ಇಂತಹವರ ಖಾತೆಗೆ ಗೃಹಲಕ್ಷ್ಮಿ ಯೋಜನೆಯ 2ನೇ ಕಂತಿನ ಹಣವೂ ಬರುವುದಿಲ್ಲ! ಸರ್ಕಾರದ ಖಡಕ್ ಸೂಚನೆ
ಇನ್ನೇನು ಗೃಹಲಕ್ಷ್ಮಿಯ (Gruha Lakshmi Scheme) 2ನೇ ಕಂತಿನ ಹಣ ಕೂಡ ಬಿಡುಗಡೆ ಆಗಲಿದೆ. ಆದರೂ ಸಾಕಷ್ಟು ಮಹಿಳೆಯರ ಖಾತೆಗೆ ಮೊದಲ ಕಂತಿನ (first installment) 2,000 ಇನ್ನು ಬಂದಿಲ್ಲ.
ಇದಕ್ಕೆ ಸಾಕಷ್ಟು ಕಾರಣವನ್ನು ಕೂಡ ಸರ್ಕಾರ ಕೊಟ್ಟಿದೆ. ಆದರೆ ಈಗ ಸರ್ಕಾರ ಕೊಟ್ಟಿರುವ ಮತ್ತೊಂದು ಮಹತ್ವದ ಸೂಚನೆ ಏನೆಂದರೆ ಬಹುಶ: ಇಂಥವರ ಖಾತೆಗೆ 2ನೇ ಕಂತಿನ ಹಣವೂ ಕೂಡ ಬರುವುದಿಲ್ಲ.

ಹೊಸ ರೇಷನ್ ಕಾರ್ಡ್ ಅಪ್ಲೈ ಮಾಡಿರೋರಿಗೆ ಗುಡ್ ನ್ಯೂಸ್! ಅನ್ನಭಾಗ್ಯ, ಗೃಹಲಕ್ಷ್ಮಿ ಯೋಜನೆಯ ಬಿಗ್ ಅಪ್ಡೇಟ್
ಎರಡನೇ ಕಂತಿನ ಹಣವು ಬರುವುದಿಲ್ಲವೇ?
ಈ ಸುದ್ದಿ ಸಾಕಷ್ಟು ಮಹಿಳೆಯರಿಗೆ ಆತಂಕ ತರಬಹುದು. ಎಪಿಎಲ್ ಕಾರ್ಡ್ (APL card ) ಹೊಂದಿರುವ ಮಹಿಳೆಯರು ಮಾತ್ರವಲ್ಲದೆ ಬಿಪಿಎಲ್ ಕಾರ್ಡ್ (BPL card) ಹೊಂದಿರುವ ಮಹಿಳೆಯರಿಗೂ ಕೂಡ 2000₹ ಸಿಗದೇ ಇರುವುದು ಹಲವು ಮಹಿಳೆಯರಿಗೆ ಬೇಸರವಾಗಿದೆ
ಆದರೆ ಸರ್ಕಾರ ತಿಳಿಸಿರುವ ಪ್ರಕಾರ ಮಹಿಳೆಯರ ಆಧಾರ್ ಕಾರ್ಡ್(Aadhaar card) ಹಾಗೂ ಬ್ಯಾಂಕ್ ಖಾತೆ (bank account) ಇನ್ನೂ ಲಿಂಕ್ ಆಗಿಲ್ಲ. ಇನ್ನು ಎರಡನೆಯದಾಗಿ ರೇಷನ್ ಕಾರ್ಡ್ (ration card) ನಲ್ಲಿ ಮಹಿಳೆ ಹೆಸರು ಮೊದಲ ಸ್ಥಾನದಲ್ಲಿ ಇರಬೇಕು
ಅಂದರೆ ಮಹಿಳೆಯ ಯಜಮಾನಿಯಾಗಿರಬೇಕು, ಹಲವು ರೇಷನ್ ಕಾರ್ಡ್ ನಲ್ಲಿ ಗಂಡಸರ ಹೆಸರು ಮೊದಲು ಇತ್ತು ಇದನ್ನು ಬದಲಾಯಿಸಲು ಸರ್ಕಾರ ಅವಕಾಶ ಮಾಡಿಕೊಟ್ಟಿತ್ತು ಹಾಗೂ ಲಕ್ಷಾಂತರ ಜನ ಬದಲಾಯಿಸಿಕೊಂಡಿದ್ದಾರೆ ಕೂಡ.
