ಕೊನೆಗೂ ಗೃಹಲಕ್ಷ್ಮಿ ಯೋಜನೆ ಹಣ ಬಂದೇ ಇಲ್ವಾ? ಹೀಗೆ ಮಾಡಿದ್ರೆ ಎಲ್ಲಾ ಕಂತಿನ ಹಣ ಜಮಾ ಆಗುತ್ತೆ
ರಾಜ್ಯ ಸರ್ಕಾರದಲ್ಲಿ (state government) ಮೊಟ್ಟ ಮೊದಲ ಬಾರಿಗೆ ಗೃಹಿಣಿಯರ ಖಾತೆಗೆ ನೇರವಾಗಿ 2000 ರೂ ಗಳನ್ನು ಹಾಕುವ ಯೋಜನೆ Gruha Lakshmi scheme ಜಾರಿಗೆ ಬಂದಿದ್ದು, ಲಕ್ಷಾಂತರ ಗೃಹಿಣಿಯರು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ.
ಆದರೆ ಇನ್ನೂ ಸಾಕಷ್ಟು ಜನರಿಗೆ ಬಿಡುಗಡೆಯಾಗಿರುವ ಮೊದಲ ಕಂತಿನ ಹಣವೇ (first instalment of Gruhalakshmi) ಬಂದಿಲ್ಲ, ಇನ್ನು ಎರಡನೇ ಕಂತಿನ ಹಣವನ್ನು ಕೂಡ ಸದ್ಯದಲ್ಲಿಯೇ ಸರ್ಕಾರ ಬಿಡುಗಡೆ ಮಾಡಲಿದೆ.
ನೀವು ಕೂಡ ಎಪಿಎಲ್ (APL) ಅಥವಾ ಬಿಪಿಎಲ್ ಕಾರ್ಡ್ (BPL card) ಹೊಂದಿದ್ದು ನಿಮ್ಮ ಖಾತೆಗೆ (Bank Account) ಇನ್ನೂ ಹಣ ಸಂದಾಯವಾಗಿಲ್ಲ ಅಂದರೆ ತಪ್ಪದೇ ಈ ಮೂರು ಕೆಲಸಗಳನ್ನು ಮಾಡಿ ಆಗ ತಕ್ಷಣವೇ ನಿಮ್ಮ ಖಾತೆಗೂ ಕೂಡ ಹಣ ಜಮಾ ಆಗುತ್ತದೆ.
ಗೃಹಲಕ್ಷ್ಮಿ ಯೋಜನೆ 2ನೇ ಕಂತಿನ ಹಣ ಜಮಾ; ನಿಮಗೂ ಜಮಾ ಆಗಿದ್ಯಾ? ಮೊಬೈಲ್‌ನಲ್ಲೇ ಚೆಕ್ ಮಾಡಿ
ರೇಷನ್ ಕಾರ್ಡ್, ಆಧಾರ್ ಕಾರ್ಡ್ ಬ್ಯಾಂಕ್ ಖಾತೆ ಲಿಂಕ್
ಎನ್‌ಪಿಸಿಐ ಮ್ಯಾಪಿಂಗ್ (npci mapping) ಮಾಡಿಸಿಕೊಳ್ಳದೆ ಇದ್ದರೆ ಯಾವುದೇ ಕಾರಣಕ್ಕೂ ನಿಮ್ಮ ಖಾತೆಗೆ ಹಣ ಬರಲು ಸಾಧ್ಯವೇ ಇಲ್ಲ. ಇದಕ್ಕಾಗಿ ನೀವು ನಿಮ್ಮ ಹತ್ತಿರದ ಬ್ಯಾಂಕ್ ನಲ್ಲಿ ಅಥವಾ ನೀವು ಎಲ್ಲಿ ಖಾತೆ ಹೊಂದಿದ್ದೀರೋ ಆ ಬ್ಯಾಂಕ್ ಗೆ ಹೋಗಿ ನಿಮ್ಮ ಆಧಾರ್ ಸಂಖ್ಯೆಯನ್ನು (Aadhaar number) ಕೊಟ್ಟು ಮ್ಯಾಪಿಂಗ್ ಮಾಡಿಸಿಕೊಳ್ಳಬಹುದು.
