ಗೃಹಲಕ್ಷ್ಮಿ ಯೋಜನೆಯ (Gruha Lakshmi scheme) ಹಣ ತಮ್ಮ ಖಾತೆಗೂ (Bank Account) ಬರಬೇಕು ಎನ್ನುವ ಮಹಿಳೆಯರ ನಿರೀಕ್ಷೆ ಹೆಚ್ಚಾಗಿದೆ. ಇದಕ್ಕಾಗಿ ಶತಾಯಗತಾಯ ಹೇಗಾದರೂ ಹಣ ಪಡೆಯಬೇಕು ಅಂತ ತಮ್ಮ ಖಾತೆಯಲ್ಲಿ ಇರುವ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದಕ್ಕೆ ದಿನವು ಬ್ಯಾಂಕ್ ನಿಂದ ಬ್ಯಾಂಕ್ ಗೆ ಸೇವಾ ಕೇಂದ್ರಗಳಿಗೆ ಮಹಿಳೆಯರು ಹಾಗೂ ಅವರ ಮನೆಯವರು ಅಲೆದಾಡುತ್ತಿದ್ದಾರೆ.

ಸರ್ಕಾರ ತಿಳಿಸಿರುವ ಪ್ರಕಾರ ಈಗಾಗಲೇ ಸುಮಾರು 65% ಮಹಿಳೆಯರಿಗೆ ಮೊದಲ ಕಂತಿನ ಹಣ ಜಮಾ (Money Deposit) ಆಗಿದೆ ಆದರೆ ಇನ್ನೂ 35% ನಷ್ಟು ಮಹಿಳೆಯರಿಗೆ ಹಣ ಸಿಕ್ಕಿಲ್ಲ.

Gruha Lakshmi 3 installments Deposited together, Check your Bank account

ಅನ್ನಭಾಗ್ಯ ಯೋಜನೆಯಲ್ಲಿ ದೊಡ್ಡ ಬದಲಾವಣೆ, ರೇಷನ್ ಕಾರ್ಡ್ ಇರೋರಿಗೆ ಬಿಗ್ ಬೆನಿಫಿಟ್

ಯಾಕೆ ಬಂದಿಲ್ಲ ಮೊದಲ ಕಂತಿನ ಹಣ

ಗೃಹಲಕ್ಷ್ಮಿ ಯೋಜನೆಯ ಹಣ ಬರಬೇಕು ಅಂದ್ರೆ ಅದಕ್ಕೆ ಕೆಲವೊಂದು ಇಷ್ಟು ನಿಯಮಗಳನ್ನು ಪಾಲಿಸಲೇ ಬೇಕಾಗಿತ್ತು. ಮೊಬೈಲ್ ಸಂಖ್ಯೆ (mobile number) ಆಧಾರ್ ಕಾರ್ಡ್ ಬ್ಯಾಂಕ್ (bank account) ಖಾತೆಯ ಈ ಕೆವೈಸಿ ಮಾಡಿಸಿಕೊಳ್ಳುವುದು

ಆಧಾರ್ ಸೀಡಿಂಗ್, ರೇಷನ್ ಕಾರ್ಡ್ (ration card) ಮಹಿಳೆಯರ ಹೆಸರಿಗೆ ಮಾಡಿಕೊಳ್ಳುವುದು, ಮೊದಲಾದ ಬದಲಾವಣೆಗಳು ಆಗಬೇಕಿತ್ತು. ಇದರ ಜೊತೆಗೆ ಮಹಿಳೆಯ ರೇಷನ್ ಕಾರ್ಡ್ ಆಧಾರ್ ಕಾರ್ಡ್ (Aadhaar card) ಹಾಗೂ ಬ್ಯಾಂಕ್ ಖಾತೆಯಲ್ಲಿ ಇರುವ ಹೆಸರು ಒಂದಕ್ಕೊಂದು ಮ್ಯಾಚ್ ಆಗಬೇಕು. ಇವುಗಳು ಸರಿ ಆಗದೆ ಇದ್ದ ಕಾರಣದಿಂದ ಹಲವರ ಖಾತೆಗೆ ಹಣ ಜಮಾ ಆಗಿಲ್ಲ.

ಮಹಿಳೆಯರಿಗೆ ಮಾತ್ರವಲ್ಲ ಯುವಕರಿಗೂ ಸಿಕ್ತು ಗುಡ್ ನ್ಯೂಸ್; ಹೊಸ ಯೋಜನೆ ಬಗ್ಗೆ ಸರ್ಕಾರದ ಅಪ್ಡೇಟ್

ಲಕ್ಷ್ಮಿ ಹೆಬ್ಬಾಳ್ಕರ್ ಮಹತ್ವದ ಮಾಹಿತಿ;

Gruha Lakshmi Yojaneಇನ್ನು ಮೊದಲ ಕಂತಿನ ಹಣ ಯಾರ ಖಾತೆಗೆ ಜಮಾ ಆಗಿಲ್ಲವೋ ಅವರು ನೇರವಾಗಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi hebbalkar) ಅವರನ್ನೇ ಪ್ರಶ್ನಿಸುತ್ತಿದ್ದಾರೆ. ತಮ್ಮ ಖಾತೆಯಲ್ಲಿ ಎಲ್ಲವೂ ಸರಿ ಇದ್ರೂ ಹಣ ಮಾತ್ರ ಬರ್ತಿಲ್ಲ ಅನ್ನೋದು ಹಲವು ಮಹಿಳೆಯರ ಅಳಲು.

