Kannada News Karnataka News

ಹೆಣ್ಣು ಮಕ್ಕಳ ತಂದೆ-ತಾಯಿಗೆ ಬಂಪರ್ ಗಿಫ್ಟ್; ಹೆಣ್ಣು ಮಗುವಿಗೆ 2 ಲಕ್ಷ ನೀಡುವ ಯೋಜನೆಗೆ ಅರ್ಜಿ ಹಾಕಿ

girl child Scheme

Story Highlights

ಸರ್ಕಾರ ಹೆಣ್ಣು ಮಕ್ಕಳಿಗೆ ಅನುಕೂಲವಾಗುವಂತಹ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳಲ್ಲಿ ಭಾಗ್ಯ ಲಕ್ಷ್ಮಿ ಬಾಂಡ್ (Bhagyalakshmi bond) ಕೂಡ ಒಂದು.

ನಮ್ಮ ದೇಶದಲ್ಲಿ ಹೆಣ್ಣು ಮಗು (Girl child) ಜನ್ಮವಾದಾಗ ಜನರು ಆ ಮಗುವನ್ನು ನೋಡುವ ರೀತಿಯೇ ಬೇರೆ, ಇತ್ತೀಚಿನ ದಿನಗಳಲ್ಲಿ ಈ ಕಲ್ಪನೆ ಬದಲಾಗಿದ್ದರೂ ಕೂಡ ದೇಶದ ಕೆಲವು ಭಾಗಗಳಲ್ಲಿ ಹೆಣ್ಣು ಮಗುವಿನ ಭ್ರೂಣ ಹತ್ಯೆ, ಹೆಣ್ಣು ಮಕ್ಕಳ ತಿರಸ್ಕಾರ ನಡೆಯುತ್ತಲೇ ಇದೆ

ಇದನ್ನ ತಡೆಗಟ್ಟುವ ಉದ್ದೇಶದಿಂದ ಸರ್ಕಾರ ಹೆಣ್ಣು ಮಕ್ಕಳಿಗೆ ಅನುಕೂಲವಾಗುವಂತಹ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳಲ್ಲಿ ಭಾಗ್ಯ ಲಕ್ಷ್ಮಿ ಬಾಂಡ್ (Bhagyalakshmi bond) ಕೂಡ ಒಂದು.

ಗೃಹಲಕ್ಷ್ಮಿಯರಿಗೆ ಬಿಗ್ ರಿಲೀಫ್! ಈ ದಿನಾಂಕ ಎಲ್ಲರ ಖಾತೆಗೂ ಹಣ ಜಮಾ ಆಗುತ್ತೆ; ಸಿಎಂ ಸಿದ್ದರಾಮಯ್ಯ

ಏನಿದು ಭಾಗ್ಯಲಕ್ಷ್ಮಿ ಬಾಂಡ್!

ರಾಜ್ಯ ಸರ್ಕಾರ ಕೆಲವು ವರ್ಷಗಳ ಹಿಂದೆ ಹೆಣ್ಣು ಮಕ್ಕಳಿಗೆ ಭಾಗ್ಯಲಕ್ಷ್ಮಿ ಬಾಂಡ್ ಯೋಜನೆಯನ್ನು ಆರಂಭಿಸಿದ್ದು ಒಂದು ಹೆಣ್ಣು ಮಗು ಮನೆಯಲ್ಲಿ ಜನನವಾದ ತಕ್ಷಣ 50,000 rs. ಬಾಂಡ್ ನೀಡಲಾಗುತ್ತದೆ. ಹೆಣ್ಣು ಮಗುವಿನ ತಾಯಿಗೆ 5100 ರೂಪಾಯಿಗಳನ್ನು ನೀಡಲಾಗುತ್ತದೆ.

ಹೆಣ್ಣು ಮಕ್ಕಳಿಗೆ ಕೊಡಲಾಗುವ ಈ ಬಾಂಡ್ ಆ ಮಗುವಿಗೆ 21 ವರ್ಷವಾದಾಗ ಎರಡು ಲಕ್ಷ ತಲುಪುತ್ತದೆ. ಅಂದರೆ ಹೆಣ್ಣು ಮಗುವಿಗೆ 21 ವರ್ಷಗಳವರೆಗೆ ವಿದ್ಯಾಭ್ಯಾಸಕ್ಕೆ (For education) ಅನುಕೂಲವಾಗಲು ಹಂತವಾಗಿ ಹಣ ಸರ್ಕಾರ ನೀಡುತ್ತದೆ.

ರೇಷನ್ ಕಾರ್ಡ್ ಹೊಸ ಲಿಸ್ಟ್ ಬಿಡುಗಡೆ! ಹೆಸರು ಇದ್ರೆ ಮಾತ್ರ ಸಿಗುತ್ತೆ ಎಲ್ಲಾ ಯೋಜನೆಗಳ ಭಾಗ್ಯ

ಹೆಣ್ಣು ಮಕ್ಕಳಿಗೆ ಸಿಗುತ್ತೆ ಶಿಕ್ಷಣಕ್ಕಾಗಿ (Education) ಹಣ:

ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಹಂತವಾಗಿ ಹಣ ನೀಡಲಾಗುವ ಈ ಯೋಜನೆಯಿಂದಾಗಿ ಹೆಣ್ಣು ಮಕ್ಕಳು ವಿದ್ಯಾಭ್ಯಾಸಕ್ಕೆ ಉಚಿತವಾಗಿ (Free Education) ಹಣ ಪಡೆದುಕೊಳ್ಳಬಹುದು. ಹೆಣ್ಣು ಮಗು 6ನೇ ತರಗತಿಗೆ ಕಾಲಿಟ್ಟಾಗ 3000 ರೂ. 8ನೇ ತರಗತಿ ವಿದ್ಯಾಭ್ಯಾಸಕ್ಕೆ 5 ಸಾವಿರ, 10ನೇ ತರಗತಿಗೆ 7 ಸಾವಿರ ರೂಪಾಯಿಗಳ ನೆರವು ಹಾಗೂ 8 ಸಾವಿರ ರೂಪಾಯಿಗಳನ್ನು ಪಿಯುಸಿ ಓದುವಾಗ ಪಡೆದುಕೊಳ್ಳಬಹುದು. ಒಟ್ಟು 23 ಸಾವಿರ ರೂ.ಗಳನ್ನು ವಿದ್ಯಾಭ್ಯಾಸಕ್ಕಾಗಿ ಸರ್ಕಾರ ನೀಡುತ್ತದೆ.

2017ರಲ್ಲಿ ಆರಂಭವಾದ ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ರಾಜ್ಯದಲ್ಲಿ ಹೆಚ್ಚು ಯಶಸ್ವಿಯಾಗಿದೆ. ಮನೆಯಲ್ಲಿ ಹುಟ್ಟಿದ ಹೆಣ್ಣು ಮಗುವಿಗೆ ಮಾತ್ರ ಈ ಬಾಂಡ್ ಲಭ್ಯವಾಗುತ್ತದೆ, ಆ ಹೆಣ್ಣು ಮಗುವಿಗೆ 21 ವರ್ಷ ವಯಸ್ಸಾದಾಗ ಎರಡು ಲಕ್ಷ ರೂಪಾಯಿಗಳು ಲಭ್ಯವಾಗುತ್ತದೆ. ಬಡ ಪೋಷಕರಿಗೆ (Poor family) ಹೆಣ್ಣು ಮಕ್ಕಳ ವಿದ್ಯಾಭ್ಯಾಸ ಹಾಗೂ ಅವರ ಆರೈಕೆಗಾಗಿ ಅನುಕೂಲ ಮಾಡಿಕೊಡಲು ಭಾಗ್ಯಲಕ್ಷ್ಮಿ ಬಾಂಡ್ ಆರಂಭಿಸಲಾಗಿತ್ತು.

