ಅನ್ನಭಾಗ್ಯ ಯೋಜನೆ ಹಣ ಯಾರಿಗೂ ಸಿಗೋದಿಲ್ವಾ? ಇದೇನಿದು ಸರ್ಕಾರದ ಹೊಸ ಅಪ್ಡೇಟ್
ಅಕ್ಕಿಯ ಬದಲು ಹಣವನ್ನು ಫಲಾನುಭವಿಗಳ ಖಾತೆಗೆ (Bank Account) ನೇರವಾಗಿ ಜಮಾ (DBT) ಮಾಡುತ್ತಿದೆ. ಈಗಾಗಲೇ ಎರಡು ಕಂತಿನ ಹಣ ಜಮಾ ಮಾಡಲಾಗಿದೆ
ಸರ್ಕಾರದ ಗ್ಯಾರಂಟಿ ಯೋಜನೆಗಲ್ಲಿ ಅನ್ನಭಾಗ್ಯ ಯೋಜನೆ (Annabhagya Yojana) ಕೂಡ ಒಂದು, ಕೇಂದ್ರ ಸರ್ಕಾರ ಈಗಾಗಲೇ ರಾಜ್ಯದ ಬಿಪಿಎಲ್ (BPL) ಹಾಗೂ ಅಂತ್ಯೋದಯ ಫಲಾನುಭವಿಗಳಿಗೆ 5 ಕೆಜಿ ಅಕ್ಕಿಯನ್ನು ಉಚಿತವಾಗಿ ಪ್ರತಿ ತಿಂಗಳು ನೀಡುತ್ತಿದೆ
ಇದರ ಜೊತೆಗೆ ರಾಜ್ಯ ಸರ್ಕಾರ ಐದು ಕೆಜಿ ಅಕ್ಕಿ ಉಚಿತವಾಗಿ (Free rice ) ನೀಡುವುದಾಗಿ ತಿಳಿಸಿತ್ತು, ಆದರೆ ಹೆಚ್ಚುವರಿ ಅಕ್ಕಿ ಒದಗಿಸಲು ರಾಜ್ಯ ಸರ್ಕಾರಕ್ಕೆ ಸಾಧ್ಯವಾಗಿಲ್ಲ
ಆದ್ದರಿಂದ ಅಕ್ಕಿಯ ಬದಲು ಹಣವನ್ನು ಫಲಾನುಭವಿಗಳ ಖಾತೆಗೆ (Bank Account) ನೇರವಾಗಿ ಜಮಾ (DBT) ಮಾಡುತ್ತಿದೆ. ಈಗಾಗಲೇ ಎರಡು ಕಂತಿನ ಹಣ ಜಮಾ ಆಗಿದ್ದು ಮೂರನೇ ಕಂತಿನ ಹಣ ಬಿಡುಗಡೆ ವಿಚಾರದಲ್ಲಿ ಸಾಕಷ್ಟು ಗೊಂದಲಗಳು ಸೃಷ್ಟಿಯಾಗಿದೆ.
ಜನರ ಬಳಿ ಇರುವ ಈ ಕಾರ್ಡ್ ತಕ್ಷಣವೇ ರದ್ದು ಮಾಡಲು ಸರ್ಕಾರದ ಆದೇಶ! ಹೊಸ ನಿಯಮ ಜಾರಿ
ಮೂರನೇ ಕಂತಿನ ಹಣ ಬಿಡುಗಡೆ ಆಗುವುದಿಲ್ಲವೇ?
ಹೌದು ಈಗಾಗಲೇ ಎರಡು ಕಂತಿನ ಹಣ ಪಡೆದವರಿಗೆ ಮೂರನೇ ಕಂತಿನ ಹಣ ಅಂದರೆ ಸೆಪ್ಟೆಂಬರ್ ತಿಂಗಳಿನ ಹಣ ಬಿಡುಗಡೆ ಆಗುತ್ತದೆಯೋ ಇಲ್ಲವೋ ಎನ್ನುವ ಗೊಂದಲ ಆರಂಭವಾಗಿದೆ. ಬಿಡುಗಡೆ ಆಗಿದೆ ಅಥವಾ ಕೆಲವರ ಖಾತೆಗೆ ಹಣ ಸಂದಾಯವಾಗಿದೆ ಎನ್ನುವ ಮಾಹಿತಿ ಇದೆ. ಆದರೆ ಹಲವರು ತಮಗೆ ಹಣ ಬೇಡ ಅದರ ಬದಲು ಅಕ್ಕಿಯನ್ನು ಕೊಡಿ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ರಾಜ್ಯ ಸರ್ಕಾರಕ್ಕೆ ಅಕ್ಕಿ ಒದಗಿಸಲು ಸಾಧ್ಯವಾಗಲಿಲ್ಲ ಎನ್ನುವ ಕಾರಣಕ್ಕೆ ಫಲಾನುಭವಿಗಳಿಗೆ ಪ್ರತಿ ಕೆಜಿಗೆ 34 ರೂಪಾಯಿಗಳಂತೆ 5 ಕೆಜಿ ಅಕ್ಕಿಗೆ 170ಗಳನ್ನು ಅವರ ಖಾತೆಗೆ ನೇರವಾಗಿ ಸರ್ಕಾರ ವರ್ಗಾವಣೆ (Money Transfer) ಮಾಡುತ್ತಿದೆ.