ರೇಷನ್ ಕಾರ್ಡ್ (ration card) ಹಾಗೂ ಬ್ಯಾಂಕ್ ಖಾತೆಗೆ ಈ ಕೆ ವೈ ಸಿ (ekyc) ಮಾಡಿಸಿಕೊಳ್ಳುವುದು ಕೂಡ ಬಹಳ ಮುಖ್ಯವಾಗಿರುತ್ತದೆ.
ಅನ್ನಭಾಗ್ಯ ಯೋಜನೆಯ 3ನೇ ಕಂತು ಬಿಡುಗಡೆ; ನಿಮ್ಮ ಖಾತೆಗೆ ಬಂದಿದ್ಯಾ ಹೀಗೆ ಚೆಕ್ ಮಾಡಿಕೊಳ್ಳಿ
ನಿಮ್ಮ ಹೆಸರುಗಳು ಮ್ಯಾಚ್ ಆಗುತ್ತಿದ್ದೀಯಾ ಚೆಕ್ ಮಾಡಿ
ಗೃಹಲಕ್ಷ್ಮಿ ಯೋಜನೆ ಆರಂಭವಾದಾಗಿನಿಂದ ಸಾಕಷ್ಟು ಜನ ತಮ್ಮ ಹೊಸ ಬ್ಯಾಂಕ್ ಖಾತೆಯನ್ನು ಆರಂಭಿಸಿದ್ದಾರೆ. ಅದೇ ರೀತಿ ಆಧಾರ್ ಕಾರ್ಡ್ ನಲ್ಲಿ ಹೆಸರು ಬದಲಾಯಿಸಿದ್ದಾರೆ. ಹೀಗೆ ಹೆಸರು ಬದಲಾಯಿಸುವಾಗ ನಿಮ್ಮ ಆಧಾರ ಸಂಖ್ಯೆ ಹಾಗೂ ರೇಷನ್ ಕಾರ್ಡ್ ನಲ್ಲಿ ಇರುವ ಹೆಸರು ಮ್ಯಾಚ್ ಆಗಬೇಕು.
ಬ್ಯಾಂಕ್ ಖಾತೆಯಲ್ಲಿ ಸರ್ ನೇಮ್ ಇದ್ದು ರೇಷನ್ ಕಾರ್ಡ್ ನಲ್ಲಿ ಅಥವಾ ಆಧಾರ್ ಕಾರ್ಡ್ ನಲ್ಲಿ ಆ ರೀತಿ ಇಲ್ಲದೆ ಇದ್ದರೆ ನಿಮ್ಮ ಖಾತೆಗೆ ಹಣ ಬರುವುದಿಲ್ಲ. ಅದೇ ರೀತಿ ರೇಷನ್ ಕಾರ್ಡ್ ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆಯಲ್ಲಿ ಇರುವ ಫೋಟೋ ಕೂಡ ಮ್ಯಾಚ್ ಆಗಬೇಕು. ಆದ್ದರಿಂದ ಎಲ್ಲಾ ಹೆಸರುಗಳು ಒಂದೇ ರೀತಿಯಾಗಿದ್ಯಾ ಎಂಬುದನ್ನು ಚೆಕ್ ಮಾಡಿಕೊಳ್ಳಿ.
ಇಂತಹವರ ಖಾತೆಗೆ ಗೃಹಲಕ್ಷ್ಮಿ ಯೋಜನೆಯ 2ನೇ ಕಂತಿನ ಹಣವೂ ಬರುವುದಿಲ್ಲ! ಸರ್ಕಾರದ ಖಡಕ್ ಸೂಚನೆ
ರೇಷನ್ ಕಾರ್ಡ್ ನಲ್ಲಿ ಗೃಹಿಣಿಯ ಹೆಸರು
ಇದು ಬಹಳ ಮುಖ್ಯವಾಗಿರುವ ವಿಚಾರವಾಗಿದ್ದು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ಗೃಹಿಣಿಯರ ಅಥವಾ ಯಜಮಾನಿಯ ಹೆಸರು ಮನೆಯ ರೇಷನ್ ಕಾರ್ಡ್ ನಲ್ಲಿ ಮೊದಲಿಗೆ ಇರಬೇಕು.