ಈ ಬಗ್ಗೆ ಮಾಹಿತಿ ನೀಡಿರುವ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮೊದಲ ಕಂತಿನ ಹಣ ಮಹಿಳೆಯರ ಖಾತೆಗೆ ಜಮಾ ಆಗದೆ ಇರಲು ಅವರ ಖಾತೆ ಈಕೆ ವೈ ಸಿ (EKYC) ಆಗದೆ ಇರುವುದೇ ಮುಖ್ಯ ಕಾರಣ.

ಇದರ ಜೊತೆಗೆ ತಾಂತ್ರಿಕ ದೋಷಗಳು, ಸರ್ವರ್ ಸಮಸ್ಯೆ ಮೊದಲಾದವುಗಳಿಂದ ಮೊದಲ ಕಂತಿನ ಹಣ ಎಲ್ಲ ಫಲಾನುಭವಿಗಳ ಖಾತೆಗೆ ಜಮಾ ಆಗಿಲ್ಲ. ಇನ್ನು ಎರಡನೇ ಕಂತಿನ ಹಣ ಸದ್ಯದಲ್ಲಿಯೇ ಜಮಾ ಆಗಲಿದ್ದು ಮೊದಲನೆಯ ಕಂತಿನ ಹಣ ಯಾರ ಖಾತೆಗೆ ಜಮಾ ಆಗಿಲ್ಲವೋ ಅಂತವರ ಖಾತೆಗೆ ಎರಡು ಕಂತಿನ ಹಣ ಸೇರಿಸಿ ನಾಲ್ಕು ಸಾವಿರ ರೂಪಾಯಿಗಳನ್ನು ಜಮಾ ಮಾಡುವುದಾಗಿ ಲಕ್ಷ್ಮಿ ಹೆಬ್ಬಾಳಕರ್ ತಿಳಿಸಿದ್ದಾರೆ.

ಅಷ್ಟೇ ಅಲ್ಲದೆ ಇನ್ನು ಮುಂದೆ ಪ್ರತಿ ತಿಂಗಳು 15ನೇ ತಾರೀಖಿನೊಳಗೆ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಆಗುತ್ತದೆ ಎಂಬುದಾಗಿಯೂ ಭರವಸೆ ನೀಡಿದ್ದಾರೆ.

ಗೃಹಲಕ್ಷ್ಮಿ ಮೊದಲ ಕಂತಿನ ಹಣ ಬಂದಿದ್ರೂ ಇಂತಹವರಿಗೆ 2ನೇ ಕಂತಿನ ಹಣ ಬರೋದಿಲ್ಲ! ಕಾರಣ ಕೊಟ್ಟ ಸರ್ಕಾರ

ಹಣ ಬಾರದೆ ಇದ್ದರೆ ಏನು ಮಾಡಬೇಕು?

ಗೃಹಲಕ್ಷ್ಮಿಯ 2000 ಉಚಿತವಾಗಿ ಸಿಗುವಂತಹ ಅವಕಾಶದಿಂದ ಹಲವು ಮಹಿಳೆಯರು ವಂಚಿತರಾಗಿದ್ದಾರೆ. ಇದಕ್ಕೆ ಸಾಕಷ್ಟು ಕಾರಣಗಳು ಕೂಡ ಇವೆ ಇನ್ನು ಯಾವ ಸಮಸ್ಯೆ ಇದೆ ಎಂಬುದನ್ನು ಕಂಡು ಹಿಡಿಯಲು ಸಾಧ್ಯವಾಗದೆ ಇದ್ದ ಪಕ್ಷದಲ್ಲಿ ಇನ್ನು ಮುಂದೆ ಮನೆ ಮನೆಗೆ ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಶಿಕ್ಷಕಿ ಮತ್ತು ಸಹಾಯಕಿಯರನ್ನು ಕಳುಹಿಸಿ ಮಹಿಳೆಯರಿಗೆ ಸಹಾಯ ಮಾಡಲಿದೆ.

ನಿಮಗೆ 2,000 ಬರದೇ ಇದ್ದರೆ ಆಶಾ ಕಾರ್ಯಕರ್ತೆಯರು ಅಥವಾ ಅಂಗನವಾಡಿ ಸಹಾಯಕಿಯರು ಮನೆಗೆ ಬಂದಾಗ ಅವರಿಗೆ ಮಾಹಿತಿ ನೀಡಿ ಸೂಕ್ತ ಸಲಹೆ ಪಡೆದುಕೊಳ್ಳಬಹುದು ಎಂದು ಸಚಿವೆ ತಿಳಿಸಿದ್ದಾರೆ.

Gruha Lakshmi Scheme 1st installment money Not Deposit to Bank Account, here is a new update