ಗೃಹಲಕ್ಷ್ಮಿ ಯೋಜನೆ ಹಣ ಬಾರದವರಿಗೆ ಸರ್ಕಾರವೇ ಸೂಚಿಸಿದೆ ಪರಿಹಾರ! ಹೊಸ ಲಿಸ್ಟ್ ಪ್ರಕಟ
ಎಲ್ಲ ಸಮಸ್ಯೆಗಳು ಪರಿಹಾರವಾದ ನಂತರ ಫಲಾನುಭವಿಗಳ ಖಾತೆಗೆ ಹಣ ಜಮಾ (Money Deposit to Bank Account) ಆಗುತ್ತದೆ ಎಂದು ಸರ್ಕಾರ ತಿಳಿಸಿದೆ
ಇತ್ತೀಚಿನ ದಿನಗಳಲ್ಲಿ ನಮ್ಮ ರಾಜ್ಯಾದ್ಯಂತ ಕಾಂಗ್ರೆಸ್ ಸರ್ಕಾರ (Congress government) ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳ ಬಗ್ಗೆ ಸಾಕಷ್ಟು ಮಾತು ಕಥೆಗಳು ನಡೆಯುತ್ತಿವೆ. ಹಲವರು ಈ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಲು ಅಗತ್ಯವಿರುವ ದಾಖಲೆಗಳನ್ನು ಸಂಗ್ರಹಿಸುವಲ್ಲಿ ನಿರತರಾಗಿದ್ದಾರೆ.
ಇನ್ನೊಂದಿಷ್ಟು ಜನ ಸರಿಯಾದ ದಾಖಲೆಗಳನ್ನು ನೀಡಿ ಈ ಗ್ಯಾರಂಟಿ ಯೋಜನೆಗಳಿಗೆ (guarantee schemes) ಅಪ್ಲೈ ಮಾಡಿ ಈಗಾಗಲೇ ಸರ್ಕಾರದಿಂದ ಸಿಗುವ ಹಣವನ್ನು ಪಡೆದುಕೊಳ್ಳುತ್ತಿದ್ದಾರೆ.
ಶಕ್ತಿ ಯೋಜನೆ (Shakti scheme) ಮೂಲಕ ಉಚಿತವಾಗಿ ಮಹಿಳೆಯರಿಗೆ ಬಸ್ (free bus) ಪ್ರಯಾಣ, ಅಕ್ಕಿಯ ಬದಲು ಅನ್ನಭಾಗ್ಯ ಯೋಜನೆ (Annabhagya scheme) ಯಡಿಯಲ್ಲಿ ಹಣ, ಉಚಿತವಾಗಿ ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಮಹಿಳೆಯರ ಖಾತೆಗೆ (Bank Account) ಜಮಾ, 200 ಯೂನಿಟ್ ವಿದ್ಯುತ್ ಗಿಂತ ಕಡಿಮೆ ಬಳಸಿದವರಿಗೆ ಗೃಹ ಜ್ಯೋತಿ ಯೋಜನೆಯಿಂದ ಉಚಿತ ವಿದ್ಯುತ್ (Free electricity) ಈ ಮೊದಲಾದ ಸೌಲಭ್ಯಗಳು ನಾಡಿನ ಜನರಿಗೆ ಲಭ್ಯವಿದೆ.
ಸರ್ಕಾರದ ಹೊಸ ಅಪ್ಡೇಟ್; ಗೃಹಜ್ಯೋತಿ ಫ್ರೀ ಕರೆಂಟ್ ಸೌಲಭ್ಯ ಸಿಗದೇ ಇದ್ದವರಿಗೆ ಸಿಹಿ ಸುದ್ದಿ
ಮೊದಲನೇ ಕಂತಿನ ಹಣ ಬಿಡುಗಡೆಯಾಗಿಲ್ಲ:
ಸರ್ಕಾರ ಇಷ್ಟೆಲ್ಲಾ ಯೋಜನೆಗಳನ್ನ ಜಾರಿಗೆ ತಂದಿದ್ದರು, ಹಲವರಲ್ಲಿ ಅಸಮಾಧಾನ ನೀಡಲು ಕಾರಣ ಪ್ರತಿಯೊಬ್ಬ ಫಲಾನುಭವಿಗಳಿಗೂ ಕೂಡ ಸಂದಾಯವಾಗಬೇಕಿದ್ದ ಹಣ ಬಂದು ತಲುಪಿಲ್ಲ.
