ಫ್ರೀ ಕರೆಂಟ್; ಗೃಹಜ್ಯೋತಿ ಯೋಜನೆಯ ಜೀರೋ ಬಿಲ್ ಬಂದಿದ್ರು ಇಂಥವರಿಗೆ ನೋಟಿಸ್! ಯಾಕೆ ಗೊತ್ತಾ?
200 ಯೂನಿಟ್ ಗಿಂತ ಕಡಿಮೆ ವಿದ್ಯುತ್ ಬಳಸಿದವರಿಗೆ ಒಂದು ರೂಪಾಯಿ ಕೂಡ ವಿದ್ಯುತ್ ಬಿಲ್ (Zero Electricity Bill) ಭರಿಸುವ ಅಗತ್ಯವಿಲ್ಲ. ಆದರೆ ಇದಕ್ಕಾಗಿ ಬೆಸ್ಕಾಂ ಗೆ ಸರ್ಕಾರ ಹಣ ಒದಗಿಸಬೇಕು.
ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು (government guarantee schemes) ನಿರೀಕ್ಷೆಗೂ ಮೀರಿ ಸರ್ಕಾರಕ್ಕೆ ಯಶಸ್ಸನ್ನು ತಂದು ಕೊಟ್ಟಿವೆ. ಶಕ್ತಿ ಯೋಜನೆಯಿಂದ ಹಿಡಿದು ಗೃಹ ಲಕ್ಷ್ಮಿ ಯೋಜನೆ, ಗೃಹ ಜ್ಯೋತಿ ಯೋಜನೆ ಹಾಗೂ ಮುಂಬರುವ ಯುವ ನಿಧಿ ಯೋಜನೆ (Yuva Nidhi scheme) ಕೂಡ ಸರ್ಕಾರದ ಮೇಲೆ ಜನರಿಗೆ ಭರವಸೆ ಮೂಡುವಂತೆ ಮಾಡಿವೆ.
ಆದರೆ ಈ ಎಲ್ಲ ಯೋಜನೆಗೆ ಒಟ್ಟಾರೆ ಸರ್ಕಾರಕ್ಕೆ ಸಾಕಷ್ಟು ದೊಡ್ಡ ಮೊತ್ತದ ಹಣ ಬೇಕು. ಯೋಜನೆಗಳಿಂದಾಗಿ ರಾಜ್ಯದ ಬೊಕ್ಕಸದ ಮೇಲೆ ದೊಡ್ಡ ಪರಿಣಾಮ ಬೀರಿದೆ ಎನ್ನಬಹುದು.
ಇತ್ತೀಚಿನ ದಿನಗಳಲ್ಲಿ ಕೇಳಿ ಬರುತ್ತಿರುವ ದೊಡ್ಡ ಗೊಂದಲ ಅಂದರೆ ರಾಜ್ಯ ಸರ್ಕಾರ ಈ ಎಲ್ಲ ಯೋಜನೆಗಳನ್ನು ಜಾರಿಗೆ ತಂದಿದೆ ಸರಿ, ಆದರೆ ಆಯಾ ಇಲಾಖೆಗೆ ಸರಿಯಾದ ರೀತಿಯಲ್ಲಿ ಹಣ ಒದಗಿಸುತ್ತಿದೆಯಾ ಎನ್ನುವುದು.
