Karnataka NewsBangalore News

ಅನ್ನಭಾಗ್ಯ ಯೋಜನೆಯ 3ನೇ ಕಂತು ಬಿಡುಗಡೆ; ನಿಮ್ಮ ಖಾತೆಗೆ ಬಂದಿದ್ಯಾ ಹೀಗೆ ಚೆಕ್ ಮಾಡಿಕೊಳ್ಳಿ

ರಾಜ್ಯ ಸರ್ಕಾರ (state government) ಕಳೆದ ಎರಡು ತಿಂಗಳಿನಿಂದ ಅನ್ನಭಾಗ್ಯ ಯೋಜನೆಯ (Annabhagya Yojana) ಅಡಿಯಲ್ಲಿ ಅಕ್ಕಿಯ ಬದಲು ಹಣವನ್ನು ನೇರವಾಗಿ (DBT) ಫಲಾನುಭವಿಗಳ ಬ್ಯಾಂಕ್ ಖಾತೆಗೆ (Bank Account) ಜಮಾ ಮಾಡುತ್ತಿದೆ.

ಪ್ರತಿ ಕೆಜಿಗೆ 34 ರೂಪಾಯಿಗಳಂತೆ 5 ಕೆಜಿ ಅಕ್ಕಿಗೆ 170 ರೂ.ಗಳನ್ನು ಸರ್ಕಾರ ನೀಡುತ್ತಿದೆ. ನಿಮ್ಮ ಮನೆಯಲ್ಲಿ ಇರುವ ಸದಸ್ಯರ ಆಧಾರದ ಮೇಲೆ ಹಣದ ಮೊತ್ತ ಕೂಡ ಜಾಸ್ತಿಯಾಗುತ್ತಾ ಹೋಗುತ್ತೆ.

distribution of new ration card, Also the decision to cancel ration cards

ಇಂತಹವರ ಖಾತೆಗೆ ಗೃಹಲಕ್ಷ್ಮಿ ಯೋಜನೆಯ 2ನೇ ಕಂತಿನ ಹಣವೂ ಬರುವುದಿಲ್ಲ! ಸರ್ಕಾರದ ಖಡಕ್ ಸೂಚನೆ

ಮೂರನೇ ಕಂತಿನ ಹಣ ಬಿಡುಗಡೆ

ಕೇಂದ್ರ ಸರ್ಕಾರ (central government) ಈಗಾಗಲೇ ಐದು ಕೆಜಿ ಅಕ್ಕಿಯನ್ನು ಉಚಿತವಾಗಿ (free rice) ಜನರಿಗೆ ನೀಡುತ್ತಿದೆ. ಇದರ ಜೊತೆಗೆ ಇನ್ನೂ ಐದು ಕೆಜಿ ಅಕ್ಕಿಯನ್ನು ರಾಜ್ಯ ಸರ್ಕಾರ ಉಚಿತವಾಗಿ ಕೊಡುವ ಭರವಸೆ ನೀಡಿತ್ತು.

ಆದರೆ ಅಷ್ಟು ದೊಡ್ಡ ಪ್ರಮಾಣದಲ್ಲಿ ಅಕ್ಕಿ ಹೊಂದಿಸಲು ಸಾಧ್ಯವಾಗದೆ ಇರುವುದಕ್ಕೆ ಹಣವನ್ನೇ ಸರ್ಕಾರ ಪಾವತಿ ಮಾಡುತ್ತಿದೆ. ಈಗಾಗಲೇ ಎರಡು ಕಂತಿನ ಹಣ ಬಿಡುಗಡೆ ಮಾಡಲಾಗಿದೆ

ಅಲ್ಲದೆ ಲಕ್ಷಾಂತರ ಜನರ ಖಾತೆಗೆ ಹಣ (Bank Deposit) ಸಂದಾಯವಾಗಿದೆ. ಸೆಪ್ಟೆಂಬರ್ ತಿಂಗಳಿನ ಅನ್ನಭಾಗ್ಯ ಯೋಜನೆಯ (Annabhagya Scheme) ಹಣ ಕೂಡ ಬಿಡುಗಡೆ ಆಗಿದ್ದು ನಿಮ್ಮ ಖಾತೆಗೆ ಹಣ (Money Deposit) ಸಂದಾಯವಾಗಿದೆಯೋ ಇಲ್ಲವೋ ಎಂಬುದನ್ನು ಹೀಗೆ ತಿಳಿದುಕೊಳ್ಳಿ.

