ಗೃಹಲಕ್ಷ್ಮಿ ಯೋಜನೆ 2ನೇ ಕಂತಿನ ಹಣ ಜಮಾ; ನಿಮಗೂ ಜಮಾ ಆಗಿದ್ಯಾ? ಮೊಬೈಲ್‌ನಲ್ಲೇ ಚೆಕ್ ಮಾಡಿ
ಕೋಟ್ಯಂತರ ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆ ಒದಗಿಸುವಂತಹ ಗೃಹಲಕ್ಷ್ಮಿ ಯೋಜನೆ (Gruha Lakshmi Scheme) ಅಡಿಯಲ್ಲಿ 2000 ಗಳನ್ನು ರಾಜ್ಯ ಸರ್ಕಾರ ನೀಡುತ್ತಿದೆ.
ಕಳೆದ ತಿಂಗಳು ಮೈಸೂರಿನಲ್ಲಿ ಈ ಯೋಜನೆಗೆ ಚಾಲನೆ ನೀಡಲಾಗಿತ್ತು, ಆ ಮೂಲಕ ಲಕ್ಷಾಂತರ ಮಹಿಳೆಯರ ಖಾತೆಗೆ 2,000 ರೂ. ಉಚಿತ ಹಣ ವರ್ಗಾವಣೆ (Money Transfer) ಮಾಡಲಾಗಿದೆ. ಮೊದಲ ಕಂತಿನ ಹಣ ಈಗಾಗಲೇ ಬಿಡುಗಡೆ ಆಗಿದ್ದು ಕೆಲವರ ಖಾತೆಗೆ ಹಣ ಜಮಾ ಆಗಿದೆ ಇನ್ನೂ ಕೆಲವರ ಖಾತೆಗೆ ಹಣ ಜಮಾ (DBT) ಆಗುವುದು ಬಾಕಿ ಇದೆ.
ಅನ್ನಭಾಗ್ಯ ಯೋಜನೆಯ 3ನೇ ಕಂತು ಬಿಡುಗಡೆ; ನಿಮ್ಮ ಖಾತೆಗೆ ಬಂದಿದ್ಯಾ ಹೀಗೆ ಚೆಕ್ ಮಾಡಿಕೊಳ್ಳಿ
ಈ ನಡುವೆ ಗೃಹಲಕ್ಷ್ಮಿ ಯೋಜನೆ 2ನೇ ಕಂತಿನ ಹಣ ಕೂಡ ವರ್ಗಾವಣೆಯಾಗುತ್ತಿದೆ. ನಿಮ್ಮ ಖಾತೆಗೂ (Bank Account) ಹಣ ಸಂದಾಯ ಆಗಿದೆಯೋ ಇಲ್ಲವೋ ಎಂಬುದನ್ನು ನಿಮ್ಮ ಕೈಯಲ್ಲಿ ಇರುವ ಮೊಬೈಲ್ ನಿಂದ (Smartphone) ಕೇವಲ ಒಂದು ನಿಮಿಷಗಳಲ್ಲಿ ಚೆಕ್ ಮಾಡಿಕೊಳ್ಳಬಹುದು.
ಸರ್ಕಾರದ ಅಧಿಕೃತ ಮೊಬೈಲ್ ಆಪ್ (Mobile App)
ಗೃಹಲಕ್ಷ್ಮಿ ಯೋಜನೆಯ ಎರಡನೇ ಕಂತಿನ ಹಣ ಸೆಪ್ಟೆಂಬರ್ 30ರ ಒಳಗೆ ಗೃಹಿಣಿಯರ ಖಾತೆಗೆ ಜಮಾ ಮಾಡಲು ಸರ್ಕಾರ ನಿರ್ಧರಿಸಿದೆ. ಮೊದಲ ಕಂತಿನ ಹಣ ಯಾರಿಗೆ ಸಂದಾಯವಾಗಿಲ್ಲವೋ ಅಂತವರಿಗೆ ಎರಡನೇ ಕಂತಿನ ಹಣವನ್ನು ಸೇರಿಸಿ 4000 ರೂ. ಗಳನ್ನು ಅಕ್ಟೋಬರ್ 15 ರ ಒಳಗೆ ಜಮಾ ಮಾಡುವುದಾಗಿ ಸರ್ಕಾರ ಭರವಸೆ ನೀಡಿದೆ.