ಆದರೆ ಈ ಬಗ್ಗೆ ಸಚಿವ ಚೆಲುವರಾಯಸ್ವಾಮಿ ವಿಧಾನಸೌಧದಲ್ಲಿ ಸರ್ಕಾರದ ಜೊತೆಗೆ ಮಾತನಾಡಿದ್ದು, ಅಕ್ಕಿ ಬದಲು ಹಣ ಕೊಡುವ ನಿರ್ಧಾರ ಹಿಂತೆಗೆದುಕೊಳ್ಳಬೇಕು ಅದರ ಬದಲು ಜನರಿಗೆ ಪೌಷ್ಟಿಕ ಆಹಾರ ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ.
ರೇಷನ್ ಕಾರ್ಡ್ ರದ್ದತಿ ವಿಚಾರ ಏಕಾಏಕಿ ಹೊಸ ಆದೇಶ ಹೊರಡಿಸಿದ ಸರ್ಕಾರ! ಹೊಸ ನಿಯಮ
ಇನ್ನು ಮುಂದೆ ಅನ್ನ ಭಾಗ್ಯದ ಹಣ ಬರುವುದಿಲ್ಲವೇ?
https://ahara.kar.nic.in/status1/status_of_dbt_new.aspx ಲಿಂಕ್ ಮೂಲಕ ನಿಮ್ಮ ಖಾತೆಗೆ ಹಣ ಜಮಾ ಆಗಿದೆಯೋ ಇಲ್ಲವೋ ಎಂಬುದನ್ನು ಆಹಾರ ಇಲಾಖೆಯ ಈ ಅಧಿಕೃತ ವೆಬ್ಸೈಟ್ (official website) ಮೂಲಕ ತಿಳಿದುಕೊಳ್ಳಬಹುದು
ಗೃಹಲಕ್ಷ್ಮಿ ಯೋಜನೆ ಹಣ ಬಾರದವರಿಗೆ ಸರ್ಕಾರವೇ ಸೂಚಿಸಿದೆ ಪರಿಹಾರ! ಹೊಸ ಲಿಸ್ಟ್ ಪ್ರಕಟ
ಇನ್ನು ಸಚಿವರು ಹೇಳಿದಂತೆ ಹಣದ ಬದಲು ಅಕ್ಕಿ ಅಥವಾ ಪೌಷ್ಟಿಕ ಆಹಾರ ಒದಗಿಸಲು ಸರ್ಕಾರ ಚಿಂತನೆ ನಡೆಸಿದೆ ಎನ್ನುವ ಮಾಹಿತಿ ಇದೆ. ಹೌದು ಜನರಲ್ಲಿಯೂ ಈ ಗೊಂದಲ ಮನೆ ಮಾಡಿದೆ.
ಮೂರನೇ ಕಂತಿನ ಹಣ ಬಂದರೂ ನಾಲ್ಕನೇ ಕಂತಿನಿಂದ ಹಣದ ಬದಲು ಅಕ್ಕಿ ಅಥವಾ ಪೌಷ್ಟಿಕ ಆಹಾರ (nutrient food) ವನ್ನು ಸರ್ಕಾರ ನೀಡಬಹುದು ಎಂದು ಹೇಳಲಾಗುತ್ತಿದೆ.
ರಾಗಿ, ಜೋಳ ಕಡಲೆಕಾಯಿ ಎಣ್ಣೆ ಮೊದಲಾದ ಪೌಷ್ಟಿಕ ಆಹಾರವನ್ನು ನೀಡುವುದು ಸೂಕ್ತ, ಹಣ ಕೊಟ್ಟರೆ ಇದರಿಂದ ಫಲಾನುಭವಿಗಳಿಗೆ ಯಾವುದೇ ರೀತಿಯ ಪ್ರಯೋಜನ ಇಲ್ಲ ಎಂದು ಸಚಿವರು ಮನವಿ ಮಾಡಿದ್ದಾರೆ.
ಸರ್ಕಾರದ ಹೊಸ ಅಪ್ಡೇಟ್; ಗೃಹಜ್ಯೋತಿ ಫ್ರೀ ಕರೆಂಟ್ ಸೌಲಭ್ಯ ಸಿಗದೇ ಇದ್ದವರಿಗೆ ಸಿಹಿ ಸುದ್ದಿ
ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಅಕ್ಕಿಯ ಬದಲು ಫಲಾನುಭವಿಗಳಿಗೆ ಕೊಡುತ್ತಿರುವ ಹಣ ನಿಲ್ಲಿಸಿ ಬೇರೆ ಯಾವ ವಸ್ತು ನೀಡಲು ನಿರ್ಧರಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕು.
Karnataka Govt Update on Annabhagya Yojana Money Deposit
Follow us On
Google News |