ಒಂದೇ ಕ್ಲಿಕ್ ನಲ್ಲಿ ತಿಳಿದುಕೊಳ್ಳಿ ಅನ್ನಭಾಗ್ಯ ಯೋಜನೆ ಹಣ ನಿಮ್ಮ ಖಾತೆಗೆ ಜಮಾ ಆಗಿದೆಯೋ ಇಲ್ಲವೋ!
ಅನ್ನಭಾಗ್ಯ ಯೋಜನೆ ಹಣ ನಿಮ್ಮ ಖಾತೆಗೂ (Bank Account) ಜಮಾ ಆಗಬೇಕು (DBT) ಅಂದ್ರೆ ಬಿಪಿಎಲ್ ಕಾರ್ಡ್ ಹೊಂದಿರುವುದು ಕಡ್ಡಾಯ.
ಇತ್ತೀಚಿನ ದಿನಗಳಲ್ಲಿ ನಮ್ಮ ರಾಜ್ಯದ ಜನತೆ ಸರ್ಕಾರ ಘೋಷಿಸಿರುವ ಯೋಜನೆಗಳ ಬಗ್ಗೆ ಹೆಚ್ಚು ಉತ್ಸುಕರಾಗಿದ್ದಾರೆ ಎನ್ನಬಹುದು. ಇಷ್ಟು ದಿನ ಸರಿಯಾಗಿ ಪಡಿತರ (Ration) ಪಡೆದುಕೊಳ್ಳದೆ ಇರುವವರು ಕೂಡ ಈಗ ಸರ್ಕಾರ ಅನ್ನಭಾಗ್ಯ ಯೋಜನೆಯ (Anna Bhagya scheme) ಅಡಿಯಲ್ಲಿ ನೀಡುವ ಹಣವನ್ನು ಪಡೆದುಕೊಳ್ಳುವುದಕ್ಕೆ ಮಾತ್ರ ಶತ ಪ್ರಯತ್ನಿಸುತ್ತಿದ್ದಾರೆ.
ಅನ್ನಭಾಗ್ಯ ಯೋಜನೆ ಹಣ ನಿಮ್ಮ ಖಾತೆಗೂ (Bank Account) ಜಮಾ ಆಗಬೇಕು (DBT) ಅಂದ್ರೆ ಬಿಪಿಎಲ್ ಕಾರ್ಡ್ ಹೊಂದಿರುವುದು ಕಡ್ಡಾಯ. ಗೃಹಲಕ್ಷ್ಮಿ ಯೋಜನೆಯ 2,000 ಗೃಹಿಣಿಯರ ಖಾತೆಗೆ ಜಮಾ (Money Deposit) ಆಗಬೇಕು ಅಂದರೆ ರೇಷನ್ ಕಾರ್ಡ್ ಮಹಿಳೆಯ ಹೆಸರಿನಲ್ಲಿಯೇ ಇರಬೇಕು ಎನ್ನುವುದು ಕಡ್ಡಾಯ.
1 ಲಕ್ಷಕ್ಕೂ ಹೆಚ್ಚಿನ ಅರ್ಜಿಗಳು ತಿರಸ್ಕಾರ; ಇಂತಹವರಿಗೆ ಗೃಹಲಕ್ಷ್ಮಿ ಹಣ ಇನ್ನು ಸಿಗುವುದಿಲ್ಲ
ರೇಷನ್ ಕಾರ್ಡ್ ಬೇಕೇ ಬೇಕು ಎನ್ನುವ ಕಾರಣಕ್ಕೆ ಹೊಸ ರೇಷನ್ ಕಾರ್ಡ್ ಗೆ ಅಪ್ಲೈ ಮಾಡುವುದರಿಂದ ಹಿಡಿದು ಇರುವ ರೇಷನ್ ಕಾರ್ಡ್ ತಿದ್ದುಪಡಿ (Ration card correction) ಮಾಡಿಕೊಳ್ಳುವವರಿಗೆ ಜನರು ನಿರತರಾಗಿದ್ದಾರೆ.
