ಹೊಸ ರೇಷನ್ ಕಾರ್ಡ್ ಅಪ್ಲೈ ಮಾಡಿರೋರಿಗೆ ಗುಡ್ ನ್ಯೂಸ್! ಅನ್ನಭಾಗ್ಯ, ಗೃಹಲಕ್ಷ್ಮಿ ಯೋಜನೆಯ ಬಿಗ್ ಅಪ್ಡೇಟ್
ಸರ್ಕಾರದ ಯೋಜನೆಗಳಿಗೆ ರೇಷನ್ ಕಾರ್ಡ್ (Ration card) ಅಂತೂ ಬೇಕೇ ಬೇಕು, ಅದರಲ್ಲೂ ಅನ್ನಭಾಗ್ಯ ಯೋಜನೆ (Annabhagya scheme) ಅಥವಾ ಗೃಹ ಲಕ್ಷ್ಮಿ ಯೋಜನೆಯ (Gruha Lakshmi scheme) ಹಣ ಪಡೆದುಕೊಳ್ಳಬೇಕಾದರೆ ಬಿಪಿಎಲ್ ಕಾರ್ಡ್ (BPL Ration card) ಹೊಂದಿರುವುದು ಕೂಡ ಕಡ್ಡಾಯವಾಗಿದೆ.
ಯೋಜನೆಗೆ ಅರ್ಜಿ ಪ್ರಕ್ರಿಯೆ ಭರದಿಂದ ಸಾಗಿದೆ, ಈ ನಡುವೆ ಯೋಜನೆಯ ಹಣ ಖಾತೆಗೆ (Bank Account) ಬರದೇ ಗೃಹಿಣಿಯರು ಕಂಗಾಲಾಗಿರುವುದೂ ಉಂಟು. ಇನ್ನು ಸಾಕಷ್ಟು ಜನ ಹೊಸದಾಗಿ ಪಡಿತರ ಚೀಟಿ ಪಡೆದುಕೊಳ್ಳಲು ಅರ್ಜಿ ಕೂಡ ಸಲ್ಲಿಸಿದ್ದಾರೆ, ಇಂಥವರಿಗೆ ಸರ್ಕಾರದಿಂದ ಸಿಹಿ ಸುದ್ದಿ ಸಿಕ್ಕಿದೆ.
ಬಿಪಿಎಲ್ ಕಾರ್ಡ್ ಇದ್ರೂ 3 ತಿಂಗಳಿನಿಂದ ಅನ್ನಭಾಗ್ಯ ಯೋಜನೆ ಹಣ ಬಂದಿಲ್ವಾ? ಇಲ್ಲಿದೆ ಅಸಲಿ ಕಾರಣ
ಪಡಿತರ ಚೀಟಿ ತಿದ್ದುಪಡಿಗೆ ಅವಕಾಶ
ಸೆಪ್ಟೆಂಬರ್ 1ರಿಂದ 14ರ ವರೆಗೆ ಪಡಿತರ ಚೀಟಿ ತಿದ್ದುಪಡಿಗೆ (Ration card correction) ರಾಜ್ಯ ಸರ್ಕಾರ ಅವಕಾಶ ಮಾಡಿಕೊಟ್ಟತ್ತು, ಯಾಕೆಂದರೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರತಿಯೊಬ್ಬ ಗೃಹಿಣಿಯರ ರೇಷನ್ ಕಾರ್ಡ್ ನಲ್ಲಿ ಅವರದ್ದೇ ಮೊದಲ ಹೆಸರಿರಬೇಕು.
ಅಂದರೆ ಮನೆಯ ಯಜಮಾನಿ ಹೆಸರು ರೇಷನ್ ಕಾರ್ಡ್ ನಲ್ಲಿ ಮೊದಲ ಹೆಸರಾಗಿರಬೇಕು, ಪುರುಷರ ಹೆಸರು ಇದ್ದರೆ ತಕ್ಷಣವೇ ಅದನ್ನು ಬದಲಾಯಿಸಿಕೊಳ್ಳಿ ಎಂದು ಪಡಿತರ ಚೀಟಿ ತಿದ್ದುಪಡಿಗೆ (Ration Card Corrections) ಸರ್ಕಾರ ಅವಕಾಶ ನೀಡಿತ್ತು. ಹಲವರು ಬದಲಾವಣೆಗಳನ್ನು ಕೂಡ ಮಾಡಿಕೊಂಡಿದ್ದಾರೆ.