ಆದರೆ ಈ ಬದಲಾವಣೆ ಇನ್ನೂ ಸರ್ಕಾರದ ಡಾಟಾ ಬೇಸ್ ನಲ್ಲಿ ಸೇರಿಕೊಂಡಿಲ್ಲ, ಹಲವರ ರೇಷನ್ ಕಾರ್ಡ್ ಅಪ್ಡೇಟ್ ಆಗಿಲ್ಲ ಹಾಗಾಗಿ ಅಂತವರ ಖಾತೆಗೆ ಮೊದಲ ಕಂತಿನ ಹಣ ಬಂದಿಲ್ಲ.
ಬಿಪಿಎಲ್ ಕಾರ್ಡ್ ಇದ್ರೂ 3 ತಿಂಗಳಿನಿಂದ ಅನ್ನಭಾಗ್ಯ ಯೋಜನೆ ಹಣ ಬಂದಿಲ್ವಾ? ಇಲ್ಲಿದೆ ಅಸಲಿ ಕಾರಣ
ಆಧಾರ್ ಸೀಡಿಂಗ್ ಆಗಿದೆ ರೇಷನ್ ಕಾರ್ಡ್ ನಲ್ಲಿ ಅಪ್ಡೇಟ್ (Ration Card Update) ಆಗಿದೆ ಎಲ್ಲವೂ ಸರಿ ಇದೆ ಆದರೂ ಯಾಕೆ ಹಣ ಬರ್ತಿಲ್ಲ? ಅಂತ ಹಲವು ಮಹಿಳೆಯರು ಈಗಾಗಲೇ ಸರ್ಕಾರವನ್ನು ಪ್ರಶ್ನಿಸುತ್ತಿದ್ದಾರೆ.
ಆದರೆ ಇಲ್ಲಿ ಮತ್ತೊಂದು ಸಮಸ್ಯೆ ಏನೆಂದರೆ ಗೃಹಿಣಿಯರ ಬ್ಯಾಂಕ್ ಖಾತೆ ಆಧಾರ್ ಕಾರ್ಡ್ ಹಾಗೂ ರೇಷನ್ ಕಾರ್ಡ್ ನಲ್ಲಿ ಇರುವ ಹೆಸರು ಒಂದೇ ತರನಾಗಿ ಇಲ್ಲ. ಅಂದರೆ ಹೆಸರು ಮ್ಯಾಚ್ ಆಗುತ್ತಿಲ್ಲ. ಈ ಕಾರಣಕ್ಕು ಕೂಡ ಸರ್ಕಾರ ನೇರವಾಗಿ ಇಂಥವರ ಖಾತೆಗೆ ಹಣ ವರ್ಗಾವಣೆ (DBT) ಮಾಡಲು ಸಾಧ್ಯವಾಗಿಲ್ಲ.
ಗೃಹಲಕ್ಷ್ಮಿ ಯೋಜನೆಗೆ ಒಟ್ಟು ಅರ್ಜಿ ಸಲ್ಲಿಸಿರುವ ಗೃಹಿಣಿಯರ ಸಂಖ್ಯೆ 1.13 ಕೋಟಿ. ಆದರೆ ಸರ್ಕಾರದಿಂದ ಸಂದಾಯವಾಗಿದ್ದು 84 ಲಕ್ಷ ಗೃಹಿಣಿಯರ ಖಾತೆಗೆ ಮಾತ್ರ.
