ಸ್ಟೇಟಸ್ ಚೆಕ್ ಮಾಡಿದಾಗ ಈ ರೀತಿ ತೋರಿಸಿದ್ರೆ ಗೃಹಲಕ್ಷ್ಮಿ ಯೋಜನೆ 2ನೇ ಕಂತಿನ ಹಣವೂ ಬರೋಲ್ಲ

ರಾಜ್ಯಾದ್ಯಂತ ಗೃಹಲಕ್ಷ್ಮಿ ಯೋಜನೆಯ (Gruha Lakshmi scheme) ಬೆನಿಫಿಟ್ ಅನ್ನು ಸಾಕಷ್ಟು ಮಹಿಳೆಯರು ಪಡೆದುಕೊಂಡಿದ್ದಾರೆ. ಸರ್ಕಾರ ನೀಡಿರುವ ಮಾಹಿತಿಯ ಪ್ರಕಾರ ಇನ್ನು 70% ನಷ್ಟು ಮಹಿಳೆಯರಿಗೆ ಎರಡು ಸಾವಿರ ರೂಪಾಯಿಗಳು ಜಮಾ ಆಗಿವೆ. ಆದರೆ ಇನ್ನೂ ಹಲವರು ಮೊದಲನೇ ಕಂತಿನ (First installment) ಹಣಕ್ಕಾಗಿ ಕಾಯುತ್ತಿದ್ದಾರೆ.
ಬೆಂಗಳೂರು ಸೇರಿದಂತೆ ಈ ಜಿಲ್ಲೆಗಳಲ್ಲಿ ಆಸ್ತಿ ಖರೀದಿ ಮತ್ತು ಮಾರಾಟಕ್ಕೆ ಹೊಸ ರೂಲ್ಸ್! ಏನು ಗೊತ್ತಾ?
ಎರಡನೇ ಕಂತಿನ ಹಣ ಯಾವಾಗ ಬಿಡುಗಡೆ?
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi hebbalkar) ಈಗಾಗಲೇ ಹೇಳಿರುವಂತೆ ಅಕ್ಟೋಬರ್ 15ರಿಂದ ಎರಡನೇ ಕಂತಿನ ಹಣ ಫಲಾನುಭವಿಗಳ ಖಾತೆಗೆ ಜಮಾ (Bank Account Deposit) ಆಗಲಿದೆ.
ಆದರೆ ಇಲ್ಲಿ ಮೊದಲ ಕಂತಿನ ಹಣವನ್ನು ಯಾರು ಪಡೆದುಕೊಂಡಿಲ್ಲವೋ ಅಂತವರಿಗೆ ಎರಡು ಕಂತಿನ ಹಣವನ್ನು ಸೇರಿಸಿ ಜಮೆ ಮಾಡಲಾಗುವುದು.
ಸ್ಟೇಟಸ್ ಚೆಕ್ ಮಾಡಿದಾಗ ಏನು ಬರುತ್ತೆ?
ಅನ್ನಭಾಗ್ಯ ಯೋಜನೆಯ ಸ್ಟೇಟಸ್ (DBT status check) ಚೆಕ್ ಮಾಡುವಾಗ, ಎನ್ ಪಿ ಸಿ ಐ ಫೈಲ್ (npci failed) ಅಥವಾ ಆಧಾರ್ ಕಾರ್ಡ್ ಲಿಂಕ್ ಫೈಲ್ಡ್ (Aadhaar link failed) ಅಂತ ಮೆಸೇಜ್ ಬಂದಿದ್ದರೆ, ನಿಮ್ಮ ಖಾತೆ ಸರಿಯಾಗಿಲ್ಲ ಎಂದೇ ಅರ್ಥ
ನೀವು ಬ್ಯಾಂಕ್ ನಲ್ಲಿ ಹಾಗೂ ಆಧಾರ್ ಕೇಂದ್ರದಲ್ಲಿ ನಿಮ್ಮ ಖಾತೆಯ ಎಂಪಿಸಿಐ ಮಾಡಿಸಿಕೊಳ್ಳುವುದರ ಜೊತೆಗೆ, ನಿಮ್ಮ ದಾಖಲೆಯಲ್ಲಿರುವ ಹೆಸರುಗಳು ಸರಿ ಇದೆಯಾ ಎಂಬುದನ್ನು ಚೆಕ್ ಮಾಡಿಕೊಳ್ಳಬೇಕಾಗುತ್ತದೆ. ಇದರ ಜೊತೆಗೆ ಆಧಾರ್ ಕಾರ್ಡ್ ತಿದ್ದುಪಡಿಯೂ (Aadhaar Card correction) ಕೂಡ ಆಗಬೇಕಾಗಿರುವುದು ಬಹಳ ಮುಖ್ಯ.
