ಅನ್ನಭಾಗ್ಯ ಯೋಜನೆಯಲ್ಲಿ ಇನ್ಮುಂದೆ ಹಣವೂ ಇಲ್ಲ, ಅಕ್ಕಿಯೂ ಇಲ್ಲ! ಮತ್ತೇನು ಸಿಗಲಿದೆ ಗೊತ್ತಾ?

ಈಗ ಹಣಕ್ಕಿಂತ ಜನರಿಗೆ ಪೌಷ್ಟಿಕ ಆಹಾರ ವಿತರಣೆ ಮಾಡುವುದು ಹೆಚ್ಚು ಸೂಕ್ತ ಎಂದು ಸರ್ಕಾರ ಕೂಡ ಚಿಂತನೆ ನಡೆಸಿದ್ದು ರಾಜ್ಯ ಸರ್ಕಾರದಿಂದ ಅನ್ನಭಾಗ್ಯ ಯೋಜನೆಗೆ (Annabhagya scheme) ಹೊಸ ಸೇರ್ಪಡೆ ಆಗಲಿದೆ.

ರಾಜ್ಯ ಸರ್ಕಾರ (Karnataka Government) ರಾಜ್ಯದ ಫಲಾನುಭವಿ ಪಡಿತರ ಚೀಟಿ (Ration card) ಹೊಂದಿರುವವರಿಗೆ ಅಕ್ಕಿ ಬದಲು ಹಣವನ್ನು ನೇರವಾಗಿ ಅವರ ಖಾತೆಗೆ (Bank Account) ಸಂದಾಯ ಮಾಡುತ್ತಿರುವುದು ನಿಮಗೆಲ್ಲಾ ಗೊತ್ತಿರುವ ವಿಚಾರವೇ, ಈಗಾಗಲೇ ಹಲವರ ಖಾತೆಗೆ ಎರಡು ಕಂತಿನ ಹಣ ಕೂಡ ಸಂದಾಯವಾಗಿದೆ.

ಇದೀಗ ಮೂರನೇ ಕಂತಿನ ಹಣ ಕೂಡ ಬಿಡುಗಡೆ ಆಗಿದ್ದು, ಲಕ್ಷಾಂತರ ಬಿಪಿಎಲ್ ಕಾರ್ಡ್ (BPL Ration card) ಹೊಂದಿರುವವರ ಖಾತೆಗೆ ಅಕ್ಕಿಯ (Free Rice) ಬದಲು ಹಣ ವರ್ಗಾವಣೆ (DBT) ಮಾಡಲಾಗಿದೆ.

ಫ್ರೀ ಕರೆಂಟ್; ಗೃಹಜ್ಯೋತಿ ಯೋಜನೆಯ ಜೀರೋ ಬಿಲ್ ಬಂದಿದ್ರು ಇಂಥವರಿಗೆ ನೋಟಿಸ್! ಯಾಕೆ ಗೊತ್ತಾ?

Date fixed for new ration card application, Update on Applying New Ration Card

ಅಕ್ಕಿ ಮತ್ತು ದುಡ್ಡು ಎರಡು ಸಿಗುತ್ತಿದೆ!

ಕೇಂದ್ರ ಸರ್ಕಾರ ಕೊಡುತ್ತಿರುವ 5 ಕೆಜಿ ಅಕ್ಕಿ ಹಾಗೂ ರಾಜ್ಯ ಸರ್ಕಾರ 5 ಕೆಜಿ ಅಕ್ಕಿ ಬದಲು 34 ರೂಪಾಯಿ ಪ್ರತಿ ಕೆಜಿಗೆ ಅಂದರೆ ಐದು ಕೆಜಿಗೆ 170ಗಳನ್ನು ಜನರ ಖಾತೆಗೆ ವರ್ಗಾವಣೆ ಮಾಡುತ್ತಿದೆ.

