ಇನ್ಮುಂದೆ ಆಧಾರ್ ಇಲ್ಲದೇ ಹೋದ್ರು ಈ ದಾಖಲೆ ಎಲ್ಲದಕ್ಕೂ ಬೇಕೇ ಬೇಕು; ಹೊಸ ನಿಯಮ ಜಾರಿ!

Story Highlights

ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಜನನ (Birth certificate) ಹಾಗೂ ಮರಣ ಹೆಸರುಗಳ (Death Certificate) ನೋಂದಣಿ ಕಡಿಮೆಯಾಗಿಬಿಟ್ಟಿದೆ.

ನಮ್ಮ ದೇಶದಲ್ಲಿ ಪ್ರತಿಯೊಬ್ಬ ನಾಗರಿಕನ ಕೈಯಲ್ಲಿ ಆಧಾರ್ ಕಾರ್ಡ್ (Aadhaar card) ಇರಲೇಬೇಕು. ಇದೇ ಮುಖ್ಯವಾಗಿರುವ ದಾಖಲೆ ಆಗಿದೆ. ಯಾವುದೇ ಹಣಕಾಸು ವ್ಯವಹಾರ ಮಾಡುವುದಿದ್ದರೂ ಅಥವಾ ಇನ್ನಿತರ ಯಾವುದೇ ಕೆಲಸಕ್ಕೂ ಕೂಡ ಆಧಾರ್ ಕಾರ್ಡ್ ಅನ್ನು ಮೂಲ ಆಧಾರವಾಗಿಟ್ಟುಕೊಳ್ಳಲೇಬೇಕು.

ಇದರ ಜೊತೆಗೆ ಪ್ಯಾನ್ ಕಾರ್ಡ್ (PAN Card) ಕೂಡ ಬಹಳ ಮುಖ್ಯವಾಗಿರುವ ದಾಖಲೆ ಆಗಿದೆ. ಆದರೆ ಈಗ ಕೇಂದ್ರ ಸರ್ಕಾರ (Central government) ಮಹತ್ವದ ಘೋಷಣೆ ಒಂದನ್ನು ಹೊರಡಿಸಿದ್ದು ಇನ್ನು ಮುಂದೆ ಆಧಾರ್ ಕಾರ್ಡ್ ಗಿಂತಲೂ ಮಹತ್ವದ ಒಂದು ದಾಖಲೆ ನಿಮ್ಮ ಬಳಿ ಇರಲೇಬೇಕು.

ಬದಲಾದ ಗೃಹಜ್ಯೋತಿ ಯೋಜನೆ ನಿಯಮ; ಇನ್ಮುಂದೆ ಇವರಿಗೆ ಸಿಗೋಲ್ಲ ಜೀರೋ ವಿದ್ಯುತ್ ಬಿಲ್!

ಜನನ ಪ್ರಮಾಣ ಪತ್ರಕ್ಕೆ ಹೆಚ್ಚು ಪ್ರಾಮುಖ್ಯತೆ: (Birth certificate is important)

ಅಕ್ಟೋಬರ್ 1ರಿಂದಲೇ ಈ ನಿಯಮ ಜಾರಿಗೆ ಬಂದಿದೆ. ಇನ್ನು ಮುಂದೆ ಯಾವುದೇ ವ್ಯವಹಾರಕ್ಕೂ ಕೂಡ ನೀವು ನಿಮ್ಮ ಜನನ ಪ್ರಮಾಣ ಪತ್ರವನ್ನು (Birth certificate) ಜೊತೆಯಲ್ಲಿ ಇಟ್ಟುಕೊಂಡಿರಬೇಕು, ಭಾರತೀಯ ನಾಗರಿಕನ ಬಹಳ ಮಹತ್ವದ ಹಾಗೂ ಪ್ರಮುಖವಾದ ದಾಖಲೆ ಇನ್ನು ಮುಂದೆ ಆಧಾರ್ ಬದಲು ಜನನ ಪ್ರಮಾಣ ಪತ್ರ ಆಗಲಿದೆ.

ಜನನ ಮತ್ತು ಮರಣ ನೋಂದಣಿ ಇನ್ನು ಮುಂದೆ ಕಡ್ಡಾಯವಾಗಲಿದೆ. ಡ್ರೈವಿಂಗ್ ಲೈಸೆನ್ಸ್ (Driving License), ಶಾಲಾ ಕಾಲೇಜುಗಳಿಗೆ (School and College) ಸೇರಿಕೊಳ್ಳುವುದು ಮದುವೆ ಸರ್ಟಿಫಿಕೇಟ್ (Marriage Certificate), ಆಧಾರ್ ಕಾರ್ಡ್ (Aadhaar Card) ಮಾಡಿಸಲು, ಹಣಕಾಸಿನ ವ್ಯವಹಾರ ಹೀಗೆ ಪ್ರತಿಯೊಂದುಕ್ಕೂ ಇನ್ನು ಮುಂದೆ ಜನನ ಪ್ರಮಾಣ ಪತ್ರವನ್ನು ಮುಖ್ಯ ದಾಖಲೆಯಾಗಿ ತೋರಿಸಲೇಬೇಕು.