ಹೊಸ ರೇಷನ್ ಕಾರ್ಡ್ ಅಪ್ಲೈ ಮಾಡಿರೋರಿಗೆ ಗುಡ್ ನ್ಯೂಸ್! ಅನ್ನಭಾಗ್ಯ, ಗೃಹಲಕ್ಷ್ಮಿ ಯೋಜನೆಯ ಬಿಗ್ ಅಪ್ಡೇಟ್

ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ನಲ್ಲಿಯೇ ಚೆಕ್ ಮಾಡಿ

Annabhagya Yojanaಮೊದಲಿಗೆ ಆಹಾರ ಇಲಾಖೆಯ https://ahara.kar.nic.in/Home/EServices ವೆಬ್ ಸೈಟ್ ಗೆ ಭೇಟಿ ನೀಡಿ.

ನಂತರ ಹೊಸ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಈ ಸರ್ವಿಸ್ (e service) ಎನ್ನುವುದರ ಮೇಲೆ ಕ್ಲಿಕ್ ಮಾಡಿ.

ಮೂರು ಗೆರೆಗಳು ಕಾಣಿಸುತ್ತವೆ ಅದರ ಮೇಲೆ ಕ್ಲಿಕ್ ಮಾಡಿ.

ಈ ಸ್ಟೇಟಸ್ (e status) ಎನ್ನುವ ಆಯ್ಕೆ ಕಾಣಿಸುತ್ತದೆ. ಕನ್ನಡದಲ್ಲಿ ಪ್ರಯತ್ನಿಸುತ್ತಿದ್ದರೆ ಈ ಸ್ಥಿತಿ ಎಂಬುದನ್ನು ನೋಡಬಹುದು.

ಇದರ ಮೇಲೆ ಕ್ಲಿಕ್ ಮಾಡಿದರೆ ಡಿ ಬಿ ಟಿ ಸ್ಟೇಟಸ್ (dbt status) ಎನ್ನುವ ಆಯ್ಕೆ ಕಾಣಿಸುತ್ತದೆ ಅದನ್ನು ಕ್ಲಿಕ್ಕಿಸಿ.

ಈಗ ಹೊಸದೊಂದು ಪೇಜ್ ತೆರೆದುಕೊಳ್ಳುತ್ತದೆ ಹಾಗೂ ರೇಷನ್ ಕಾರ್ಡ್ ಗೆ ಸಂಬಂಧಪಟ್ಟ ಸಾಕಷ್ಟು ವಿವರಣೆಗಳು ಇರುತ್ತವೆ ನೀವು ಕೊನೆಯ ಟ್ಯಾಬ್ ಡಿ

ಡಿ ಬಿ ಟಿ ಸ್ಥಿತಿ ಎನ್ನುವುದರ ಮೇಲೆ ಕ್ಲಿಕ್ ಮಾಡಿ.

ನೀವು 2023 ಎನ್ನುವ ವರ್ಷ, ಬಳಿಕ ಜುಲೈ ಆಗಸ್ಟ್ ಅಥವಾ ಸೆಪ್ಟೆಂಬರ್ ತಿಂಗಳನ್ನು ಆಯ್ಕೆ ಮಾಡಬೇಕು. ಈ ತಿಂಗಳ ಸ್ಟೇಟಸ್ ಚೆಕ್ ಮಾಡುವುದಿದ್ದರೆ ಸೆಪ್ಟೆಂಬರ್ ಎಂದು ಕ್ಲಿಕ್ ಮಾಡಿ.

