ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳು ಒಂದರ ಹಿಂದೆ ಒಂದರಂತೆ ಬಿಡುಗಡೆ ಆಗಿ ಎಲ್ಲ ಯೋಜನೆಗಳು ಬಹುತೇಕ ಯಶಸ್ಸನ್ನು ಕಂಡಿವೆ. ಇನ್ನು ಐದು ಯೋಜನೆಗಳನ್ನು ಘೋಷಣೆ ಮಾಡಿರುವಲ್ಲಿ ನಾಲ್ಕು ಯೋಜನೆಗಳನ್ನು ಜಾರಿಗೆ ತರಲಾಗಿದೆ.
ರಾಜ್ಯ ಸರ್ಕಾರ (Karnataka Government) ಇನ್ನು ಕೇವಲ ಒಂದು ಯೋಜನೆ ಮಾತ್ರ ಜನರಿಗೆ ಲಭ್ಯವಾಗುವಂತೆ ಮಾಡಬೇಕಿದೆ. ಅದುವೇ ಯುವ ನಿಧಿ ಯೋಜನೆ (Yuva Nidhi scheme).
ನಿರುದ್ಯೋಗಿ (unemployed) ಯುವಕರಿಗೆ ಪ್ರತಿ ತಿಂಗಳು ಹಣ ನೀಡುವ ಯೋಜನೆ ಯುವ ನಿಧಿ ಯೋಜನೆ. 2022 23ರ ಸಾಲಿನಲ್ಲಿ ತೇರ್ಗಡೆ ಹೊಂದಿರುವ ಪದವಿ (Degree) ಹಾಗೂ ಡಿಪ್ಲೋಮೋ (Diploma) ನಿರುದ್ಯೋಗಿ ಯುವಕ ಯುವತಿಯರಿಗೆ ಯುವನಿಧಿ ಹಣ ಸಿಗಲಿದೆ.
ಗೃಹಲಕ್ಷ್ಮಿ ಮೊದಲ ಕಂತಿನ ಹಣ ಬಂದಿದ್ರೂ ಇಂತಹವರಿಗೆ 2ನೇ ಕಂತಿನ ಹಣ ಬರೋದಿಲ್ಲ! ಕಾರಣ ಕೊಟ್ಟ ಸರ್ಕಾರ
ಗೃಹಲಕ್ಷ್ಮಿ ಯೋಜನೆಯ (Gruha Lakshmi scheme) ಅಡಿಯಲ್ಲಿ ಮೊದಲ ಕಂತಿನ ಹಣ ಬಿಡುಗಡೆ ಮಾಡಲಾಗಿತ್ತು. ಮೊದಲನೇ ಕಂತಿನ ಹಣ ಆಗಸ್ಟ್ 30 ಕ್ಕೆ ಬಿಡುಗಡೆ ಮಾಡಲಾಗಿತ್ತು, ಸೆಪ್ಟೆಂಬರ್ 30ರ ಹೊತ್ತಿಗೆ ಸುಮಾರು 80% ಫಲಾನುಭವಿ ಗೃಹಿಣಿಯರ ಖಾತೆಗೆ ವರ್ಗಾವಣೆ ಮಾಡಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಇನ್ನು ಉಳಿದವರ ಖಾತೆಗೆ (Bank Account) ಹಣವನ್ನು ಎರಡು ಕಂತಿನ ಹಣ ಸೇರಿಸಿ ವರ್ಗಾವಣೆ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ (CM siddaramaiah) ಅವರು ಮಾಹಿತಿ ನೀಡಿದ್ದರು.
ಅದೇ ರೀತಿ ಸಾಕಷ್ಟು ಫಲಾನುಭವಿ ಗೃಹಿಣಿಯರ ಖಾತೆಯಲ್ಲಿ ಸಮಸ್ಯೆ ಇರುವುದರಿಂದ ಅದನ್ನು ಸರಿಪಡಿಸಿಕೊಂಡು ಅಂತಹವರ ಖಾತೆಗೂ ಹಣ ವರ್ಗಾವಣೆ ಆಗುತ್ತದೆ ಎಂಬುದಾಗಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi hebbalkar) ಮಾಹಿತಿ ನೀಡಿದ್ದಾರೆ.
