Karnataka NewsBangalore News

ಹಳೆಯ ರೇಷನ್ ಕಾರ್ಡ್ ಮತ್ತು ತಿದ್ದುಪಡಿಗೆ ಸಂಬಂಧಿಸಿದಂತೆ ಸರ್ಕಾರದ ಮಹತ್ವದ ಆದೇಶ

ಬಹುಶ: ಸರ್ಕಾರ ರೇಷನ್ ಕಾರ್ಡ್ ತಿದ್ದುಪಡಿಗೆ (ration card correction) ಇಷ್ಟು ಬೇಗ ಮತ್ತೊಮ್ಮೆ ಅವಕಾಶ ಮಾಡಿಕೊಡಬಹುದು ಎಂದು ಯಾರೂ ಊಹಿಸಿರಲಿಕ್ಕಿಲ್ಲ. ಯಾಕೆಂದರೆ ಕಳೆದ ತಿಂಗಳು 14 ದಿನಗಳ ಕಾಲ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ನೀಡಲಾಗಿತ್ತು.

ಆಗಲು ಲಕ್ಷಾಂತರ ಜನ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಕೊಂಡಿದ್ದಾರೆ, ಆದರೆ ಉಳಿದವರಿಗೆ ಈ ಅವಕಾಶ ಸಿಕ್ಕಿರಲಿಲ್ಲ.. ಹಾಗಾಗಿ ಮತ್ತೆ ರೇಷನ್ ಕಾರ್ಡ್ ತಿದ್ದುಪಡಿಗೆ (ration card correction) ಸರ್ಕಾರ ಅವಕಾಶ ನೀಡಿದೆ.

Ration Card: ಯಾವೆಲ್ಲಾ ಜನರ ಬಿಪಿಎಲ್ ಕಾರ್ಡ್ ರದ್ದಾಗುತ್ತೆ? ಇಲ್ಲಿದೆ ಅಪ್ಡೇಟ್

ಒಂದಕ್ಕಿಂತ ಹೆಚ್ಚು ಕಡೆ ಮನೆ, ಆಸ್ತಿ ಹೊಂದಿರುವವರಿಗೆ ಹೊಸ ನಿಯಮ ಘೋಷಿಸಿದ ಸರ್ಕಾರ

ಈ ಯೋಜನೆಗಳಿಗೆ ರೇಷನ್ ಕಾರ್ಡ್ ತಿದ್ದುಪಡಿ ಕಡ್ಡಾಯ:

ಅನ್ನಭಾಗ್ಯ ಯೋಜನೆ (Annabhagya scheme) ಇರಬಹುದು ಅಥವಾ ಗೃಹ ಲಕ್ಷ್ಮಿ ಯೋಜನೆಯ (Gruha Lakshmi scheme) 2000 ರೂಗಳನ್ನು ಪಡೆದುಕೊಳ್ಳಲು ಆಗಿರಬಹುದು, ಒಟ್ಟಿನಲ್ಲಿ ರೇಷನ್ ಕಾರ್ಡ್ ನಲ್ಲಿ ಯಾವುದೇ ಲೋಪ ದೋಷಗಳು ಇಲ್ಲದಂತೆ ಅದರ ತಿದ್ದುಪಡಿ ಮಾಡಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.

(BPL card) ಬಿಪಿಎಲ್ (APL card), ಎಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ ಗಳಲ್ಲಿ ಅಗತ್ಯವಿರುವ ತಿದ್ದುಪಡಿ ಮಾಡಿಕೊಳ್ಳಲು ಸರ್ಕಾರದಿಂದ ಮತ್ತೆ ಆದೇಶ ಬಂದಿದೆ. ಸಾಕಷ್ಟು ಹಳೆಯದಾಗಿರುವ ರೇಷನ್ ಕಾರ್ಡ್ ಹೊಂದಿರುವವರು ಇದ್ದಾರೆ ಹಾಗಾಗಿ ಅಂಥವರ ರೇಷನ್ ಕಾರ್ಡ್ ನಲ್ಲಿ ಕೆಲವು ಪ್ರಮುಖ ತಿದ್ದುಪಡಿಗಳು ಆಗಲೇಬೇಕು.