ಗೃಹಲಕ್ಷ್ಮಿ ಯೋಜನೆ 2ನೇ ಕಂತು ಯಾವಾಗ ನಿಮ್ಮ ಬ್ಯಾಂಕ್ ಖಾತೆಗೆ ಸೇರಲಿದೆ ಗೊತ್ತ? ಪಕ್ಕಾ ಮಾಹಿತಿ
ಈ ಹಿಂದೆ ಶಕ್ತಿ ಯೋಜನೆ ಜಾರಿಗೆ ಬಂದಾಗ ಸಾರಿಗೆ ಇಲಾಖೆಗೆ (KSRTC) ಸರ್ಕಾರದಿಂದ ಸರಿಯಾಗಿ ಬರಬೇಕಾಗಿರುವ ಕೋಟ್ಯಂತರ ಹಣ ಸಂದಾಯವಾಗಿಲ್ಲ ಎನ್ನುವ ಮಾತು ಕೇಳಿ ಬರುತ್ತಿತ್ತು ಇದರಿಂದ ಸರಕಾರಿ ಸಿಬ್ಬಂದಿಗಳಿಗೆ ಪ್ರತಿ ತಿಂಗಳು ಸರಿಯಾಗಿ ಸಂಬಳ ಸಿಗುತ್ತಿಲ್ಲ ಎನ್ನಲಾಗಿತ್ತು.
ಮತ್ತೆ ಇಂತದ್ದೇ ಒಂದು ಚರ್ಚೆ ನಡೆದಿದ್ದು ತುಮಕೂರು ವಿಭಾಗದಲ್ಲಿ ಸರ್ಕಾರದಿಂದ ಬೆಸ್ಕಾಂ ಗೆ ಹಣ ಸಂದಾಯವಾಗಿಲ್ಲ ಎನ್ನುವ ಮಾತು ಕೇಳಿ ಬರುತ್ತಿದೆ. ಹೌದು ಗೃಹ ಜ್ಯೋತಿ ಯೋಜನೆಯ ಅಡಿಯಲ್ಲಿ ಲಕ್ಷಾಂತರ ಜನರಿಗೆ ಉಚಿತ ವಿದ್ಯುತ್ (Free Electricity) ಸಿಗುತ್ತಿದೆ.
200 ಯೂನಿಟ್ ಗಿಂತ ಕಡಿಮೆ ವಿದ್ಯುತ್ ಬಳಸಿದವರಿಗೆ ಒಂದು ರೂಪಾಯಿ ಕೂಡ ವಿದ್ಯುತ್ ಬಿಲ್ (Zero Electricity Bill) ಭರಿಸುವ ಅಗತ್ಯವಿಲ್ಲ. ಆದರೆ ಇದಕ್ಕಾಗಿ ಬೆಸ್ಕಾಂ ಗೆ ಸರ್ಕಾರ ಹಣ ಒದಗಿಸಬೇಕು.
ಅಷ್ಟೇ ಅಲ್ಲ, ಸರ್ಕಾರಿ ಕಚೇರಿಗಳು ಬಳಸಿದ ವಿದ್ಯುತ್ ಬಿಲ್ಲೇ 760 ಕೋಟಿ ಮೊತ್ತವನ್ನು ಸರ್ಕಾರ ಪಾವತಿ ಮಾಡಿಲ್ಲ ಎನ್ನಲಾಗಿದೆ. 15 ರಿಂದ 20 ವರ್ಷಗಳಿಂದಲೂ ಬೆಸ್ಕಾಂ ಗೆ ಸರ್ಕಾರದಿಂದ ಸಂದಾಯವಾಗಬೇಕಾಗಿದ್ದ ಹಣವು ಕೂಡ ಸಂದಾಯವಾಗಿಲ್ಲ ಎನ್ನುವ ಮಾತು ಇದೆ.
ಬೆಳ್ಳಂಬೆಳಿಗ್ಗೆ ರೇಷನ್ ಕಾರ್ಡ್ ಬಗ್ಗೆ ಬಿಗ್ ಅಪ್ಡೇಟ್! ಸರ್ಕಾರದ ಮಹತ್ವದ ನಿರ್ಧಾರ ಏನು ಗೊತ್ತಾ?
ಸರ್ಕಾರಿ ಇಲಾಖೆಗೆ ನೋಟಿಸ್
ಅನ್ನಭಾಗ್ಯ ಯೋಜನೆಯಲ್ಲಿ ಟ್ವಿಸ್ಟ್ ಕೊಟ್ಟ ಸರ್ಕಾರ; ಇನ್ನು ಮುಂದೆ ನೇರ ಹಣ ವರ್ಗಾವಣೆ ಇಲ್ಲ
ಬಾಕಿಮೊತ್ತ ಪಾವತಿ ಮಾಡದೆ ಇದ್ದರೆ ಕಠಿಣ ಕ್ರಮ
ಯಾವುದೇ ಸಾಮಾನ್ಯ ವ್ಯಕ್ತಿ ಕೂಡ ಸರಿಯಾದ ಸಮಯಕ್ಕೆ ವಿದ್ಯುತ್ ಬಿಲ್ ಕಟ್ಟದೇ ಇದ್ದಲ್ಲಿ ಆತನ ಮನೆಯ ವಿದ್ಯುತ್ ಸಂಪರ್ಕವನ್ನೇ ಕಡಿತಗೊಳಿಸಲಾಗುತ್ತದೆ. ಅದೇ ರೀತಿ ಸರ್ಕಾರಿ ಕಚೇರಿಯಲ್ಲಿ ಕಳೆದ 15 ರಿಂದ 20 ವರ್ಷಗಳ ಕಾಲ ಬಾಕಿ ಇಟ್ಟುಕೊಂಡಿದ್ದ ಹಣವನ್ನು ಇನ್ನಾದರೂ ಪಾವತಿ ಮಾಡಬೇಕು ಎಂದು ಬೆಸ್ಕಾಂ ನೋಟಿಸ್ ಕಳುಹಿಸಿದೆ.
ಸರ್ಕಾರಿ ಕಚೇರಿಗಳಾದ ಕಂದಾಯ ಇಲಾಖೆ, ಕೃಷಿ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆ, ಶಿಕ್ಷಣ, ಸಣ್ಣ ನೀರಾವರಿ, ನಗರಾಭಿವೃದ್ಧಿ, ಲೋಕೋಪಯೋಗಿ, ತೋಟಗಾರಿಕೆ, ಪಶು ಸಂಗೋಪನೆ ಹೀಗೆ ಮೊದಲಾದ ಸರ್ಕಾರಿ ಕಚೇರಿಗಳಿಂದ ಹಣ ಸಂದಾಯವಾಗಬೇಕಿದೆ ಅದಕ್ಕಾಗಿ ಬೆಸ್ಕಾಂ ಗಡುವು ನಿಗದಿಪಡಿಸಿದ್ದು, ಇನ್ನು 15 ದಿನಗಳ ಒಳಗೆ ಎಲ್ಲಾ ಬಾಕಿ ಇರುವ ಕರೆಂಟ್ ಬಿಲ್ ಪಾವತಿ ಮಾಡುವಂತೆ ತಿಳಿಸಿದೆ.
ಒಂದು ವೇಳೆ ಈ ಅವಧಿಯಲ್ಲಿ ವಿದ್ಯುತ್ ಬಿಲ್ ಪಾವತಿ ಮಾಡದೆ ಇದ್ದಲ್ಲಿ ಸರ್ಕಾರಿ ಕಚೇರಿಯ ವಿದ್ಯುತ್ ಸಂಪರ್ಕವನ್ನು ಕೂಡ ಕಡಿತಗೊಳಿಸುವುದಾಗಿ ಬೆಸ್ಕಾಂ ಎಚ್ಚರಿಕೆ ನೀಡಿದೆ. ಹಾಗಾಗಿ ನಿಗದಿತ ಅವಧಿಯ ಒಳಗೆ ಸರ್ಕಾರಿ ಕಚೇರಿಗಳು ಬೆಸ್ಕಾಂ ಗೆ ಸಂದಾಯ ಆಗಬೇಕಾಗಿರುವ ಹಣವನ್ನು ಪಾವತಿ ಮಾಡುತ್ತವೋ ಇಲ್ಲವೋ ಕಾದು ನೋಡಬೇಕು.
A notice has been issued to those who have not Paid Electricity Bill
Follow us On
Google News |