ಗೃಹಲಕ್ಷ್ಮಿ ಯೋಜನೆ ಬೆನ್ನಲ್ಲೇ ಮಹಿಳೆಯರಿಗೆ ₹5000 ಸಿಗುವ ಮತ್ತೊಂದು ಹೊಸ ಯೋಜನೆ ಜಾರಿ

Story Highlights

ಮಾತೃ ವಂದನಾ ಯೋಜನೆಯ ಅಡಿಯಲ್ಲಿ ಮಹಿಳೆಯರಿಗೆ 5000ಗಳನ್ನು ಸರ್ಕಾರ ಒದಗಿಸುತ್ತದೆ, 19 ವರ್ಷ ಮೇಲ್ಪಟ್ಟ ಮಹಿಳೆಯರು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು.

ಯಾವುದೇ ದೇಶ ಆರ್ಥಿಕವಾಗಿ ಸದೃಢವಾಗುವುದಕ್ಕೆ, ಆರೋಗ್ಯದ ವಿಚಾರದಲ್ಲಿ ಹೆಚ್ಚಿನ ಗಮನ ನೀಡುವುದು ಮುಖ್ಯವಾಗಿರುತ್ತದೆ, ದೇಶದ ಪ್ರಜೆಗಳ ಆರೋಗ್ಯ ಸುಸ್ಥಿತಿಯಲ್ಲಿ ಇದ್ದರೆ ದೇಶದ ಆರ್ಥಿಕ ಬೆಳವಣಿಗೆ ಕೂಡ ತನ್ನಿಂದ ತಾನಾಗಿಯೇ ಆಗುತ್ತದೆ.

ಈ ಕಾರಣಕ್ಕೆ ಕೇಂದ್ರ ಸರ್ಕಾರ (Central government) ಮಹಿಳೆಯರಿಗೆ ಅದರಲ್ಲೂ ಗರ್ಭಿಣಿ ಸ್ತ್ರೀಯರಿಗೂ ಕೂಡ ಆರೋಗ್ಯಕ್ಕೆ ಬೆನಿಫಿಟ್ (Health benefits) ಆಗುವಂತಹ ಯೋಜನೆಗಳನ್ನು ಜಾರಿಗೆ ತಂದಿದೆ.

ಗೃಹಜ್ಯೋತಿ! ಯಾರಿಗೆ ಇನ್ನೂ ಜೀರೋ ಬಿಲ್ ಬಂದಿಲ್ವೋ ಅಂತವರಿಗೆ ಗುಡ್ ನ್ಯೂಸ್ ಕೊಟ್ಟ ಸರ್ಕಾರ

ಪ್ರಧಾನ ಮಂತ್ರಿ ಮಾತೃವಂದನ ಯೋಜನೆ;

ಒಬ್ಬ ತಾಯಿ ಹೊಟ್ಟೆಯಲ್ಲಿ ಒಂಬತ್ತು ತಿಂಗಳು ಮಗುವನ್ನು ಇಟ್ಟುಕೊಂಡು ಹೊತ್ತು ಸಾಕುತ್ತಾಳೆ. ಇನ್ನು ಮಗು ಹೊಟ್ಟೆಯಲ್ಲಿ ಇರುವಾಗ ತಾಯಿಯ ಆರೋಗ್ಯ ಹಾಗೂ ಆ ಮಗುವಿನ ಆರೋಗ್ಯ ಎರಡು ಬಹಳ ಮುಖ್ಯವಾಗಿರುತ್ತೆ, ಇಲ್ಲವಾದರೆ ಆರೋಗ್ಯದ ಸಮಸ್ಯೆ ಕಾಣಿಸಿಕೊಳ್ಳಬಹುದು.

ಬಡವರಿಗೆ ಸರಿಯಾದ ಪೋಷಕಾಂಶಯುಕ್ತ ಆಹಾರವನ್ನು ಗರ್ಭವಸ್ಥೆ (Pregnancy) ಯಲ್ಲಿ ಒದಗಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಇದರಿಂದ ತಾಯಿಗೆ ಮಾತ್ರವಲ್ಲದೆ ಮಗುವಿಗೂ ಕೂಡ ಹುಟ್ಟುವಾಗಲೇ ಪೋಷಕಾಂಶದ ಕೊರತೆ ಕಾಣಿಸಿಕೊಳ್ಳುತ್ತದೆ. ಇದರಿಂದಾಗಿ ಭವಿಷ್ಯದಲ್ಲಿ ಮಕ್ಕಳು ಆರೋಗ್ಯದ ಸಮಸ್ಯೆ ಅನುಭವಿಸ ಬೇಕಾಗಬಹುದು.

ಇದು ಗಮನಿಸಿರುವ ಸರ್ಕಾರ ಪ್ರಧಾನಮಂತ್ರಿ ಮಾತೃ ವಂದನಾ ಎನ್ನುವ (PM Matru Vandana scheme) ಯೋಜನೆಯನ್ನು ಜಾರಿಗೆ ತಂದಿದೆ. ಇದು ಬಡತನ ರೇಖೆಗಿಂತ ಕೆಳಗಿರುವ ಗರ್ಭಿಣಿ ಸ್ತ್ರೀಯರಿಗೆ ಸಿಗುವ ಪ್ರಯೋಜನವಾಗಿದ್ದು ಈ ಯೋಜನೆಯ ಅಡಿಯಲ್ಲಿ 5000ರೂ. ಗಳನ್ನು ಮಹಿಳೆಗೆ ನೀಡಲಾಗುವುದು.

