ಅನ್ನಭಾಗ್ಯ ಯೋಜನೆ (Annabhagya Yojana) ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ (government guarantee scheme) ಒಂದಾಗಿದ್ದು ಜನರಿಗೆ ಅಕ್ಕಿಯನ್ನು ಉಚಿತವಾಗಿ ನೀಡುವ ಯೋಜನೆ ಇದಾಗಿದೆ.
ಕಳೆದ ಎರಡು ವರ್ಷಗಳ ಹಿಂದೆ ಕರೋನ (COVID) ಅವಧಿಯಿಂದ ಕೇಂದ್ರ ಸರ್ಕಾರ ಪ್ರತಿ ಬಿಪಿಎಲ್ ಕಾರ್ಡ್ ಹೋಲ್ಡರ್ (BPL card holders) ಕುಟುಂಬಕ್ಕೆ ಐದು ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತಿದೆ.
ನಂತರ ರಾಜ್ಯ ಸರ್ಕಾರ ಚುನಾವಣಾ ಪ್ರಣಾಳಿಕೆಯಲ್ಲಿ ಕೇಂದ್ರ ಸರ್ಕಾರ ಕೊಡುವ 5 ಕೆಜಿ ಉಚಿತ ಅಕ್ಕಿಯ ಜೊತೆಗೆ ತಾವು 5 ಕೆಜಿ ಸೇರಿಸಿ ಒಟ್ಟು 10 ಕೆಜಿ ಅಕ್ಕಿಯನ್ನು ಬಿಪಿಎಲ್ ಕಾರ್ಡ್ ಫಲಾನುಭವಿಗಳಿಗೆ ನೀಡುವುದಾಗಿ ಘೋಷಣೆ ಮಾಡಿದ್ದು ಹಳೆಯ ವಿಚಾರ.
ಗೃಹಲಕ್ಷ್ಮಿ ಯೋಜನೆ ಹಣ ಸಿಗದೇ ಇರೋರು ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದಿಯಾ ಚೆಕ್ ಮಾಡಿ
ಆದರೆ ದುರದೃಷ್ಟವಶಾತ್ ಸರ್ಕಾರಕ್ಕೆ 5 ಕೆ.ಜಿ ಹೆಚ್ಚುವರಿಯಾಗಿ ಉಚಿತ ಅಕ್ಕಿ ನೀಡಲು ಅಕ್ಕಿ ಹೊಂದಿಸಲು ಸಾಧ್ಯವಾಗಿಲ್ಲ, ಆದ್ದರಿಂದ ರಾಜ್ಯ ಸರ್ಕಾರ ಮಾಸ್ಟರ್ ಪ್ಲಾನ್ ಒಂದನ್ನು ಮಾಡಿ ಪ್ರತಿ ಬಿಪಿಎಲ್ ಕಾರ್ಡ್ ಹೋಲ್ಡರ್ ಗೆ ತಲಾ 5 ಕೆಜಿ ಅಕ್ಕಿಗೆ 34 ರೂಪಾಯಿಗಳಂತೆ 170ಗಳನ್ನು ಅವರ ಖಾತೆಗೆ ನೇರವಾಗಿ (DBT) ವರ್ಗಾವಣೆ ಮಾಡಲು ಆರಂಭಿಸಿದೆ.
ಹೌದು, ಈಗಾಗಲೇ ಎರಡು ಕಂತಿನ ಹಣ ಫಲಾನುಭವಿಗಳ ಖಾತೆಗೆ (Bank Account) ನೇರ ವರ್ಗಾವಣೆಯಾಗಿದೆ (DBT) ಜುಲೈ ತಿಂಗಳಿನಿಂದ ಈ ಯೋಜನೆ ಆರಂಭವಾಗಿತ್ತು. ಈಗ ಸಪ್ಟೆಂಬರ್ ತಿಂಗಳಿನ ಅಂದರೆ ಮೂರನೆ ಕಂತಿನ ಹಣದ ಬಿಡುಗಡೆಯ ನಿರೀಕ್ಷೆಯಲ್ಲಿ ಇದ್ದಾರೆ ಜನ.
