ನಿಮ್ಮ ರೇಷನ್ ಕಾರ್ಡ್ ರದ್ದಾಗಿದೆಯೋ ಚಾಲ್ತಿಯಲ್ಲಿದೆಯೋ ಸ್ಟೇಟಸ್ ಚೆಕ್ ಮಾಡಿ! ಹೊಸ ಲಿಂಕ್ ಬಿಡುಗಡೆ

ರೇಷನ್ ಕಾರ್ಡ್ ಅಪ್ಡೇಟ್ (Ration Card Update) ಮಾಡಿದ ನಂತರ ಅದರ ಸ್ಥಿತಿ ಹೇಗಿದೆ (Check Status) ಅಥವಾ ಈಗಾಗಲೇ ರೇಷನ್ ಕಾರ್ಡ್ ರದ್ದಾಗಿದೆಯೋ ಇಲ್ಲವೋ ಇವೆಲ್ಲವನ್ನೂ ತಿಳಿದುಕೊಳ್ಳಿ

Bengaluru, Karnataka, India
Edited By: Satish Raj Goravigere

ರಾಜ್ಯ ಸರ್ಕಾರದ (State Government) ಬಿಡುಗಡೆ ಮಾಡಿರುವ ಯೋಜನೆಗಳು ಸಾಕಷ್ಟು ಜನರಿಗೆ ಪ್ರಯೋಜನ ಒದಗಿಸಿದೆ, ಅದರ ಜೊತೆಗೆ ಒಂದಿಷ್ಟು ಗೊಂದಲಗಳನ್ನು ಕೂಡ ಕ್ರಿಯೇಟ್ ಮಾಡಿವೆ. ಇದಕ್ಕೆ ಮುಖ್ಯ ಕಾರಣ ಸರ್ಕಾರದ ಯೋಜನೆಗಳಿಗೆ ರೇಷನ್ ಕಾರ್ಡ್ (Ration card) ಹೊಂದಿರುವುದು ಕಡ್ಡಾಯ.

ಬಿಪಿಎಲ್ ಕಾರ್ಡ್ (BPL Card) ಹೊಂದಿರುವವರಿಗೆ ಅನ್ನಭಾಗ್ಯ ಯೋಜನೆಯ (Annabhagya Scheme) ಅಕ್ಕಿ ಬದಲಿನ ಹಣ ಅವರ ಖಾತೆಗೆ (Bank Account) ಜಮಾ ಆಗುತ್ತದೆ. ಗೃಹಲಕ್ಷ್ಮಿ ಯೋಜನೆಯ (Gruha Lakshmi Scheme) ಪ್ರಯೋಜನ ಪಡೆಯಲು ರೇಷನ್ ಕಾರ್ಡ್ ನಲ್ಲಿ ಮನೆಯ ಯಜಮಾನಿಯ ಹೆಸರೇ ಮೊದಲ ಹೆಸರಾಗಿರಬೇಕು.

correction of ration card and addition of Family Members name

ಈ ಎಲ್ಲಾ ಕಾರಣಕ್ಕೆ ರೇಷನ್ ಕಾರ್ಡ್ ತಿದ್ದುಪಡಿ (Ration Card Correction) ಮಾಡಿಕೊಳ್ಳುವುದು ಕೂಡ ಅನಿವಾರ್ಯವಾಗಿದೆ.

ಕೊನೆಗೂ ಗೃಹಲಕ್ಷ್ಮಿ ಯೋಜನೆ ಹಣ ಬಂದೇ ಇಲ್ವಾ? ಹೀಗೆ ಮಾಡಿದ್ರೆ ಎಲ್ಲಾ ಕಂತಿನ ಹಣ ಜಮಾ ಆಗುತ್ತೆ

ರೇಷನ್ ಕಾರ್ಡ್ ತಿದ್ದುಪಡಿ ಬಗ್ಗೆ ವೆಬ್ಸೈಟ್ನಲ್ಲಿಯೇ ತಿಳಿದುಕೊಳ್ಳಿ:

ರೇಷನ್ ಕಾರ್ಡ್ ಅಪ್ಡೇಟ್ (Ration Card Update) ಮಾಡಿದ ನಂತರ ಅದರ ಸ್ಥಿತಿ ಹೇಗಿದೆ (Check Status) ಅಥವಾ ಈಗಾಗಲೇ ರೇಷನ್ ಕಾರ್ಡ್ ರದ್ದಾಗಿದೆಯೋ ಇಲ್ಲವೋ ಇವೆಲ್ಲವನ್ನೂ ತಿಳಿದುಕೊಳ್ಳಲು ನೀವು ಕೇವಲ ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಸಹಾಯದಿಂದ ಅಧಿಕೃತ ವೆಬ್ಸೈಟ್ ಮೂಲಕ ತಿಳಿದುಕೊಳ್ಳಬಹುದು.