ಈಗಾಗಲೇ ಬಿಪಿಎಲ್ ಕಾರ್ಡ್ ಮಾತ್ರವಲ್ಲದೆ ಎಪಿಎಂ ಕಾರ್ಡ್ ನಲ್ಲಿ ತಿದ್ದುಪಡಿ ಮಾಡಿಕೊಳ್ಳಲು ಹೋದ ಸಂದರ್ಭದಲ್ಲಿ ಅಂತವರ ರೇಷನ್ ಕಾರ್ಡ್ ನಲ್ಲಿ ಸಮಸ್ಯೆ ಇರುವುದು ಸರ್ಕಾರದ ಗಮನಕ್ಕೆ ಬಂದರೆ ಆ ರೇಷನ್ ಕಾರ್ಡ್ ಅನ್ನು ತಕ್ಷಣವೇ ರದ್ದು ಪಡಿಸಲಾಗುತ್ತಿದೆ.
ಈಗಾಗಲೇ ಲಕ್ಷಾಂತರ ರೇಷನ್ ಕಾರ್ಡ್ ರದ್ದು ಮಾಡಲಾಗಿದೆ. ಇನ್ನು ಸುಮಾರು 1.17 ಲಕ್ಷಕ್ಕೂ ಹೆಚ್ಚಿನ ಎಪಿಎಲ್ ಕಾರ್ಡ್ ತಿದ್ದುಪಡಿಗೆ ಸರ್ಕಾರ ಅನುಮತಿ ನೀಡಿದೆ.
ಗೃಹಲಕ್ಷ್ಮಿ ಯೋಜನೆಯನ್ನೇ ಹಿಂದಿಕ್ಕಿದ ಕೇಂದ್ರ ಸರ್ಕಾರದ ಬಂಪರ್ ಯೋಜನೆಗಳು! ಅರ್ಜಿ ಸಲ್ಲಿಸಿ
ಇಂಥವರಿಗೆ ಮುಂದೆಯೂ ಹಣ ಬರುವುದಿಲ್ಲ
ಇನ್ನು ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರು ಕೆಲವು ಕಾರಣಗಳಿಗೆ ಎಲ್ಲರ ಖಾತೆಗೆ ಹಣ ಹಾಕುವುದಕ್ಕೆ ವಿಳಂಬವಾಗುತ್ತಿದೆ, ಹಾಗಾಗಿ ಸೆಪ್ಟೆಂಬರ್ ತಿಂಗಳ ಒಳಗೆ ಅಗಸ್ಟ್ ತಿಂಗಳಿನ 2000 ಪ್ರತಿ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುವುದು, ಒಂದು ವೇಳೆ ಸೆಪ್ಟೆಂಬರ್ ತಿಂಗಳಿನ ಕೊನೆಯವರೆಗೂ ಮೊದಲ ಕಂತಿನ ಹಣ ಬರದೆ ಇದ್ದರೆ ಎರಡನೇ ಕಂತಿನ ಹಣವು ಸೇರಿ ಒಟ್ಟಿಗೆ ನಾಲ್ಕು ಸಾವಿರ ರೂಪಾಯಿಗಳನ್ನು ಫಲಾನುಭವಿಗಳ ಖಾತೆಗೆ ಹಾಕಲಾಗುವುದು (Money Deposit) ಎಂದು ಮಾಹಿತಿ ನೀಡಿದ್ದಾರೆ.
ಆದರೆ ಯಾರೆಲ್ಲಾ 2,000ಗಳನ್ನು ಪಡೆದುಕೊಳ್ಳಲು ಹಾಗೂ ಅನ್ನಭಾಗ್ಯ ಯೋಜನೆಯ (Annabhagya Scheme) ಹಣ ಪಡೆದುಕೊಳ್ಳಲು ರೇಷನ್ ಕಾರ್ಡ್ ನಲ್ಲಿ (Ration Card) ವಂಚನೆ ಮಾಡಿದ್ದಾರೋ ಅಂತವರ ಖಾತೆಗೆ ಹಣ ಬರುವುದಿಲ್ಲ.