ಇನ್ನು ಗೃಹಲಕ್ಷ್ಮಿ ಯೋಜನೆಗೆ ಸಾಕಷ್ಟು ಜನ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ ಇದಕ್ಕೆ ಮುಖ್ಯ ಕಾರಣ ಹಲವರ ಬಳಿ ರೇಷನ್ ಕಾರ್ಡ್ ಇಲ್ಲ. ಇದೀಗ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿರುವವರಿಗೆ ಗುಡ್ ನ್ಯೂಸ್ ನೀಡಿರುವ ಸರ್ಕಾರ (State Government) , ಎರಡು ಲಕ್ಷ ಹೊಸ ಪಡಿತರ ಚೀಟಿ ಅರ್ಜಿಯ ಪರಿಶೀಲನ ಕೆಲಸ ಶೇಕಡ 75 ನಷ್ಟು ಪೂರ್ಣಗೊಂಡಿದೆ. ಸದ್ಯದಲ್ಲಿಯೇ ಪರಿಶೀಲನೆಗೊಂಡ ಹಾಗೂ ಸರಿಯಾಗಿ ಇರುವ ಅರ್ಜಿಗಳಿಗೆ ಪಡಿತರ ಚೀಟಿಯನ್ನು ನೀಡಲಾಗುವುದು.
ನೀವು ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದ್ದರೆ ಆನ್ಲೈನ್ (Online application) ಮೂಲಕ ಅದ್ರ ಸ್ಟೇಟಸ್ ತಿಳಿದುಕೊಳ್ಳಬಹುದು. ಕಾರ್ಡ್ ಸ್ಥಿತಿ ತಿಳಿದುಕೊಳ್ಳುವುದು ಹೇಗೆ ಹಂತ ಹಂತವಾಗಿ ನೋಡೋಣ
ಆಸ್ತಿ ನೋಂದಣಿಗೆ ಹೊಸ ರೂಲ್ಸ್ ತಂದ ರಾಜ್ಯ ಸರ್ಕಾರ, ಧಿಡೀರ್ ನಿಯಮದಲ್ಲಿ ಬದಲಾವಣೆ
ಹೊಸ ರೇಷನ್ ಕಾರ್ಡ್ ಸ್ಟೇಟಸ್ ಚೆಕ್ ಮಾಡಿ
• ಮೊದಲನೇದಾಗಿ https://ahara.kar.nic.in/Home/EServices ಸರ್ಕಾರದ ಈ ಅಧಿಕೃತ ವೆಬ್ಸೈಟ್ (Official website) ಗೆ ಭೇಟಿ ನೀಡಿ
• ಎಡಭಾಗದಲ್ಲಿ ಕಾಣಿಸುವ ಈ ಸ್ಟೇಟಸ್ ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ
• ಅಲ್ಲಿ ಪಡಿತರ ಚೀಟಿ ಸ್ಥಿತಿ ಎನ್ನುವ ಆಯ್ಕೆ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.
• ಹೊಸ ಪೇಜ್ ತೆರೆದುಕೊಳ್ಳುತ್ತದೆ ಅಲ್ಲಿ ನೀವು ನಿಮ್ಮ ಜಿಲ್ಲೆಯನ್ನು ಸೆಲೆಕ್ಟ್ ಮಾಡಿ ಬಳಿಕ ಹೊಸ ಟ್ಯಾಬ್ ನಲ್ಲಿ ನೀವು ಅರ್ಜಿ ಸಲ್ಲಿಸಿರುವ ಸ್ಟೇಟಸ್ ತಿಳಿದುಕೊಳ್ಳಬಹುದು.
• ಇದಕ್ಕಾಗಿ ನೀವು ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದಾಗ ಸಿಕ್ಕಿರುವ ಸ್ವೀಕೃತಿ ಸಂಖ್ಯೆಯನ್ನು ನಮೂದಿಸಬೇಕು.
