ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳಲು ಅವಕಾಶ! ರಾಜ್ಯ ಸರ್ಕಾರದ ಬೀಗ್ ಅಪ್ಡೇಟ್ ಇಲ್ಲಿದೆ

ಹೊಸ ರೇಷನ್ ಕಾರ್ಡ್ ಯಾವಾಗಿನಿಂದ ಸಲ್ಲಿಕೆ ಮಾಡಲಾಗುವುದು ಎನ್ನುವುದರ ಬಗ್ಗೆ ನಿಖರ ದಿನಾಂಕವನ್ನು ಸರ್ಕಾರ ತಿಳಿಸಿಲ್ಲ. ಆದರೆ ಬಹುತೇಕ ಪರಿಶೀಲನ ಕೆಲಸ ಮುಗಿದಿದ್ದು ಸದ್ಯದಲ್ಲಿಯೇ ರೇಷನ್ ಕಾರ್ಡ್ ವಿತರಣೆ ಆರಂಭವಾಗಲಿದೆ

ಇತ್ತೀಚಿನ ದಿನಗಳಲ್ಲಿ ಕರ್ನಾಟಕ ರಾಜ್ಯದಲ್ಲಿ ವಿಶೇಷವಾಗಿ ರೇಷನ್ ಕಾರ್ಡ್ (ration card) ಗೆ ಸಂಬಂಧಪಟ್ಟ ಹಾಗೆ ಸರ್ಕಾರದಿಂದ ಹೊಸ ಹೊಸ ಮಾರ್ಗಸೂಚಿಗಳು ಹೊರ ಬರುತ್ತಿವೆ.

ಇಲ್ಲಿಯವರೆಗೆ ಯಾರ ಬಳಿ ಬಿಪಿಎಲ್ ಕಾರ್ಡ್ (BPL card) ಇದೆಯೋ ಅಂತವರು ಹೋಗಿ ರೇಷನ್ ಅನ್ನು ಉಚಿತವಾಗಿ (free ration) ಪಡೆಯಬಹುದಿತ್ತು. ಆದರೆ ಈಗ ಪಡಿತರ ಚೀಟಿ ಹೊಂದಿದ್ದರೆ ರೇಷನ್ ಪಡೆಯುವುದು ಮಾತ್ರವಲ್ಲದೆ ಸರ್ಕಾರದ ಗ್ಯಾರಂಟಿ ಯೋಜನೆಯ (government guarantee schemes) ಪ್ರಯೋಜನವನ್ನು ಪಡೆಯಬಹುದಾಗಿದೆ.

ಈ 10 ಜಿಲ್ಲೆಗಳಿಗೆ ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆ! ಬಿಗ್ ಅಪ್ಡೇಟ್ ಕೊಟ್ಟ ರಾಜ್ಯ ಸರ್ಕಾರ

ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳಲು ಅವಕಾಶ! ರಾಜ್ಯ ಸರ್ಕಾರದ ಬೀಗ್ ಅಪ್ಡೇಟ್ ಇಲ್ಲಿದೆ - Kannada News

ಇದೇ ಕಾರಣಕ್ಕೆ ರಾಜ್ಯದ ಜನತೆ ರೇಷನ್ ಕಾರ್ಡ್ ಪಡೆಯುವುದಕ್ಕೆ ಮುಂದಾಗಿದ್ದಾರೆ.

ಎರಡು ಲಕ್ಷಕ್ಕೂ ಹೆಚ್ಚಿನ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ:

ರಾಜ್ಯ ಚುನಾವಣೆಗೂ ಮೊದಲೇ ಎರಡು ಲಕ್ಷಕ್ಕೂ ಹೆಚ್ಚಿನ ಪಡಿತರ ಚೀಟಿ ಅರ್ಜಿಗಳು ರಾಜ್ಯಕ್ಕೆ ಸಲ್ಲಿಕೆಯಾಗಿದೆ. ಆದರೆ ಈವರೆಗೂ ರೇಷನ್ ಕಾರ್ಡ್ ಪರಿಶೀಲನೆ ಆಗಲಿ ಅಥವಾ ಅದನ್ನು ಜನರಿಗೆ ನೀಡುವ ಕೆಲಸವಾಗಲಿ ಆಗಿರಲಿಲ್ಲ.

ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವ ಆನ್ಲೈನ್ ವೆಬ್ಸೈಟ್ಗಳು (online website) ಕೂಡ ಸ್ಥಗಿತಗೊಂಡಿದೆ. ಹಾಗಾಗಿ ಗ್ಯಾರಂಟಿ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಸಾಧ್ಯವಾಗದೆ ಲಕ್ಷಾಂತರ ಜನ ಸಮಸ್ಯೆ ಅನುಭವಿಸುವಂತಾಗಿದೆ.

