ಈ 10 ಜಿಲ್ಲೆಗಳಿಗೆ ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆ! ಬಿಗ್ ಅಪ್ಡೇಟ್ ಕೊಟ್ಟ ರಾಜ್ಯ ಸರ್ಕಾರ
ಗೃಹಲಕ್ಷ್ಮಿಯ(Gruha Lakshmi scheme) ಮೊದಲನೇ ಕಂತಿನ ಹಣ ಬಿಡುಗಡೆಯಾಗಿ (first installment released) ಒಂದು ತಿಂಗಳಿಗೆ ಇನ್ನೊಂದು ನಾಲ್ಕೈದು ದಿನ ಬಾಕಿ ಇದೆ ಯಾವುದೇ ಯೋಜನೆ ಇರಲಿ ಒಂದು ಸೈಕಲ್ ಆಧಾರದ ಮೇಲೆ ಹಣ ಬಿಡುಗಡೆ ಮಾಡಲಾಗುತ್ತೆ, ಗೃಹಲಕ್ಷ್ಮಿ ಯೋಜನೆಗೂ ಕೂಡ ಇದೇ ನಿಯಮ ಅಪ್ಲೈ ಆಗುತ್ತೆ.
ಅಗಸ್ಟ್ 30 ರಿಂದ ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಗೃಹಿಣಿಯರಿಗೆ 2000 ರೂ.ಗಳನ್ನು ಅವರ ಖಾತೆಗೆ (Bank Account) ಪ್ರತಿ ತಿಂಗಳು ಹಾಕುವ ಪ್ರಕ್ರಿಯೆ ಆರಂಭವಾಯಿತು. ಇದರಿಂದ ಒಟ್ಟು 82 ಲಕ್ಷ ಮಹಿಳೆಯರ ಖಾತೆಗೆ 2ಸಾವಿರ ರೂಪಾಯಿ ಜಮಾ (DBT)ಆಗಿದೆ.
ಹೊಸ ರೇಷನ್ ಕಾರ್ಡ್‌ಗಾಗಿ ಕಾಯುತ್ತಿರುವವರಿಗೆ ಗುಡ್ ನ್ಯೂಸ್! ಸರ್ಕಾರದ ಮಹತ್ವದ ಆದೇಶ
ಎಲ್ಲರ ಖಾತೆಗೂ ಬಂದಿಲ್ಲ ಮೊದಲ ಕಂತಿನ ಹಣ
ಅರ್ಜಿ ಸಲ್ಲಿಸಿದ 1.13 ಕೋಟಿ ಮಹಿಳೆಯರಲ್ಲಿ 82 ಲಕ್ಷ ಮಹಿಳೆಯರ ಖಾತೆಗೆ 2000 ಜಮಾ ಆಗಿದೆ ಎಂದು ಸರ್ಕಾರ ಮಾಹಿತಿ ನೀಡಿದೆ. ಆದರೆ ಉಳಿದವರ ಕಥೆ ಏನು ಎಂಬುದು ಇಲ್ಲಿ ಯಕ್ಷ ಪ್ರಶ್ನೆ.
ಗೃಹಲಕ್ಷ್ಮಿ ಹಣ ನಿಮ್ಮ ಖಾತೆಗೆ (Gruha Lakshmi Scheme) ಬರಬೇಕು ಅಂದ್ರೆ ಪ್ರಮುಖ ದಾಖಲೆಗಳನ್ನು (documents) ನೀವು ಹೊಂದಿರಲೇಬೇಕು. ಬ್ಯಾಂಕಿನಲ್ಲಿ ಖಾತೆ (Bank Account) ಹೊಂದಿದ್ದರೆ ಸಾಲೊದಿಲ್ಲ ಅದು ಈ ಕೆ ವೈ ಸಿ (EKYC) ಆಗಿರಬೇಕು ಆಧಾರ್ ಕಾರ್ಡ್ ಸೀಡಿಂಗ್ (Aadhar seeding) ಆಗಿರಬೇಕು, ರೇಷನ್ ಕಾರ್ಡ್ ನಲ್ಲಿ ಮಹಿಳೆಯದ್ದೆ ಮೊದಲ ಹೆಸರಾಗಿರಬೇಕು.