ಇಂಥವರಿಗೆ ರೇಷನ್ ಕಾರ್ಡ್ ಸಿಗೋದಿಲ್ಲ, ಇರೋ ರೇಷನ್ ಕಾರ್ಡ್ ಕೂಡ ರದ್ದಾಗುತ್ತೆ; ರಾತ್ರೋರಾತ್ರಿ ಆದೇಶ
ತಿದ್ದುಪಡಿಗೆ ಅವಕಾಶ;
ರಾಜ್ಯ ಸರ್ಕಾರ ರೇಷನ್ ಕಾರ್ಡ್ ನಲ್ಲಿ ಅಗತ್ಯ ಇರುವ ತಿದ್ದುಪಡಿ ಮಾಡಿಕೊಳ್ಳಲು ಅವಕಾಶ ನೀಡಿತ್ತು. ನೀವು ಈಗಾಗಲೇ ತಿದ್ದುಪಡಿ ಮಾಡಿಕೊಂಡಿದ್ದರೆ ಅದು ಸರ್ಕಾರದ ಡೇಟಾಬೇಸ್ನಲ್ಲಿ ಅಪ್ಡೇಟ್ (update) ಆಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.
ಈಗಲೂ ಅರ್ಜಿ ಸಲ್ಲಿಸಿ
ಒಂದೇ ಕ್ಲಿಕ್ ನಲ್ಲಿ ತಿಳಿದುಕೊಳ್ಳಿ ಅನ್ನಭಾಗ್ಯ ಯೋಜನೆ ಹಣ ನಿಮ್ಮ ಖಾತೆಗೆ ಜಮಾ ಆಗಿದೆಯೋ ಇಲ್ಲವೋ!
ಗೃಹಲಕ್ಷ್ಮಿ ಯೋಜನೆಗೆ ಕೊನೆಯ ದಿನಾಂಕ ಎಂಬುದನ್ನು ಸರ್ಕಾರ ನಿಗದಿ ಮಾಡಿಲ್ಲ ಹಾಗಾಗಿ ಈಗಲೂ ಅರ್ಜಿ ಸಲ್ಲಿಸುವುದು (Apply) ಅವಕಾಶವಿದೆ. ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ, ಅರ್ಜಿ ಸಲ್ಲಿಸುವ ಪ್ರಕ್ರಿಯೆ ಇನ್ನು ಕೆಲವೇ ದಿನಗಳಲ್ಲಿ ಅಂದರೆ ಅಕ್ಟೋಬರ್ ಮೊದಲನೆಯ ವಾರ ಮತ್ತೆ ಆರಂಭವಾಗಲಿದೆ. ಅರ್ಜಿ ಸಲ್ಲಿಸಿ, ಗೃಹಲಕ್ಷ್ಮಿಯ ಉಚಿತ 2000 ಬರುವಂತೆ ಮಾಡಿಕೊಳ್ಳಬಹುದು.
If the status shows like this, 2nd installment of Gruha Lakshmi Yojana will not come




