ಹೊಸ ರೇಷನ್ ಕಾರ್ಡ್ ಮತ್ತು ತಿದ್ದುಪಡಿಗೆ ಮುಗಿಬಿದ್ದ ಜನ; ರಾತ್ರೋ ರಾತ್ರಿ ಹೊಸ ಆದೇಶ
ಈ ಹಿಂದೆ ರೇಷನ್ ಕಾರ್ಡ್ ನಲ್ಲಿ ಅಗತ್ಯವಿರುವ ಬದಲಾವಣೆಗಳನ್ನು ಮಾಡಿಕೊಳ್ಳಲು ಸರ್ಕಾರ ರೇಷನ್ ಕಾರ್ಡ್ ತಿದ್ದುಪಡಿಗೆ (Ration card correction) ಅವಕಾಶ ಮಾಡಿಕೊಟ್ಟಿತ್ತು.
ರಾಜ್ಯದಲ್ಲಿ ರೇಷನ್ ಕಾರ್ಡ್ (Ration card) ಬಳಕೆಯ ಮಹತ್ವ ಈಗ ಬಹುತೇಕ ಜನರಿಗೆ ಗೊತ್ತಾಗಿದೆ, ಅದೆಷ್ಟೋ ಜನ ಬಿಪಿಎಲ್ ಕಾರ್ಡ್ (BPL card) ಹಾಗೂ ಎಪಿಎಲ್ ಕಾರ್ಡ್ (APL Card) ಅನ್ನು ಸರ್ಕಾರದಿಂದ ತೆಗೆದುಕೊಂಡಿದ್ದರು ಅದರ ಪ್ರಯೋಜನ ಪಡೆದುಕೊಳ್ಳುತ್ತಿರಲಿಲ್ಲ.
ಆದರೆ ಈಗ ರಾಜ್ಯ ಸರ್ಕಾರದ ಯೋಜನೆಗಳಿಗೆ (government schemes) ರೇಷನ್ ಕಾರ್ಡ್ ಅಗತ್ಯವಾಗಿರುವ ದಾಖಲೆ ಆಗಿರುವುದರಿಂದ ತಾ ಮುಂದು ನಾ ಮುಂದು ಎನ್ನುವಂತೆ ರೇಷನ್ ಕಾರ್ಡ್ ತಿದ್ದುಪಡಿ ಹಾಗೂ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಜನ ಮುಗಿಬಿದ್ದಿದ್ದಾರೆ.
ಇಂಥವರಿಗೆ ಸರ್ಕಾರ ಈಗ ಹೊಸ ಆದೇಶ ಒಂದನ್ನು ಹೊರಡಿಸಿದೆ.
ಹೆಣ್ಣು ಮಕ್ಕಳ ತಂದೆ-ತಾಯಿಗೆ ಬಂಪರ್ ಗಿಫ್ಟ್; ಹೆಣ್ಣು ಮಗುವಿಗೆ 2 ಲಕ್ಷ ನೀಡುವ ಯೋಜನೆಗೆ ಅರ್ಜಿ ಹಾಕಿ
ತಿದ್ದುಪಡಿಯಲ್ಲಿ ರದ್ಧತಿ:
ಈ ಹಿಂದೆ ರೇಷನ್ ಕಾರ್ಡ್ ನಲ್ಲಿ ಅಗತ್ಯವಿರುವ ಬದಲಾವಣೆಗಳನ್ನು ಮಾಡಿಕೊಳ್ಳಲು ಸರ್ಕಾರ ರೇಷನ್ ಕಾರ್ಡ್ ತಿದ್ದುಪಡಿಗೆ (Ration card correction) ಅವಕಾಶ ಮಾಡಿಕೊಟ್ಟಿತ್ತು.
ಈ ಸಮಯದಲ್ಲಿ ಸುಮಾರು ಮೂರು ಲಕ್ಷಕ್ಕೂ ಅಧಿಕ ರೇಷನ್ ಕಾರ್ಡ್ ತಿದ್ದುಪಡಿ ಅರ್ಜಿ ಸಲ್ಲಿಕೆಯಾಗಿದ್ದವು. ಇವುಗಳಲ್ಲಿ ಬಹುತೇಕ ಎಲ್ಲಾ ರೇಷನ್ ಕಾರ್ಡ್ ತಿದ್ದುಪಡಿ ಮಾಡಲಾಗಿದ್ದರು ಕೂಡ ಸುಮಾರು 93,000 ರೇಷನ್ ಕಾರ್ಡ್ ತಿದ್ದುಪಡಿಯ ಬದಲು ರದ್ದತಿ ಮಾಡಿದೆ ಸರ್ಕಾರ.
