ; ರಾತ್ರೋ ರಾತ್ರಿ ಹೊಸ ಆದೇಶ
ತಿದ್ದುಪಡಿಗೆ ಅವಕಾಶ
ರೇಷನ್ ಕಾರ್ಡ್ ನಲ್ಲಿ ಸಾಕಷ್ಟು ಲೋಪ ದೋಷಗಳು ಇರುವ ಹಿನ್ನೆಲೆಯಲ್ಲಿ ಅವುಗಳನ್ನು ಸರಿಪಡಿಸಿಕೊಳ್ಳಲು ತಿದ್ದುಪಡಿ (Ration card correction) ಮಾಡಿಕೊಳ್ಳುವುದು ಬಹಳ ಮುಖ್ಯ.
ಅದರಲ್ಲೂ ರಾಜ್ಯ ಸರ್ಕಾರದ ಕೆಲವು ಯೋಜನೆಗಳಿಗೆ ರೇಷನ್ ಕಾರ್ಡ್ (Ration Card) ಎನ್ನುವುದು ಬಹಳ ಮುಖ್ಯ ದಾಖಲೆಯಾಗಿದೆ. ಹಾಗಾಗಿ ಜನರಿಗೆ ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿ (Correction) ಮಾಡಿಕೊಂಡು ಅದನ್ನ ಯೋಜನೆಗಳಿಗೆ ಬಳಸಿಕೊಳ್ಳಲು ಸರ್ಕಾರ ಸೆಪ್ಟೆಂಬರ್ ತಿಂಗಳಲ್ಲಿ ಅವಕಾಶ ಮಾಡಿಕೊಟ್ಟಿದ್ದು, ಲಕ್ಷಾಂತರ ಜನ ಇದರ ಸದುಪಯೋಗ ಪಡಿಸಿಕೊಂಡಿದ್ದಾರೆ.
ಈಗ ರೇಷನ್ ಕಾರ್ಡ್ ತಿದ್ದುಪಡಿಗೆ ಮತ್ತೆ ಅವಕಾಶ ಮಾಡಿಕೊಡಲಾಗಿದೆ, ಅಕ್ಟೋಬರ್ 13ರ ವರೆಗೆ ವಲಯವರು ದಿನಾಂಕ ವಿಂಗಡಣೆ ಮಾಡಿ ಒಂದೊಂದು ಜಿಲ್ಲೆಗೆ (district) ಮೂರು ದಿನಗಳಂತೆ ತಿದ್ದುಪಡಿಗೆ ಅವಕಾಶ ಮಾಡಿಕೊಡಲಾಗಿದೆ.
ಸರ್ಕಾರ ಪ್ರಕಟಿಸಿರುವ ಈ ತಿದ್ದುಪಡಿ ದಿನಾಂಕ ಹಾಗೂ ಆಯಾ ಜಿಲ್ಲೆ ಗಳ ಹೆಸರುಗಳನ್ನು ಪ್ರಕಟಿಸಲಾಗಿದ್ದು ಅದರ ಪ್ರಕಾರ ನಿಮ್ಮ ಜಿಲ್ಲೆಯಲ್ಲಿ ಯಾವ ದಿನಾಂಕ ತಿದ್ದುಪಡಿ ಮಾಡಿಕೊಡಲಾಗುತ್ತದೆ ಎಂಬುದನ್ನು ತಿಳಿದುಕೊಂಡು ತಕ್ಷಣವೇ ಆ ಕೆಲಸ ಮಾಡಿ. ತಿದ್ದುಪಡಿ ಮಾಡಿಕೊಳ್ಳದೆ ಇದ್ದರೆ ಸರ್ಕಾರದ ಗ್ಯಾರಂಟಿ ಯೋಜನೆಯ ಪ್ರಯೋಜನ ಸಿಗುವುದಿಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ.
ಹೆಣ್ಣು ಮಕ್ಕಳ ತಂದೆ-ತಾಯಿಗೆ ಬಂಪರ್ ಗಿಫ್ಟ್; ಹೆಣ್ಣು ಮಗುವಿಗೆ 2 ಲಕ್ಷ ನೀಡುವ ಯೋಜನೆಗೆ ಅರ್ಜಿ ಹಾಕಿ
ಯಾಕೆ ಇನ್ನೂ ಹೊಸ ಕಾರ್ಡ್ ಸಿಗುತ್ತಿಲ್ಲ?