• ಬಳಿಕ ಗೊ (Go)ಎನ್ನುವ ಬಟನ್ ಮೇಲೆ ಕ್ಲಿಕ್ ಮಾಡಿ ನೀವು ಸಲ್ಲಿಸಿರುವ ಅರ್ಜಿಯ ಸ್ಥಿತಿಯ ಬಗ್ಗೆ ಮಾಹಿತಿ ಕಾಣಿಸುತ್ತದೆ.
ಗೃಹಲಕ್ಷ್ಮಿ ಯೋಜನೆಯನ್ನೇ ಹಿಂದಿಕ್ಕಿದ ಕೇಂದ್ರ ಸರ್ಕಾರದ ಬಂಪರ್ ಯೋಜನೆಗಳು! ಅರ್ಜಿ ಸಲ್ಲಿಸಿ
ಆನ್ಲೈನ್ ನಲ್ಲಿಯೇ ಪಡಿತರ ಚೀಟಿ ತಿದ್ದುಪಡಿ ಮಾಡಬಹುದು
ಇದೊಂದು ಪ್ರಯತ್ನ ಮಾಡಿ, ಕೇವಲ 2 ದಿನಗಳಲ್ಲಿ ಗೃಹಲಕ್ಷ್ಮಿ ಹಣ ₹2,000 ಖಾತೆಗೆ ಜಮಾ ಆಗತ್ತೆ
• ಇದಕ್ಕಾಗಿ ನೀವು https://ahara.kar.nic.in/Home/EServices ವೆಬ್ಸೈಟ್ ಗೆ ಹೋಗಿ
• ಅಲ್ಲಿ ಎಡ ಭಾಗದಲ್ಲಿ ಈ ಸ್ಟೇಟಸ್ (E- Status) ಎನ್ನುವ ಆಯ್ಕೆ ಕಾಣಿಸುತ್ತದೆ
• ಅದರಲ್ಲಿ ತಿದ್ದುಪಡಿಗಾಗಿ ವಿನಂತಿ ಅಥವಾ ಹೊಸ ಸೇರ್ಪಡೆ ಎನ್ನುವ ಆಯ್ಕೆ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.
• ಈಗ ಹೊಸ ಪೇಜ್ (page) ತೆರೆದುಕೊಳ್ಳುತ್ತದೆ ಬಳಿಕ ನಿಮ್ಮ ಜಿಲ್ಲೆಯ ಮೇಲೆ ಕಾಣಿಸುವ ಬಟನ್ ಕ್ಲಿಕ್ ಮಾಡಿ.
• ಹೊಸ ಸೇರ್ಪಡೆ ಅಥವಾ ತಿದ್ದುಪಡಿ ನಮೂನೆಗೆ ಅಗತ್ಯವಿರುವ ಮಾಹಿತಿಯನ್ನು ಭರ್ತಿ ಮಾಡಬೇಕು.
• ಮಾಹಿತಿ ಭರ್ತಿ ಮಾಡಿದ ನಂತರ ತಿದ್ದುಪಡಿಗೆ ಅಗತ್ಯವಿರುವ ದಾಖಲೆಗಳನ್ನು ನೀಡಲು ಸ್ಕ್ಯಾನ್ ಪ್ರತಿ ಅಪ್ಲೋಡ್ ಮಾಡಬೇಕು.
• ಅಪ್ಲೋಡ್ ಮಾಡಿದ್ದ ಬಳಿಕ ನಿಮ್ಮ ಅರ್ಜಿ ಫಾರಂ ಅನ್ನು ಸಲ್ಲಿಸಬೇಕು.
• ನಂತರ ನಿಮಗೆ ಅರ್ಜಿ ಸಲ್ಲಿಕೆ ಮಾಡಿರುವುದಕ್ಕೆ ರಿಜಿಸ್ಟರ್ ಸಂಖ್ಯೆ ಒಂದನ್ನು ಕೊಡಲಾಗುತ್ತದೆ.
• ಈ ಸಂಖ್ಯೆ ನಿಮ್ಮ ಬಳಿ ಇದ್ದರೆ ನೀವು ನಿಮ್ಮ ಅರ್ಜಿ ಸ್ಥಿತಿಯನ್ನು ಪರಿಶೀಲಿಸಿಕೊಳ್ಳಬಹುದು.
Big update on New Ration Card Applicants for Annabhagya Scheme and Gruha Lakshmi Yojana