ಇವೆಲ್ಲವನ್ನ ಮನಗಂಡ ರಾಜ್ಯ ಸರ್ಕಾರ ಈಗಾಗಲೇ ರೇಷನ್ ಕಾರ್ಡ್ ನಲ್ಲಿ ಅಗತ್ಯ ಇರುವ ಮಾಹಿತಿ ತಿದ್ದುಪಡಿ (ration card correction) ಮಾಡಿಕೊಳ್ಳಲು ಅವಕಾಶ ನೀಡಿತ್ತು. ಇದರ ಜೊತೆಗೆ ಮತ್ತೊಂದು ಗುಡ್ ನ್ಯೂಸ್ ಅನ್ನು ಕೂಡ ಸರ್ಕಾರ ನೀಡಿದೆ.

BPL Ration Card

 

ಹೊಸ ರೇಷನ್ ಕಾರ್ಡ್‌ಗಾಗಿ ಕಾಯುತ್ತಿರುವವರಿಗೆ ಗುಡ್ ನ್ಯೂಸ್! ಸರ್ಕಾರದ ಮಹತ್ವದ ಆದೇಶ

ಅರ್ಜಿಗಳನ್ನು ತೆಗೆದುಕೊಳ್ಳುತ್ತಿಲ್ಲ ಆದರೆ ಈಗಾಗಲೇ ಸಲ್ಲಿಕೆಯಾಗಿರುವ ಅರ್ಜಿಗಳ ಪರಿಶೀಲನೆ ನಡೆಯುತ್ತಿದೆ. 75% ನಷ್ಟು ಪರಿಶೀಲನೆ ಮುಗಿತಿದ್ದು ಸದ್ಯದಲ್ಲಿಯೇ ಫಲಾನುಭವಿಗಳ ಕೈಗೆ ಎಪಿಎಲ್ (APL) ಹಾಗೂ ಬಿಪಿಎಲ್ ರೇಷನ್ ಕಾರ್ಡ್ ಸಂದಾಯವಾಗಲಿದೆ.

ರೇಷನ್ ಕಾರ್ಡ್ ಪಡೆದುಕೊಂಡಿರುವವರು ಬ್ಯಾಂಕ್ ಖಾತೆಯ (Bank Account) ಹಾಗೂ ಆಧಾರ್ ಕಾರ್ಡ್ ಮ್ಯಾಪಿಂಗ್ ಮಾಡಿಸಿಕೊಳ್ಳಬೇಕು. ಈಕೆವೈಸಿ (ekyc) ಆಗದೇ ಇರುವ ಖಾತೆಗೆ ಖಂಡಿತವಾಗಿಯೂ ಸರ್ಕಾರದ ಅನ್ನಭಾಗ್ಯ (Anna Bhagya scheme) ಯೋಜನೆಯ ಹಣವಾಗಲಿ ಅಥವಾ ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ರೂಪಾಯಿಗಳಾಗಲಿ ಬರುವುದಿಲ್ಲ.

ಸಾಕಷ್ಟು ಬಾರಿ ಸರ್ಕಾರ ಈ ವಿಚಾರವನ್ನು ತಿಳಿಸಿದರೂ ಕೂಡ ಜನ ಈಗಲೂ ಅದೇ ತಪ್ಪು ಮಾಡುತ್ತಿದ್ದಾರೆ. ಕಾರಣಕ್ಕೆ ಹಲವರ ಖಾತೆಗೆ ಹಣ ನೇರವಾಗಿ ವರ್ಗಾವಣೆ ಆಗಿಲ್ಲ.

ಗೃಹಜ್ಯೋತಿ ಯೋಜನೆಯ ಜೀರೋ ಬಿಲ್ ಬಂತಾ? ಇಲ್ವಾ? ಇಲ್ಲಿದೆ ಫ್ರೀ ಕರೆಂಟ್ ಬಗ್ಗೆ ಬಿಗ್ ಅಪ್ಡೇಟ್

ಹೊಸ ರೇಷನ್ ಕಾರ್ಡ್ ಯಾವಾಗಿನಿಂದ ಸಲ್ಲಿಕೆ ಮಾಡಲಾಗುವುದು ಎನ್ನುವುದರ ಬಗ್ಗೆ ನಿಖರ ದಿನಾಂಕವನ್ನು ಸರ್ಕಾರ ತಿಳಿಸಿಲ್ಲ. ಆದರೆ ಬಹುತೇಕ ಪರಿಶೀಲನ ಕೆಲಸ ಮುಗಿದಿದ್ದು ಸದ್ಯದಲ್ಲಿಯೇ ರೇಷನ್ ಕಾರ್ಡ್ ವಿತರಣೆ ಆರಂಭವಾಗಲಿದೆ ಎಂದು ಸರ್ಕಾರದಿಂದ ಸಿಕ್ಕಿರುವ ಅಧಿಕೃತ ಮಾಹಿತಿ ಆಗಿದೆ. ರೇಷನ್ ಕಾರ್ಡ್ ಸಿಕ್ಕ ನಂತರ ಮತ್ತೆ ಗೃಹಲಕ್ಷ್ಮಿ ಯೋಜನೆಗೆ ಫಲಾನುಭವಿಗಳು ಅರ್ಜಿ ಸಲ್ಲಿಸಬಹುದಾಗಿದೆ.

Opportunity to get new ration card, Big Update of State Govt

Follow us On

FaceBook Google News

Opportunity to get new ration card, Big Update of State Govt