ಮೂರನೇ ಕಂತಿನ ಹಣ ಬಿಡುಗಡೆ:(third installment released)
ಕಾಂಗ್ರೆಸ್ (Congress) ಅಧಿಕಾರಕ್ಕೆ ಬರುವುದಕ್ಕೂ ಮುನ್ನ ಪ್ರಣಾಳಿಕೆಯಲ್ಲಿ, ಕೇಂದ್ರ ಸರ್ಕಾರ ನೀಡುತ್ತಿರುವ ಉಚಿತ ಐದು ಕೆಜಿ ಅಕ್ಕಿಯ ಜೊತೆಗೆ ಇನ್ನೂ ಐದು ಕೆಜಿ ಅಕ್ಕಿಯನ್ನು ಸೇರಿಸಿ 10 ಕೆಜಿ ಅಕ್ಕಿಯನ್ನು ಬಿಪಿಎಲ್ (BPL card) ಹಾಗೂ ಅಂತ್ಯೋದಯ ಕಾರ್ಡ್ ಹೊಂದಿರುವವರಿಗೆ ನೀಡುವುದಾಗಿ ಘೋಷಣೆ ಮಾಡಿತ್ತು.
ಆದರೆ ರಾಜ್ಯಕ್ಕೆ ಹೆಚ್ಚುವರಿ ಹಾಕಿ ಒದಗಿಸಲು ಸಾಧ್ಯವಾಗದೆ ಇರುವ ಕಾರಣ ಪ್ರತಿ ಕೆಜಿಗೆ 34 ರೂಪಾಯಿಗಳಂತೆ 5 ಕೆಜಿಗೆ 170ಗಳನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡುತ್ತಿದೆ (Money Transfer). ಹೀಗೆ ಹಣವನ್ನು ನೆರವಾಗಿ ಫಲಾನುಭವಿಗಳ ಖಾತೆಗೆ ಜುಲೈ ತಿಂಗಳಿನಿಂದ ಸರ್ಕಾರ ಜಮಾ ಮಾಡುತ್ತಿದೆ.
ಇದೀಗ ಮೂರನೇ ಕಂತಿನ ಹಣವು ಕೂಡ ಜಮಾ ಆಗಿದ್ದು ನೀವು ಫಲಾನುಭವಿಗಳಾಗಿದ್ದರೆ ನಿಮ್ಮ ಖಾತೆಗೆ ಹಣ ಬಂದಿದೆಯೋ ಇಲ್ಲವೋ ಎಂಬುದನ್ನು ಕ್ಷಣಮಾತ್ರದಲ್ಲಿ ಮೊಬೈಲ್ (Mobile) ಮೂಲಕವೇ ತಿಳಿದುಕೊಳ್ಳಬಹುದು.
ಗೃಹಜ್ಯೋತಿ ಫ್ರೀ ವಿದ್ಯುತ್ ಪಡೆಯಲು ಇನ್ಮುಂದೆ ಹೊಸ ರೂಲ್ಸ್; ಈ ನಿಯಮ ಪಾಲಿಸಲೇಬೇಕು
ಹೀಗೆ ಮಾಡಿ
• ಮೊದಲಿಗೆ ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ (Official website) ಆಗಿರುವ https://ahara.kar.nic.in/Home/EServices ಗೆ ಭೇಟಿ ನೀಡಿ.
• ಈ ಲಿಂಕ್ ಓಪನ್ ಮಾಡಿದರೆ ಹೋಂ ಪೇಜ್ ಕಾಣಿಸುತ್ತದೆ. ಮೇಲ್ಭಾಗದಲ್ಲಿ ಈ ಸೇವೆಗಳು ಎನ್ನುವ ಆಯ್ಕೆ ಕಾಣುತ್ತೀರಿ.
• ಈ ಸೇವೆಗಳ (Eservice)ಮೇಲೆ ಕ್ಲಿಕ್ ಮಾಡಿದರೆ ಎಡ ಭಾಗದಲ್ಲಿ ಡಿ ಬಿ ಡಿ ಸ್ಟೇಟಸ್ (dbt status) ಮೇಲೆ ಕ್ಲಿಕ್ ಮಾಡಿ.