ಆಧಾರ್ ಕಾರ್ಡ್ ರೇಷನ್ ಕಾರ್ಡ್ (ration card) ಬ್ಯಾಂಕ್ ಖಾತೆಯಲ್ಲಿ ಮಹಿಳೆಯ ಹೆಸರು ಒಂದಕ್ಕೊಂದು ಮ್ಯಾಚ್ ಆಗಬೇಕು. ಎಲ್ಲಾ ಸರಿ ಇದ್ದರೂ ನಿಮ್ಮ ಬ್ಯಾಂಕಕ್ ಖಾತೆ ಆಕ್ಟಿವ್ (active) ಆಗಿಲ್ಲ ಅಂದರೂ ಕೂಡ ಹಣ ಬರುವುದಿಲ್ಲ.
ಈ ತಪ್ಪು ಮಾಡಿದ್ರೆ ಗೃಹಲಕ್ಷ್ಮಿ ಯೋಜನೆ ₹2,000 ಬರೋದಿರಲಿ, ನಿಮ್ಮ ಮೇಲೆಯೇ ಬೀಳುತ್ತೆ ದಂಡ
ಇದರ ಬಗ್ಗೆ ಸಾಕಷ್ಟು ಮಾಹಿತಿಯನ್ನು ಸರ್ಕಾರ ಹಾಗೂ ಇತರ ಸೋಶಿಯಲ್ ಮೀಡಿಯಾದ (social media) ಸುದ್ದಿಗಳು ಜನರಿಗೆ ತಿಳಿಸಿದರು, ಸಾಕಷ್ಟು ಜನ ಈ ತಪ್ಪುಗಳನ್ನು ಸರಿ ಮಾಡಿಕೊಂಡಿಲ್ಲ.
ಈ ಕಾರಣದಿಂದ ಅಂಥವರ ಖಾತೆಗೆ ಹಣ ಬಂದಿಲ್ಲ, ಸರ್ಕಾರದ ಕಡೆಯಿಂದಲೂ ಸರ್ವರ್ ಸಮಸ್ಯೆ ಇತ್ತು, ಆರ್‌ಬಿಐ ಹಂತ ಹಂತವಾಗಿ ಹಣ ಬಿಡುಗಡೆ ಮಾಡುತ್ತಿರುವುದು ಮೊದಲಾದ ಕಾರಣಗಳಿಂದಲೂ ಮೊದಲ ಕಂತಿನ ಹಣ ಹಲವು ಮಹಿಳೆಯರಿಗೆ ಸಿಕ್ಕಿಲ್ಲ.
ಸರ್ಕಾರ ನೀಡಿದೆ ಗುಡ್ ನ್ಯೂಸ್
ಈಗ ಮೊದಲ ಕಂತಿನ ಹಣ ಯಾರಿಗೆ ಸಂದಾಯವಾಗಿಲ್ಲವೋ ಅವರಿಗೆ ಎರಡನೇ ಕಂತಿನ ಹಣವನ್ನು ಸೇರಿಸಿ ನಾಲ್ಕು ಸಾವಿರ ರೂಪಾಯಿಗಳನ್ನು ನೀಡುವುದಾಗಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಇದೀಗ ಆಗಸ್ಟ್ ತಿಂಗಳ ಮೊದಲ ಕಂತಿನ ಹಣವನ್ನು ಸೆಪ್ಟೆಂಬರ್ ಶೀಘ್ರವೇ ಈ 10 ಜಿಲ್ಲೆಗಳಿಗೆ ಬಿಡುಗಡೆ ಮಾಡಲಾಗುವುದು.