ಕೆಲವೇ ದಿನಗಳಲ್ಲಿ ರದ್ದಾಗಲಿದೆ ಇಂತಹ ಜನರ ರೇಷನ್ ಕಾರ್ಡ್! ಸರ್ಕಾರ ಖಡಕ್ ಸೂಚನೆ
ಇನ್ನು ಯಾರೆಲ್ಲ ಈ ಸಮಸ್ಯೆಯನ್ನು ಸರಿಪಡಿಸಿಕೊಂಡಿದ್ದಾರೋ ಅಂತವರಿಗೆ ಆಗಸ್ಟ್ ತಿಂಗಳಿನಲ್ಲಿ ಹಣ ಸಂದಾಯವಾಗಿದೆ. ಈಗ ಮೂರನೇ ಕಂತಿನ ಹಣ ಬಿಡುಗಡೆ ಬಗ್ಗೆ ಜನರ ನಿರೀಕ್ಷೆ ಆರಂಭವಾಗಿದೆ.
ಗೃಹಲಕ್ಷ್ಮಿ ಯೋಜನೆ ಬೆನ್ನಲ್ಲೇ ಮಹಿಳೆಯರಿಗೆ ₹5000 ಸಿಗುವ ಮತ್ತೊಂದು ಹೊಸ ಯೋಜನೆ ಜಾರಿ
ಸಪ್ಟೆಂಬರ್ 22ನೇ ತಾರೀಖಿನಿಂದ ಅನ್ನಭಾಗ್ಯ ಯೋಜನೆಯ ಮೂರನೇ ಕಂತಿನ ಹಣ ಬಿಡುಗಡೆ ಮಾಡಿರುವ ಸರ್ಕಾರ ಈಗಾಗಲೇ ಹಲವರ ಖಾತೆಗೆ ಹಣ ಜಮಾ ಮಾಡಿದೆ. ಆದರೆ ಇಲ್ಲಿ ಪ್ರತಿಯೊಬ್ಬರೂ ನೆನಪಿಟ್ಟುಕೊಳ್ಳಬೇಕಾದ ಪ್ರಮುಖ ವಿಷಯ ಅಂದರೆ ಸರ್ಕಾರ ಒಮ್ಮೆ ಹಣ ಬಿಡುಗಡೆ ಮಾಡಿದ ನಂತರ ಅದು ಎಲ್ಲರ ಖಾತೆಗೆ ಒಂದೇ ದಿನ ಹೋಗಿ ತಲುಪುವುದಿಲ್ಲ.
ರಾಜ್ಯದಲ್ಲಿರುವ ಕೋಟ್ಯಂತರ ಫಲಾನುಭವಿಗಳ ಖಾತೆಗೆ ಒಂದೇ ದಿನ ನೇರ ವರ್ಗಾವಣೆ ಮಾಡಲು ಸಾಧ್ಯವಿಲ್ಲ, ಹಾಗಾಗಿ ಸೆಪ್ಟೆಂಬರ್ ತಿಂಗಳ ಹಣ ಅಕ್ಟೋಬರ್ 15ನೇ ತಾರೀಖಿನವರೆಗೂ ಕೂಡ ಸಂದಾಯವಾಗುತ್ತದೆ.
ಅಂತ್ಯೋದಯ ಹಾಗೂ ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವವರಿಗೆ ಮಾತ್ರ ಈ ಯೋಜನೆ ಪ್ರಯೋಜನ ಪಡೆದುಕೊಳ್ಳಬಹುದು. ಎಪಿಎಲ್ ಕಾರ್ಡ್ ಇದ್ದವರಿಗೆ ಉಚಿತ ಅಕ್ಕಿಯಾಗಲಿ ಹಣವಾಗಲಿ ಸಿಗೋದಿಲ್ಲ.
ಗೃಹಜ್ಯೋತಿ! ಯಾರಿಗೆ ಇನ್ನೂ ಜೀರೋ ಬಿಲ್ ಬಂದಿಲ್ವೋ ಅಂತವರಿಗೆ ಗುಡ್ ನ್ಯೂಸ್ ಕೊಟ್ಟ ಸರ್ಕಾರ
ಇನ್ನು ಯಾರು ಹೊಸದಾಗಿ ರೇಷನ್ ಕಾರ್ಡ್ (Ration Card) ಅಪ್ಲೈ ಮಾಡಿದ್ದೀರೋ ಅಂತವರಿಗೆ ಸದ್ಯದಲ್ಲಿಯೇ ಹೊಸ ಕಾರ್ಡ್ ಕೂಡ ಸರ್ಕಾರ ನೀಡಲಿದೆ. ಆಗ ಎಪಿಎಲ್ ಕಾರ್ಡ್ ಸಿಕ್ಕವರು ಪಡಿತರ ಹಾಗೂ ಅನ್ನಭಾಗ್ಯ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು.
Annabhagya 3rd installment money cannot be deposited in the bank account of such people