ಸದ್ಯದಲ್ಲಿಯೇ ಸಿಗಲಿದೆ ಹೊಸ ಬಿಪಿಎಲ್ ರೇಷನ್ ಕಾರ್ಡ್; ಇಲ್ಲಿದೆ ಸರ್ಕಾರದ ಹೊಸ ಅಪ್ಡೇಟ್

ಹಲವರು ರೇಷನ್ ಕಾರ್ಡ್ ತಿದ್ದುಪಡಿ (Ration Card Correction) ಮಾಡಿಸಿಕೊಂಡಿದ್ದಾರೆ. ಇನ್ನು ತಿದ್ದುಪಡಿಯ ಹಂತದಲ್ಲಿ ಹಲವು ವಂಚನೆ ಪ್ರಕರಣಗಳು ಬೆಳಕಿಗೆ ಬಂದಿದ್ದು ಅಂತಹ ರೇಷನ್ ಕಾರ್ಡ್ ರದ್ದತಿ (Cancelation) ಮಾಡುವುದಕ್ಕೆ ಸರ್ಕಾರ ಆದೇಶ ನೀಡಿದೆ.

ರಾಜ್ಯ ಸರ್ಕಾರ (Karnataka Government) ಜಾರಿಗೆ ತಂದಿರುವ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬೇಕು ಅಂದ್ರೆ ಮುಖ್ಯವಾಗಿ ಬೇಕಾಗಿರುವ ದಾಖಲೆ ರೇಷನ್ ಕಾರ್ಡ್ (ration card) ಆಗಿದೆ.

ಅದರಲ್ಲೂ ಬಿಪಿಎಲ್ ಪಡಿತರ ಕಾರ್ಡ್ (BPL card) ಹೊಂದಿರುವವರಿಗೆ ಹೆಚ್ಚಿನ ಬೆನಿಫಿಟ್ ಸಿಗಲಿದೆ. ಹೊಸ ರೇಷನ್ ಕಾರ್ಡ್ ಮಾಡಿಸಿಕೊಳ್ಳಲು ಕೂಡ ಜನರು ಮುಂದಾಗಿದ್ದಾರೆ. ಸದ್ಯ ಈ ಬಗ್ಗೆ ಸರ್ಕಾರ ಮಹತ್ವದ ನಿರ್ಧಾರ ಮಾಡಿದ್ದು, ಇದರಿಂದ ಹಲವರಿಗೆ ಪ್ರಯೋಜನ ಆಗಲಿದೆ ಎನ್ನಬಹುದು.

ಹೊಸದಾಗಿ ಮನೆ ಕಟ್ಟುವವರಿಗೆ ಮಹತ್ವದ ಮಾಹಿತಿ; ರಾತ್ರೋರಾತ್ರಿ ಹೊಸ ನಿಯಮ ಜಾರಿ

ಸದ್ಯದಲ್ಲಿಯೇ ಸಿಗಲಿದೆ ಹೊಸ ಬಿಪಿಎಲ್ ರೇಷನ್ ಕಾರ್ಡ್; ಇಲ್ಲಿದೆ ಸರ್ಕಾರದ ಹೊಸ ಅಪ್ಡೇಟ್ - Kannada News

ತಿದ್ದುಪಡಿ ಹಂತದಲ್ಲಿ ರದ್ಧತಿ;

ರೇಷನ್ ಕಾರ್ಡ್ ಅನ್ನು ಅದರಲ್ಲೂ ಮುಖ್ಯವಾಗಿ ಬಿಪಿಎಲ್ ಕಾರ್ಡ್ ಅನ್ನು ಬಡತನ ರೇಖೆಗಿಂತ (below poverty level) ಕೆಳಗಿನವರಿಗೆ ನೀಡಲಾಗುತ್ತೆ ಆದರೆ ಸರ್ಕಾರದ ಕಣ್ಣಿಗೆ ಮಣ್ಣೆರಚಿ ಸಾಕಷ್ಟು ಜನ ಅನುಕೂಲ ಇದ್ದವರು ಕೂಡ ಕಾರ್ಡ್ ಹೊಂದಿದ್ದು ಅದರಲ್ಲಿ ಹಲವು ಲೋಪದೋಷಗಳು ಇದ್ದಿದ್ದು ಸರ್ಕಾರದ ಗಮನಕ್ಕೆ ಬಂದಿದೆ.

ಗೃಹಲಕ್ಷ್ಮಿ ಯೋಜನೆಯ (Gruha Lakshmi Scheme) 2,000ಗಳನ್ನು ಉಚಿತವಾಗಿ ಪಡೆದುಕೊಳ್ಳಲು ರೇಷನ್ ಕಾರ್ಡ್ ನಲ್ಲಿ ಮೊದಲ ಹೆಸರು ಮಹಿಳೆಯದ್ದೇ ಆಗಬೇಕು ಎನ್ನುವ ನಿಯಮ ಇದೆ.

ಹಲವರು ರೇಷನ್ ಕಾರ್ಡ್ ತಿದ್ದುಪಡಿ (Ration Card Correction) ಮಾಡಿಸಿಕೊಂಡಿದ್ದಾರೆ. ಇನ್ನು ತಿದ್ದುಪಡಿಯ ಹಂತದಲ್ಲಿ ಹಲವು ವಂಚನೆ ಪ್ರಕರಣಗಳು ಬೆಳಕಿಗೆ ಬಂದಿದ್ದು ಅಂತಹ ರೇಷನ್ ಕಾರ್ಡ್ ರದ್ದತಿ (Cancelation) ಮಾಡುವುದಕ್ಕೆ ಸರ್ಕಾರ ಆದೇಶ ನೀಡಿದೆ.