ಗೃಹಜ್ಯೋತಿ ಯೋಜನೆಯ ಜೀರೋ ಬಿಲ್ ಬಂತಾ? ಇಲ್ವಾ? ಇಲ್ಲಿದೆ ಫ್ರೀ ಕರೆಂಟ್ ಬಗ್ಗೆ ಬಿಗ್ ಅಪ್ಡೇಟ್
ಜಿಲ್ಲೆ ಯಾವುದೆಂದರೆ
ರಾಯಚೂರು
ಕಲಬುರ್ಗಿ
ಬೀದರ್
ಮಂಡ್ಯ
ಹಾಸನ
ಕೊಡಗು
ಚಿಕ್ಕಮಗಳೂರು
ಉಡುಪಿ
ಬಳ್ಳಾರಿ
ಯಾದಗಿರಿ.
ಅಂದರೆ ಇನ್ನೂ ಕೆಲವೇ ದಿನಗಳಲ್ಲಿ ಈ ಎಲ್ಲಾ ಜಿಲ್ಲೆಗಳ ಫಲಾನುಭವಿಗಳಿಗೆ ಅವರ ಮೊದಲ ಕಂತಿನ ಹಣ ಸಂಪೂರ್ಣವಾಗಿ ಜಮಾ ಆಗುತ್ತೆ ಎಂದು ಹೇಳಲಾಗಿದೆ.
ನಿಮ್ಮ ರೇಷನ್ ಕಾರ್ಡ್ ರದ್ದಾಗಿದೆಯೋ ಚಾಲ್ತಿಯಲ್ಲಿದೆಯೋ ಸ್ಟೇಟಸ್ ಚೆಕ್ ಮಾಡಿ! ಹೊಸ ಲಿಂಕ್ ಬಿಡುಗಡೆ
ಎರಡನೇ ಕಂತಿನ ಹಣ ಬಿಡುಗಡೆ ದಿನಾಂಕ ಫಿಕ್ಸ್!
ಸೆಪ್ಟೆಂಬರ್ 30ನೇ ತಾರೀಖಿನಿಂದ 2ನೇ ಕಂತಿನ ಹಣ ಬಿಡುಗಡೆ ಆಗಬಹುದು. ಅಗಸ್ಟ್ 30ಕ್ಕೆ ಆರಂಭವಾದ ಹಣ ಬಿಡುಗಡೆ ಮಾಡುವ ಪ್ರಕ್ರಿಯೆ ಸೆಪ್ಟೆಂಬರ್ 30ಕ್ಕೆ ಮುಗಿಯುತ್ತದೆ ಅಲ್ಲಿಗೆ ಮೊದಲ ಕಂತಿನ ಹಣ ಸಂದಾಯವಾಗಿ ಎರಡನೇ ಕಂತಿನ ಹಣ ಬಿಡುಗಡೆ ಆರಂಭವಾಗುತ್ತದೆ.
ಎರಡನೇ ಕಂತಿನ ಹಣ ಬಿಡುಗಡೆ ಆಗಿ ಅದು ಗೃಹಿಣಿಯರ ಖಾತೆಗೆ ತಲುಪಲು ಮತ್ತೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಅಂದ್ರೆ ಎಲ್ಲಾ ಗೃಹಿಣಿಯರ ಖಾತೆಗೆ 2ನೇ ಕಂತಿನ ಹಣ ಒಂದು ಸೇರಲು ಅಕ್ಟೋಬರ್ 30ರವರೆಗೂ ಸಮಯ ಇರುತ್ತದೆ. ಹಾಗಾಗಿ ಸದ್ಯದಲ್ಲಿಯೇ ಮೊದಲ ಕಂತಿನ ಹಣ ಪ್ರತಿ ಫಲಾನುಭವಿ ಮಹಿಳೆಯರ ಖಾತೆಗೂ ಬಂದು ಸೇರುವ ನಿರೀಕ್ಷೆ ಇದೆ.
Gruha Lakshmi scheme funds are released for these 10 districts