ನಮ್ಮ ರಾಜ್ಯದಲ್ಲಿ ಸದ್ಯ ಅತ್ಯಂತ ಪ್ರಮುಖ ದಾಖಲೆ ಅಂದರೆ ರೇಷನ್ ಕಾರ್ಡ್ (Ration card) ಎನ್ನುವಂತೆ ಆಗಿದೆ. ಇದಕ್ಕೆ ಮುಖ್ಯ ಕಾರಣ ಸರ್ಕಾರದ ಎಲ್ಲಾ ಗ್ಯಾರಂಟಿ ಯೋಜನೆಗಳ (Guarantee schemes) ಲಾಭ ಪಡೆದುಕೊಳ್ಳಲು ರೇಷನ್ ಕಾರ್ಡ್ ಬೇಕು.
ಮೊಟ್ಟಮೊದಲನೆಯದಾಗಿ ಅನ್ನಭಾಗ್ಯ ಯೋಜನೆಯ (Anna Bhagya schemes) ಅಕ್ಕಿಯ ಬದಲು ಹಣ ಸಿಗಬೇಕು ಅಂದ್ರೆ ಬಿಪಿಎಲ್ ಕಾರ್ಡ್ (BPL card) ಹೊಂದಿರಬೇಕು. ಅದೇ ರೀತಿ ಗೃಹಲಕ್ಷ್ಮಿಯ 2000 ಬರಬೇಕು ಅಂದ್ರೆ ಬಿಪಿಎಲ್ ಹಾಗೂ ಎಪಿಎಲ್ ಕಾರ್ಡ್ (APL card) ನಲ್ಲಿ ಮೊದಲ ಹೆಸರು ಗೃಹಿಣಿಯದ್ದೇ ಆಗಿರಬೇಕು.
ಗೃಹಜ್ಯೋತಿ ಫ್ರೀ ವಿದ್ಯುತ್ ಪಡೆಯಲು ಇನ್ಮುಂದೆ ಹೊಸ ರೂಲ್ಸ್; ಈ ನಿಯಮ ಪಾಲಿಸಲೇಬೇಕು
ಇಂಥವರ ರೇಷನ್ ಕಾರ್ಡ್ ರದ್ದು
ಸರ್ಕಾರ ರೇಷನ್ ಕಾರ್ಡ್ ತಿದ್ದುಪಡಿಗೆ (ration card correction) ಅವಕಾಶ ನೀಡಿತ್ತು, ಹಲವು ಜನರು ತಮ್ಮ ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿ ಮಾಡಿಕೊಳ್ಳಲು ಹೋಗಿ ಸಿಕ್ಕಿ ಹಾಕಿಕೊಂಡಿದ್ದಾರೆ. ಸುಳ್ಳು ದಾಖಲೆಗಳನ್ನು ನೀಡಿ ಸರ್ಕಾರದ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಪ್ರಯತ್ನಿಸಿದವರ ರೇಷನ್ ಕಾರ್ಡ್ ರದ್ದುಪಡಿಯಾಗಿದೆ.
ಇಲ್ಲಿಯವರೆಗೆ ಸಲ್ಲಿಕೆಯಾದ 3.71 ಲಕ್ಷ ರೇಷನ್ ಕಾರ್ಡ್ ಗಳಲ್ಲಿ 1.27 ಲಕ್ಷ BPL ಕಾರ್ಡ್ ಗಳ ತಿದ್ದುಪಡಿಗೆ ಒಪ್ಪಿಗೆ ನೀಡಿದೆ ಸರ್ಕಾರ. ಆದ್ರೆ 93,000 ಬಿಪಿಎಲ್ ಕಾರ್ಡ್ ಅರ್ಜಿಗಳು ತಿರಸ್ಕರಿಸಲ್ಪಟ್ಟಿವೆ (Ration Card rejected).
ಗೃಹಲಕ್ಷ್ಮಿ ಫಲಾನುಭವಿಗಳ ಹೊಸ ಲಿಸ್ಟ್ ಪ್ರಕಟ! ಮುಂದಿನ ಕಂತಿನ ಹಣ ಯಾರಿಗೆಲ್ಲಾ ಸಿಗಲಿದೆ ಗೊತ್ತಾ?
ರೇಷನ್ ಕಾರ್ಡ್ ನಲ್ಲಿ ವಂಚನೆ!