ಗೃಹಲಕ್ಷ್ಮಿ ಯೋಜನೆ ಹಣ ಇನ್ನೂ ಬಂದಿಲ್ಲದ ಮಹಿಳೆಯರಿಗೆ ಮತ್ತೊಂದು ಅಪ್ಡೇಟ್ ಕೊಟ್ಟ ಸರ್ಕಾರ
*ಅತ್ತೆ ಹಾಗೂ ಸೊಸೆ ಇಬ್ಬರ ಹೆಸರಲ್ಲಿಯೂ ಅರ್ಜಿ ಸಲ್ಲಿಸಿರುವುದು
*ಮನೆಯಲ್ಲಿ ಅತ್ತೆ ಹಾಗೂ ಸೊಸೆ ಇಬ್ಬರೂ ಹಣವನ್ನು ಪಡೆದುಕೊಳ್ಳಲು ಹಳೆಯ ರೇಷನ್ ಕಾರ್ಡ್ ನಲ್ಲಿ ಇದ್ದ ಸೊಸೆಯ ಹೆಸರನ್ನು ತೆಗೆದು ಹೊಸ
ರೇಷನ್ ಕಾರ್ಡ್ ನಲ್ಲಿ ಸೇರಿಸಲು ಹೊರಟಿರುವುದು
*ಒಂದೇ ಮನೆಯಲ್ಲಿ ಇದ್ದು ಎರಡು ಮೂರು ರೇಷನ್ ಕಾರ್ಡ್ ಬಳಸುತ್ತಿರುವುದು
*ಸತ್ತವರ ಹೆಸರನ್ನು ಕೂಡ ಇಟ್ಟುಕೊಂಡಿರುವುದು
*ಮನೆಯ ಸದಸ್ಯರೇ ಅಲ್ಲದವರನ್ನು ರೇಷನ್ ಕಾರ್ಡ್ ನಲ್ಲಿ ಸೇರಿಸುತ್ತಿರುವುದು
ಇಂತಹ ಹಲವಾರು ವಂಚನೆ ಪ್ರಕರಣಗಳು ಆಹಾರ ಇಲಾಖೆಯ ಗಮನಕ್ಕೆ ಬಂದಿದ್ದು ಅಂತವರ ರೇಷನ್ ಕಾರ್ಡ್ ರದ್ದುಪಡಿ ಮಾಡುವುದು ಮಾತ್ರವಲ್ಲದೆ ಗೃಹಲಕ್ಷ್ಮಿ ಯೋಜನೆಯ ಹಣವಾಗಲಿ ಅಥವಾ ಅನ್ನಭಾಗ್ಯ ಯೋಜನೆಯ ಹಣವಾಗಲಿ ಇಂಥವರ ಖಾತೆಗೆ (Bank Account) ಎಂದಿಗೂ ಬರಲು ಸಾಧ್ಯವಿಲ್ಲ.
ಇನ್ನು ಎಲ್ಲ ದಾಖಲೆಗಳು ಸರಿ ಇದ್ದು, ಯಾರ ಖಾತೆಗೆ ಹಣ ಬಂದಿಲ್ಲವೂ ಅವರು ಪ್ರತಿ ತಾಲೂಕಿನ ಮಕ್ಕಳ ಮತ್ತು ಮಹಿಳಾ ಕಲ್ಯಾಣ ಕಚೇರಿಯ ಸಿಬ್ಬಂದಿಗಳನ್ನು ಭೇಟಿ ಮಾಡಿ ನಿಮ್ಮ ಅರ್ಜಿ ಸ್ಟೇಟಸ್ (Check Status) ತಿಳಿದುಕೊಳ್ಳಬಹುದು. ಇದಕ್ಕಾಗಿ ತಪ್ಪದೇ ಅಂಗನವಾಡಿ ಸಹಾಯಕಿಯರ ಬಳಿ ಮಾಹಿತಿ ಪಡೆದುಕೊಳ್ಳಿ.
2nd installment of the Gruha Lakshmi Yojana Also not come to the Bank account of such people