ಗೃಹಲಕ್ಷ್ಮಿ ಯೋಜನೆಗೆ ಒಟ್ಟು 1.13 ಕೋಟಿ ಗೃಹಿಣಿಯರು ಅರ್ಜಿ ಸಲ್ಲಿಸಿದ್ದಾರೆ. ನೀವು ನಿಮ್ಮ ಖಾತೆಗೂ ಹಣ ಜಮಾ ಆಗಿದ್ಯೋ ಇಲ್ಲವೋ ಅಥವಾ ಸ್ಟೇಟಸ್ (Check Status) ಏನಿದೆ ಎಂಬುದನ್ನು ತಿಳಿದುಕೊಳ್ಳಲು ಸರ್ಕಾರದ ಈ ಅಧಿಕೃತ ಮೊಬೈಲ್ ಆಪ್ ಡೌನ್ಲೋಡ್ (App Download) ಮಾಡಿಕೊಂಡು ಅದರಲ್ಲಿ ಮಾಹಿತಿ ತಿಳಿದುಕೊಳ್ಳಬಹುದು.
ಇಂತಹವರ ಖಾತೆಗೆ ಗೃಹಲಕ್ಷ್ಮಿ ಯೋಜನೆಯ 2ನೇ ಕಂತಿನ ಹಣವೂ ಬರುವುದಿಲ್ಲ! ಸರ್ಕಾರದ ಖಡಕ್ ಸೂಚನೆ
ಡಿ ಬಿ ಟಿ ಕರ್ನಾಟಕ ಮೊಬೈಲ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ (DBT Karnataka App)
ಮೊದಲಿಗೆ https://play.google.com/store/apps/details?id=com.dbtkarnataka ಅಪ್ಲಿಕೇಶನ್ ಅನ್ನು ನಿಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬೇಕು.
ನಂತರ ಅದನ್ನು ಇನ್ಸ್ಟಾಲ್ ಮಾಡಿಕೊಳ್ಳಿ.
ನಿಮ್ಮ ಆಧಾರ್ ನಂಬರ್ (Aadhaar Number) ಅನ್ನು ಹಾಕಿ. ಮೊಬೈಲ್ ಸಂಖ್ಯೆಗೆ ಓಟಿಪಿ (OTP) ಕಳುಹಿಸಲು ಒಪ್ಪಿಗೆ ನೀಡಬೇಕು.
ಗೆಟ್ ಓಟಿಪಿ ಎನ್ನುವ ಆಯ್ಕೆ ಕಾಣಿಸುತ್ತದೆ ಆಗ ನಿಮ್ಮ ಮೊಬೈಲ್ ಗೆ ಬಂದಿರುವ ಓಟಿಪಿಯನ್ನು ಹಾಕಿ ನಿಮ್ಮ ಖಾತೆಯನ್ನು ವೆರಿಫೈ ಮಾಡಿಕೊಳ್ಳಬೇಕು.
ನಂತರ ಕ್ರಿಯೇಟ್ ಎಮ್ ಪಿನ್ (create mPin) ಎನ್ನುವ ಆಯ್ಕೆ ಕಾಣಿಸುತ್ತದೆ ಆಗ ನಾಲ್ಕು ಪಿನ್ ಸಂಖ್ಯೆಯನ್ನು ಹಾಕಿ ಮತ್ತೊಮ್ಮೆ ಅದನ್ನು ಪರಿಶೀಲಿಸಿ ಸಬ್ಮಿಟ್ (Submit) ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಈಗ ನಿಮ್ಮ ಡಿಬಿಟಿ ಕರ್ನಾಟಕ ಅಪ್ಲಿಕೇಶನ್ ಮೊಬೈಲ್ ನಲ್ಲಿ ಬಳಸಿಕೊಳ್ಳಲು ಸಂಪೂರ್ಣ ತಯಾರಾಗಿದೆ ಎಂದು ಅರ್ಥ.
ಹೊಸ ರೇಷನ್ ಕಾರ್ಡ್ ಅಪ್ಲೈ ಮಾಡಿರೋರಿಗೆ ಗುಡ್ ನ್ಯೂಸ್! ಅನ್ನಭಾಗ್ಯ, ಗೃಹಲಕ್ಷ್ಮಿ ಯೋಜನೆಯ ಬಿಗ್ ಅಪ್ಡೇಟ್
ಇದು ಬ್ಯಾಂಕಿನ ಅಪ್ಲಿಕೇಶನ್ ತರವೇ ಇರುತ್ತದೆ. Payment status, seeding, status of Aadhar in bank account, profile, contact ಈ ನಾಲ್ಕು ಆಯ್ಕೆಗಳು ಕಾಣಿಸುತ್ತವೆ. ಈಗ ನೀವು ನಿಮ್ಮ ಖಾತೆಗೆ ಹಣ ಜಮಾ ಆಗಿದೆಯೋ ಇಲ್ಲವೋ ಎಂಬುದನ್ನು ಪೇಮೆಂಟ್ ಸ್ಟೇಟಸ್ ನಲ್ಲಿ ನೋಡಿ ತಿಳಿದುಕೊಳ್ಳಬಹುದು.
Gruha Lakshmi Yojana 2nd installment money deposit Status Check on mobile