ಸರ್ಕಾರದಿಂದ ಸಿಗುವ 2,000ಗಳನ್ನು ಪಡೆದುಕೊಳ್ಳಲು ಒಂದೇ ಮನೆಯಲ್ಲಿ ಇರುವ ಅತ್ತೆ ಸೊಸೆ ಬೇರೆ ಬೇರೆ ರೇಷನ್ ಕಾರ್ಡ್ ಮಾಡಿಕೊಳ್ಳಲು ಪ್ರಯತ್ನಿಸಿರುವುದು, ರಕ್ತ ಸಂಬಂಧ ಅಲ್ಲದವರನ್ನು ಅಂದರೆ ಸಂಬಂಧಿಕರನ್ನು ಕೂಡ ರೇಷನ್ ಕಾರ್ಡ್ ನಲ್ಲಿ ಹೆಸರು ಸೇರಿಸಲು ಪ್ರಯತ್ನಿಸಿರುವುದು ಮೊದಲಾದ ವಂಚನೆ ಪ್ರಕರಣಗಳು ಸರ್ಕಾರದ ಗಮನಕ್ಕೆ ಬಂದಿದ್ದು, ಅಂತಹ ರೇಷನ್ ಕಾರ್ಡ್ ಗಳ ತಿದ್ದುಪಡಿ ತಿರಸ್ಕಾರ ಮಾಡಲಾಗಿದೆ.
ಮತ್ತೆ ಸಿಗುತ್ತದೆಯೇ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ?
ರೇಷನ್ ಕಾರ್ಡ್ ತಿದ್ದುಪಡಿ ಮಾತ್ರವಲ್ಲದೆ ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳಲು ಕೂಡ ಜನ ಕಾಯುತ್ತಿದ್ದಾರೆ. ಈಗ 2 ಲಕ್ಷಕ್ಕೂ ಹೆಚ್ಚಿನ ಅರ್ಜಿಗಳು ಸರ್ಕಾರಕ್ಕೆ ಸೇರಿದೆ. ಇವುಗಳ ಪರಿಶೀಲನೆ ಕೂಡ ನಡೆಯುತ್ತಿದ್ದು ಸದ್ಯದಲ್ಲಿಯೇ ಫಲಾನುಭವಿಗಳಿಗೆ ಹೊಸ ರೇಷನ್ ಕಾರ್ಡ್ ಸರ್ಕಾರ ನೀಡಲಿದೆ.
ಇಂತವರಿಗೆ ಮಾತ್ರ ಸಿಗುತ್ತೆ ಅನ್ನಭಾಗ್ಯ ಯೋಜನೆ ಹಣ! ಸರ್ಕಾರ ಬಿಡುಗಡೆ ಮಾಡಿದ ಹೊಸ ಲಿಸ್ಟ್
ಆದರೆ ತಿದ್ದುಪಡಿ ಸಮಯದಲ್ಲಿ ವಂಚನೆ ಮಾಡಿರುವ ರೇಷನ್ ಕಾರ್ಡ್ ಮಾತ್ರ ಹಿಂತಿರುಗಿ ಸಿಗುವುದಿಲ್ಲ ಅಂತವರು ಮತ್ತೆ ಅರ್ಜಿ ಹಾಕಲು ಸಾಧ್ಯವಿಲ್ಲ. ಹೊಸ ರೇಷನ್ ಕಾರ್ಡ್ ಫಲಾನುಭವಿಗಳಿಗೆ ನೀಡಿದ ಬಳಿಕ ಮತ್ತೆ, ಹೊಸ ಅರ್ಜಿಗಳನ್ನು ಕೂಡ ಸ್ವೀಕಾರ ಮಾಡಲಾಗುವುದು ಎಂದು ಸರ್ಕಾರ ತಿಳಿಸಿದೆ. ರೇಷನ್ ಕಾರ್ಡ್ ಇಲ್ಲದೆ ಇರುವವರಿಗೆ ಗೃಹಲಕ್ಷ್ಮಿ ಯೋಜನೆಯ ಹಣವು ಕೂಡ ಬರುವುದಿಲ್ಲ.
More than 1 lakh applications rejected, Such people will not get Gruha Lakshmi money anymore
Ramya M from Bengaluru, She is a writer with more than five years of professional experience. Graduate from Karnataka University and has contributed her expertise to various Kannada news networks. She Loves to Write engaging articles covering a wide range of topics, including technology, business news, and lifestyle.
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.