ಮನೆ ನಿರ್ಮಾಣಕ್ಕೆ ಸರ್ಕಾರವೇ ನೀಡುತ್ತೆ ಸೈಟ್! ಈ ಜಿಲ್ಲೆಯ ಜನತೆಗೆ ಗುಡ್ ನ್ಯೂಸ್ ನೀಡಿದ ಸರ್ಕಾರ

ತಿದ್ದುಪಡಿ ಯಾವಾಗಿನಿಂದ ಆರಂಭ

5 ಅಕ್ಟೋಬರ್ 2023 ಅಂದರೆ ನಿನ್ನೆಯಿಂದ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ನೀಡಲಾಗಿದೆ, ಇದು ಕೇವಲ ಒಂಬತ್ತು ದಿನಗಳ ಅವಕಾಶವಾಗಿದ್ದು 13 ಅಕ್ಟೋಬರ್ 2023ರ ವರೆಗೆ ತಿದ್ದುಪಡಿ ಮಾಡಿಕೊಳ್ಳಲು ಅವಕಾಶವಿದೆ.

ಆದರೆ ಇಲ್ಲಿ ಗಮನಿಸಬೇಕಾದ ಬಹಳ ಮುಖ್ಯವಾಗಿರುವ ಅಂಶ ಅಂದ್ರೆ ಒಂದೊಂದು ವಿಭಾಗವಾರು ತಿದ್ದುಪಡಿಗೆ ಅವಕಾಶ ನೀಡಲಾಗಿದ್ದು ವಿಭಾಗವಾರು ಅಡಿಯಲ್ಲಿ ಬರುವ ಜಿಲ್ಲೆಗಳಿಗೆ ಮೂರು ದಿನಗಳ (three days time) ಅವಕಾಶ ಇರುತ್ತದೆ. ಬೆಳಿಗ್ಗೆ 10 ಗಂಟೆಯಿಂದ 7 ಗಂಟೆಯವರೆಗೆ ನಿಮಗೆ ನಿಗದಿಯಾಗಿರುವ ಮೂರು ದಿನಗಳ ಕಾಲ ತಿದ್ದುಪಡಿ ಮಾಡಿಕೊಳ್ಳಬಹುದು.

ಅನ್ನಭಾಗ್ಯ ಯೋಜನೆ ಹಣ ಯಾರಿಗೂ ಸಿಗೋದಿಲ್ವಾ? ಇದೇನಿದು ಸರ್ಕಾರದ ಹೊಸ ಅಪ್ಡೇಟ್

ವಲಯವಾರು ವಿಂಗಡಣೆ;

BPL Ration Cardಬೆಂಗಳೂರು ವಲಯ- ಬೆಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶ. ತಿದ್ದುಪಡಿ ದಿನಾಂಕ ಅಕ್ಟೋಬರ್ 5ರಿಂದ ಅಕ್ಟೋಬರ್ 7
ಕಲಬುರ್ಗಿ ವಲಯ- ಚಿಕ್ಕಬಳ್ಳಾಪುರ, ಬೀದರ್‌, ಬಳ್ಳಾರಿ, ಕೋಲಾರ, ದಾವಣಗೆರೆ, ವಿಜಯನಗರ, ಯಾದಗಿರಿ, ತುಮಕೂರು, ಶಿವಮೊಗ್ಗ, ರಾಮನಗರ, ಕಲಬುರಗಿ, ಬೀದರ್‌ – 11ರಿಂದ 13ವರೆಗೆ ಅವಕಾಶ.

ಬೆಳಗಾವಿ ವಲಯ- ಬೆಳಗಾವಿ, ಬಾಗಲಕೋಟೆ, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ, ಮೈಸೂರು, ಚಾಮರಾಜನಗರ, ಉತ್ತರ ಕನ್ನಡ, ವಿಜಯಪುರ, ಕೊಡಗು, ಮಂಡ್ಯ, ಧಾರವಾಡ, ಗದಗ, ಹಾವೇರಿ, ಹಾಸನ ಜಿಲ್ಲೆಗಳಿಗೆ ಅಕ್ಟೋಬರ್‌ 8 ರಿಂದ 10 ರವರೆಗೆ ತಿದ್ದುಪಡಿ.

ರೇಷನ್ ಕಾರ್ಡ್ ರದ್ದತಿ ವಿಚಾರ ಏಕಾಏಕಿ ಹೊಸ ಆದೇಶ ಹೊರಡಿಸಿದ ಸರ್ಕಾರ! ಹೊಸ ನಿಯಮ

ಏನೆಲ್ಲಾ ತಿದ್ದುಪಡಿ ಮಾಡಿಕೊಳ್ಳಬಹುದು?