ಗೃಹಲಕ್ಷ್ಮಿ 2ನೇ ಕಂತಿನ ಹಣ ಎಲ್ಲರಿಗೂ ಸಿಗೋಲ್ಲ; ಯಾವುದಕ್ಕೂ ಒಮ್ಮೆ ಸ್ಟೇಟಸ್ ಚೆಕ್ ಮಾಡಿಕೊಳ್ಳಿ

ಭಾಗ್ಯಲಕ್ಷ್ಮಿ ಬಾಂಡ್ ಪಡೆದುಕೊಳ್ಳುವುದು ಹೇಗೆ?

Bhagya Lakshmi Scheme Benefits Details
*ಅರ್ಜಿ ಸಲ್ಲಿಸುವ ಪೋಷಕರ ವಾರ್ಷಿಕ ಆದಾಯ 2 ಲಕ್ಷ ರೂಪಾಯಿಗಳನ್ನು ಮೀರಿರಬಾರದು.

*ಮದುವೆಯಾದ ಗೃಹಿಣಿಯ ವಯಸ್ಸು 18 ವರ್ಷ ಮೇಲ್ಪಟ್ಟಿರಬೇಕು.

*ಹೆಣ್ಣು ಮಗು ಜನಿಸುತ್ತಿದ್ದ ಹಾಗೆ ಅಂಗನವಾಡಿ ಕೇಂದ್ರದಲ್ಲಿ ಜನ್ಮ ದಾಖಲೆಯನ್ನು ನೀಡಬೇಕು.

*ಮಾರ್ಚ್ 31 2006 ನಂತರ ಹುಟ್ಟಿದ ಎಲ್ಲಾ ಕುಟುಂಬದ ಹೆಣ್ಣು ಮಗುವಿಗೆ ಯೋಜನೆ ಪ್ರಯೋಜನ ಸಿಗಲಿದೆ.

*ಅಂದು ಕುಟುಂಬದ ಇಬ್ಬರು ಹೆಣ್ಣು ಮಕ್ಕಳಿಗೆ ಈ ಬಾಂಡ್ ಸಿಗಲಿದೆ.

*ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕೃತ ವೆಬ್ಸೈಟ್ wcd.nic.in ನಲ್ಲಿ ಅರ್ಜಿ ನಮೂನೆ ಅನ್ನು ಡೌನ್ಲೋಡ್ (download application) ಮಾಡಿಕೊಂಡು ಅದನ್ನು ಭರ್ತಿ ಮಾಡಿ ಅಗತ್ಯ ಇರುವ ದಾಖಲೆಗಳೊಂದಿಗೆ ಹತ್ತಿರದ ಅಂಗನವಾಡಿ ಕೇಂದ್ರಕ್ಕೆ ನೀಡಿ.

ಹಳೆಯ ರೇಷನ್ ಕಾರ್ಡ್ ಮತ್ತು ತಿದ್ದುಪಡಿಗೆ ಸಂಬಂಧಿಸಿದಂತೆ ಸರ್ಕಾರದ ಮಹತ್ವದ ಆದೇಶ

ಬೇಕಾಗಿರುವ ದಾಖಲೆಗಳು:

ಪೋಷಕರ ವಿಳಾಸ, ಆಧಾರ್ ಕಾರ್ಡ್ (Aadhaar Card), ಪೋಷಕರ ಮದುವೆ ಪುರಾವೆ (Marriage Certificate), ಮಗು ಹುಟ್ಟಿದ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ, ದಂಪತಿಗಳ ಹಾಗೂ ಶಿಶುವಿನ ಪಾಸ್ಪೋರ್ಟ್ ಅಳತೆಯ ಫೋಟೋ, ಬ್ಯಾಂಕ್ ಪಾಸ್ ಬುಕ್ ಪ್ರತಿ (Bank Pass Book)  ಮೊಬೈಲ್ ಸಂಖ್ಯೆ ಇದ್ದರೆ ಈ ದಾಖಲೆಗಳ ಜೊತೆಗೆ ಅಂಗನವಾಡಿ ಕೇಂದ್ರದಲ್ಲಿ ಅರ್ಜಿ ಸಲ್ಲಿಸಬಹುದು.

Apply for 2 lakh scheme Bhagya Lakshmi Yojana for girl child