ಪುರುಷರ ಹೆಸರಿನಲ್ಲಿ ರೇಷನ್ ಕಾರ್ಡ್ ಇದ್ದರೆ ಅದನ್ನು ಬದಲಾಯಿಸಿ ಮನೆಯ ಯಜಮಾನಿಯ ಹೆಸರಿಗೆ ತಿದ್ದುಪಡಿ ಮಾಡಿಸಿಕೊಳ್ಳಬೇಕು. ಈಗಾಗಲೇ ರೇಷನ್ ಕಾರ್ಡ್ ತಿದ್ದುಪಡಿಗೆ ಸರ್ಕಾರ ಅವಕಾಶ ಮಾಡಿಕೊಟ್ಟಿದ್ದು ನೀವು ಕೂಡ ತಿದ್ದುಪಡಿ ಮಾಡಿಕೊಂಡಿದ್ದರೆ ಅದು ಅಪ್ಡೇಟ್ ಆಗಿದೆಯೋ ಇಲ್ಲವೋ ಎಂಬುದನ್ನು ಮಾಹಿತಿ ಕಣಜ (Mahiti Kannaja) ವೆಬ್ಸೈಟ್ ಮೂಲಕ ಆರ್ ಸಿ ನಂಬರ್ (RC number) ಹಾಕಿ ತಿಳಿದುಕೊಳ್ಳಿ.
ಹೊಸ ರೇಷನ್ ಕಾರ್ಡ್ ಅಪ್ಲೈ ಮಾಡಿರೋರಿಗೆ ಗುಡ್ ನ್ಯೂಸ್! ಅನ್ನಭಾಗ್ಯ, ಗೃಹಲಕ್ಷ್ಮಿ ಯೋಜನೆಯ ಬಿಗ್ ಅಪ್ಡೇಟ್
ಇನ್ನು ಮೊಟ್ಟ ಮೊದಲ ಬಾರಿಗೆ ಈ ಒಂದು ಯೋಜನೆಯನ್ನು ಸರ್ಕಾರ ರಾಜ್ಯದಲ್ಲಿ ಆರಂಭಿಸಿದ್ದು ಸಾಕಷ್ಟು ತಾಂತ್ರಿಕ ದೋಷಗಳು ಕೂಡ ಇವೆ. ಸರ್ವರ್ ಸಮಸ್ಯೆಯಿಂದಾಗಿ ಬದಲಾವಣೆಗಳ ಅಪ್ಡೇಟ್ ಸರ್ಕಾರದ ಡಾಟಾಬೇಸ್ (database) ಸೇರುತ್ತಿಲ್ಲ.
ಎಲ್ಲ ಕಾರಣದಿಂದಾಗಿ ಇನ್ನೂ ಸುಮಾರು 20 ಲಕ್ಷ ಮಹಿಳೆಯರ ಖಾತೆಗೆ ಗೃಹಲಕ್ಷ್ಮಿಯ 2000 ರೂ. ಜಮಾ ಆಗಿಲ್ಲ. ಆದಷ್ಟು ಬೇಗ ನಿಮ್ಮ ಖಾತೆಯಲ್ಲಿ ಇರುವ ಸಮಸ್ಯೆ ಸರಿಪಡಿಸಿಕೊಂಡು ಮುಂದಿನ ಹಣ ನಿಮ್ಮ ಖಾತೆ ಸೇರುವಂತೆ ಮಾಡಿಕೊಳ್ಳಿ.
if you Do This All the Installments Money of Gruha Lakshmi Scheme Money will Deposit
Our Whatsapp Channel is Live Now 👇