ಹಾಗಾಗಿ ಇಲ್ಲಿಯವರೆಗೆ ಅಕ್ಕಿ ಮತ್ತು ಹಣ ಎರಡನ್ನು ಜನರು ಪಡೆದುಕೊಂಡಿದ್ದಾರೆ. ಇನ್ನು ಬಿಪಿಎಲ್ ಕಾರ್ಡ್ ಹೊಂದಿರುವವರು ಅಂದರೆ ಬಡತನ ರೇಖೆಗಿಂತ ಕೆಳಗಿರುವವರು ಎಂದು ಅರ್ಥ. ಅಂತವರಿಗೆ ಅಕ್ಕಿ ಬದಲು ಹಣ ಕೊಟ್ಟರೆ ಹೆಚ್ಚಿನ ಪ್ರಯೋಜನ ಆಗುವುದಿಲ್ಲ

ರಾಜ್ಯ ಸರ್ಕಾರ ತನ್ನ ಮಾತಿನಂತೆ, ತಾನು ಕೊಟ್ಟ ಭರವಸೆಯಂತೆ ಕೇಂದ್ರ ಸರ್ಕಾರದ (Central government) ಉಚಿತ ಐದು ಕೆಜಿ ಅಕ್ಕಿಯ ಜೊತೆಗೆ ಇನ್ನೂ ಐದು ಕೆಜಿ ಅಕ್ಕಿಯನ್ನು ನೀಡಿದ್ದರೆ, ಪ್ರಯೋಜನ ಆಗುತ್ತಿತ್ತು. ಆದರೆ ಇದು ಸಾಧ್ಯವಾಗದೆ ಇರುವ ಹಿನ್ನೆಲೆಯಲ್ಲಿ, ಹಣ ನೀಡಲಾಗುತ್ತಿದೆ. ಆದರೆ ಇನ್ನು ಮುಂದೆ ರಾಜ್ಯ ಸರ್ಕಾರ ಫಲಾನುಭವಿಗಳ ಖಾತೆಗೆ ಹಣ ನೇರವಾಗಿ ವರ್ಗಾವಣೆ ಮಾಡುವ ಬಗ್ಗೆ ಚಿಂತನೆ ನಡೆಸಿದೆ.

ಗೃಹಲಕ್ಷ್ಮಿ ಯೋಜನೆ 2ನೇ ಕಂತು ಯಾವಾಗ ನಿಮ್ಮ ಬ್ಯಾಂಕ್ ಖಾತೆಗೆ ಸೇರಲಿದೆ ಗೊತ್ತ? ಪಕ್ಕಾ ಮಾಹಿತಿ

ಹಣವು ಇಲ್ಲ ಅಕ್ಕಿ ಇಲ್ಲ

Annabhagya Schemeರಾಜ್ಯ ಸರ್ಕಾರ ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಕ್ಕೆ ಅಕ್ಕಿಯ ಬದಲಿಗೆ ಹಣ ನೀಡುತ್ತಿದ್ದು ಇನ್ನು ಮುಂದೆ ಇದನ್ನು ಸ್ಥಗಿತಗೊಳಿಸಲು ಚಿಂತನೆ ನಡೆಸಿದೆ. ಅಕ್ಕಿಯೂ ಇಲ್ಲ ಹಣವು ಕೂಡ ಸಿಗುವುದಿಲ್ಲವಾ ಎಂದು ಗಾಬರಿಯಾಗಬೇಡಿ.

ಜನರಿಗೆ ಹಣವನ್ನು ಕೊಡುವುದಕ್ಕಿಂತ ಪೌಷ್ಟಿಕ ಆಹಾರವನ್ನು ಕೊಟ್ಟರೆ ಹೆಚ್ಚು ಉಪಯೋಗವಾಗಲಿದೆ ಎಂದು ಸರ್ಕಾರ ಮನಗಂಡಿದೆ. ಈಗಾಗಲೇ ಸಚಿವ ಚೆಲುವರಾಯಸ್ವಾಮಿ ವಿಧಾನಸೌಧದಲ್ಲಿ ಈ ಬಗ್ಗೆ ತಮ್ಮ ಧ್ವನಿ ಎತ್ತಿದ್ದಾರೆ.

