ಇಂತವರಿಗೆ ಮಾತ್ರ ಸಿಗುತ್ತೆ ಅನ್ನಭಾಗ್ಯ ಯೋಜನೆ ಹಣ! ಸರ್ಕಾರ ಬಿಡುಗಡೆ ಮಾಡಿದ ಹೊಸ ಲಿಸ್ಟ್
ಅನ್ನಭಾಗ್ಯ ಯೋಜನೆ (Annabhagya Scheme) ಸಿಗಬೇಕು ಅಥವಾ ಅನ್ನಭಾಗ್ಯ ಯೋಜನೆಯಲ್ಲಿ ಅಕ್ಕಿಯ ಬದಲು ಹಣ ಬೇಕು ಅಂದ್ರೆ ಬಿಪಿಎಲ್ ಕಾರ್ಡ್ (BPL Ration Card) ಹೊಂದಿರುವುದು ಕಡ್ಡಾಯವಾಗಿದೆ.
ಅನ್ನಭಾಗ್ಯ ಯೋಜನೆಯ (Annabhagya Scheme) ಅಡಿಯಲ್ಲಿ ಈಗಾಗಲೇ ಅಕ್ಕಿಯ ಬದಲು ಹಣ ವರ್ಗಾವಣೆ ಮಾಡಿರುವ ರಾಜ್ಯ ಸರ್ಕಾರ ಇದೀಗ ಮೂರನೇ ಕಂತಿನ ಹಣವನ್ನು ಬಿಡುಗಡೆ ಮಾಡಲಿದೆ.
ಕಳೆದ ಎರಡು ತಿಂಗಳಿನಲ್ಲಿ ಹಣ ಬಂದರೂ ಕೆಲವರಿಗೆ ಈ ತಿಂಗಳು ಹಣ ಬರುವುದಿಲ್ಲ. ಕಾರಣ ಹಲವರ ರೇಷನ್ ಕಾರ್ಡ್ (Ration Card) ರದ್ದಾಗಿದೆ. ಇನ್ನು ಕಳೆದ ತಿಂಗಳು ಬಾರದೆ ಇದ್ದವರಿಗೂ ಕೂಡ ಈ ತಿಂಗಳು ಹಣ ಜಮಾ ಆಗಲಿದೆ. ಯಾಕಂದ್ರೆ ಕೆಲವರ ರೇಷನ್ ಕಾರ್ಡ್ ನಲ್ಲಿ ಅಗತ್ಯವಿರುವ ತಿದ್ದುಪಡಿ ಕೂಡ ಮಾಡಿಕೊಳ್ಳಲಾಗಿದೆ.
ರಾಜ್ಯ ಸರ್ಕಾರ ಹೊಸ ಫಲಾನುಭವಿಗಳ ಪಟ್ಟಿ ಬಿಡುಗಡೆ ಮಾಡಿದ್ದು ಈ ತಿಂಗಳಿನಲ್ಲಿ ಅಕ್ಕಿಯ ಬದಲು ಹಣವನ್ನು ಯಾವೆಲ್ಲ ಫಲಾನುಭವಿಗಳು ಪಡೆದುಕೊಳ್ಳಬಹುದು ಎಂಬುದನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕೃತ ವೆಬ್ಸೈಟ್ https://ahara.kar.nic.in/status1/status_of_dbt.aspx ನಲ್ಲಿ ಡಿಬಿಟಿ ಸ್ಟೇಟಸ್ ಚೆಕ್ (DBT Status Check) ಮಾಡಿಕೊಳ್ಳಬಹುದು.
ಹಬ್ಬದ ಬಂಪರ್ ಗಿಫ್ಟ್; ಈ ಜಿಲ್ಲೆಯವರಿಗೆ ಸಿಗಲಿದೆ ಗೃಹಲಕ್ಷ್ಮಿ ಯೋಜನೆ ಸೇರಿ ಒಟ್ಟಾರೆ 4 ಸಾವಿರ
ಯಾವಾಗ ಬರುತ್ತೆ? ಮೂರನೇ ಕಂತು!
ಎಲ್ಲರಿಗೂ ಗೊತ್ತಿರುವ ಹಾಗೆ ಗೃಹಲಕ್ಷ್ಮಿ ಯೋಜನೆಯ (Gruha Lakshmi scheme) ಎರಡು ಸಾವಿರ ರೂಪಾಯಿ ಎಪಿಎಲ್ ಕಾರ್ಡ್ (APL card) ಹೊಂದಿರುವ ಮಹಿಳೆಯರಿಗೂ ಸಿಗುತ್ತೆ, ಆದರೆ ಅನ್ನಭಾಗ್ಯ ಯೋಜನೆ (Annabhagya Scheme) ಸಿಗಬೇಕು ಅಥವಾ ಅನ್ನಭಾಗ್ಯ ಯೋಜನೆಯಲ್ಲಿ ಅಕ್ಕಿಯ ಬದಲು ಹಣ ಬೇಕು ಅಂದ್ರೆ ಬಿಪಿಎಲ್ ಕಾರ್ಡ್ (BPL Ration Card) ಹೊಂದಿರುವುದು ಕಡ್ಡಾಯವಾಗಿದೆ.