• ಈಗ ಮೂರು ಲಿಂಕ್ಗಳು ಕಾಣಿಸುತ್ತವೆ. ನಿಮ್ಮ ಜಿಲ್ಲೆ ಯಾವುದು ಎಂಬುದನ್ನು ನೋಡಿ, ಅದರ ಮೇಲಿರುವ ಲಿಂಕ್ ಕ್ಲಿಕ್ ಮಾಡಿ.
• ಬಳಿಕ ಮತ್ತೊಂದು ಪುಟ ತೆರೆದುಕೊಳ್ಳುತ್ತದೆ. ನಿಮ್ಮ ಆರ್ ಸಿ ನಂಬರ್ (RC number) ಯೋಜನೆಯ ಹಣ ಜಮಾ ಆಗಿರುವ ತಿಂಗಳು, ಕ್ಯಾಪ್ಚಾ ನಂಬರ್ ಹಾಕಿ ನಿಮ್ಮ ಖಾತೆಗೆ ಹಣ ಜಮಾ ಆಗಿದೆಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಬಹುದು.
• ಇಲ್ಲಿ ಜುಲೈ, ಆಗಸ್ಟ್ ಹಾಗೂ ಸೆಪ್ಟೆಂಬರ್ ಮೂರು ತಿಂಗಳ ಆಯ್ಕೆ ಕೊಡಲಾಗಿದ್ದು, ನಿಮಗೆ ಬೇಕಾದ ತಿಂಗಳನ್ನು ಆಯ್ಕೆ ಮಾಡಿಕೊಂಡು ಆ ತಿಂಗಳ ನೇರ ಹಣ ವರ್ಗಾವಣೆ ಸ್ಟೇಟಸ್ ತಿಳಿದುಕೊಳ್ಳಬಹುದು.
ಗೃಹಲಕ್ಷ್ಮಿ ಫಲಾನುಭವಿಗಳ ಹೊಸ ಲಿಸ್ಟ್ ಪ್ರಕಟ! ಮುಂದಿನ ಕಂತಿನ ಹಣ ಯಾರಿಗೆಲ್ಲಾ ಸಿಗಲಿದೆ ಗೊತ್ತಾ?
ಲಕ್ಷಾಂತರ ಜನರಿಗೆ ಇಲ್ಲ ಅನ್ನಭಾಗ್ಯ
ಸರ್ಕಾರ ರೇಷನ್ ಕಾರ್ಡ್ ತಿದ್ದುಪಡಿ ಹಾಗೂ ವಿತರಣೆ ಎರಡರಲ್ಲೂ ಬಹಳ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದು, ಫಲಾನುಭವಿ ಅಲ್ಲದೇ ಇರುವವರು ಅನರ್ಹರು ಕೂಡ ಬಿಪಿಎಲ್ ರೇಷನ್ ಕಾರ್ಡ್ ಹೊಂದಿದ್ದರೆ ಅಂತವರ ಕಾರ್ಡ್ ರದ್ದುಪಡಿ ಮಾಡುತ್ತಿದೆ.
ರೇಷನ್ ಕಾರ್ಡ್ ಇಲ್ಲದಿದ್ದರೆ ಕಳೆದ ಎರಡು ತಿಂಗಳು ಹಣ ಬಂದಿದ್ದರು ಈ ತಿಂಗಳು ಹಣ ಬಾರದೇ ಇರುವ ಸಾಧ್ಯತೆ ಇದೆ. ಹಾಗಾಗಿ ನಿಮ್ಮ ರೇಷನ್ ಕಾರ್ಡ್ ಅಸ್ತಿತ್ವದಲ್ಲಿ ಇದೆಯೋ ಇಲ್ಲವೋ ಎಂಬುದನ್ನು ಕೂಡ ಹಳ್ಳಿ ಪಟ್ಟಿಯಲ್ಲಿ (https://ahara.kar.nic.in/Home/EServices) ಚೆಕ್ ಮಾಡಿಕೊಳ್ಳಿ.
Check whether Annabhagya Yojana money has been credited to your account or not