ಇನ್ಮುಂದೆ ಆಧಾರ್ ಇಲ್ಲದೇ ಹೋದ್ರು ಈ ದಾಖಲೆ ಎಲ್ಲದಕ್ಕೂ ಬೇಕೇ ಬೇಕು; ಹೊಸ ನಿಯಮ ಜಾರಿ!

ರೇಷನ್ ಕಾರ್ಡ್ ಅರ್ಜಿ ಪರಿಶೀಲನೆ

BPL Ration Cardರೇಷನ್ ಕಾರ್ಡ್ ಹೊಂದಿದ್ದರೆ ಸರ್ಕಾರದ ಬೆನಿಫಿಟ್ ಸಿಗುತ್ತೆ ಎಂದು ಅರಿತ ಹಲವರು ವಂಚನೆ ಮಾಡುತ್ತಿದ್ದಾರೆ, ಇದು ಸರ್ಕಾರದ ಗಮನಕ್ಕೂ ಬಂದಿದೆ. ಹಾಗಾಗಿ ಈಗಾಗಲೇ ಸಂದಾಯವಾಗಿರುವ ಅರ್ಜಿ ಪರಿಶೀಲನೆ ಕೂಡ ನಡೆಯುತ್ತಿದೆ.

ಅದರಿಂದ ಇನ್ನು ಮುಂದೆ ಗ್ರಾಮ ಪಂಚಾಯಿತಿ (gram Panchayat) ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಮನೆ ಮನೆಗೆ ತೆರಳಿ ಅರ್ಜಿದಾರರ ಪರಿಸ್ಥಿತಿಯನ್ನು ಪರಿಶೀಲಿಸಿ ನಂತರವಷ್ಟೇ ಬಿಪಿಎಲ್ ಕಾರ್ಡ್ ನೀಡಲಾಗುವುದು ಎಂದು ಸಚಿವ ಕೆ ಹೆಚ್ ಮುನಿಯಪ್ಪ (K.H Muniyappa) ತಿಳಿಸಿದ್ದಾರೆ.

ಅನ್ನಭಾಗ್ಯ ಯೋಜನೆಯಲ್ಲಿ ದೊಡ್ಡ ಬದಲಾವಣೆ, ರೇಷನ್ ಕಾರ್ಡ್ ಇರೋರಿಗೆ ಬಿಗ್ ಬೆನಿಫಿಟ್

ಹೊಸ ಅರ್ಜಿ ಸಲ್ಲಿಸಲು ಅವಕಾಶ

ಇನ್ನು ಈಗಾಗಲೇ ಸರ್ಕಾರದ ಬಳಿ ಎರಡು ಲಕ್ಷಕ್ಕೂ ಅಧಿಕ ರೇಷನ್ ಕಾರ್ಡ್ ಅರ್ಜಿಗಳು ಇವೆ, ಇವುಗಳ ಪರಿಶೀಲನೆ ಕೂಡ ನಡೆಯುತ್ತಿದ್ದು ಅರ್ಹರಿಗೆ ಮಾತ್ರ ಈ ಬಾರಿ ರೇಷನ್ ಕಾರ್ಡ್ ವಿತರಣೆ ಮಾಡಲಾಗುವುದು ಎಂದು ಸರ್ಕಾರ ತಿಳಿಸಿದೆ

ಇದರ ಬೆನ್ನಲ್ಲೇ ಸಾಕಷ್ಟು ಜನ ಹೊಸದಾಗಿ ಅರ್ಜಿ ಸಲ್ಲಿಸಲು ಕಾಯುತ್ತಿದ್ದಾರೆ, ಇಂಥವರಿಗೂ ಸದ್ಯದಲ್ಲೇ ಅವಕಾಶ ಮಾಡಿಕೊಡಲಾಗುವುದು ಆದರೆ ಈಗಾಗಲೇ ಸಲ್ಲಿಕೆ ಆಗಿರುವ ಅರ್ಜಿಗಳನ್ನು ಪರಿಶೀಲಿಸಿ ಅವುಗಳನ್ನು ಫಲಾನುಭವಿಗಳಿಗೆ ನೀಡಿದ ನಂತರ ಹೊಸ ಅರ್ಜಿಗಳನ್ನು ತೆಗೆದುಕೊಳ್ಳಲಾಗುವುದು ಎಂದು ಸರ್ಕಾರದ ಮೂಲದಿಂದ ಸಿಕ್ಕಿರುವ ಮಾಹಿತಿ.

ರೇಷನ್ ಕಾರ್ಡ್ ನಲ್ಲಿ ಒಂದೇ ಮನೆಯಲ್ಲಿದ್ದು ಬೇರೆ ಬೇರೆ ರೇಷನ್ ಕಾರ್ಡ್ ಮಾಡಿಸುವುದು ಅಥವಾ ರೇಷನ್ ಕಾರ್ಡ್ ನಲ್ಲಿ ರಕ್ತ ಸಂಬಂಧಿಗಳನ್ನು ಹೊರತುಪಡಿಸಿ ಸಂಬಂಧಿಕರ ಹೆಸರುಗಳನ್ನು ಕೂಡ ಸೇರಿಸುವುದು, ಈ ರೀತಿಯ ವಂಚನೆಗಳು ನಡೆಯುತ್ತಿದೆ. ಹಾಗಾಗಿ ಇಂತಹ ರೇಷನ್ ಕಾರ್ಡ್ ತಿದ್ದುಪಡಿಗೆ ಬಂದಾಗ ಅವುಗಳನ್ನು ರದ್ದು ಮಾಡಲಾಗಿದೆ.

Here is the latest update from Govt for Issuing New BPL Ration Card

Follow us On

FaceBook Google News

Here is the latest update from Govt for Issuing New BPL Ration Card