ಪ್ರತಿ ತಿಂಗಳು 5 ಕೆ.ಜಿ ಅಕ್ಕಿಯ ಬದಲು ಹಣವನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡಲು ಸುಮಾರು 605 ಕೋಟಿ ರೂಪಾಯಿಗಳನ್ನು ಸರ್ಕಾರ ಮೀಸಲಾಗಿಡಲಾಗಿದೆ. ಇನ್ನು ಮೂರನೆಯ ಕಂತು (3rd installment l) ಇನ್ನು ಜಮಾ ಆಗಿಲ್ಲ. ಯಾರಿಗೆಲ್ಲ ಹಣ ಬರಬಹುದು ಅಥವಾ ಬಾರದೇ ಇರಬಹುದು ಎನ್ನುವ ಕುತೂಹಲ ಜನರಲ್ಲಿ ಮನೆ ಮಾಡಿದೆ.
ಹಸು, ಎಮ್ಮೆ ಖರೀದಿಗೆ 75% ಸಬ್ಸಿಡಿ ಘೋಷಿಸಿದ ಸರ್ಕಾರ; ಯೋಜನೆಗೆ ಇಂದೇ ಅಪ್ಲೈ ಮಾಡಿ
ಮೂರನೇ ಕಂತು ಬಿಡುಗಡೆ ಆಗುತ್ತಾ?
ಹೌದು ಸದ್ಯ ಹಲವರಲ್ಲಿ ಈ ಗೊಂದಲ ಇದ್ದೆ ಇದೆ. ಕೇಂದ್ರ ಸರ್ಕಾರದ 5 ಕೆಜಿ ಅಕ್ಕಿ ಹಾಗೂ ರಾಜ್ಯ ಸರ್ಕಾರ 5 ಕೆ.ಜಿ ಅಕ್ಕಿಯ ಬದಲು ಹಣ ಕೊಡುತ್ತಿತ್ತು. ಆದರೆ ಈ ಬಾರಿ ಹಣದ ಬದಲು ಪೌಷ್ಟಿಕ ಆಹಾರವನ್ನು ಕೊಟ್ಟರೆ ಒಳ್ಳೆಯದು ಎಂದು ಸಚಿವ ಚೆಲುವರಾಯಸ್ವಾಮಿ ಅವರು ವಿಧಾನಸೌಧದಲ್ಲಿ ತಮ್ಮ ಅಭಿಪ್ರಾಯವನ್ನು ತಿಳಿಸಿದರು.
ಸದ್ಯದಲ್ಲಿಯೇ ಸಿಗಲಿದೆ ಹೊಸ ಬಿಪಿಎಲ್ ರೇಷನ್ ಕಾರ್ಡ್; ಇಲ್ಲಿದೆ ಸರ್ಕಾರದ ಹೊಸ ಅಪ್ಡೇಟ್
ಕಡಲೆಕಾಯಿ ಎಣ್ಣೆ, ಜೋಳ, ರಾಗಿ ಇಂತಹ ಪೌಷ್ಟಿಕ ಆಹಾರಗಳನ್ನು (nutrition food) ಕೊಡಬಹುದು, ಅಕ್ಕಿಯ ಬದಲು ಹಣ ಕೊಡುವುದರ ಯೋಚನೆ ಕೈ ಬಿಟ್ಟು ಹಣದ ಬದಲು ಪೌಷ್ಟಿಕ ಆಹಾರ ಕೊಟ್ಟರೆ ಹೆಚ್ಚು ಜನರಿಗೆ ಅನುಕೂಲವಾಗುತ್ತದೆ ಎಂದು ಅವರು ತಿಳಿಸಿದರು.
ಆದರೆ ಸದ್ಯ ಈ ಬಗ್ಗೆ ಸ್ಪಷ್ಟನೆಯನ್ನು ಸರ್ಕಾರ (Karnataka Government) ಕೊಟ್ಟಿಲ್ಲ ಹಾಗಾಗಿ ಮೂಲಗಳ ಪ್ರಕಾರ ಇನ್ನು ಮೂರು ದಿನಗಳ ಒಳಗೆ ಫಲಾನುಭವಿಗಳ ಖಾತೆಗೆ 5 ಕೆ.ಜಿ ಅಕ್ಕಿಯ ಬದಲು ಪ್ರತಿ ಕೆಜಿಗೆ 34 ರೂಪಾಯಿಗಳಂತೆ 5 ಕೆಜಿ ಅಕ್ಕಿಗೆ 170ಗಳಂತೆ ಹಣವನ್ನು ನೇರವಾಗಿ ಖಾತೆಗೆ (Bank Account) ಜಮಾ ಮಾಡಲಾಗುವುದು ಎಂದು ಹೇಳಲಾಗಿದೆ.
ಸದ್ಯ ಅಕ್ಕಿ ಹೊಂದಿಸುವಲ್ಲಿ ರಾಜ್ಯ ಸರ್ಕಾರ ಯಶಸ್ವಿಯಾಗಿಲ್ಲ. ಹಾಗಾಗಿ ಈ ತಿಂಗಳಿನಿಂದ ಪೌಷ್ಟಿಕ ಆಹಾರ ಅಥವಾ ಅಕ್ಕಿಯ ಬದಲು ಹಣ ಜನರ ಖಾತೆಗೆ (Money Transfer) ನೇರವಾಗಿ (DBT) ವರ್ಗಾವಣೆ ಆಗಲಿದೆ.
ಬದಲಾದ ಗೃಹಜ್ಯೋತಿ ಯೋಜನೆ ನಿಯಮ; ಇನ್ಮುಂದೆ ಇವರಿಗೆ ಸಿಗೋಲ್ಲ ಜೀರೋ ವಿದ್ಯುತ್ ಬಿಲ್!
Annabhagya Yojana money is only Deposit to such people, New list released by Govt