ಬಳಿಕ ನಿಮ್ಮ ಆರ್ ಸಿ ನಂಬರ್ (RC number) ಹಾಕಬೇಕು.

ಈಗ ಕೊಟ್ಟಿರುವ ಕ್ಯಾಪ್ಚ ನಂಬರ್ ಅನ್ನು ನಮೂದಿಸಿ ಗೋ (GO) ಎನ್ನುವುದರ ಮೇಲೆ ಕ್ಲಿಕ್ ಮಾಡಿ.

ಅನ್ನಭಾಗ್ಯ ಯೋಜನೆಯ ಹಣ ನಿಮ್ಮ ಖಾತೆಗೆ ಸಂದಾಯವಾಗಿದೆಯೋ ಇಲ್ಲವೋ ಎನ್ನುವ ಮಾಹಿತಿ ಇಲ್ಲಿ ತಿಳಿಯುತ್ತದೆ. ಹಣ ನಿಮ್ಮ ಖಾತೆಗೆ ಬಂದಿದ್ದರೆ ಎಷ್ಟು ಜನರಿಗೆ ಎಷ್ಟು ಹಣ ಸಂದಾಯವಾಗಿದೆ ಯಾವ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗಿದೆ ಎನ್ನುವ ಮಾಹಿತಿ ಇರುತ್ತದೆ.

ಬಿಪಿಎಲ್ ಕಾರ್ಡ್ ಇದ್ರೂ 3 ತಿಂಗಳಿನಿಂದ ಅನ್ನಭಾಗ್ಯ ಯೋಜನೆ ಹಣ ಬಂದಿಲ್ವಾ? ಇಲ್ಲಿದೆ ಅಸಲಿ ಕಾರಣ

ಇದಾದ ಬಳಿಕ ನಿಮಗೆ ಸೆಪ್ಟೆಂಬರ್ ತಿಂಗಳ ಹಣ ಸಂದಾಯವಾಗಿಲ್ಲ ಎಂಬುದಾಗಿದ್ದರೆ ಪಾವತಿ ಪ್ರಗತಿಯಲ್ಲಿದೆ ಎನ್ನುವ ಸಂದೇಶವನ್ನು ಕಾಣುತ್ತೀರಿ. ಹೀಗೆ ಸಂದೇಶ ಬಂದರೆ ಅಕ್ಟೋಬರ್ 15 ರ ಒಳಗೆ ನಿಮ್ಮ ಖಾತೆಗೆ ಹಣ ಸಂದಾಯವಾಗುತ್ತದೆ.

ಅನ್ನಭಾಗ್ಯ ಯೋಜನೆಯ ಹಣ ಬಿಪಿಎಲ್ ಕಾರ್ಡ್ (BPL card) ಇರುವವರಿಗೂ ಕೂಡ ಸಾಕಷ್ಟು ಜನರಿಗೆ ಬಂದಿಲ್ಲ ಇದಕ್ಕೆ ಮುಖ್ಯವಾದ ಕಾರಣ ಅವರ ಖಾತೆಯಲ್ಲಿ ಇರುವ ಸಮಸ್ಯೆ. ಯಾವುದಾದರೂ ಸಮಸ್ಯೆ ಇದ್ದರೆ ತಕ್ಷಣವೇ ಪರಿಹರಿಸಿಕೊಳ್ಳಿ ಆಗ ನಿಮ್ಮ ಖಾತೆಗೂ ಕೂಡ ಸರ್ಕಾರ ಕೊಡುವ ಅಕ್ಕಿಯ ಬದಲಿನ ಹಣ ಸಿಗುತ್ತದೆ.

Release of the 3rd installment of Annabhagya Yojana, Check if it has reached your Bank account

Our Whatsapp Channel is Live Now 👇

Whatsapp Channel

Related Stories