ನಿಮ್ಮ ಮನೆಯಲ್ಲಿ ಹೊಸ ಸದಸ್ಯರ ಹೆಸರು ಸೇರ್ಪಡೆಮಾಡಿಕೊಳ್ಳುವುದಿದ್ದರೆ ಹೆಸರು ಸೇರ್ಪಡೆ ಮಾಡಬಹುದು. ಅದೇ ರೀತಿ ಮರಣ ಹೊಂದಿದವರ ಹೆಸರನ್ನು ತೆಗೆದು ಹಾಕಬಹುದು. ಇನ್ನೂ ಗೃಹ ಲಕ್ಷ್ಮಿ ಯೋಜನೆಯ ಎರಡು ಸಾವಿರ ರೂಪಾಯಿಗಳು ಸಿಗಬೇಕು ಅಂದ್ರೆ ರೇಷನ್ ಕಾರ್ಡ್ ಮಹಿಳೆಯ ಹೆಸರಿನಲ್ಲಿಯೇ ಇರಬೇಕು.

ಹಾಗಾಗಿ ಪುರುಷರ ಹೆಸರಿನಲ್ಲಿರುವ ರೇಷನ್ ಕಾರ್ಡ್ ಅನ್ನು ಮಹಿಳೆಯ ಹೆಸರಿಗೆ ಮಾಡಿಕೊಳ್ಳಬಹುದು. ಅದೇ ರೀತಿ ನಿಮ್ಮ ವಿಳಾಸ (address changes) ಬದಲಾವಣೆ ಮಾಡಿಕೊಳ್ಳುವುದಿದ್ದರೆ ಆ ತಿದ್ದುಪಡಿ ಕೂಡ ಮಾಡಿಕೊಳ್ಳಬಹುದು.

ಈ ತಿದ್ದುಪಡಿಗೆ ಮುಖ್ಯವಾಗಿ ರೇಷನ್ ಕಾರ್ಡ್ ಆಧಾರ್ ಕಾರ್ಡ್ ಹಾಗೂ ರಿಜಿಸ್ಟರ್ ಮೊಬೈಲ್ ಸಂಖ್ಯೆ (Mobile number) ಅಗತ್ಯವಿರುತ್ತದೆ. ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿ ಆದ ನಂತರ ನಿಮ್ಮ ಮೊಬೈಲ್ಗೆ ಒಂದು ಓಟಿಪಿ (OTP) ಕಳುಹಿಸಲಾಗುತ್ತಿದೆ

ಸರ್ಕಾರದ ಹೊಸ ಅಪ್ಡೇಟ್; ಗೃಹಜ್ಯೋತಿ ಫ್ರೀ ಕರೆಂಟ್ ಸೌಲಭ್ಯ ಸಿಗದೇ ಇದ್ದವರಿಗೆ ಸಿಹಿ ಸುದ್ದಿ

ಅದನ್ನು ನಮೂದಿಸಿದರೆ ನಿಮ್ಮ ತಿದ್ದುಪಡಿಯ ಯಶಸ್ವಿಯಾಗಿದೆ ಎಂದು ಅರ್ಥ. ಬಯೋಮೆಟ್ರಿಕ್ (Biometric) ಆಧಾರಿತವಾಗಿರುವ ರೇಷನ್ ಕಾರ್ಡ್ ತಿದ್ದುಪಡಿಯನ್ನು ಬೆಂಗಳೂರು ಒನ್, ಗ್ರಾಮ ಒನ್, ಕರ್ನಾಟಕ ಒನ್, ಮೊದಲಾದ ಸೇವಾ ಕೇಂದ್ರಗಳಲ್ಲಿ ಮಾಡಿಸಿಕೊಳ್ಳಬಹುದು. ಕೇವಲ ಮೂರು ದಿನಗಳ ಕಾಲ ಮಾತ್ರ ಅವಕಾಶ ನೀಡಲಾಗಿದ್ದು ಅಗತ್ಯ ಇರುವವರು ತಕ್ಷಣ ನಿಗದಿತ ದಿನಾಂಕದಂದು ತಿದ್ದುಪಡಿ ಮಾಡಿಸಿಕೊಳ್ಳಿ.

These documents are a must for ration card correction

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories