Karnataka NewsBengaluru News

ಗೃಹಲಕ್ಷ್ಮಿ ಯೋಜನೆ 2ನೇ ಕಂತು ಯಾವಾಗ ನಿಮ್ಮ ಬ್ಯಾಂಕ್ ಖಾತೆಗೆ ಸೇರಲಿದೆ ಗೊತ್ತ? ಪಕ್ಕಾ ಮಾಹಿತಿ

ಗೃಹಲಕ್ಷ್ಮಿ ಯೋಜನೆಯ (Gruha Lakshmi scheme) ಎರಡನೇ ಕಂತಿನ ಹಣ ಕೂಡ ಗೃಹಿಣಿಯರ ಖಾತೆಗೆ (Bank Account) ಇನ್ನೇನು ಸಂದಾಯವಾಗಲಿದೆ, ಆದರೆ ಯಾವಾಗ ಈ ಹಣ ಬರಲಿದೆ ಎಂದು ಹಲವು ಮಹಿಳೆಯರಿಗೆ ಪ್ರಶ್ನೆಯಾಗಿತ್ತು

ಮೊದಲನೆಯ ಕಂತಿನ ಹಣ (first installment) ಬಂದು ಒಂದು ತಿಂಗಳು ಕಳೆದಿದೆ ಹಾಗಾಗಿ ಎರಡನೇ ಕಂತಿನ ಹಣ ಯಾವಾಗ ಸಿಗಬಹುದು ಎನ್ನುವ ಪ್ರಶ್ನೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi hebbalkar) ಉತ್ತರ ತಿಳಿಸಿದ್ದಾರೆ.

Gruha Lakshmi Yojana

ಅನ್ನಭಾಗ್ಯ ಯೋಜನೆಯಲ್ಲಿ ಟ್ವಿಸ್ಟ್ ಕೊಟ್ಟ ಸರ್ಕಾರ; ಇನ್ನು ಮುಂದೆ ನೇರ ಹಣ ವರ್ಗಾವಣೆ ಇಲ್ಲ

ಎರಡನೇ ಕಂತಿನ ಹಣ ಬಿಡುಗಡೆ ಆಗಿದೆಯೇ?

ಎಲ್ಲರಿಗೂ ಗೊತ್ತಿರುವ ಹಾಗೆ ಗೃಹಲಕ್ಷ್ಮಿ ಯೋಜನೆಯ (Gruha Lakshmi scheme) ಎರಡು ಸಾವಿರ ರೂಪಾಯಿಗಳನ್ನು ಪ್ರತಿ ಗೃಹಿಣಿಯ ಖಾತೆಗೆ ಜಮಾ ಮಾಡಲಾಗುತ್ತೆ, ಆಗಸ್ಟ್ 30 ರಿಂದ ಈ ಪ್ರಕ್ರಿಯೆ ಆರಂಭವಾಗಿದೆ.

85 ಲಕ್ಷಕ್ಕೂ ಅಧಿಕ ಮಹಿಳೆಯರಿಗೆ ಮೊದಲ ಕಂತಿನ ಹಣ (Money Deposit) ಬಂದು ತಲುಪಿದೆ. ಆದರೆ ಇನ್ನೂ ಹಲವರಿಗೆ ಹಣ ಸಿಕ್ಕಿಲ್ಲ ಇದಕ್ಕೆ ಕಾರಣ ಅವರ ಖಾತೆಯಲ್ಲಿ ಇರುವ ಲೋಪದೋಷಗಳು ಎಂದು ಸರ್ಕಾರ ತಿಳಿಸಿದೆ.

ಹಲವರ ಖಾತೆಗೆ ಮೊದಲ ಕಂತಿನ ಹಣ ಬಂದಿಲ್ಲ ಎನ್ನುವ ಬೇಸರ ಇದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಎರಡನೇ ಕಂತಿನ ಹಣ ಬಿಡುಗಡೆ ಆದ ತಕ್ಷಣ ಯಾರ ಖಾತೆಗೆ ಇನ್ನೂ ಹಣ ಬಂದಿಲ್ಲವೋ ಅಂತವರಿಗೆ ಎರಡು ಖಾತೆಯ ಹಣವನ್ನು ಸೇರಿಸಿ ನಾಲ್ಕು ಸಾವಿರ ರೂಪಾಯಿಗಳನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.

ಬೆಳ್ಳಂಬೆಳಿಗ್ಗೆ ರೇಷನ್ ಕಾರ್ಡ್ ಬಗ್ಗೆ ಬಿಗ್ ಅಪ್ಡೇಟ್! ಸರ್ಕಾರದ ಮಹತ್ವದ ನಿರ್ಧಾರ ಏನು ಗೊತ್ತಾ?

ಎರಡನೇ ಕಂತಿನ ಹಣ ಇಂಥವರಿಗೆ ಸಿಗುತ್ತೆ

Gruha Lakshmi Yojaneಮೊದಲನೆಯ ಕಂತಿನ ಹಣ ಯಾರ ಖಾತೆಗೆ ಜಮಾ ಆಗಿದೆಯೋ ಅವರಿಗೆ ಎರಡನೇ ಹಣವು ಕೂಡ ಜಮಾ ಆಗುತ್ತದೆ. ಅಗಸ್ಟ್ 30 ರಿಂದ ಮೊದಲನೇ ಕಂತಿನ ಹಣವನ್ನು ಹಾಕಲು ಪ್ರಾರಂಭಿಸಲಾಗಿದೆ. ಸಪ್ಟೆಂಬರ್ 30ಕ್ಕೆ ಈ ಪ್ರಕ್ರಿಯೆ (process) ಕೊನೆಗೊಂಡು ಎರಡನೇ ಕಂತಿನ ಹಣ ಬಿಡುಗಡೆ ಮಾಡಲಾಗುತ್ತದೆ.

ನೇರ ವರ್ಗಾವಣೆ (DBT) ಪ್ರಕ್ರಿಯೆಯಲ್ಲಿ ಸ್ವಲ್ಪ ವಿಳಂಬವಾಗಬಹುದು. ಎರಡನೇ ಕಂತಿನ ಹಣ ಬಿಡುಗಡೆ ಆದ ತಕ್ಷಣ ಎಲ್ಲಾ ಮಹಿಳೆಯರ ಖಾತೆಗೆ ಒಂದೇ ದಿನ ಹಣ ಜಮಾ ಆಗುವುದಿಲ್ಲ. ಇದು ಅಕ್ಟೋಬರ್ 15 ರ ವರೆಗೂ ಮುಂದುವರೆಯಬಹುದು.

ಅನ್ನಭಾಗ್ಯ 3ನೇ ಕಂತಿನ ಹಣ ಇಂತಹವರ ಬ್ಯಾಂಕ್ ಖಾತೆಗೆ ಜಮಾ ಆಗೋಲ್ಲ! ಕಾರಣ ಕೊಟ್ಟ ಸರ್ಕಾರ

ಅರ್ಜಿ ಸಲ್ಲಿಸಿ

ಈ ಯೋಜನೆಗೆ ಕೊನೆಯ ದಿನಾಂಕ ಎಂಬುದನ್ನು ನಿಗದಿಪಡಿಸಿಲ್ಲ ಸರ್ಕಾರ. ಈ ಹಿನ್ನೆಲೆಯಲ್ಲಿ ಗೃಹಲಕ್ಷ್ಮಿ 2000 ಗಳನ್ನು ಉಚಿತವಾಗಿ ಪಡೆದುಕೊಳ್ಳಲು ಅರ್ಹತೆ ಇರುವ ಮಹಿಳೆಯರು ಅರ್ಜಿಯನ್ನು (application) ಹಾಕಬಹುದು.

ಈ ತಿಂಗಳ ಕೊನೆಯವರೆಗೆ ಹೊಸ ಅರ್ಜಿಗಳನ್ನು ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ಹೋಲ್ಡ್ (hold) ಮಾಡಲಾಗಿದೆ. ಆದರೆ ಸದ್ಯದಲ್ಲಿಯೇ ಮತ್ತೆ ಅರ್ಜಿ ತೆಗೆದುಕೊಳ್ಳಲು ಆರಂಭಿಸಲಾಗುತ್ತದೆ.

ಈಗಾಗಲೇ ಹಲವು ಮಹಿಳೆಯರ ಬ್ಯಾಂಕ್ ಖಾತೆಯ ರೇಷನ್ ಕಾರ್ಡ್ (ration card) ಹಾಗೂ ಆಧಾರ್ ಕಾರ್ಡ್ ಲಿಂಕ್ (Aadhaar Card link) ಮಾಡಿರುವುದು ರೇಷನ್ ಕಾರ್ಡ್ ನಲ್ಲಿ ಮಹಿಳೆಯ ಹೆಸರನ್ನೇ ಮೊದಲ ಸದಸ್ಯೆಯಾಗಿ ಸೇರಿಸುವುದು ಎಲ್ಲಾ ಹೆಸರುಗಳು ಮ್ಯಾಚ್ ಆಗುವಂತೆ ಮಾಡುವುದು ಇವೆಲ್ಲವೂ ಗೃಹಲಕ್ಷ್ಮಿ ಯೋಜನೆಗೆ ಮುಖ್ಯವಾಗಿ ಬೇಕಾಗಿರುವ ವಿಷಯಗಳು.

ಗೃಹಲಕ್ಷ್ಮಿ ಯೋಜನೆ ಹಣ ಸಿಗದೇ ಇರೋರು ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದಿಯಾ ಚೆಕ್ ಮಾಡಿ

ಈಗ ಹೊಸದಾಗಿ ಅರ್ಜಿ ಸಲ್ಲಿಸಲು ಹೋಗುವ ಮಹಿಳೆಯರು ಈ ಎಲ್ಲಾ ವಿಷಯದ ಬಗ್ಗೆ ಗಮನಹರಿಸಿ, ನಿಮ್ಮ ದಾಖಲೆಗಳನ್ನು ಸರಿಯಾಗಿ ಇಟ್ಟುಕೊಂಡು ಅರ್ಜಿ ಸಲ್ಲಿಸಿದರೆ ಮುಂಬರುವ ದಿನಗಳಲ್ಲಿ ಯಾವುದೇ ಸಮಸ್ಯೆ ಇಲ್ಲದೆ ಉಚಿತವಾಗಿ 2000ರೂ.ಗಳನ್ನು ಪಡೆದುಕೊಳ್ಳಬಹುದು.

ನಿಮಗೆ ಯಾವುದೇ ಸಂದೇಹ ಇದ್ದಲ್ಲಿ ಹತ್ತಿರದ ಅಂಗನವಾಡಿ ಕೇಂದ್ರದಲ್ಲಿನ ಶಿಕ್ಷಕಿ ಅಥವಾ ಸಹಾಯಕಿಯರ ಸಹಾಯ ಪಡೆದುಕೊಳ್ಳಬಹುದು.

When will the 2nd installment of Gruha Lakshmi Yojana reach your bank account

Our Whatsapp Channel is Live Now 👇

Whatsapp Channel

Related Stories