ಹಣ ಕೊಡುವ ಬದಲು ಅದೇ ದುಡ್ಡಿಗೆ ಕಡಲೆ ಕಾಯಿ ಎಣ್ಣೆ, ಗೋಧಿ, ರಾಗಿ, ಜೋಳ ಇಂತಹ ಪೌಷ್ಟಿಕ ಆಹಾರವನ್ನು ಕೊಟ್ಟರೆ ಪ್ರತಿಯೊಬ್ಬರಿಗೂ ಅನುಕೂಲವಾಗುತ್ತದೆ ಎಂದು ತಿಳಿಸಿದ್ದಾರೆ.

ಅನ್ನಭಾಗ್ಯ ಯೋಜನೆಯಲ್ಲಿ ಟ್ವಿಸ್ಟ್ ಕೊಟ್ಟ ಸರ್ಕಾರ; ಇನ್ನು ಮುಂದೆ ನೇರ ಹಣ ವರ್ಗಾವಣೆ ಇಲ್ಲ

ಬಿಪಿಎಲ್ ಕಾರ್ಡ್ ಹಾಗೂ ಅಂತ್ಯೋದಯ ಪಡಿತರ ಚೀಟಿ ಹೊಂದಿರುವವರಿಗೆ ಸರ್ಕಾರ ಮತ್ತೊಂದು ಗುಡ್ ನ್ಯೂಸ್ ನೀಡಲಿದೆ. ಸರ್ಕಾರಕ್ಕೆ ಮೂರು ತಿಂಗಳು ಕಳೆದರು ಇದುವರೆಗೆ ರಾಜ್ಯಕ್ಕೆ ಬೇಕಾಗಿರುವಷ್ಟು ಅಕ್ಕಿಯನ್ನು ಹೊಂದಿಸಲು ಸಾಧ್ಯವಾಗಿಲ್ಲ.

ಅಕ್ಕಿ ಹೊಂದಿಸುವ ವರೆಗೂ ಹಣವನ್ನು ನೇರವಾಗಿ ಜನರ ಖಾತೆಗೆ ವರ್ಗಾವಣೆ ಮಾಡುವುದಾಗಿ ಸರ್ಕಾರ ತಿಳಿಸಿದೆ, ಅದರಂತೆಯೇ ಮಾಡುತ್ತಿದೆ. ಆದರೆ ಈಗ ಹಣಕ್ಕಿಂತ ಜನರಿಗೆ ಪೌಷ್ಟಿಕ ಆಹಾರ ವಿತರಣೆ ಮಾಡುವುದು ಹೆಚ್ಚು ಸೂಕ್ತ ಎಂದು ಸರ್ಕಾರ ಕೂಡ ಚಿಂತನೆ ನಡೆಸಿದ್ದು ರಾಜ್ಯ ಸರ್ಕಾರದಿಂದ ಅನ್ನಭಾಗ್ಯ ಯೋಜನೆಗೆ (Annabhagya scheme) ಹೊಸ ಸೇರ್ಪಡೆ ಆಗಲಿದೆ.

ಈ ಬಗ್ಗೆ ಸರ್ಕಾರ ಮಹತ್ವದ ನಿರ್ಧಾರ ಕೈಗೊಳ್ಳಲಿದೆ. ಹಾಗಾಗಿ ಅನ್ನಭಾಗ್ಯ ಯೋಜನೆಯ ನೇರವಾಗಿ ಹಣ ವರ್ಗಾವಣೆ ಮಾಡುವ ಪ್ರಕ್ರಿಯೆ ಮುಂದುವರೆಯುತ್ತದೆಯೇ ಅಥವಾ ಪೌಷ್ಟಿಕ ಆಹಾರ ವಿತರಣೆ ಮಾಡಲಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕು.

No more money, no Free rice in Annabhagya Yojana, You know what else to get

Related Stories