ಆನ್ಲೈನ್ ನಲ್ಲಿ ಪಡಿತರ ಕಾರ್ಡ್ ವಿವರ ಪರಿಶೀಲಿಸಿ

BPL Ration Card

ಗೃಹಲಕ್ಷ್ಮಿ ಯೋಜನೆ 2ನೇ ಕಂತಿನ ಹಣ ಜಮಾ; ನಿಮಗೂ ಜಮಾ ಆಗಿದ್ಯಾ? ಮೊಬೈಲ್‌ನಲ್ಲೇ ಚೆಕ್ ಮಾಡಿ

ಈಗಾಗಲೇ ಲಕ್ಷಾಂತರ ಜನ ಹೊಸ ಪಡಿತರ ಕಾರ್ಡ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸಿದ್ದಾರೆ, ಆದರೆ ಇವರಿಗೆ ಸರ್ಕಾರ ಹೊಸ ಕಾರ್ಡ್ ಅನ್ನು ನೀಡಿಲ್ಲ. ಅರ್ಜಿಗಳನ್ನು ಪರಿಶೀಲಿಸಿ ಹೊಸ ಕಾರ್ಡ್ ವಿತರಣೆಯ ಪ್ರಕ್ರಿಯೆ ನಡೆಯುತ್ತಿದೆ ಎಂದು ಸರ್ಕಾರ ಈಗಾಗಲೇ ತಿಳಿಸಿದೆ.

ಅದೇ ರೀತಿ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಕೊಳ್ಳುವಾಗ ಹಲವಾರು ಕಾರ್ಡ್ ರದ್ದುಪಡಿಯಾಗಿದೆ. ಹಾಗಾಗಿ ನೀವು ಈ ಎಲ್ಲಾ ವಿವರಗಳನ್ನು ಆನ್ಲೈನ ಮೂಲಕ ತಿಳಿದುಕೊಳ್ಳಬಹುದು. ಇನ್ನು ಬೇರೆ ಬೇರೆ ರಾಜ್ಯಕ್ಕೆ ಸಂಬಂಧಪಟ್ಟ ಹಾಗೆ ಆನ್ಲೈನ್ ವೆಬ್ಸೈಟ್ನ ಯು ಆರ್ ಎಲ್ ಕೂಡ ಬದಲಾಗುತ್ತದೆ.

• ಕರ್ನಾಟಕಕ್ಕೆ ಆಹಾರ ಇಲಾಖೆಯ NFSA https://nfsa.gov.in/public/nfsadashboard/PublicFPSDashboard.aspx ಈ ವೆಬ್ ಸೈಟ್ ನಲ್ಲಿ ನಿಮ್ಮ ಲಾಗಿನ್ ಐಡಿ ಪಾಸ್ವರ್ಡ್ ಕೊಟ್ಟು ನಿಮ್ಮ ಜಿಲ್ಲೆ ಆಯ್ಕೆ ಮಾಡಿ ಆ ಮೂಲಕ ರೇಷನ್ ಕಾರ್ಡ್ ಸ್ಥಿತಿಯನ್ನು ತಿಳಿದುಕೊಳ್ಳಬಹುದು.

• ಮೊದಲಿಗೆ ಸೈಟ್ ಓಪನ್ ಮಾಡಿ ನಂತರ ರೇಷನ್ ಕಾರ್ಡ್ ಅರ್ಹತಾ ಪರೀಕ್ಷೆಯ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.

• ಬಳಿಕ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅರ್ಹತಾ ಪಟ್ಟಿ (NFSA) ಕಾಣಿಸುತ್ತದೆ.

• ಬಳಿಕ ಜಿಲ್ಲೆ ನಗರ ಪ್ರದೇಶ ಆಯ್ಕೆ ಮಾಡಬೇಕು

• ಅರ್ಜಿದಾರರ ಪಟ್ಟಿ ಕಾಣಿಸುತ್ತದೆ

• ಪಡಿತರ ಚೀಟಿ ಕಾಲಮ್‌ನಲ್ಲಿ ಮಾಲೀಕರ ಹೆಸರು ಹಾಗೂ ಸಂಖ್ಯೆ ಕಾಣಿಸುತ್ತದೆ ಅದರಲ್ಲಿ ನಿಮ್ಮ ಹೆಸರು ಹಾಗೂ ಇತರ ವಿವರಗಳನ್ನು ನೀವು ಚೆಕ್ ಮಾಡಬಹುದು.

• ಇನ್ನು ಪಟ್ಟಿಯಲ್ಲಿ ನಿಮ್ಮ ಹೆಸರು ಕಾಣಿಸದೆ ಇದ್ದಾಗ ನೀವು ವಿಂಡೋಸ್ ಲ್ಯಾಪ್ಟಾಪ್ ಅಥವಾ ಸಿಸ್ಟಮ್ ಬಳಸುತ್ತಿದ್ದರೆ Ctrl+F ಬಳಸಿ ನಿಮ್ಮ ಹೆಸರು ಹಾಗೂ ಡಿಜಿಟಲ್ ರೇಷನ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ. ಇಷ್ಟು ಮಾಡಿದ್ರೆ ನಿಮ್ಮ ರೇಷನ್ ಕಾರ್ಡ್ ಸ್ಥಿತಿ ಬಗ್ಗೆ ಎಲ್ಲಾ ಮಾಹಿತಿ ತಿಳಿದುಕೊಳ್ಳಬಹುದು.

ಅನ್ನಭಾಗ್ಯ ಯೋಜನೆಯ 3ನೇ ಕಂತು ಬಿಡುಗಡೆ; ನಿಮ್ಮ ಖಾತೆಗೆ ಬಂದಿದ್ಯಾ ಹೀಗೆ ಚೆಕ್ ಮಾಡಿಕೊಳ್ಳಿ

Check status of ration card canceled or valid, Here is the New link