ಫ್ರೀ ಬಸ್ ಸೌಲಭ್ಯ, ಮಹಿಳೆಯರಿಗೆ ಮತ್ತೊಂದು ಸಿಹಿ ಸುದ್ದಿ! ಸರ್ಕಾರದಿಂದ ಮಹತ್ವದ ನಿರ್ಧಾರ

ಮಾತೃ ವಂದನ ಯೋಜನೆ ವಿಶೇಷವಾಗಿ ಗರ್ಭಿಣಿ ಸ್ತ್ರೀಯರಿಗಾಗಿಯೇ ಆರಂಭಿಸಲಾಗಿದ್ದು ತಾಯಿ ಹಾಗೂ ಮಗುವಿನ ಆರೋಗ್ಯಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ಒದಗಿಸುವ ಸಲುವಾಗಿ ಆರ್ಥಿಕ ನೆರವು ನೀಡುವ ಯೋಜನೆ ಇದಾಗಿದೆ.

ಮಕ್ಕಳಲ್ಲಿ ಅಪೌಷ್ಟಿಕತೆ ರಕ್ತ ಹೀನತೆ ಮೊದಲಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದ್ದು ಇವುಗಳನ್ನು ಹೋಗಲಾಡಿಸುವ ಸಲುವಾಗಿ ಕೇಂದ್ರ ಸರ್ಕಾರ ಈ ಯೋಜನೆಯನ್ನು ಆರಂಭಿಸಿದೆ.

ಮಹಿಳೆಯರಿಗೆ ಸಿಗುತ್ತೆ 5000 ರೂಪಾಯಿಗಳು:

Pradhan Mantri Matru Vandana Yojana Detailsಮಾತೃ ವಂದನಾ ಯೋಜನೆಯ ಅಡಿಯಲ್ಲಿ ಮಹಿಳೆಯರಿಗೆ 5000ಗಳನ್ನು ಸರ್ಕಾರ ಒದಗಿಸುತ್ತದೆ. ಗರ್ಭಿಣಿ ಸ್ತ್ರೀ PMMVY ಯೋಜನೆಯಲ್ಲಿ ನೊಂದಾಯಿಸಿಕೊಂಡ ತಕ್ಷಣ 1000 ರೂಪಾಯಿಗಳು, ಆರು ತಿಂಗಳ ನಂತರ 2,000 ರೂಪಾಯಿ ಹಾಗೂ ಮಗು ಜನನವಾದ ನಂತರ 2,000ಗಳನ್ನು ನೀಡಲಾಗುತ್ತದೆ.

ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳಲು ಅವಕಾಶ! ರಾಜ್ಯ ಸರ್ಕಾರದ ಬೀಗ್ ಅಪ್ಡೇಟ್ ಇಲ್ಲಿದೆ

ಯೋಜನೆಯ ಪ್ರಯೋಜನ ಪಡೆದುಕೊಳ್ಳುವುದು ಹೇಗೆ?

ಅರ್ಜಿ ಸಲ್ಲಿಸುವವರು ಬಡ ವರ್ಗಕ್ಕೆ ಸೇರಿದವರಾಗಿರಬೇಕು. ಭಾರತೀಯ ನಿವಾಸಿಗಳಾಗಿರಬೇಕು. 19 ವರ್ಷ ಮೇಲ್ಪಟ್ಟ ಮಹಿಳೆಯರು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು.

ಇನ್ನು ಎರಡನೇ ಮಗುವಿನ ಜನನ ಸಂದರ್ಭದಲ್ಲಿ ಮಾತೃ ವಂದನ ಯೋಜನೆಯ ಪ್ರಯೋಜನ ಸಿಗುತ್ತಿರಲಿಲ್ಲ ಈಗ ಎರಡನೇ ಮಗುವಿಗೂ ಕೂಡ ಈ ಯೋಜನೆಯ ಪ್ರಯೋಜನ ಸಿಗಬೇಕು ಎಂದು ಸರ್ಕಾರ ನಿರ್ಧರಿಸಿದೆ.

ಮೊದಲಿಗೆ ಸರ್ಕಾರದ ಅಧಿಕೃತ ವೆಬ್ಸೈಟ್ https://wcd.nic.in/schemes/pradhan-mantri-matru-vandana-yojana ಗೆ ಭೇಟಿ ನೀಡಿ.

ಇಲ್ಲಿ ನೀವು ನಿಮ್ಮ ಮಾಹಿತಿಗಳನ್ನು ನೀಡುವುದರ ಮೂಲಕ ಮಾತೃವಂದನಾ ಯೋಜನೆಯ ಹಣ ಬರುವಂತೆ ಮಾಡಿಕೊಳ್ಳುವುದು.

ಈ ಯೋಜನೆಗೆ ಸಂಬಂಧಪಟ್ಟಂತೆ ಹಣ ಬರುವಂತೆ ಮಾಡಿಕೊಳ್ಳಲು ನಿಮ್ಮ ಹತ್ತಿರದ ಅಂಗನವಾಡಿ ಸಹಾಯಕಿಯರು ಅಥವಾ ಆಶಾ ಕಾರ್ಯಕರ್ತೆಯರನ್ನು ಸಹ ಸಂಪರ್ಕಿಸಬಹುದು.

ಈ 10 ಜಿಲ್ಲೆಗಳಿಗೆ ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆ! ಬಿಗ್ ಅಪ್ಡೇಟ್ ಕೊಟ್ಟ ರಾಜ್ಯ ಸರ್ಕಾರ

Another new scheme has been launched after the Gruha Lakshmi Yojana where women will get Rs 5000

Related Stories