ಇದು ಬಿಪಿಎಲ್ ಕಾರ್ಡ್ ಆಕಾಂಕ್ಷಿಗಳ ಪ್ರಶ್ನೆ. ಆಹಾರ ಮತ್ತು ನಾಗರಿಕ ಇಲಾಖೆ ಈಗಾಗಲೇ ಸಲ್ಲಿಕೆ ಆಗಿರುವ ಎರಡು ಲಕ್ಷಕ್ಕೂ ಅಧಿಕ ಅರ್ಜಿಗಳ ಪರಿಶೀಲನೆ ನಡೆಸುತ್ತಿದೆ. ಬಿಪಿಎಲ್ ಕಾರ್ಡ್ (BPL card) ಪಡೆದುಕೊಳ್ಳಬೇಕು ಅಂದರೆ ಸರ್ಕಾರದ ಮಾನದಂಡಗಳನ್ನು ಹೊಂದಿರಬೇಕು.
ಆದರೆ ಅದೆಷ್ಟೋ ಜನ ಸರ್ಕಾರದ ನಿಯಮಗಳ ವಿರುದ್ಧವಾಗಿ ಅರ್ಜಿ ಸಲ್ಲಿಸಿದ್ದು ಅಂತವರು ಫಲಾನುಭವಿಗಳಲ್ಲ ಎಂದು ಸರ್ಕಾರ ತೀರ್ಮಾನಿಸಿದೆ. ಈಗಾಗಲೇ 75% ನಷ್ಟು ಹೊಸ ಅರ್ಜಿಗಳ ಪರಿಶೀಲನೆ ನಡೆಸಲಾಗಿದ್ದು, ಸದ್ಯದಲ್ಲಿಯೇ ಫಲಾನುಭವಿಗಳ ಕೈಗೆ ಬಿಪಿಎಲ್ ಕಾರ್ಡ್ ಸೇರಲಿದೆ.
ಗೃಹಲಕ್ಷ್ಮಿಯರಿಗೆ ಬಿಗ್ ರಿಲೀಫ್! ಈ ದಿನಾಂಕ ಎಲ್ಲರ ಖಾತೆಗೂ ಹಣ ಜಮಾ ಆಗುತ್ತೆ; ಸಿಎಂ ಸಿದ್ದರಾಮಯ್ಯ
ಬಿಪಿಎಲ್ ಕಾರ್ಡ್ ಯಾರಿಗೆ ಸಲ್ಲಬೇಕು?
ಇದನ್ನು ಮೊದಲು ತಿಳಿದುಕೊಳ್ಳಬೇಕು, ಬಡತನ ರೇಖೆಗಿಂತ ಕೆಳಗಿರುವವರಿಗೆ ಮಾತ್ರ ಬಿಪಿಎಲ್ ಕಾರ್ಡ್ ನೀಡಲಾಗುತ್ತದೆ ಹಾಗಾಗಿ ಅಂತವರ ಅರ್ಜಿಗಳನ್ನು ಮಾತ್ರ ಸರ್ಕಾರ ಪರಿಗಣಿಸುತ್ತದೆ. ಒಂದು ವೇಳೆ ನೀವು ಬಡತನ ರೇಖೆಗಿಂತ ಕೆಳಗಿನವರಾಗದೆ ಇದ್ದಲ್ಲಿ ನೀವು ಎಪಿಎಲ್ ಕಾರ್ಡ್ (APL Card) ಪಡೆದುಕೊಳ್ಳಲು ಅರ್ಹರಾಗುತ್ತೀರಿ.
ಹೊಸ ಅರ್ಜಿ ಸಲ್ಲಿಸಬಹುದೇ?
ಸದ್ಯ ಈಗಿರುವ ಅರ್ಜಿಗಳನ್ನು ಪರಿಶೀಲಿಸಿ, ಅವುಗಳನ್ನು ಒಂದು ತಿಂಗಳ ಕಾಲ ಅವಧಿಯಲ್ಲಿ ಫಲಾನುಭವಿಗಳಿಗೆ ನೀಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ. ಇದರ ಜೊತೆಗೆ ತುರ್ತು ಅಗತ್ಯಕ್ಕೆ ಅನುಗುಣವಾಗಿ ಬಿಪಿಎಲ್ ಕಾರ್ಡ್ ಅನ್ನು ಪಡೆದುಕೊಳ್ಳಬಹುದು.