ಹೌದು ಇದು ನಿಜಕ್ಕೂ ಶಾಕಿಂಗ್ ಸಂಗತಿ ಆಗಿದ್ದು, ಇಂದು ಸರ್ಕಾರದ ಮಾನದಂಡದ ಒಳಗೆ ಬಾರದೆ ಇರುವ ರೇಷನ್ ಕಾರ್ಡ್ ಗಳನ್ನು ರದ್ದುಪಡಿಸಲು (cancellation) ಸರ್ಕಾರ ಮುಂದಾಗಿದೆ
ಹಾಗಾಗಿ ತಿದ್ದುಪಡಿ ಮಾಡಿಕೊಳ್ಳಲು ರೇಷನ್ ಕಾರ್ಡ್ ನಲ್ಲಿ ವಂಚನೆ ಪ್ರಕರಣಗಳನ್ನು ಪತ್ತೆ ಹಚ್ಚಿ ಅಂತ ರೇಷನ್ ಕಾರ್ಡ್ ತಿದ್ದುಪಡಿ ಬದಲು ರದ್ದುಗೊಳಿಸುತ್ತಿದೆ ಸರ್ಕಾರ.
ಗೃಹಲಕ್ಷ್ಮಿಯರಿಗೆ ಬಿಗ್ ರಿಲೀಫ್! ಈ ದಿನಾಂಕ ಎಲ್ಲರ ಖಾತೆಗೂ ಹಣ ಜಮಾ ಆಗುತ್ತೆ; ಸಿಎಂ ಸಿದ್ದರಾಮಯ್ಯ
ಮತ್ತೆ ತಿದ್ದುಪಡಿಗೆ ಅವಕಾಶ
ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ಸುಮಾರು 14 ದಿನಗಳ ಕಾಲ ರೇಷನ್ ಕಾರ್ಡ್ ತಿದ್ದುಪಡಿಗೆ ಸರ್ಕಾರ ಅವಕಾಶ ಮಾಡಿಕೊಟ್ಟಿತ್ತು. ಈ ಸಮಯದಲ್ಲಿ ಹಲವು ಎಪಿಎಲ್ ಹಾಗೂ ಬಿಪಿಎಲ್ ಕಾರ್ಡ್ ಗಳಲ್ಲಿ ತಿದ್ದುಪಡಿ ಮಾಡಲಾಗಿದೆ
ಆದರೆ ಸರ್ವರು ಸಮಸ್ಯೆಯಿಂದಾಗಿ ಇನ್ನು ಸಾಕಷ್ಟು ಜನರ ಕಾರ್ಡ್ ತಿದ್ದುಪಡಿ ಆಗಿಲ್ಲ ಅಥವಾ ತಿದ್ದುಪಡಿ ಆಗಿದ್ದರೂ ಅದು ಸರ್ವರ್ ಸಮಸ್ಯೆಯಿಂದಾಗಿ ಅಪ್ಡೇಟ್ (update) ಆಗಿಲ್ಲ.
ಇದರಿಂದ ಸಾಕಷ್ಟು ಜನರ ಬ್ಯಾಂಕ್ ಖಾತೆಗೆ (Bank Account) ನೇರವಾಗಿ ಅನ್ನಭಾಗ್ಯ ಹಾಗೂ ಗೃಹಲಕ್ಷ್ಮಿ ಹಣ ಜಮಾ ಆಗಿಲ್ಲ. ಇದಕ್ಕಾಗಿ ರೇಷನ್ ಕಾರ್ಡ್ ತಿದ್ದುಪಡಿಗೆ ಸರ್ಕಾರ ಮತ್ತೆ ಅವಕಾಶ ಮಾಡಿಕೊಟ್ಟಿದ್ದು ಅಕ್ಟೋಬರ್ 13ರವರೆಗೆ ತಿದ್ದುಪಡಿ ಮಾಡಿಕೊಳ್ಳಬಹುದಾಗಿದೆ. ಆದರೆ ಈ ಬಾರಿ ವಲಯವಾರು ವಿಭಾಗ ಮಾಡಿ ಪ್ರತಿ ಜಿಲ್ಲೆಗೆ ಮೂರು ದಿನಗಳ ಅವಕಾಶ ಮಾಡಿಕೊಡಲಾಗಿದೆ.
ರೇಷನ್ ಕಾರ್ಡ್ ಹೊಸ ಲಿಸ್ಟ್ ಬಿಡುಗಡೆ! ಹೆಸರು ಇದ್ರೆ ಮಾತ್ರ ಸಿಗುತ್ತೆ ಎಲ್ಲಾ ಯೋಜನೆಗಳ ಭಾಗ್ಯ
ಆನ್ಲೈನ್ ನಲ್ಲಿ ಸ್ಟೇಟಸ್ ಚೆಕ್ ಮಾಡಿ
ಇನ್ನು ರೇಷನ್ ಕಾರ್ಡ್ ತಿದ್ದುಪಡಿ ಹಾಗೂ ಹೊಸ ರೇಷನ್ ಕಾರ್ಡ್ ಅರ್ಜಿಗಳಿಗೆ ಸಂಬಂಧಪಟ್ಟ ಹಾಗೆ ಹೊಸ ಲಿಸ್ಟ್ ಅನ್ನು ಸರ್ಕಾರ ಬಿಡುಗಡೆ ಮಾಡಿದ್ದು ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ನಲ್ಲಿ ನಿಮ್ಮ ರೇಷನ್ ಕಾರ್ಡ್ ಸ್ಥಿತಿ (Ration card status) ತಿಳಿದುಕೊಳ್ಳಬಹುದಾಗಿದೆ.
Rules for New ration card and Ration Card Correction