ಜೀರೋ ಬಿಲ್ ಪಡೆದಿದ್ದರೂ ಇಂತಹವರು ಈ ತಿಂಗಳ ಬಿಲ್ ಕಟ್ಟಲೇಬೇಕು! ಸರ್ಕಾರದ ಹೊಸ ಆದೇಶ
ಯುವನಿಧಿ ಯೋಜನೆಯ ಅಡಿಯಲ್ಲಿ ಪದವೀಧರ ನಿರುದ್ಯೋಗ ಯುವಕ ಯುವತಿಯರಿಗೆ 3,000 ಹಾಗೂ ಡಿಪ್ಲೋಮಾ ನಿರುದ್ಯೋಗ ಯುವಕ ಯುವತಿಯರಿಗೆ 1,500 ಗಳನ್ನು ಪ್ರತಿ ತಿಂಗಳು ಅವರ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗುವುದು.
ಯುವಕ ಯುವತಿಯರು ತಮ್ಮ ಉದ್ಯೋಗ ಗಳಿಸಿಕೊಳ್ಳಲು ಈ ಹಣ ಸಹಾಯಕವಾಗಲಿದೆ ಹಾಗೂ ಎರಡು ವರ್ಷಗಳ ಅವಧಿಯವರೆಗೆ ( 2 years) ಯುವನಿಧಿ ಪ್ರಯೋಜನ ಪಡೆದುಕೊಳ್ಳಬಹುದು. ಉದ್ಯೋಗ ಸಿಕ್ಕ ತಕ್ಷಣ ಸರ್ಕಾರಕ್ಕೆ ಮಾಹಿತಿ ನೀಡಬೇಕು. ಅಲ್ಲಿಂದ ಯುವ ನಿಧಿ ಹಣವನ್ನು ಖಾತೆಗೆ ವರ್ಗಾವಣೆ ಮಾಡುವ ಪ್ರಕ್ರಿಯೆ ಸ್ಥಗಿತಗೊಳ್ಳುತ್ತದೆ.
ಅನ್ನಭಾಗ್ಯ ಯೋಜನೆಯಲ್ಲಿ ಇನ್ಮುಂದೆ ಹಣವೂ ಇಲ್ಲ, ಅಕ್ಕಿಯೂ ಇಲ್ಲ! ಮತ್ತೇನು ಸಿಗಲಿದೆ ಗೊತ್ತಾ?
ಈಗಾಗಲೇ ಗೃಹಲಕ್ಷ್ಮಿ ಯೋಜನೆಯ ಹಣ ಗೃಹಿಣಿಯರ ಖಾತೆಗೆ ವರ್ಗಾವಣೆ (Bank Account Transfer) ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಇದರಿಂದಾಗಿ ಯುವ ನಿಧಿ ಯೋಜನೆ ಜಾರಿಗೆ ತರುವಲ್ಲಿ ಸ್ವಲ್ಪ ವಿಳಂಬವಾಗಬಹುದು. ಡಿಸೆಂಬರ್ ತಿಂಗಳಿನಿಂದ ಯುವ ನಿಧಿ ಯೋಜನೆಯ ಹಣ ನಿರುದ್ಯೋಗಿ ಯುವಕ ಯುವತಿಯರ ಖಾತೆಗೆ ವರ್ಗಾವಣೆ ಮಾಡಲಾಗುವುದು.
ಇದಕ್ಕಾಗಿ ಫಲಾನುಭವಿಗಳು ಅರ್ಜಿ ಸಲ್ಲಿಸಬೇಕಾಗುತ್ತದೆ. ಬೆಂಗಳೂರು ಒನ್, ಗ್ರಾಮ ಒನ್ ಮೊದಲಾದ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಲು ಅನುಕೂಲ ಮಾಡಿಕೊಡಲಾಗುವುದು.
ಇನ್ನು ಸರ್ಕಾರಿ ಉದ್ಯೋಗದಲ್ಲಿ ಇರುವ ಯುವಕರು, ಪದವಿ ಅಥವಾ ಡಿಪ್ಲೋಮಾ ಮುಗಿಸಿ ಮುಂದಿನ ವಿದ್ಯಾಭ್ಯಾಸಕ್ಕೆ ಹೋಗುವವರು, 2022ಕ್ಕಿಂತ ಮೊದಲು ಪಾಸ್ ಔಟ್ ಆದ ವಿದ್ಯಾರ್ಥಿಗಳು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಅರ್ಹರಲ್ಲ. ಯುವ ನಿಧಿ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಯಾವಾಗ ಆರಂಭವಾಗುತ್ತದೆ ಎನ್ನುವುದರ ಬಗ್ಗೆ ಸರ್ಕಾರ ಸದ್ಯದಲ್ಲಿಯೇ ಮಾಹಿತಿ ನೀಡಲಿದೆ.
Big Update on Yuva Nidhi Scheme Money Bank Account Transfer