ಇದು ಕೇವಲ ಅನಾರೋಗ್ಯ ಎಮರ್ಜೆನ್ಸಿ (Medical emergency) ಸಮಯದಲ್ಲಿ ಮಾತ್ರ. ಅಂದರೆ ಯಾವುದೇ ಒಬ್ಬ ವ್ಯಕ್ತಿ ಅನಾರೋಗ್ಯದಿಂದ ಬಳಲುತ್ತಿತ್ತು ಆಯುಷ್ಮಾನ್ ಕಾರ್ಡ್ (Aayushman card) ಪಡೆದು ಅದರ ಮೂಲಕ ಚಿಕಿತ್ಸೆ ಪಡೆದುಕೊಳ್ಳುವ ಅಗತ್ಯ ಇದ್ದರೆ ಆಸ್ಪತ್ರೆಗೆ ಸಲ್ಲಿಸುವ ಸಲುವಾಗಿ ಬಿಪಿಎಲ್ ಕಾರ್ಡ್ ಅನ್ನು ತುರ್ತಾಗಿ ಪಡೆದುಕೊಳ್ಳಲು ಸಾಧ್ಯವಿದೆ. ಇದಕ್ಕಾಗಿ ನೀವು ಸರಿಯಾದ ದಾಖಲೆ ಹಾಗೂ ಕಾರಣಗಳ ಜೊತೆಗೆ ನೇರವಾಗಿ ಆಹಾರ ಇಲಾಖೆಯನ್ನು ಸಂಪರ್ಕಿಸಬಹುದು.
ರೇಷನ್ ಕಾರ್ಡ್ ಹೊಸ ಲಿಸ್ಟ್ ಬಿಡುಗಡೆ! ಹೆಸರು ಇದ್ರೆ ಮಾತ್ರ ಸಿಗುತ್ತೆ ಎಲ್ಲಾ ಯೋಜನೆಗಳ ಭಾಗ್ಯ
ಬಿಪಿಎಲ್ ಕಾರ್ಡ್ ಸೆರೆಂಡರ್ ಮಾಡಿ
ಇನ್ನು ನಿಜವಾಗಿ ಯಾರಿಗೆ ಬಿಪಿಎಲ್ ಕಾರ್ಡ್ ಅಗತ್ಯ ಇದೆಯೋ ಅಂತವರು ಮಾತ್ರ ಈ ಕಾರ್ಡ್ ಹೊಂದಿದ್ದರೆ, ಅವರ ಅನಾರೋಗ್ಯದ ಸಮಯದಲ್ಲಿ ಅನುಕೂಲವಾಗುತ್ತದೆ. ಜೊತೆಗೆ ಒಂದಿಷ್ಟು ಪಡಿತರ ಕೂಡ ಪಡೆದುಕೊಳ್ಳಬಹುದು.
ಆದರೆ ಅನುಕೂಲಸ್ಥರು ಕೂಡ ಬಿಪಿಎಲ್ ಕಾರ್ಡ್ ಅನ್ನು ಹೊಂದಿದ್ದು ಅದರ ಬಳಕೆಯನ್ನು ಮಾಡಿಕೊಳ್ಳುತ್ತಿಲ್ಲ. ಹಾಗಾಗಿ ನಿಜವಾಗಿ ನಿಮಗೆ ಅಗತ್ಯ ಇಲ್ಲದೆ ಇದ್ದು ಬಿಪಿಎಲ್ ಕಾರ್ಡ್ ಹೊಂದಿದ್ದರೆ ಅದನ್ನು ಸರ್ಕಾರಕ್ಕೆ ಹಿಂತಿರುಗಿಸಿ, ಅರ್ಹರಿಗೆ ಬಿಪಿಎಲ್ ಪ್ರಯೋಜನ ಸಿಗುವಂತೆ ಮಾಡಿ ಎಂದು ಸರ್ಕಾರ ಈಗಾಗಲೇ ಮನವಿ ಮಾಡಿದೆ.
ಬಿಪಿಎಲ್ ಕಾರ್ಡ್ ಪಡೆದುಕೊಳ್ಳಲು ಸಾಕಷ್ಟು ವಂಚನೆ ಮಾಡಲಾಗಿತ್ತು. ಅಂತಹ ಕಾರ್ಡ್ ಅನ್ನು ಸರ್ಕಾರ ರದ್ದು ಪಡಿಸುತ್ತಿದೆ. ಜೊತೆಗೆ ಅನರ್ಹರ ಬಳಿ ಬಿಪಿಎಲ್ ಕಾರ್ಡ್ ಇದ್ದರೆ ಅಂತವರ ಬಿಪಿಎಲ್ ಕಾರ್ಡ್ ರದ್ದುಪಡಿಸಿ ಅಗತ್ಯ ಇರುವವರಿಗೆ ಸಲ್ಲಿಸುವ ಪ್ರಯತ್ನ ನಡೆಯುತ್ತಿದೆ. ಒಟ್ಟಿನಲ್ಲಿ ಯಾರಿಗೆ ನಿಜವಾಗಿ ಸರ್ಕಾರದ ಯೋಜನೆಯ ಅಗತ್ಯ ಇದೆಯೋ ಅಂತವರು ಸದ್ಯದಲ್ಲಿಯೇ ಬಿಪಿಎಲ್ ಕಾರ್ಡ್ ಪಡೆದುಕೊಳ್ಳಬಹುದು.
If you apply for a new ration card, you will receive a BPL card in one month