ಗೃಹಲಕ್ಷ್ಮಿ ಯೋಜನೆಯ ಮೊದಲ ಕಂತಿನ ಹಣ (first instalment) ಈಗಾಗಲೇ ಮಹಿಳೆಯರ ಖಾತೆಗೆ ಜಮಾ ಆಗಿದೆ, ಇದರ ಜೊತೆಗೆ ಎರಡನೇ ಕಂತಿನ ಹಣವು ಕೂಡ ಬಿಡುಗಡೆಯಾಗಲಿದೆ. ಆದರೆ ಕೆಲವು ಫಲಾನುಭವಿ ಮಹಿಳೆಯರಿಗೆ ಮೊದಲ ಕಂತಿನ ಹಣ ಕೂಡ ಸಿಕ್ಕಿಲ್ಲ.
ಹೊಸ ರೇಷನ್ ಕಾರ್ಡ್ ಅರ್ಜಿದಾರರಿಗೆ ಸಿಹಿ ಸುದ್ದಿ; ಕಾರ್ಡ್ ವಿತರಣೆಯಲ್ಲಿ ಸರ್ಕಾರ ಮಹತ್ವದ ನಿರ್ಧಾರ
ಎರಡನೇ ಕಂತಿನ ಹಣ ಬಿಡುಗಡೆಯ ದಿನಾಂಕ ಪ್ರಕಟ:
ಇನ್ನು ಮೊದಲ ಕಂತಿನ ಹಣ ಬಿಡುಗಡೆ ಆಗದೇ ಇದ್ದರೆ ಅಂತಹ ಮಹಿಳೆಯರು ಚಿಂತೆ ಮಾಡುವ ಅಗತ್ಯ ಇಲ್ಲ ಎರಡು ಕಂತಿನ ಹಣವನ್ನು ಒಟ್ಟಿಗೆ ಬಿಡುಗಡೆ ಮಾಡಲಾಗುವುದು ಎನ್ನುವ ಮಾಹಿತಿ ಲಭ್ಯವಾಗಿದೆ.
ಸ್ಟೇಟಸ್ ಚೆಕ್ ಮಾಡಿದಾಗ ಈ ರೀತಿ ತೋರಿಸಿದ್ರೆ ಗೃಹಲಕ್ಷ್ಮಿ ಯೋಜನೆ 2ನೇ ಕಂತಿನ ಹಣವೂ ಬರೋಲ್ಲ
ಫಲಾನುಭವಿಗಳಿಗೆ 2000 ರೂ. ಸಿಕ್ಕಿಲ್ಲ ಯಾಕೆ?
ತಮ್ಮ ಬ್ಯಾಂಕ್ ಅಕೌಂಟ್ (bank account) ನಿಂದ ಹಿಡಿದು ಆಧಾರ ಕಾರ್ಡ್ ಸೀಡಿಂಗ್ ಈ ಕೆ ವೈ ಸಿ (KYC) ಎಲ್ಲವೂ ಸರಿಯಾಗಿದ್ದರೂ ನಮಗೆ ಇನ್ನೂ ಹಣ ಬಂದಿಲ್ಲ ಎಂದು ಹಲವು ಮಹಿಳೆಯರು ಹೇಳುತ್ತಿದ್ದಾರೆ.
ಆದ್ರೆ ಸರ್ಕಾರ ತಿಳಿಸಿರುವ ಪ್ರಕಾರ ಸಾವಿರಾರು ಮಹಿಳೆಯರ ಖಾತೆ ಇನ್ನು ಸರಿಯಾಗಿಲ್ಲ, ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆ ಲಿಂಕ್ ಆಗಿಲ್ಲ. ಜೊತೆಗೆ ಈ ಕೆ ವೈ ಸಿ ಆಗಿಲ್ಲ ಹಾಗೂ ಬ್ಯಾಂಕ್ ಖಾತೆ ಸಕ್ರಿಯವಾಗಿಲ್ಲ. ಎಲ್ಲ ಸಮಸ್ಯೆಗಳು ಪರಿಹಾರವಾದ ನಂತರ ಫಲಾನುಭವಿಗಳ ಖಾತೆಗೆ ಹಣ ಜಮಾ (Money Deposit to Bank Account) ಆಗುತ್ತದೆ ಎಂದು ಸರ್ಕಾರ ತಿಳಿಸಿದೆ.
The government has suggested a solution for those who not Got Gruha Lakshmi Yojana Money
Follow us On
Google News |