ಗೃಹಲಕ್ಷ್ಮಿ ಆಯ್ತು, ಈಗ ಹಿರಿಯ ನಾಗರಿಕರಿಗೂ ಬರುತ್ತೆ ₹2000 ರೂಪಾಯಿ! ಗುಡ್ ನ್ಯೂಸ್ ಕೊಟ್ಟ ಸಿಎಂ ಸಿದ್ದರಾಮಯ್ಯ

ಜನನ ಪ್ರಮಾಣ ಪತ್ರ ಕಡ್ಡಾಯ:

Birth Certificateಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಜನನ (Birth certificate) ಹಾಗೂ ಮರಣ ಹೆಸರುಗಳ (Death Certificate) ನೋಂದಣಿ ಕಡಿಮೆಯಾಗಿಬಿಟ್ಟಿದೆ. ಮಗು ಹುಟ್ಟಿದ ತಕ್ಷಣ ಹೆಸರು ನೋಂದಾಯಿಸಿಕೊಳ್ಳುವ ವಿಷಯದಲ್ಲಿ ಪಾಲಕರು ನಿರಾಸಕ್ತಿ ತೋರಿಸುತಿದ್ದಾರೆ.

ಇದು ದೇಶದ ಜನಸಂಖ್ಯೆಯಿಂದ ಹಿಡಿದು ಆರ್ಥಿಕ ಪರಿಸ್ಥಿತಿಯ ಮೇಲು ಕೂಡ ಪರಿಣಾಮ ಬೀರಲಿದೆ. ಹಾಗಾಗಿ ಆಧಾರ್ ಕಾರ್ಡ್ ನಂತೆಯೇ ಜನನ ಪ್ರಮಾಣ ಪತ್ರವನ್ನು ಹೊಂದಿರುವುದು ಬಹಳ ಕಡ್ಡಾಯವಾಗಿದೆ.

ಕಡೆಗೂ ಬಂದಿಲ್ವಾ ಗೃಹಲಕ್ಷ್ಮಿ ಮೊದಲ ಕಂತಿನ ಹಣ! ಗೃಹಿಣಿಯರೇ ಇಲ್ಲಿದೆ ಹೊಸ ಅಪ್ಡೇಟ್

ಸುಲಭವಾಗಿ ನೋಂದಾಯಿಸಿಕೊಳ್ಳಿ:

ಮಗು ಹುಟ್ಟಿದ ತಕ್ಷಣ ಬರ್ತ್ ಸರ್ಟಿಫಿಕೇಟ್ ಅನ್ನು ಆನ್ಲೈನ್ (Online) ಮೂಲಕವೂ ಕೂಡ ಮಾಡಿಕೊಳ್ಳಬಹುದು. ಅಥವಾ ಸಂಬಂಧಪಟ್ಟ ಇಲಾಖೆಯಲ್ಲಿ ಆಸ್ಪತ್ರೆಯಲ್ಲಿ ಕೊಟ್ಟ ಮಗು ಹುಟ್ಟಿದ ಮಾಹಿತಿಯ ಆಧಾರದ ಮೇಲೆ ಜನನ ಪ್ರಮಾಣ ಪತ್ರ ಮಾಡಿಸಿಕೊಳ್ಳಬಹುದು.

ಮಗು ಹುಟ್ಟಿದ 21 ದಿನಗಳ ಒಳಗೆ ಮಾಡಿಸಬೇಕು. ಈಗಾಗಲೇ ಸಾಕಷ್ಟು ಜನ ಜನನ ಪ್ರಮಾಣ ಪತ್ರವನ್ನು ಹೊಂದಿಲ್ಲ. ಇದನ್ನು ಹೇಗೆ ಪಡೆಯುವುದು ಎಂಬುದರ ಬಗ್ಗೆ ಸರ್ಕಾರ ಇನ್ನು ಸ್ಪಷ್ಟನೆ ನೀಡಿಲ್ಲ

ಯಾಕೆಂದರೆ ಹುಟ್ಟಿದ ಮಗುವಿನ ಜನನ ಪ್ರಮಾಣ ಪತ್ರವನ್ನು ಸುಲಭವಾಗಿ ಆನ್ಲೈನ್ ನಲ್ಲಿ ಪಡೆದುಕೊಳ್ಳಬಹುದು ಆದರೆ ಎಲ್ಲರ ಜನನ ಪ್ರಮಾಣ ಪತ್ರ ಆನ್ ಲೈನ್ ನಲ್ಲಿ ಪಡೆದುಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಇದಕ್ಕೆ ಯಾವ ರೀತಿಯ ಪರಿಹಾರವನ್ನು ಸರ್ಕಾರ ತರಲಿದೆ ಎಂಬುದನ್ನು ಕಾದು ನೋಡಬೇಕು.

Birth certificate is important and Mandatory for These Works

Related Stories